ನೆಹರೂ ಅವರಿಗೆ ಸಾದತ್ ಹಸನ್ ಮಾಂಟೋ ಬರೆದಿದ್ದ ಪತ್ರ
‘ನಿಜವಾಗಿ ಹೇಳಿ: ನೀವು ನನ್ನ ಪುಸ್ತಕಗಳನ್ನು ಯಾಕೆ ಓದುವುದಿಲ್ಲ? ನೀವು ಅವುಗಳನ್ನು ಓದಿದ್ದರೂ ಅವುಗಳ ಬಗ್ಗೆ ಏನೂ ಹೇಳಿಲ್ಲ. ಒಬ್ಬ ಲೇಖಕರಾಗಿ ನನ್ನ ಪುಸ್ತಕಗಳನ್ನು ಓದಿಲ್ಲ ಅಂದರೆ ಅದಕ್ಕಿಂತ ವಿಷಾದದ ವಿಚಾರ ಬೇರೆ ಯಾವುದೂ ಇಲ್ಲ’ -ಹೀಗೆಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ..”
ಇದ್ದಲ್ಲೇ ಅದೃಶ್ಯವಾದವರು ಉಳಿಸಿ ಹೋಗುವ ಬೇನೆ
“ಇನ್ನು ನಿಮ್ಮನ್ನ ಓದಿಸೋಕಾಗಲ್ಲ. ಈ ವರ್ಷದಿಂದ ನೀವು ಶಾಲೆಗೆ ಹೋಗೋದು ಬೇಡ. ಪಕ್ಕದೂರಿನ ಒಂದು ಮನೆಯಲ್ಲಿ ಕೆಲಸಕ್ಕೆ ಜನ ಹುಡುಕುತ್ತಿದ್ದರು. ನಾಳೆಯಿಂದ ನೀವಿಬ್ಬರೂ ಬರುತ್ತೀರಿ ಅಂತ ಆ ಮನೆಯ ಮಾಲಿಕರಿಗೆ ಹೇಳಿ ಬಂದಿದ್ದೇನೆ” ಎಂದು ಒಂದು ದಿನ ತಾಯಿ ಹೇಳಿದಾಗ ಡೆಸರೆ ಆ ಸುದ್ದಿಯನ್ನು ತಣ್ಣಗೆ ಸ್ವೀಕರಿಸುತ್ತಾಳೆ. ಆದರೆ ಸ್ಟೆಲ್ಲಾಳಿಗೆ ಮಾತ್ರ..ʼ
ನಟ್ ಹ್ಯಾಮ್ಸನ್ ಬರೆದ ‘ದ ಕಾಲ್ ಆಫ್ ಲೈಫ್ʼ ಕತೆ
“ಎರಡು ಗಂಟೆಗಳ ನಂತರ ಎದ್ದು ನಿಂತೆ. ಅವಳೂ ಎಚ್ಚರಗೊಂಡಳು. ಬಟ್ಟೆ ಹಾಕಿಕೊಂಡು ತನ್ನ ಶೂ ತೊಟ್ಟಳು. ಆ ಕ್ಷಣ ಏನೊ ಒಂದು ತರಹ ಬೇರೆಯೇ ಅನಿಸಿತ್ತು-ಭಯಂಕರ ಕನಸಿನಂತೆ. ನಾನು ಕೈ ತೊಳೆಯುವ ಬೇಸಿನ್ ಕಡೆ ನಿಂತಿದ್ದೆ. ಎಲೆನ್ ಪಕ್ಕದ ಕೋಣೆಯ ಬಾಗಿಲು ತೆರೆದಳು. ಇಣುಕಿ ನೋಡಿದೆ. ಒಳಗೆ ತೆರೆದ ಕಿಟಕಿಯ ಬೆಳಕು ನನ್ನ ಮೇಲೆ ಬಿತ್ತು. ಕೋಣೆಯ ಮಧ್ಯದಲ್ಲಿ ಒಂದು ಮೇಜಿನ ಮೇಲೆ…”
ಐನ್ಸ್ಟೈನನ ಥಿಯರಿ ಆಫ್ ರಿಲೆಟಿವಿಟಿ ಕಬ್ಬಿಣದ ಕಡಲೆಯೆ?
