ಪಿಸುನುಡಿವ ಕಾಡಲ್ಲಿ ಕೇಳಿಸಿದ ಹಾಡು
”ತೀರಾ ಹೊಸತೂ ಅಲ್ಲದ ತೀರಾ ಹಳತೂ ಅಲ್ಲದ ಜೆನ್ನಿ ಅಜ್ಜಿಯ ಮನೆಯೊಳಗೆ ವಿಚಿತ್ರವಾದ ಮೌನವಿತ್ತು.ಮನೆಯ ಒಳಗಿಂದ ಆಗುಂಬೆಯ ಪೇಟೆ,ಮತ್ತೊಂದೆಡೆ ಕಾಡಿನ ಸೊಗಸು ಕಾಣುತ್ತಿತ್ತು.ಧ್ಯಾನ ಮಾಡಲು ಸುಂದರವಾದ ಜಾಗವಿತ್ತು..”
ವಲಸೆ ಬಂದವರಿಗೇ ಅಪರಿಚಿತರಾದವರ ಕಲಾಕೃತಿಗಳು
ಈ ಪ್ರದರ್ಶನದಲ್ಲಿ ಕಲಾವಿದರು ಜಾಗರೂಕತೆಯಿಂದ ಕುಂಚ ಹಿಡಿದು ಬಿಡಿಸಿದ ಗೆರೆಗಳು, ಚೆಲ್ಲಾಡಿದ ರಂಗುಗಳಿಲ್ಲ. ಆದರೆ ಬದುಕಿನ ಲೆಕ್ಕವಿಲ್ಲದ ಬಣ್ಣಗಳು ಹೇಳುವ ಅದೆಷ್ಟೋ, ನಮ್ಮ ನಿಲುಕಿಗೆ ಸಿಗದ ಕಥೆಗಳಿವೆ.
ಮೊದಲ ಮಿಂಚು ಹೊಳೆದ ಮನೆ.. ಮೊದಲ ಗುಡುಗು ಕೇಳಿದ ಮನೆ..
”ಈ ಮನೆಯಲ್ಲಿ ಮಾತಾಡದೇ ಹಾಗೇ ನಿಂತಿರೋಣ ಅನ್ನಿಸಿ ಜಗಲಿಯಲ್ಲಿ ಸುಮ್ಮನೇ ನಿಂತೆ.ಹೊರಗೆ ತಣ್ಣಗೇ ಇರುಳು,ಎಲ್ಲೋ ಕೇಳುವ ಗಾಳಿಯ ಸದ್ದು,ಸ್ನಾನದ ಕೋಣೆಯಲ್ಲಿ ದಬ್ಬೆ ನೀರು ಬೀಳುವ ಸದ್ದು,ನವಿಲೊಂದು ಕೀ ಕೀ ಎಂದು ಕೂಗಿ ದೊಡ್ಡ ರೆಕ್ಕೆ ಬಡಿದು ಹಾರಿದ ಸದ್ದು,ಮರವೊಂದರ ತರಗೆಲೆಗಳು ಹಾರಿ ಹಂಚಿನ ಮೇಲೆ ಉದುರಿದ ಸದ್ದು.”
ಆಸ್ಟ್ರೇಲಿಯಾದಲ್ಲಿ ಸಾವಯವ ಆಹಾರ:ವಿನತೆ ಶರ್ಮಾ ಅಂಕಣ
“ನಾನು ಬ್ರಿಸ್ಬನ್ ನಗರದಲ್ಲಿ ಮಾವು, ಬೇವು, ಬಸಳೆ, ಪರಂಗಿಹಣ್ಣು ಇತ್ಯಾದಿಗಳನ್ನು ನೋಡಿದಾಗ ಉಷ್ಣವಲಯದ ತರಕಾರಿ ಬೆಳೆದುನೋಡೋಣ ಅನ್ನೋ ಆಸೆಗೆ ಬಿದ್ದೆ. ಅಲ್ಲಿಯವರೆಗೂ ಹೂ, ತರಕಾರಿ, ಹರ್ಬ್ಸ್ ಗಳನ್ನ ಪಾಟ್ ಗಳಲ್ಲಿ ಬೆಳೆಸಿ ಊರು ಬಿಟ್ಟು ಬರುವಾಗ ಸ್ನೇಹಿತರಿಗೆ ಅವನ್ನ ಕೊಟ್ಟು ಮುಂದೆಸಾಗುತ್ತಿದ್ದೆ.”
ಓಡಿ ಹೋಗಿ ಆ ಹೆಂಗಸನ್ನು ನೋಡಿದರೆ ಆಕೆ ನನ್ನ ರತ್ನಕ್ಕ ಆಗಿರಲಿಲ್ಲ
“ಮುಂದೆ ಹೊಸ ಜಾಗ, ಹೊಸ ಮನೆ, ಹೊಸ ಕುತೂಹಲಗಳು ರತ್ನಕ್ಕಳ ನೆನಪುಗಳನ್ನು ಇಂಚಿಂಚಾಗಿ ಕಬಳಿಸಿದ್ದರೂ ಅವಳಿನ್ನೂ ನನ್ನ ಮನದಿಂದ ಪೂರ್ತಿಯಾಗಿ ಮಾಯವಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅವಳು ಕಾಡಿದಾಗೆಲ್ಲಾ ಝಲ್ಲೆಂದು ಸದ್ದು ಮಾಡುತ್ತಿದ್ದ ಕಾಲ್ಗೆಜ್ಜೆ ನಿಶಬ್ದವಾಗಿಬಿಡುತ್ತಿತ್ತು.”
