Advertisement

ಅಂಕಣ

ಎಸ್. ಜಾನಕಿಗೆ ಯಾಕೆ ಕೇವಲ ಪದ್ಮ?: ಸುಕನ್ಯಾ ಕನಾರಳ್ಳಿ ಅಂಕಣ

ಎಸ್. ಜಾನಕಿಗೆ ಯಾಕೆ ಕೇವಲ ಪದ್ಮ?: ಸುಕನ್ಯಾ ಕನಾರಳ್ಳಿ ಅಂಕಣ

ಅವರೇನೂ ತೆಪ್ಪಗೆ ಅದನ್ನು ಒಪ್ಪಿಕೊಳ್ಳಲಿಲ್ಲ. ತಮ್ಮಲ್ಲಿ ಜಾಗೃತವಾಗಿರುವ ಆಧುನಿಕ ಮಹಿಳಾಪ್ರಜ್ಞೆಗೆ ನೀವು ಅಪಚಾರ ಮಾಡುತ್ತಿದ್ದೀರಿ ಎಂದು ಗಾಂಧೀಜಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಯಾವ ಚಳುವಳಿಯೂ ತಾವಿಲ್ಲದೆ ನಡೆಯಕೂಡದು ಎಂದು ಸ್ಪಷ್ಟವಾಗಿ ಹೇಳಿದರು. ದಾದಾಬಾಯಿ ನವರೋಜಿಯವರ ಮೊಮ್ಮಗಳು ಕುರ್ಷೆದ್ ಬೆನ್ ನವರೋಜಿ ಒಂದು ಸಿಟ್ಟಿನ ಪತ್ರವನ್ನು ಸಹ ಬರೆದು ಗಾಂಧಿಗೆ ರವಾನಿಸಿದರು. ‘ಸ್ತ್ರೀಧರ್ಮ’ ಎಂಬ ಪತ್ರಿಕೆಯಲ್ಲಿ ಮಾರ್ಗರೆಟ್ ಕಸಿನ್ಸ್ ಹೀಗೆ ‘ಹೊರಗಿರಿಸುವ’ ಹುನ್ನಾರವನ್ನು ಪ್ರತಿಭಟಿಸಿದರು. ಯಾವುದೇ ಸಮಾವೇಶ, ಸಮಿತಿ, ಸಂಚಲನೆಗಳು ಹೆಣ್ಣಿಲ್ಲದೆ ನಡೆಯಬಾರದೋ, ಹಾಗೆಯೇ ಯಾವುದೇ ಹೋರಾಟ, ಪ್ರತಿಭಟನೆಗಳು ಸಹ ಹೆಣ್ಣಿಲ್ಲದೆ ಅಪೂರ್ಣ ಎಂದು ಎಚ್ಚರಿಸಿದರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more
ಎಐ ಲೋಕದ ಅಲೆಗಳಲ್ಲಿ ಆಸ್ಟ್ರೇಲಿಯಾ: ವಿನತೆ ಶರ್ಮಾ ಅಂಕಣ

ಎಐ ಲೋಕದ ಅಲೆಗಳಲ್ಲಿ ಆಸ್ಟ್ರೇಲಿಯಾ: ವಿನತೆ ಶರ್ಮಾ ಅಂಕಣ

ನನ್ನ ಸಮಯವನ್ನು ಜಾಣ್ಮೆಯಿಂದ ಬಳಸುವುದು ನನಗೆ ಅಗತ್ಯವಾಗಿತ್ತು. ಅದಕ್ಕೆ ವಿರುದ್ಧವಾಗಿ ಎಐ ಬಳಕೆಗೇ ಅಧಿಕ ಸಮಯ ಹಿಡಿಸಿದ್ದು ನನಗೆ ಒಪ್ಪಿಗೆಯಾಗಲಿಲ್ಲ ಇರಿಸುಮುರಿಸಾಗಿತ್ತು.. ಆ ಸಮಯದಲ್ಲಿ ಯಾವುದೇ ಸಾಧನಗಳನ್ನು ಉಪಯೋಗಿಸದೆ ನಾನೇ ಪದ-ಕಡಿತ ಮಾಡಬಹುದಿತ್ತು ಎಂದೆನಿಸಿತು. ಬಹುಶಃ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ ಎನ್ನುವುದರ ಬಗ್ಗೆ ನಾನು ಕಲಿಯಬೇಕಿದೆ. ಮುಂಬರುವ ನಿರೀಕ್ಷೆಗಳಿಗೆ, ಸನ್ನಿವೇಶಗಳಿಗೆ ತಯಾರಾಗಬೇಕಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
 ರಿಚರ್ಡ್ ಫೇನ್ಮನ್ – ಅದ್ಭುತ ಪ್ರತಿಭೆಯ ವಿಲಕ್ಷಣ ವಿಜ್ಞಾನಿ: ಡಾ. ಎಲ್. ಜಿ. ಮೀರಾ ಅಂಕಣ

