ನವಿರು ಹಾಸ್ಯದ ನುಡಿತೋರಣ
ಈ ಪುಸ್ತಕದ ನಿಜವಾದ ಸತ್ವ ಇರುವುದು ಅಮೆರಿಕಾದ ಜಾಗಗಳ ವರ್ಣನೆಯಲ್ಲಲ್ಲ. ಅವರು ಅಮೆರಿಕಾ ಮತ್ತು ಕೆನಡಾ ಪ್ರವಾಸವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಂಡರು ಅನ್ನುವುದರಲ್ಲಿ. ಅವರ ಪ್ರತಿ ನಡೆ ನುಡಿಯಲ್ಲೂ ಅವರ ವ್ಯಕ್ತಿತ್ವದ ದರ್ಶನವಾಗುತ್ತದೆ. ಹಾಗಂತ ಎಲ್ಲವೂ ಗಂಭೀರವಾಗಿಯೇ ಸಾಗುತ್ತದೆ ಅಂತ ಅಲ್ಲ, ತಪ್ಪಿ ಅವರು ಕೆಎಫ್ಸಿ ಚಿಕನ್ ತಿನ್ನಲು ಹೋದ ಪ್ರಸಂಗ, ಆಮೇಲೆ ಡೋನಟ್ ಪರಿಚಯವಿಲ್ಲದ ಅವರು ಅನುಮಾನವೇ ಬೇಡವೆಂದು ತಿನ್ನದಿರುವುದು .. ಹೀಗೆ ಅಲ್ಲಿನ ಅನೇಕ ಘಟನೆಗಳನ್ನು ನವಿರು ಹಾಸ್ಯದಿಂದ ವರ್ಣಿಸುತ್ತಾರೆ.
ಕುದ್ರಿ ಕುದ್ರಿನ…ಕತ್ತಿ ಕತ್ತಿನ….!
ಬೀಜಗಣಿತವನ್ನು ಕಲಿಸುತ್ತಿದ್ದಾಗ ಮೇಷ್ಟ್ರು 4x ಗೆ 3y ಸೇರಿಸಿದರೆ ಎಷ್ಟಾಗುತ್ತದೆ ಎನ್ನುವುದನ್ನು ಅವರೆಷ್ಟು ಬಾರಿ ಅರ್ಥ ಮಾಡಿಸಲು ಪ್ರಯತ್ನಿಸಿದ್ದರು. ಆದರೆ ನಿಷ್ಕ್ರಿಯಗೊಂಡಂತಿದ್ದ ನಮ್ಮ ಮೆದುಳೊಳಗೆ ಇಳಿಯದೆ ನಮ್ಮೆಲ್ಲರ ಉತ್ತರ ‘ಏಳು’ ಎಂದೇ ಇರುತ್ತಿತ್ತು. ಅವರಿಗೆ ಕೊನೆ ಕೊನೆಗೆ ಕೋಪ ಬಂದರೂ ಅದನ್ನು ತೋರಿಸಿಕೊಳ್ಳದೇ ಭಿನ್ನವಾದ ಉದಾಹರಣೆಯನ್ನು ನೀಡುತ್ತಾ “ಹೆಲೊ ಜೆಂಟಲ್ಮೆನ್ಸ್, ನಾಲ್ಕು ಕುದ್ರಿಗಳೊಳಗ ಮೂರು ಕತ್ತಿಗಳನ್ನ ಕುಡಿಸಿದ್ರ ಎಷ್ಟ್ ಆಗ್ತೆತಿ” ಅಂದಾಗಲೂ ನಾವು ಏಳು ಅಂತಲೇ ಒದರಿಬಿಡುತ್ತಿದ್ದೆವು. ನಮ್ಮ ದಡ್ಡತನಕ್ಕೆ ಅವರು ಹಣಿ ಹಣಿ ಜಜ್ಜಿಕೊಂಡು ಮರುಕಪಟ್ಟು “ನಾಲ್ಕು ಕುದ್ರಿಗೆ ಮೂರು ಕತ್ತಿ ಸೇರಿದ್ರ ಏಳು ಆಗಲ್ಲ ಕಣ್ರಲೇ, ಕುದ್ರಿ ಕುದ್ರಿನ… ಕತ್ತಿ ಕತ್ತಿನ…. ಅವು ಯಾವತ್ತು ಒಂದ ಅಲ್ಲ ಎನ್ನುತ್ತಿದ್ದರು. ʻತಳಕಲ್ ಡೈರಿʼಯಲ್ಲಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ ಇಸ್ಮಾಯಿಲ್ ತಳಕಲ್
