ಉದ್ದೇಶಪೂರ್ವಕವಲ್ಲದ ಒಂದು ಮಾತು ಕೊಲ್ಲಬಹುದು
ನಮ್ಮಲ್ಲಿನ್ನೂ ಮಾನವೀಯ ಸಂಬಂಧಗಳಿಗೆ ಬಹಳಷ್ಟು ಮೌಲ್ಯವಿದೆ, ಅರ್ಥವಿದೆ. ಯಾವುದೋ ಒಂದು ಅಪನಂಬಿಕೆ, ತಪ್ಪುಕಲ್ಪನೆ, ಅಪಾರ್ಥ ಎಲ್ಲವನ್ನು ಮುರಿದು ಹಾಕಬಾರದು. ಸಂಬಂಧಗಳೇನು ಪಟಕ್ಕನೇ ಕತ್ತರಿಸುವಷ್ಟು ತೆಳುವಾಗಿರುತ್ತವೆಯೇ? ತಾಳ್ಮೆಯಿಂದ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಯುದ್ಧಗಳೆ ನಿಂತಿರುವ ಉದಾಹರಣೆಗಳು ಕಣ್ಣಮುಂದಿವೆ. ಸಣ್ಣ ಪುಟ್ಟ ತಪ್ಪುಗಳಿಗೆ, ಜಗಳಗಳಿಗೆ, ಮುನಿಸುಗಳಿಗೆ ಮತ್ಯಾವುದೋ ಉದ್ದೇಶಪೂರ್ವಕವಲ್ಲದ ಮಾತಿಗೆ ಸಂಬಂಧಗಳು ಮುರಿದು ಬೀಳುತ್ತವೆ ಎಂದರೆ ಸಂಬಂಧಗಳಿಗೆ ಬೆಲೆ ಏನು?
ಇಸ್ಮಾಯಿಲ್ ತಳಕಲ್ ಅಂಕಣ
“ಜೀವಾಮೃತ” ಘಳಿಗೆ ಬಂದೇಬಿಟ್ಟಿತು…
ಶಂಭುಲಿಂಗ ಮಾವನ ಮನೆಯಲ್ಲಿ ಎರಡು ಹಸುಗಳಿದ್ದವು; ಆದರೆ ಅವು ನಾಟಿ ಆಗಿರಲಿಲ್ಲ. ಹೀಗಾಗಿ ನಾಟಿ ಹಸುಗಳ ಹುಡುಕಾಟ ಶುರು ಆಯ್ತು. ಮಲೆನಾಡು ಗಿಡ್ಡ ಎಂಬ ತಳಿ ಅಲ್ಲಿನ ನಾಟಿ ಹಸು. ಹಳ್ಳಿಯಲ್ಲಿ ಎಲ್ಲೋ ಒಂದು ಕಡೆ ಸಿಕ್ಕೆ ಸಿಗುತ್ತದೆ ಅಂದುಕೊಂಡಿದ್ದ ನನಗೆ ಹುಡುಕಿದ ಕಡೆಯೆಲ್ಲ ಅವುಗಳನ್ನು ಕಾಣದೆ ಭ್ರಮನಿರಸನವಾಯ್ತು. ವಿಚಿತ್ರ ಅಂದರೆ ಈಗ ಬೆಂಗಳೂರಿನಲ್ಲೇ ಬೇಕಾದಷ್ಟು ನಾಟಿ ಹಸುಗಳ ಹಾಲಿನ ಡೈರಿಗಳು ಇವೆ, ಆದರೆ ಹಳ್ಳಿಯಲ್ಲಿ ತುಂಬಾ ಅಪರೂಪ. ಇದೊಂದು ದುರಂತ ಅಂತ ನನಗೆ ಅನಿಸಿತು.