 ರಿಚರ್ಡ್ ಫೇನ್ಮನ್ – ಅದ್ಭುತ ಪ್ರತಿಭೆಯ ವಿಲಕ್ಷಣ ವಿಜ್ಞಾನಿ: ಡಾ. ಎಲ್. ಜಿ. ಮೀರಾ ಅಂಕಣ

ಇಡೀ ಜೀವನವನ್ನು ಭೌತಶಾಸ್ತ್ರದ ಅಧ್ಯಯನ ಮತ್ತು ಆರಾಧನೆಯಲ್ಲಿ ಕಳೆದ ಫೇನ್ಮನ್ ಒಬ್ಬ ಅಸಾಧ್ಯ ಕುತೂಹಲಿ ಮತ್ತು ಮಹಾತುಂಟ. ವಿಜ್ಞಾನಿ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ `ಗಂಭೀರ, ನಗಲು ಬಾರದ, ಚಿಂತನಾಪರ, ಮಿತಭಾಷಿ ವ್ಯಕ್ತಿತ್ವ’ಕ್ಕೆ ಒಂದು ವಿರುದ್ಧಪದ ಇವರು! ಸದಾ ಯಾರದಾದರೂ ಕಾಲೆಳೆಯತ್ತಾ ನಗುತ್ತಾ ನಗಿಸುತ್ತಾ, ಚಿತ್ರ ಬರೆಯಲು ಕಲಿಯುತ್ತಾ, ವಾದ್ಯ ನುಡಿಸಲು ಪ್ರಯತ್ನಿಸುತ್ತಾ, ಕ್ಯಾಬರೆ ನೃತ್ಯಗಾತಿಯರ ಜೊತೆಯಲ್ಲಿ ಸಂಭಾಷಣೆ ಮಾಡುತ್ತಾ…..
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more
ಇಂದಿನ ಮಂದಿಯ ಬಿಂಬದ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ಇಂದಿನ ಮಂದಿಯ ಬಿಂಬದ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ವಿಲಿಯಮ್ಸ್ ಪ್ರಕಾರ ಟೆಲಿವಿಷನ್ ಕೇವಲ ಒಂದು ತಾಂತ್ರಿಕತೆಯಲ್ಲ, ಅದು ಒಂದು ಸಾಂಸ್ಕೃತಿಕ ರೂಪವೂ ಹೌದು. ಅದರಲ್ಲಿ ಜಾಹೀರಾತುಗಳು ಧಾರಾವಾಹಿಗಳ ನಡುವೆ ‘ಅಕಸ್ಮಾತ್ತಾಗಿ’ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಅವೇ ಧಾರಾವಾಹಿಗಳನ್ನು ರೂಪಿಸುವ ಶಕ್ತಿಗಳು. ಪ್ರಾಯೋಜಕರು ತಮಗೆ ಬೇಕಾದ ನೋಡುಗರನ್ನು ಅದರ ಮೂಲಕ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಆ ಪೂರಕತೆಯನ್ನು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೇಳನೆಯ ಬರಹ