ಸಾವೇ ಇಲ್ಲದ ಗಿಡ ಮತ್ತು ಹ್ಯುಮಸ್ಸು
ಆ ಮಣ್ಣಿನ ದಾರಿಯ ಆಚೀಚೆ ಬೇರೆಯವರ ಹೊಲಗಳು ಇವೆ. ಎಲ್ಲರೂ ಸಣ್ಣ ಸಣ್ಣ ಹಿಡುವಳಿದಾರರು. ಅಲ್ಲಿರ್ಪ ಗುತ್ತೆಪ್ಪ, ದುರ್ಗಪ್ಪ, ಬಸಪ್ಪ, ಮಾಲತೇಶ ಹೀಗೇ ಒಬ್ಬೊಬ್ಬರೇ ಕ್ರಮೇಣ ಪರಿಚಯವಾದರು. ನಡೆದುಕೊಂಡು ಹೋದರೆ ಇದೊಂದು ಲಾಭ ಅಲ್ಲವೇ? ಅಲ್ಲಿನ ಬಹಳಷ್ಟು ರೈತರು ಬೆಳೆಯುವ ಬೆಳೆಗಳು ಒಂದೋ ಭತ್ತ, ಮುಸುಕಿನ ಜೋಳ ಇಲ್ಲವೆ ಶುಂಠಿ. ಅಡಿಕೆಗೆ ಬೆಲೆ ಬರುತ್ತಿದೆ ಅಂತ ಕೆಲವರು ಇತ್ತೀಚಿಗೆ ತಮ್ಮ ಗದ್ದೆಯನ್ನು ತೋಟವನ್ನಾಗಿ ಮಾಡುತ್ತಿದ್ದರು. ಆದರೆ ಯಾರೂ ಕೂಡ ಅಲ್ಲಿ ಸಮಗ್ರ ಕೃಷಿ ಮಾಡಿರಲಿಲ್ಲ. ಎಲ್ಲರದೂ ಒಂದೇ ಬೆಳೆ. ಬೆಲೆ ಬಂದರೆ ಲಾಟರಿ ಇಲ್ಲವಾದರೆ ದೇವರೇ ಗತಿ ರೀ!
ಗುರುಪ್ರಸಾದ್ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ
ಮಡಿವಂತಿಕೆಯ ರಂಗಸ್ಥಳದಲ್ಲಿ ಹೊಸ ಪ್ರಸಂಗಗಳ ಗ್ರಹಿಕೆ
ಹೊಸ ಪ್ರಸಂಗಗಳ ಬಗ್ಗೆ ಸಾಮಾನ್ಯವಾಗಿ ಒಂದು ಸೀಮಿತ ಗ್ರಹಿಕೆಯಿರುತ್ತದೆ. ಯಕ್ಷಗಾನವೆಂದರೆ ಅದು ಹಳೆಯ ಕಲೆ, ಅದಕ್ಕೆ ನೂರಾರು ವರ್ಷಗಳ ಪರಂಪರೆಯಿದೆ. ಅದು ಪುರಾಣ ಕತೆಗಳ ಮೌಲ್ಯ ಪ್ರಸಾರಕ್ಕಾಗಿದೆ, ನಮ್ಮ ಜೀವನಕ್ಕೆ ಬೇಕಾಗುವ ಮೌಲ್ಯವೇ ಪುರಾಣಗಳಲ್ಲಿವೆ ಮತ್ತು ಹಳೆಯದೆಲ್ಲವನ್ನು ರಕ್ಷಿಸಬೇಕು ಎನ್ನುವ ನಂಬಿಕೆಯಿಂದಾಗಿ. ಜೊತೆಗೆ ಅದೊಂದು ಗಂಭೀರವಾದ ಕಲೆ ಎನ್ನುವ ದೃಷ್ಟಿಕೋನವೂ ಸೇರಿಕೊಂಡಿದೆ. ಗಂಭೀರವೆಂದರೆ ರಂಜನೆಯಿಲ್ಲದ್ದು ಅನ್ನುವುದು ಒಮ್ಮೊಮ್ಮೆ ಅವರ ಮಾತುಗಳಲ್ಲಿ ಧ್ವನಿಸುತ್ತದೆ. ಇವೆಲ್ಲ ನಂಬಿಕೆಗಳು ವಸಾಹತಿನ ಕಾಲದಲ್ಲಿ ಹುಟ್ಟಿದ ರಾಷ್ಟ್ರೀಯತೆಯ ಕಲ್ಪನೆಯೊಟ್ಟಿಗೆ ಬಂದದ್ದೆಂದು ಕಾಣುತ್ತದೆ. ಯಕ್ಷಾರ್ಥ ಚಿಂತಾಮಣಿ ಅಂಕಣದಲ್ಲಿ ಕೃತಿ ಪುರಪ್ಪೇಮನೆ ಲೇಖನ ಇಲ್ಲಿದೆ.
