ಬಿದಿರುಮೆಳೆಯಲ್ಲಿ ಹೂತ ಹೆಣ: ಮುನವ್ವರ್ ಜೋಗಿಬೆಟ್ಟು ಅಂಕಣ
“ಹೊಸ ಛತ್ರಿಯನ್ನು ತಲೆ ಕೆಳಗಾಗಿಸಿ ಅದರೊಳಗೆ ಕಲಕು ನೀರು ಹರಿಯಲು ಬಿಟ್ಟು ಪುಡಿ ಮೀನುಗಳನ್ನು ಹಿಡಿಯುತ್ತಿದ್ದ ಮಹಾ ಪೋಕಿರಿಗಳು ನಾವು. ‘ಮೀನು ಹಿಡಿಯಲಿಕ್ಕಾಗಿಯೇ ಶಾಲೆಗೆ ರಜಾ ಮಾಡುವ ನನ್ನಂತಹ ಮಕ್ಕಳ ಕಾಲವೆಲ್ಲಾ ಎಲ್ಲಿ ಹೋಯಿತು?’ ಅನಿಸತೊಡಗುವಾಗ ಸಮವಸ್ತ್ರ ಮತ್ತು ಬೂಟು ಹಾಕಿ ಬೆಳಗಿನ ಜಾವವೇ ಸ್ಕೂಲ್ ಬಸ್ಸು ಹತ್ತುವ ಮಕ್ಕಳ ಮುಖವೊಮ್ಮೆ ತೇಲಿ ಬಂತು…”
ಕಥೆಗಾರ ಕುವೆಂಪು: ಆಶಾಜಗದೀಶ್ ಅಂಕಣ
“ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ.. “
ಕೆಂಪುಬೀದಿಯ ಹೆಣ್ಣುಮಕ್ಕಳ ಕಾಳಜಿ : ಶ್ರೀಹರ್ಷ ಸಾಲಿಮಠ ಅಂಕಣ
“ನಮ್ಮ ಗೆಳೆಯರೆಲ್ಲ ಕಾರಿನಲ್ಲಿ ತಾವು ಸಲ್ಪದರಲ್ಲಿ ಮಾಡುವುದರಿಂದ ತಪ್ಪಿಸಿಕೊಂಡ ಅನಾಹುತದ ಬಗ್ಗೆ ಹರಟತೊಡಗಿದ್ದರು. ನನ್ನ ಮನಸ್ಸು ಇನ್ನೂ ಪೋಸ್ಟರ್ ನಲ್ಲೇ ನೆಟ್ಟಿತ್ತು. ಅದು ನನ್ನ ಜೀವನದ ಮೊಟ್ಟಮೊದಲ ಮತ್ತು ಇಲ್ಲಿಯವರೆಗಿನ ಏಕೈಕ ವೇಶ್ಯಾಗೃಹಕ್ಕೆ ಕಾಲಿಟ್ಟ ಅನುಭವ. ಆದರೆ ಈ ಅನುಭವದ ಬಗ್ಗೆ ನನಗೆ ಬೇಸರವಿಲ್ಲ. ಬಹುಷಃ ಹೆಣ್ಣನ್ನು ನೋಡಬೇಕಾದ ಒಂದು ಹೊಸ ದೃಷ್ಟಿಕೋನದ ಬಗ್ಗೆ ಕಂಡುಕೊಂಡಿದ್ದೆ. ಸಂಪ್ರದಾಯಸ್ಥ ಮನೆತನದ ಗಂಡಸುಗಳು ಮಿಸೋಜಿನಿಸ್ಟ್ ಗಳಾಗಿರುವುದು…”
ಕೋವಿಡ್ ಕಾಲದ ಚಿಕ್ಕಪುಟ್ಟ ಸಮಾಧಾನಗಳು: ವಿನತೆ ಶರ್ಮಾ ಅಂಕಣ
“ಬಳ್ಳಿ ಡಿಎನ್ಎ ಸರಪಣಿಯಂತೆ ಬೆಳೆದಂತೆಲ್ಲಾ ಅದರ ಜೊತೆಗೂಡಿ ನನ್ನ ಬಾಲ್ಯದ ನೆನಪುಗಳು ಬಿಚ್ಚಿಕೊಂಡು ನಮ್ಮಜ್ಜಿ, ನಮ್ಮಪ್ಪ ಬೆಳೆಯುತ್ತಿದ್ದ ಅವರೆಕಾಯಿ ಫಸಲು ಮನಸ್ಸಿಗೆ ಬಂದು ಕಣ್ಣಮುಂದೆ ಭದ್ರವಾಗಿ ಕೂತಿತ್ತು. ಅದು ಅವರೆ ಬಳ್ಳಿಯೇ ಹೌದು ಎನ್ನುವುದು ನಿಧಾನವಾಗಿ ಖಾತ್ರಿಯಾದಂತೆಲ್ಲಾ ರೋಮಾಂಚನವಾಗಿ ನಾಲ್ಕಾರು ಜನರ ಬಳಿ ಹೇಳಿಕೊಂಡು, ಗಾರ್ಡನಿಂಗ್ ಗುಂಪಿನಲ್ಲಿ ಫೋಟೋ ಹಾಕಿ…”