ಗುರುಪ್ರಸಾದ್ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣ
ಪೇಟೇಸರದಲ್ಲಿ ನೋಡಿದ ಯಕ್ಷಗಾನ ಬಯಲಾಟದ ಸುತ್ತಮುತ್ತ
ಮಂಡಕ್ಕಿ ಅಂಗಡಿ ಇಡುವವರು ನಮ್ಮ ಚರ್ಚೆಯಲ್ಲಿ ಭಾಗವಹಿಸಿದರು, ಆದರೆ ಅವರು ಫೋಟೊ ತೆಗೆಯೋದು ಬೇಡ ಅಂದರು. ಮುಂಚೆ ಬಳೆ ವ್ಯಾಪಾರ ಮಾಡುತ್ತಿದ್ದರು. ಯಕ್ಷಗಾನವು ಇಷ್ಟ ಆಗುವುದರಿಂದ ಮಂಡಕ್ಕಿ ವ್ಯಾಪಾರ ಮಾಡುತ್ತಾರೆ. ಟೆಂಟ್ ಮೇಳದಲ್ಲಿ ಬರಿ ಭಾಗವತಿಕೆ ಕೇಳೋಕಾಗತ್ತೆ. ಭಾಗವತಿಕೆನೆ ಮುಖ್ಯ ಅವರ ಪ್ರಕಾರ. ‘ಯಕ್ಷಗಾನ ನೋಡಿದ ಹಾಗೂ ಆತು, ಗಂಜಿಗೆ ಕಾಸು ಆತು’, ಅದಕ್ಕೆ ಮಂಡಕ್ಕಿ ವ್ಯಾಪಾರ ಶುರುಮಾಡಿದೆ ಅಂದರು. ಇಲ್ಲಿಯ ಎಲ್ಲಾ ಕಲಾವಿದರೂ ಯಾವ ಪಾತ್ರವನ್ನಾದರೂ ಪದ್ಯ ನೋಡಿಕೊಂಡು ಮಾಡಬಲ್ಲವರಾಗಿದ್ದರು.
ಕೃತಿ ಪುರಪ್ಪೇಮನೆ ಬರಹ
ಆಸ್ಟ್ರೇಲಿಯದ ಮಳೆ ಪ್ರವಾಹಗಳು, ಸೋಲುಗೆಲುವುಗಳು
ಈ ಬಾರಿ ವಿಕ್ಟೊರಿಯಾ ರಾಜ್ಯವಷ್ಟೇ ಅಲ್ಲ ಅದರ ಕೆಳಗಿನ ಟಾಸ್ಮೆನಿಯಾ ರಾಜ್ಯದ ಭಾಗಗಳಲ್ಲೂ ಪ್ರವಾಹವುಂಟಾಗಿದೆ. ಟಾಸ್ಮೆನಿಯಾವು ಕಡಿಮೆ ಜನಸಂಖ್ಯೆ, ಎಲ್ಲೆಲ್ಲೂ ಕಂಗೊಳಿಸುವ ಪುರಾತನ ಹಸಿರು ಕಾಡುಗಳಿಗೆ ಹೆಸರಾದದ್ದು. ಹಾಗಾಗಿ ಪ್ರವಾಹದ ವಿಷಯ ಇನ್ನೂ ಅಪರೂಪದ ಸಂಗತಿ ಇಲ್ಲಿ. ಹೆಚ್ಚು ಕಡಿಮೆ ದೇಶದ ಇಡೀ ಪೂರ್ವಭಾಗದಲ್ಲಿ ಮಳೆಮೋಡಗಳ ಜೊತೆ ಚಿಂತೆಮೋಡಗಳು ಕೂಡ ಕವಿದಿವೆ. ದೇಶದ ಆಚೆಕಡೆಯ ಮರುಭೂಮಿಗಳು ಬೆಂದು ಕಾದು ಅಲ್ಲಿನ ಕಾವುಮೋಡಗಳು ಮರುಭೂಮಿಯನ್ನು ದಾಟಿಬಿಟ್ಟಿವೆ.
ಡಾ. ವಿನತೆ ಶರ್ಮ ಅಂಕಣ
ಜಿ.ಟಿ. ನಾರಾಯಣರಾವ್ ಹೇಳುವ ಎನ್‌ಸಿಸಿ ದಿನಗಳ ಕಥೆಗಳು
ಇಲ್ಲಿ ಬರುವ ವೈಜ್ಞಾನಿಕ ವಿವರಣೆಗಳು ಮಾತ್ರ ಎಲ್ಲರಿಗಲ್ಲ. ಅದು ವಿಜ್ಞಾನದಲ್ಲಿ ಆಸಕ್ತಿಯಿದ್ದು ಅರ್ಥಮಾಡಿಕೊಳ್ಳಲು ಶ್ರಮ ಹಾಕಲು ಸಿದ್ಧರಿರುವವರಿಗೆ ಮಾತ್ರ. ಕನ್ನಡದಲ್ಲಿ ಇರುವ ಕಾರಣ ಕೆಲ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದು ಈ ಪುಸ್ತಕ ಅಂತಲ್ಲ. ಎಲ್ಲಾ ವೈಜ್ಞಾನಿಕ ಗ್ರಂಥಗಳನ್ನು ಕನ್ನಡೀಕರಿಸಬೇಕಾದರೆ ಆಗುವ ಸಾಮಾನ್ಯ ಸಮಸ್ಯೆ. ಪದಗಳನ್ನು ಕನ್ನಡದಕ್ಕೆ ತರುವುದು ಬಹಳ ಕಷ್ಟ. ನನ್ನ ಪ್ರಕಾರ ಅವುಗಳನ್ನು ಆಂಗ್ಲದಿಂದ ನೇರವಾಗಿ ಬಳಕೆ ಮಾಡುವುದೇ ಉತ್ತಮ. ಕನ್ನಡ ಸಂಸ್ಕೃತ, ಪರ್ಶಿಯನ್ ಮೊದಲಾದ ನುಡಿಗಳಿಂದ ಪದಗಳನ್ನು ಸ್ವೀಕರಿಸಿರುವ ಹಾಗೇ ಆಂಗ್ಲದಿಂದಲೂ ಸ್ವೀಕರಿಸುತ್ತದೆ.