ಕಷ್ಟವನ್ನೇ ಬದುಕಿನ ಗುರುವೆನ್ನಬಹುದೇ?
ಕಷ್ಟ ಸುಖ ಮನಸ್ಸಿನ ಸ್ಥಿತಿ ಅಷ್ಟೇ. ಈಗಲೂ ಮುಪ್ಪು ಕಷ್ಟ ಅಂದ್ಕೊಂಡ್ರೆ ಕಷ್ಟ. ಸುಖ ಅಂದ್ಕೊಂಡ್ರೆ ನಿರಾಳ. ಅವತ್ತು ಜನ ಕಪ್ಪಗಿದ್ದೀನಿ, ವಿಧವೆ, ನಯ-ನಾಜೂಕಿಲ್ಲ, ನಾಲ್ಕು ಮಕ್ಕಳ ಜವಾಬ್ದಾರಿ ಹಾಗೆ ಹೀಗೆ ಅಂತ ಸಾವಿರ ಮಾತಾಡಿದ್ದರು. ನಾನು ಮಾತಾಡಲಿಲ್ಲ. ಇವತ್ತು ಯಾರಿಗೂ ಉತ್ತರ ಕೊಡುವ ಗಜರಿಲ್ಲ. ನನಗೆ ನನ್ನ ಬದುಕಿನ ಬಗ್ಗೆ, ಬದುಕಿದ ರೀತಿಯ ಬಗ್ಗೆ ಹೆಮ್ಮೆಯಿದೆ. ನಿಶ್ಚಿಂತೆಯಿಂದ ಕಣ್ಮುಚ್ಚುತ್ತೀನಿ. ಇನ್ನೇನು ಬೇಕು?” ಎಂಭತ್ತೇಳು ವರ್ಷದ ಸುಕ್ಕುಗಟ್ಟಿದ ಮೈ, ಗಟ್ಟಿಮೂಳೆಯೊಂದೇ ಕಾಣುವ ಪುಟ್ಟ ದೇಹವನ್ನು ನೇರವಾಗಿಟ್ಟುಕೊಂಡು ಗಟ್ಟಿದನಿಯಲ್ಲಿ ಹೀಗೆ ಗುಡುಗುವಾಗ ಹೃದಯತುಂಬಿ ಬರುತ್ತದೆ.
