Advertisement
ಸಫಲತೆಯ ಸಂದೇಶದ ಕವಿತೆಗಳು: ತೇಜ ಎಸ್. ಬಿ. ಬರಹ

ಸಫಲತೆಯ ಸಂದೇಶದ ಕವಿತೆಗಳು: ತೇಜ ಎಸ್. ಬಿ. ಬರಹ

ಅಕ್ಕ, ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಕವಿತೆಗಳು ಜೀವ-ಭಾವ ತುಂಬಿ ಮಹಿಳೆಯರ ಜೀವನದ ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ, ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ. ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಅವು ನಮ್ಮಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು, ಭಾವಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕಾಯಿತು…
ವಿಕ್ರಮ್‌ ಬಿ.ಕೆ. ಕವನ ಸಂಕಲನ “ನಾವಿಬ್ಬರೇ ಗುಬ್ಬಿ” ಕುರಿತು ತೇಜ ಎಸ್. ಬಿ. ಬರಹ

ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ. ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ ನೋಟ, ಕಂಡುಂಡದ್ದನ್ನು ಬರಹದಲ್ಲಿ ಕಟ್ಟಿಕೊಟ್ಟಿರುವ ಧಾಟಿ. ಅದರಿಂದಾಚೆಗೂ ಗುಬ್ಬಿಯ ಒಳಗಿನ ಭಾವ ಓದುಗರನ್ನು ಪ್ರತಿ ಕ್ಷಣ ಮಂತ್ರಮುಗ್ಧರನ್ನಾಗಿ ಮಾಡುವುದಂತೂ ನಿಜ. ಪ್ರತಿ ಪದಗಳು ಜೀವ ತುಂಬಿ ಬಂದಂತೆ ಓದುಗ ಸಹೃದಯರ ಉಸಿರಲ್ಲಿ ಬೆರೆತು ಹೋಗಿವೆ.

(ವಿಕ್ರಮ್‌ ಬಿ.ಕೆ.)

ಸಾರ್ಥಕತೆಯ ಸಂತೃಪ್ತಿಯನ್ನು ಮೂಡಿಸುವ ಕವಿತೆಗಳು ಸಫಲತೆಯ ಸಂದೇಶವನ್ನು ಸಹಜವಾಗೇ ಚಿತ್ರಿಸಿವೆ. ಹೇಳಬೇಕಾದದ್ದು ದೀರ್ಘವಿದ್ದರೂ ಸುಲಲಿತವಾಗಿ ನಾಲ್ಕಾರೂ ಸಾಲುಗಳಲ್ಲಿ ಕಟ್ಟಿಕೊಟ್ಟಿರುವುದೇ ಸೋಜಿಗ. ಹೃದಯದ ಭಾವ ತಣಿಯುವಂತೆ, ಮೊದಲ ತೊದಲ ಮಾತು ತುಡಿಯುವಂತೆ, ಎಲ್ಲ ಪದ್ಯಗಳು ಬರೆಯಲ್ಪಟ್ಟಿವೆ.

ಪದ್ಯಗಳ ಅನಂತತೆ ಎಂಬುದು ಜ್ಞಾನವನ್ನು ಧ್ಯಾನಿಸುವತ್ತ ಸಾಗಿದಂತೆ ಓದುಗರಿಗೆ ಇದು ಮೊದಲ ಕವನಸಂಕಲನವೆಂದು ಎಲ್ಲಿಯೂ ಅನಿಸಲಿಕ್ಕಿಲ್ಲ.

ಅಕ್ಕ, ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಕವಿತೆಗಳು ಜೀವ-ಭಾವ ತುಂಬಿ ಮಹಿಳೆಯರ ಜೀವನದ ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ, ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ. ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಅವು ನಮ್ಮಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು, ಭಾವಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕಾಯಿತು… ಇಡೀ ಕವನ ಸಂಕಲನವೇ ಸಶಕ್ತವಾಗಿರುವುದರಿಂದ ಆ ಈ ಕವನವಷ್ಟೇ ಚೆನ್ನಾಗಿದೆಯೆಂದು ಎನ್ನಲಾಗುವುದಿಲ್ಲ. ಹಾಗಾಗಿ ವಿಕ್ರಮ ಅವರ ಮುಂದಿನ ಪುಸ್ತಕದ ನಿರೀಕ್ಷೆಯಲ್ಲಿದ್ದೇನೆ.

(ಕೃತಿ: ನಾವಿಬ್ಬರೇ ಗುಬ್ಬಿ (ಕವನ ಸಂಕಲನ), ಲೇಖಕರು: ವಿಕ್ರಮ ಬಿ.ಕೆ., ಪ್ರಕಾಶಕರು: ತ್ರಿಲೋಕ ಬರಹ, ಬೆಲೆ:  1೦೦/-)

About The Author

ತೇಜ ಎಸ್. ಬಿ.

ತೇಜ ಎಸ್. ಬಿ. ಚನ್ನಪಟ್ಟಣದವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ. ಎ ಐಚ್ಚಿಕ ಕನ್ನಡ ವ್ಯಾಸಂಗ ಮಾಡುತ್ತಿದ್ದಾರೆ. ಓದು-ಬರಹದಲ್ಲಿ ಆಸಕ್ತಿ ಹೊಂದಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