ಗಿರಿಧರ್ ಗುಂಜಗೋಡು ಬರೆಯುವ ಓದುವ ಸುಖ ಅಂಕಣ
ಸುಂದರಿಗೇನು ಕಷ್ಟ-ಸುಖಗಳಿರುವುದಿಲ್ಲವೇ?
ಇರುವ ಚೆಂದವನ್ನು ಕಾಪಾಡಿಕೊಳ್ಳಬೇಕೆಂಬ ಒತ್ತಡ ಸೃಷ್ಟಿಸುವ ತಾಕಲಾಟ ಬಲ್ಲೆ. ಒಂದೇ ಘಟ್ಟದಲ್ಲಿ ಹೆಚ್ಚು ಕಾಲ ಇರಲಾಗದು. ನಿಧಾನಕ್ಕೆ ಈ ಜತನ ಮಾಡುವ ಉಸಾಬರಿ ಸಾಕೆನ್ನಿಸಿತು. ಹೊರಗೆ ‘ಕಾಣುವ’ ಚೆಂದಕ್ಕಿಂತ ನಾನು ಬೇರೆ ಅನ್ನಿಸಿತು. ಎಷ್ಟೇ ಕಷ್ಟಪಟ್ಟರೂ ಕಾಲನ ಹೊಡೆತ ತನ್ನ ಕೆಲಸ ಮಾಡಿಯೇ ತೀರುತ್ತದೆ. ಕಾಲದೊಂದಿಗೆ ಹೋರಾಡುವುದಕ್ಕಿಂತ ನನ್ನ ವ್ಯಕ್ತಿತ್ವ, ಪ್ರತಿಭೆ, ಬುದ್ಧಿ, ಮನಸ್ಸಿನ ಜೊತೆ ಗುದ್ದಾಡುತ್ತಾ ಬೆಳೆಯುವುದರಲ್ಲಿ ಬದುಕಿನ ಸೌಂದರ್ಯವಿದೆ. ಈ ಸಮಯ ಮತ್ತೆ ಬರಲಾರದು. ಈ ಅವಕಾಶ ಮತ್ತೆ ಸಿಗಲಾರದು. ಹಠಕ್ಕೆ ಬಿದ್ದಂತೆ ಸಂಗೀತ ಮುಂದುವರೆಸಿದೆ.
ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ
ಅವಳನ್ನು ಅನ್ಯಗ್ರದ ಏಲಿಯನ್‌ಳಂತೆ ನೋಡತೊಡಗಿದ್ದರು
ಆಧುನಿಕತೆಯ ಬಣ್ಣ ಅಷ್ಟೊಂದು ಮೆತ್ತಿಕೊಂಡಿರದಿದ್ದ ನಮ್ಮ ಕಾಲೇಜಿಗೆ ಆಗ ಒಂದು ಹುಡುಗಿ ಜೀನ್ಸ್ ತೊಟ್ಟು ಬಂದಿರುವುದೇ ದೊಡ್ಡ ವಿಷಯ ಆಗಿಹೋಯಿತು. ಅಂದು ಅವಳನ್ನು ಯಾವುದೋ ಅನ್ಯಗ್ರಹವೊಂದರಿಂದ ಬಂದಿಳಿದ ಏಲಿಯನ್‌ಳಂತೆ ಎಲ್ಲಾ ಹುಡುಗರು ಅವಳನ್ನೆ ದಿಟ್ಟಿಸತೊಡಗಿದ್ದರು. ಅವಳ ಆ ಬಟ್ಟೆ ಕಂಡು ಆಡಿಕೊಂಡು ನಗುವುದು ಕೊಂಕು ಮಾತನಾಡುವುದು ಶುರು ಮಾಡಿದ್ದರು. ಹುಡುಗರ ವರ್ತನೆ ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆ ಹುಡುಗಿ ತಾನೇನೋ ಮಹಾಪರಾಧ ಮಾಡಿ ಸಿಕ್ಕಿಬಿದ್ದಳೇನೋ ಎನ್ನುವ ಮನೋಭಾವನೆಯಲ್ಲಿ ಕಾಲೇಜು ಮುಗಿಯುವವರೆಗೂ ತಲೆ ತಗ್ಗಿಸಿಕೊಂಡೆ ಕೂಡಬೇಕಾಯಿತು.