“ಹದಿಹರೆಯದ ಐನ್ಸ್ಟೈನನ ಮನದಲ್ಲಿ ಮೂಡಿದ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ಕುರಿತಾದ ಈ ಸೋಜಿಗ, ಹಾಗೆಯೇ ಮುಂದುವರೆಯಿತು. ಅವನು ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿದಮೇಲೆ, ಸಮಯ ದೊರೆತಾಗಲೆಲ್ಲಾ ಈ ವಿಷಯದ ಬಗೆಗೆ ಆಳವಾದ ಚಿಂತನೆ ನಡೆಸಲಾರಂಭಿಸಿದ. ಬೆಳಕಿನ ವೇಗ ಮತ್ತು ಈಥರ್ ನ ಒಗಟನ್ನು ಬಿಡಿಸಲು ಮನದಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ….”
ದಬ್ಬಲ, ಸೂಜಿ, ರಾಮಾಯಣ ಇತ್ಯಾದಿ…
“ಇದು ತುಂಬ ಸೂಕ್ಷ್ಮ ಹಾಗೂ ಮಾರ್ಮಿಕ ಮಾತು. ಯಾರಾದರೊಬ್ಬರು ವಸ್ತುನಿಷ್ಠವಾಗಿ ಮಾತಾಡುತ್ತಿದ್ದರೆ ಅದನ್ನು ಗ್ರಹಿಸಿಕೊಳ್ಳಲು ಬಾರದಿದ್ದರೆ ಆ ಕಾಲ ತನ್ನ ಹದ ಕಳೆದುಕೊಳ್ಳುತ್ತದೆ. ಮತ್ತು ಕಲೆಯಲ್ಲಿ ರಾಜಕಾರಣ ತಲೆ ಹೊಗಿಸಲು ಆರಂಭಿಸುತ್ತದೆ. ಕಲೆಯನ್ನ ಹಿಂದಕ್ಕೆ ಸರಿಸಿ ಬಣಗಳು ತಮ್ಮ ಪೂರ್ವಗ್ರಹದ ಆಟ ಆಡಲು ಆರಂಭಿಸುತ್ತವೆ. ಒಂದು ಕಾಲದ ವಸ್ತುನಿಷ್ಠ ತತ್ವ ಮತ್ತು ಪ್ರತಿಪಾದನೆ ಮಾಯವಾಗಿ…”
ಬಿಸಿನೆಸ್ ಕಲಿಸುವ ಕಾದಂಬರಿ!
“ಕಾದಂಬರಿಯೊಂದು ಮ್ಯಾನೇಜಮೆಂಟ್ ತತ್ವಗಳನ್ನು ಕಲಿಸುತ್ತದೆ ಎಂದರೆ ಸೋಜಿಗ ಬೆರಗಿನಲ್ಲಿ ಬದಲಾಗುವುದಿಲ್ಲವೇ? ವಿಶ್ವದ ಅತ್ಯಂತ ಜನಪ್ರಿಯ ಮ್ಯಾನೇಜ್ಮೆಂಟ್ / ಬಿಸಿನೆಸ್ ಪುಸ್ತಕವು ವಾಸ್ತವದಲ್ಲಿ ಒಂದು ಕಾದಂಬರಿ ಎಂದರೆ ಅಚ್ಚರಿಯಾಗದೇ? ಬಿಸಿನೆಸ್ಸನ್ನು ಸುಸೂತ್ರ ನಡೆಸುವ ಕಾರ್ಯಪದ್ಧತಿಯನ್ನು ವಿವರಿಸಲು “ಕೇಸ್ ಸ್ಟಡಿ”ಯಾಗಿ ಕಾದಂಬರಿಯನ್ನು ಬಳಸುವುದು..”