ಎಸ್. ನಾಗಶ್ರೀ ಅಜಯ್ ಅಂಕಣ “ಲೋಕ ಏಕಾಂತ”
ಬ್ಯಾಗಡಿ ಕವರಲ್ಲಿ ಮಡಸಿಟ್ಟಿದ್ದ ಸೀರೆಗಳಂತ ಕನಸು
ಕಟ್ರಗುಳ್ಳಿ ಕಲ್ಲು ಎಂದು ಯಮುನಿಯ ಬಾಯಲ್ಲಿ ನಾಮಕರಣ ಮಾಡಿಸಿಕೊಂಡಿದ್ದ ಟಾರು ರೋಡಿನ ಒತ್ತುವ ಹರಳುಗಳನ್ನು ಬರಿಗಾಲಲ್ಲಿ ತುಳಿಯುತ್ತ ಅಜ್ಜಿ ಮೊಮ್ಮಗಳಿಬ್ಬರು ಬಟ್ಟೆಯಂಗಡಿಗೆ ಕಾಲಿಟ್ಟರು. ಕಸಬರಿಗೆಯಲ್ಲಿ ಕಸವಡೆದು ಬಯಲುಸೀಮೆಯ ಮಳೆಯ ಕಂತ್ರಾಟ ಗೊತ್ತಿದ್ದ ಅಂಗಡಿಯ ಹುಡುಗ ಯಾವುದಕ್ಕೂ ಇರಲಿ ಎಂದು ಅಂಗಡಿ ಮುಂದಿನ ಬಯಲಿಗೆ ನಾಲ್ಕು ಚೊಂಬು ನೀರುಗ್ಗುವ ಶಾಸ್ತ್ರ ಮಾಡುತ್ತಿದ್ದ. ಶೇಟಿ ಲಕ್ಷ್ಮಿ ಫೋಟೋಗೆ ಊದಿನಕಡ್ಡಿ ಬೆಳಗಿ ಕೈಮುಗಿಯುವ ತರಾತುರಿಯಲ್ಲಿದ್ದವನು ಇವರನ್ನು ನೋಡಿ ಐದು ಮಿನಟ್ ಕೂತ್ಗಳ್ರಿ ಎಂದು ತನ್ನ ಪೂಜಾ ಸಿದ್ಧತೆಯನ್ನು ಮುಂದುವರೆಸಿದ. ಇವರು ಬೇರೆ ಆಯ್ಕೆಯೇ ಇಲ್ಲದಂತೆ ಕಾಯುತ್ತ ನಿಂತರು.
ದಾದಾಪೀರ್ ಜೈಮನ್ ಬರೆಯುವ “ಜಂಕ್ಷನ್ ಪಾಯಿಂಟ್” ಅಂಕಣ
ಬೆಳಕು ಬಣ್ಣದ ಭ್ರಮಾಲೋಕ ರಿವರ್ ಫೈರ್
ಬ್ರಿಸ್ಬೇನ್ ಫೆಸ್ಟಿವಲ್ ಎನ್ನುವ ಆನಂದದ ಲೋಕದಲ್ಲಿ ಈ ಬಾರಿ ಉತ್ಸಾಹ ಒಂದು ತೂಕ ಹೆಚ್ಚೇ. ಕಳೆದೆರಡು ವರ್ಷಗಳಲ್ಲಿ ನಡೆಯದ ಉತ್ಸವ ಈ ಬಾರಿ ಹೆಚ್ಚು ರಂಗಿನಿಂದ ನಡೆಯುತ್ತಿದೆ. ಕಳೆದದ್ದನ್ನ ಗಿಟ್ಟಿಸಿಕೊಳ್ಳಲು ಹಬ್ಬದ ತಯಾರಿ ಜೋರಾಗೆ ನಡೆದಿದೆಯೆಂದು ಟಿವಿ ವಾಹಿನಿಗಳು ಬಿತ್ತರಿಸುತ್ತಿವೆ. ಈ ಫೆಸ್ಟಿವಲ್ ನಡೆಯುವ ಮೂರು ವಾರಗಳ ಕಾಲದಲ್ಲಿ ಬರಹಗಾರರ ಶಿಬಿರ, ಅಂತಾರಾಷ್ಟ್ರೀಯ ಚಲನಚಿತ್ರ ಪ್ರದರ್ಶನ, ಕಲೆಗಳ ಪ್ರದರ್ಶನ, ಸೌತ್ ಬ್ಯಾಂಕಿನಲ್ಲಿ ಆಹಾರ ಮೇಳ ಇನ್ನೂ ಹಲವಾರು ವೈವಿಧ್ಯತೆಗಳುಳ್ಳ ಕಾರ್ಯಕ್ರಮಗಳಿರುತ್ತವೆ.ಇವೆಲ್ಲಕ್ಕೂ ಕಳಶವಿಡುವಂತೆ ಇಂದು ಉದ್ಘಾಟನೆಯ ಶನಿವಾರದಂದು ರಾತ್ರಿ River Fire ನಡೆಯುತ್ತದೆ. ಬ್ರಿಸ್ಬೇನ್ ನದಿಯು ಪಟಾಕಿಗಳ ಬಣ್ಣಗಳನ್ನು ಪ್ರತಿಫಲಿಸುವ ಖುಷಿಯಲ್ಲಿ ಹರಿಯುತ್ತಿದೆ. ಈ ಬಾರಿಯ ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮ ಸಡಗರದ ಸುದ್ದಿಯನ್ನು ಬರೆದಿದ್ದಾರೆ.