ಇಸ್ಮಾಯಿಲ್ ತಳಕಲ್ ಅಂಕಣ
ಆಳದ ದನಿ ತುಂಬಾ ಕ್ಷೀಣವಾಗಿರುತ್ತೆ..
ಪುಣ್ಯ ಕೊನೆಯ ಬಾರಿ ಮಾತನಾಡಿದ್ದು ಇದೆ ಒಂದು ವಾರದ ಕೆಳಗೆ. ಅವನ ಶಾಲಾ ವಾರ್ಷಿಕೋತ್ಸವದಲ್ಲಿ… ಈ ರಗಳೆಗಳೆಲ್ಲ ಶುರುವಾದದ್ದು ಸುರಭಿಯಿಂದಲೇ ಎನ್ನಬೇಕು. ಆರನೇ ತರಗತಿ ಓದುತ್ತಿದ್ದ ಸುರಭಿ, ಒಂದು ದಿನ ಶಾಲೆಯಿಂದ ಬಂದದ್ದೆ ಜೋರಾಗಿ ಅಳತೊಡಗಿದಳು. ‘ಅಣ್ಣ ಹುಡುಗಿ ತರ ಆಡ್ತಾನೆ ಅಂತ ಎಲ್ಲರು ನಂಗೆ ಹೆಣ್ಣಿಗನ ತಂಗಿ ಅಂತ ಆಡ್ಕತಾರೆ…ಕಾಡಿಸ್ತಾರೆ. ನಾಳೆಯಿಂದ ಶಾಲೆಗೇ ಹೋಗಲ್ಲ!’ ಎಂದು ರಂಪ ಮಾಡತೊಡಗಿದ್ದಳು. ಅಂದಿನಿಂದಲೇ ಪ್ರತಾಪ್ ಇವನನ್ನ ಸರಿ ಮಾಡಲು ಶುರುಮಾಡಿದ್ದು… ಪುಣ್ಯನ ದನಿ ಹುಡುಗಿಯ ದನಿಯನ್ನು ಹೋಲುತ್ತಿತ್ತು. ದಾದಾಪೀರ್ ಜೈಮನ್ ಬರೆಯುವ ʻಜಂಕ್ಷನ್ ಪಾಯಿಂಟ್ʼ ಅಂಕಣದ ಹೊಸ ಬರಹ
ʻನಿಧಾನವೇ ಪ್ರಧಾನವೆಂಬುದು ನನ್ನ ವಿಧಾನʼ
ಕ್ರಮೇಣ ನಮಗೆ ಊರು ಪರಿಚಯವಾಗತೊಡಗಿತ್ತು. ಅದು ತುಂಬಾ ಮುಖ್ಯ. ಯಾವ ಊರಿನಲ್ಲಿ ನಾವು ಬೆಳೆಯಲು ಬಯಸುತ್ತೇವೋ ಅಲ್ಲಿನ ಜನರ ಜೊತೆಗೆ ಬೆಳೆಯಬೇಕೆ ವಿನಹ ನಮ್ಮಷ್ಟಕ್ಕೆ ನಾವು ಇರಲು ಸಾಧ್ಯವಿಲ್ಲ. ಇದೆ ರೀತಿ ನಾವು ನಮ್ಮ ಹೊಲದ ಬಳಿಯ ಜನರಿಗೂ ಹತ್ತಿರವಾಗಬೇಕಿತ್ತು. ಅದು ಇನ್ನೂ ಸಾಧ್ಯವಾಗಿರಲಿಲ್ಲ. ನಮಗಿನ್ನೂ ಅಲ್ಲೊಂದು ಮನೆ ಸಿಕ್ಕಿರಲಿಲ್ಲ. ಆದರೆ ಅದಕ್ಕಿಂತ ಮೊದಲು ಶಂಭುಲಿಂಗ ಹೆಗಡೆ ಅವರು ನಮಗೆ ಸಿಕ್ಕಿದ್ದು ತುಂಬಾ ಅನುಕೂಲ ಆಗಿತ್ತು. ಅವರು ನಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೆಲ್ಲ ಚಿಟಿಕೆ ಹೊಡೆದಂತೆ ಕೊಡಿಸಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ‘ಗ್ರಾಮ ಡ್ರಾಮಾಯಣ’ ಅಂಕಣದಲ್ಲಿ ಹೊಸ ಬರಹ