read more
ಇಲ್ಲಿ ಮಹಾರಾಣಿಯೂ ಕೇವಲ ಒಬ್ಬ ‘ಹೆಣ್ಣೇ’ !: ಸುಕನ್ಯಾ ಕನಾರಳ್ಳಿ ಅಂಕಣ

ಇಲ್ಲಿ ಮಹಾರಾಣಿಯೂ ಕೇವಲ ಒಬ್ಬ ‘ಹೆಣ್ಣೇ’ !: ಸುಕನ್ಯಾ ಕನಾರಳ್ಳಿ ಅಂಕಣ

ಜನಪದ, ಪಠ್ಯ, ದೃಶ್ಯ ಹೀಗೆ ಮಾಧ್ಯಮ ಯಾವುದೇ ಇದ್ದರೂ ವೀರಗಾಥೆ ಎಂಬ ಪ್ರಕಾರ ಸರಾಗವಾಗಿ ಸಾಗುವುದನ್ನು ಬೇಡುತ್ತದೆ. ಚೆನ್ನಮ್ಮನ ಕಥಾನಕ ಸಹ ಅದಕ್ಕೆ ಹೊರತಾಗಿಲ್ಲ. ಎಲ್ಲವನ್ನೂ ಕಳೆದುಕೊಂಡ ಚೆನ್ನಮ್ಮ ಬಂಧನದಲ್ಲಿ ಐದು ವರ್ಷ ಕಳೆದು ಸಾವನ್ನಪ್ಪುತ್ತಾಳೆ. ಕಿತ್ತೂರು ಮತ್ತು ಚೆನ್ನಮ್ಮ ತದನಂತರದಲ್ಲಿ ದೇಶದಲ್ಲೆಲ್ಲಾ ಹಬ್ಬಿದ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳೆಂದು ಸ್ತುತಿಸಲಾಗಿದೆ. ರಾಷ್ಟ್ರೀಯ ಹೋರಾಟದಲ್ಲಿ ಚೆನ್ನಮ್ಮ ಧ್ರುವತಾರೆಯಂತೆ ಮಿನುಗುತ್ತಿರುತ್ತಾಳೆ ಎಂದು ಹೊಗಳಲಾಗಿದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತಾರನೆಯ ಬರಹ

read more
ಶ್ರೀರಂಗನಾಯಕ ರಾಜೀವ ಲೋಚನ ರಮಣ…: ವಿನಾಯಕ ಅರಳಸುರಳಿ ಅಂಕಣ

ಶ್ರೀರಂಗನಾಯಕ ರಾಜೀವ ಲೋಚನ ರಮಣ…: ವಿನಾಯಕ ಅರಳಸುರಳಿ ಅಂಕಣ

ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.‌
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

read more
ಚಳಿಚಳಿ ಎನ್ನದಿರಿ!: ವಿನತೆ ಶರ್ಮಾ ಅಂಕಣ

ಚಳಿಚಳಿ ಎನ್ನದಿರಿ!: ವಿನತೆ ಶರ್ಮಾ ಅಂಕಣ

ಮರದಿಂದ ಮನೆ ಕಟ್ಟುವುದು ಅಂದರೆ ಅದಕ್ಕೆ ಅದೆಷ್ಟು ಮರಗಳ ಆಹುತಿಯಾಗುತ್ತದೆ ಎಂದೆನಿಸಬಹುದು ನಿಮಗೆ. ನಿಜ. ವಸಾಹತುಶಾಹಿ ಬ್ರಿಟಿಷರ ಸಂಸ್ಕೃತಿಯಿಂದ ಬಂದ ಮನೆ ಕಟ್ಟುವ ಪರಂಪರೆಗೆ ಮತ್ತು ಕೈಗಾರೀಕರಣಕ್ಕೆ ಮೊದಮೊದಲು ಸಾವಿರಾರು ಎಕರೆ ಪ್ರದೇಶಗಳ ಕಾಡುಗಳು ಆಹುತಿಯಾದವು. ಇದನ್ನು ಲಾಗಿಂಗ್ ಅನ್ನುತ್ತಾರೆ. ಎರಡು ಶತಮಾನಗಳ ಕಾಲ ಆ ರೀತಿ ಟ್ರೀ ಲಾಗಿಂಗ್ ನಡೆಯಿತು. ಖಂಡ-ದೇಶದ ಕಾಡುಗಳು, ವನ್ಯಜೀವಿಗಳು ವಿನಾಶದ ಅಂಚಿಗೆ ಬಂದಾಗ ಸಮಾಜವು, ಸರ್ಕಾರಗಳು ಎಚ್ಚೆತ್ತುಕೊಂಡು ಲಾಗಿಂಗ್ ನಿಲ್ಲಿಸಿ, recycling ಪದ್ಧತಿಯನ್ನು ಆಚರಣೆಗೆ ತಂದರು
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