”ಈ ನವೀನ ಯುಗದ ಜಗದ ಕೇತನ ಕ್ರಿಕೆಟ್ಟು”
”ಕ್ರಿಕೆಟ್ ಅನ್ನು ಎಷ್ಟು ಆಸಕ್ತಿಯಿಂದ ಹಿಂಬಾಲಿಸಬೇಕು ಎಷ್ಟು ಪ್ರೀತಿಸಬೇಕು ಎನ್ನುವುದು ಕ್ರಿಕೆಟ್ ಪ್ರೇಕ್ಷಕರನ್ನು ಕಾಲ ಕಾಲಕ್ಕೆ ಕಾಡಿದ ಪ್ರಶ್ನೆಯೇ.ತಂಡವೊಂದು ಕಳಪೆ ಪ್ರದರ್ಶನ ನೀಡಿದಾಗ ಆಯಾ ತಂಡವನ್ನು ನೆಚ್ಚಿಕೊಂಡ ಪ್ರೇಮಿಗಳಲ್ಲಿ ಇನ್ನೂ ಇಂತಹ ಕ್ರಿಕೆಟನ್ನು ತಂಡವನ್ನು ತಾನು ಬೆಂಬಲಿಸಬೇಕೇ, ಎನ್ನುವ ಪ್ರಶ್ನೆಗಳು ಮೂಡುತ್ತಿರುತ್ತವೆ.”
ದೊಡ್ಡ ಬೆಟ್ಟದ ಕೆಳಗಿರುವ ಹಳೆಮನೆಯಲ್ಲಿ ಒಂದಿರುಳು…
”ಮಾಳದಂತಹ, ಕುದುರೆಮುಖದಂತಹ ಕಾಡುಗಳಲ್ಲಿ ಪ್ರಕೃತಿ ಹೇಗೆ ಕಾಣಿಸುತ್ತದೆ? ಕಾಡು ಹೇಗೆ ನಗುತ್ತದೆ? ಹರಿಯುತ್ತಿರುವ ನದಿಯ ಸೊಗಸು ಎಂಥದ್ದು? ಎನ್ನುವುದನ್ನು ಯಾವ ಮಹಾ ಸಾಹಿತ್ಯಗಳೂ ಹಿಡಿದಿಡಲು ಸಾಧ್ಯವೇ ಇಲ್ಲ.”
ರಾಣಿಯ ರಾಜ್ಯದಲ್ಲಿ ಅತಿವೃಷ್ಟಿ ಅನಾವೃಷ್ಟಿ ರಾದ್ಧಾಂತಗಳು
“ರಾಣಿಯ ರಾಜ್ಯದಲ್ಲಿ ಯಾವಾಗಲೂ ಸಮೃದ್ಧಿ ತುಂಬಿತುಳುಕುವುದಿಲ್ಲ.ಹಾಗೇ ಬರಗಾಲ ಅಪರೂಪವೇನಲ್ಲ.ಒಲ್ಲದ ನೆಂಟನಂತೆ ಆಗಾಗ ಭೇಟಿ ಕೊಡುತ್ತದೆ.ಯಾಕೋ ಈ ಬರಗಾಲ ಮತ್ತು ಅತ್ತಕಡೆ ನಮ್ಮ ಕರ್ನಾಟಕದ ಪಶ್ಚಿಮಘಟ್ಟಗಳನ್ನು ಆವರಿಸಿದ ಅತಿ ಮಳೆ ಎರಡೂ ಕಣ್ಣ ಪಾಪೆಯ ಚಿತ್ರವಾಗಿವೆ.”
ಎಲ್ಲಿರುವೆ ಪರಮಗುರು ಫ್ರಾನ್ಸಿಸ್ ಡೇಸಾ?
“ಕಣ್ಣುಬಿಟ್ಟಾಗ ಅವರ ಮಡಿಲಲ್ಲಿದ್ದೆ.ತೊಯ್ದು ತೊಪ್ಪೆಯಾಗಿದ್ದ ಅದಕ್ಕಿಂತಲೂ ಹೆಚ್ಚಾಗಿ ಗಾಬರಿಯಿಂದ ಪೂರ್ತಿ ಬಿಳುಚಿಹೋಗಿದ್ದ ನನ್ನನ್ನು ಬೆಚ್ಚಗಾಗಿಸುವ ಪ್ರಯತ್ನದಲ್ಲಿ ಅವರಿದ್ದರು.ಅವರ ತಲೆಗೂದಲಿಂದ ತೊಟ್ಟಿಕ್ಕುತ್ತಿದ್ದ ನೀರು ನನ್ನ ಗಲ್ಲದ ಮೇಲೆ ಹರಿದು ಮರಳಿನೊಳಗೆ ಇಂಗುತ್ತಿತ್ತು.”