ನಿಂತಲ್ಲಿ ಕುಂತಲ್ಲಿ ಕಾಡುವ ಕಥೆ ಬರೆದ ದಾದಾ
ಇಲ್ಲಿರುವ ಎಲ್ಲಾ ಕತೆಗಳಿಗಿಂತ ಕೊನೆಯ ಕತೆ ‘ಎಲ್ಲೋ ಯಲ್ಲೋ’
ಕಥೆಯೇ ಯಾಕೆ ಜಾಸ್ತಿ ಇಷ್ಟವಾಯಿತು ಅಂದುಕೊಂಡರೂ ಯಾವುದ್ಯಾವುದೋ ಕಾರಣಗಳು ತೋಚುತ್ತವೆ. ಆದರೆ ಮುಖ್ಯವಾಗಿ ಇಷ್ಟವಾಗಿದ್ದು ಒಂದು ಗಂಡು ಮತ್ತು ಹೆಣ್ಣಿನ ನಡುವೆ ಇರಬಹುದಾದ ಸಹಜವಾದ ಗೆಳೆತನದ ರೀತಿ ಮತ್ತು ಒಬ್ಬಳು ಶಿಕ್ಷಕಿಯ ಗಂಡನಾಗಿ ಅವರ ಕಷ್ಟನಷ್ಟಗಳ ಬಗ್ಗೆ ಅರಿವಿರುವುದು. ಹೇಗೆ ಹುಡುಗ ಹುಡುಗ ಆತ್ಮೀಯ ಗೆಳೆಯರಾಗಿರಲು ಸಾಧ್ಯವೋ ಅದೇ ರೀತಿ ಹುಡುಗ ಹುಡುಗಿ ಕೂಡಾ ಅದೇ ಆತ್ಮೀಯತೆಯಲ್ಲಿರಲು ಸಾಧ್ಯ. ಸಮಾಜ ಈ ವಿಷಯದಲ್ಲಿ ಮುಂಚಿನಷ್ಟು ಮಡಿವಂತಿಕೆ ಇಟ್ಟುಕೊಂಡಿಲ್ಲವಾದರೂ ಪೂರ್ತಿ ಬದಲಾಗಿಯೂ ಇಲ್ಲ.
ಗಿರಿಧರ್ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ
ನಾಗಶ್ರೀ ಅಜಯ್ ಹೊಸ ಅಂಕಣ ಲೋಕ ಏಕಾಂತ ಆರಂಭ
ಮನೆ, ನೆಂಟರಿಷ್ಟರು, ಎಫ್ ಬಿ ಯಲ್ಲಿ ಸಾವಿರಾರು ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪರಿಚಿತರ ಸಂಖ್ಯೆ ಹೆಚ್ಚಿರಬಹುದು. ಆದರೆ ನಮ್ಮ ಅಂತರಂಗದ ಪಿಸುಮಾತಿಗೆ ಕಿವಿಯಾಗುವವರು, ದುರ್ಬಲ ಘಳಿಗೆಯಲ್ಲಿ ಹೆಗಲಾಗುವವರು, ನೀನೇನೇ ಆಡಿದರೂ, ಮೌನವಾಗುಳಿದರೂ ಅರ್ಥಮಾಡಿಕೊಳ್ಳಬಲ್ಲೆ ಎನ್ನುವವರು ಎಷ್ಟು ಜನರಿಗಿದ್ದಾರೆ ಹೇಳಿ? ಅವರಿವರ ಮಾತು ಬಿಡಿ. ಮೊಬೈಲ್ ಬಂದ ಮೇಲಂತೂ ನಮಗೆ ನಾವು ದೊರಕುವುದೂ ಅಪರೂಪವೇ.ಯಾವುದೋ ಪುಟವೊಂದರಲ್ಲಿ ಮುಳುಗಿ ಹೋಗಿರುತ್ತೇವೆ. -ಹೀಗೆ ಬದುಕಿನ ಮಾಮೂಲಿ ಕ್ಷಣಗಳ ನಡುವೆ ನುಸುಳಿಕೊಂಡಿರುವ ಸೂಕ್ಷ್ಮಗಳನ್ನು ಗುರುತಿಸಿ ಬರೆದಿದ್ದಾರೆ ಎಸ್. ನಾಗಶ್ರೀ ಅಜಯ್.