read more
 ಕಾರುಚಾಲನಾ ಕಲಿಕಾ ಪುರಾಣವು …..!: ಎಲ್. ಜಿ. ಮೀರಾ ಅಂಕಣ

 ಕಾರುಚಾಲನಾ ಕಲಿಕಾ ಪುರಾಣವು …..!: ಎಲ್. ಜಿ. ಮೀರಾ ಅಂಕಣ

ಹುಲಿಯು ತನ್ನ ಸರಹದ್ದನ್ನು ದಿನಾ ತುಸುತುಸುವೇ ಹೆಚ್ಚು ಮಾಡಿಕೊಳ್ಳುವಂತೆ ನಾನು ಸಹ ನನ್ನ ಚಾಲನಾ ಸರಹದ್ದನ್ನು ನನ್ನ ಪ್ರತಿದಿನದ ನಸುಕಿನ ಅಭ್ಯಾಸದಲ್ಲಿ ಜಾಸ್ತಿ ಮಾಡುತ್ತಾ ಹೋದೆ. ಮನೆಯ ಅಕ್ಕಪಕ್ಕದ ರಸ್ತೆಗಳು, ಮೊದಮೊದಲು ಎಲ್ಲಿ ಗುದ್ದಿಬಿಡುತ್ತೇನೋ ಎಂದು ವಿಪರೀತ ಹೆದರಿಕೆ ಆಗಿ `ಯಾಕಪ್ಪಾ ಓಡಿಸ್ತೇನೆ, ಬೇಕಿತ್ತಾ ನಂಗೆ ಈ ವಯಸ್ಸಲ್ಲಿ ಇದು?’ ಎಂದು ಅನೇಕ ಸಲ ಅನ್ನಿಸುತ್ತಿತ್ತು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೇಳನೆಯ ಬರಹ

read more
ಭಯ, ಭಕ್ತಿ, ಮತ್ತು ಬೆರಗು!: ಸುಕನ್ಯಾ ಕನಾರಳ್ಳಿ ಅಂಕಣ

ಭಯ, ಭಕ್ತಿ, ಮತ್ತು ಬೆರಗು!: ಸುಕನ್ಯಾ ಕನಾರಳ್ಳಿ ಅಂಕಣ

ಕತ್ತಲೆಯ ಭಯದಲ್ಲಿ ಲಬೋ ಲಬೋ ಬಾಯಿ ಬಡಿಯುವಾಗಲೇ ಕಣ್ಣಿನ ಅಂಚಿನಿಂದ ಬೀದಿ ಬೆಳಕಲ್ಲಿ ಎಳೆ ಎಳೆಯಾಗಿ ಬೀಳುತ್ತಿದ್ದ ಮಳೆ ಕಾಣಿಸಿ ಅಳು ಥಟ್ಟನೆ ನಿಂತೇ ಹೋಗಿತ್ತು. ಹಿಂದೆ ಕತ್ತಲೆಯ ಪರದೆ. ಅದರ ಮೇಲೆ ನೀಳವಾಗಿ ಬೀಳುತ್ತಿದ್ದ ಹೊಳೆವ ಮಳೆಯ ವೈಭವ! ನನ್ನ ಎಳೆಯ ಮನಸ್ಸಿಗೆ ಬೆರಗೋ ಬೆರಗು. ಬುದ್ಧಿ ಬೆಳೆಯುವ ಮುಂಚೆಯೇ ಕತ್ತಲೆ, ಗುಮ್ಮ, ದೆವ್ವ ಇತ್ಯಾದಿಗಳ ಬಗ್ಗೆ ಬೆಚ್ಚಿ ಬೀಳುತ್ತಿದ್ದ ಮನಸ್ಸಿಗೆ ಕತ್ತಲೆಯ ಸೌಂದರ್ಯ ಮತ್ತು ಮಳೆಯ ಲಾಲಿತ್ಯ ತಾಗಿ ಮೌನವಾಗಿ ನಿಂತುಬಿಟ್ಟಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