ಸೀಮಾ ಸಮತಲ ಬರೆಯುವ ‘ಪುಸ್ತಕ ದಿನಚರಿʼ ಆರಂಭವಾಯಿತು
“ಎರಡುಮೂರು ದಶಕಗಳ ಹಿಂದೆ ಯಾರೂ ಈ ಪದಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೀಗ ಪೌಷ್ಟಿಕತೆ ಹಾಗೂ ಕ್ಯಾಲೋರಿಗಳ ಲೆಕ್ಕಚಾರವಿದ್ದರೂ ನಮಗೆ ಏನ್ನನ್ನು ತಿನ್ನಬೇಕು ಎಂಬುದೇ ಗೊತ್ತಿಲ್ಲ. ತಾನು ವಿಜ್ಞಾನಿ ಅಥವಾ ಪೌಷ್ಟಿಕ ನಿಪುಣವಿಲ್ಲದಿದ್ದರೂ ಕುತೂಹಲಕ್ಕಾಗಿ ಆರೋಗ್ಯ ಮತ್ತು ಡಯೆಟ್ ಬಗ್ಗೆ ಇರುವ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ.”
ಗಿರಜಮ್ಮನ ಪರಸಂಗಗಳಲ್ಲಿ ರಂಗದ ಪರಸಂಗಳನ್ನು ಹುಡುಕುತ್ತ…
“ಎಲ್ಲೋ ಕೆಲವು ಹೆಣ್ಣುಮಕ್ಕಳು ಈ ಪರಿಧಿ ದಾಟಿ ತಾಲೀಮುಗಳಿಗೆ ಬರುವುದು ಅಪರೂಪ. ಇಂದಿಗೂ ಪರಿಸ್ಥಿತಿ ಹೀಗಿರುವಾಗ ಅಂದಿನ ಕಾಲಕ್ಕೆ ಗಿರಿಜಮ್ಮ ರಂಗಭೂಮಿ ಪ್ರವೇಶಿಸಿದ ಬಗೆಯೇ ವಿಚಿತ್ರ. ಮತ್ತು ನಟಿಸುತ್ತ ನಟಿಸುತ್ತ ಸರಿಸುಮಾರು ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿರುವುದು ದೊಡ್ಡ ಅಚ್ಚರಿ. ಕೊಂಚ ಎಚ್ಚರ ತಪ್ಪಿದ್ದರೆ ಈ ಆತ್ಮಕಥನ ತುಂಬ…”
‘ಕಾವ್ಯಾ ಓದಿದ ಹೊತ್ತಿಗೆʼ: ಶಗ್ಗಿ ಮತ್ತು ಅವನ ಅಮ್ಮ…
“ತಾನು ನಡೆಯುವ ಶೈಲಿಯನ್ನೂ, ಮಾತನಾಡುವ ಶೈಲಿಯನ್ನೂ ಅಣಕಿಸುವ ಕೇರಿಯ ಇತರ ಮಕ್ಕಳಿಂದ ತಪ್ಪಿಸಿಕೊಳ್ಳಲು ಶಗ್ಗಿಗಿರುವ ಆಶ್ರಯ ಮನೆಯೊಂದೇ. ಮುಂದೆ ಟೀನೇಜಿನಲ್ಲೊಮ್ಮೆ ಹುಡುಗಿಯೊಬ್ಬಳು ಅವನಿಗೆ ಮನಸೋತು “ನೀನು ನನ್ನ ಎದೆ ಮುಟ್ಟಬಹುದು ಬೇಕಿದ್ದರೆ” ಎಂದು ಅವನಿಗೆ ತನ್ನ ದೇಹ ಮುಟ್ಟಲು…”