ಬ್ರಿಟನ್ನಿನ ಸಂಕಟದ ಕಾಲದ ಎರಡು ಪತ್ರಗಳು: ಯೋಗೀಂದ್ರ ಮರವಂತೆ ಅಂಕಣ
“ಕಳೆದ ಮೂರ್ನಾಲ್ಕು ವಾರಗಳಿಂದ ಇಲ್ಲಿನ ಎಲ್ಲ ಸುದ್ದಿ ವಾಹಿನಿಗಳ ಮೂಲಕ ಆಡಳಿತದ ಅತ್ಯಂತ ಜವಾಬ್ದಾರಿಯುತ ಕುರ್ಚಿಯಲ್ಲಿ ಕೂರುವವರು ಆರೋಗ್ಯ ಇಲಾಖೆಯ ಹಿರಿಯ ಸಲಹೆಗಾರರು ನಿತ್ಯವೂ ಎಚ್ಚರಿಕೆಯ ಮುಂಜಾಗರೂಕತಾ ಕ್ರಮಗಳ ಬಗೆಗೆ ನೀಡುತ್ತಿದ್ದ ಸಂದೇಶ ಹಾಗು ಹದಗೆಟ್ಟ ಅರ್ಥವ್ಯವಸ್ಥೆಗೆ ಚೇತರಿಕೆ, ನಿರುದ್ಯೋಗ ಪೀಡಿತರಿಗೆ ತಾತ್ಕಾಲಿಕ ಬೆಂಬಲ ಯೋಜನೆಗಳ ಬಗ್ಗೆ ಹಣಕಾಸು ಮಂತ್ರಾಲಯ ತೆಗೆದುಕೊಂಡ ಹೆಜ್ಜೆಗಳೇ…”
ಮರೆಯಲಾಗದ ಮಠದ ಕೇರಿ ದೀಪಾವಳಿ: ಮಧುರಾಣಿ ಎಚ್ ಎಸ್ ಅಂಕಣ
“ಅಂದು ಮಲಗಿದ ಜಾನಕಮ್ಮನವರು ಮತ್ತೆ ಮೇಲೇಳಲೇ ಇಲ್ಲ. ಒಂದು ವಾರದ ನಂತರ ಇದ್ದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ದಿಕ್ಕು ದೆಸೆಯಿಲ್ಲದ ನರಸಿಂಹರಾಯರು ಅಮ್ಮನನ್ನು ಕಳೆದುಕೊಂಡ ಪುಟ್ಟ ಮಗುವಿನಂತೆ ಗೋಳಾಡಿದರು. ಪಕ್ಕದಲ್ಲೇ ಇದ್ದು ಎಲ್ಲವನ್ನೂ ಗಮನಿಸುತ್ತಿದ್ದ ನಮ್ಮ ಮನೆಯವರಿಗೆ ಅವರ ಒಂಟಿತನ ಕರಳು ಕಿವುಚುತ್ತಿತ್ತು.”
ಕೊರೋನಾದ ಬಾಹುಬಂಧದಲಿ ಸಿಲುಕಿ..: ಲಕ್ಷ್ಮಣ ವಿ.ಎ. ಅಂಕಣ
“ನಾಳೆಯಿಂದ ಕೆಲಸ ಇಲ್ಲ ಕೂಲಿಯೂ ಇಲ್ಲ. ಹಾಗಿದ್ದರೆ ಊಟಕ್ಕೇನು? ಇವರನ್ನು ಕರೆ ತಂದ ಠೇಕೆದಾರನ ಫೋನ್ ನಂಬರು ಬಿಜಿ ಬರ್ತಿದೆ. ಅಳಿದುಳಿದ ಗಂಟು ಮೂಟೆ ಕಟ್ಟಿ ಇವಳೂ ದಕ್ಷಿಣ ದೆಹಲಿಯಿಂದ ಕಾನ್ಪುರಕ್ಕೆ ನಡೆದೇ ಬಿಟ್ಟಳು, ಕುಂಟುವ ಒಂದು ಮಗು ತೆವಳುವ ಇನ್ನೊಂದು ಮಗು ಕಂಕುಳಲ್ಲಿ ಒಂದು ಮಗು. ಗಂಡನಿಗೆ ಬೀಡಿ ಅಂಟಿಸುವ ಚಟ, ಆದರೆ ಬೀದಿ ಅಂಗಡಿಗಳೂ ಬಂದ್ ಆಗಿವೆ…”
ಲೋಕಾಶ್ಚರ್ಯಮಂ ಮಾಡಿ ಕೊಂದುದು: ಆರ್. ದಿಲೀಪ್ ಕುಮಾರ್ ಅಂಕಣ
“ಆದಿಪುರಾಣದ ಪ್ರಾರಂಭವನ್ನೊಮ್ಮೆ ಗಮನಿಸಿ, ಲೋಕಾಕಾರ ಕಥನದಿಂದ ಪ್ರಾರಂಭವಾಗಿ ವಿದೇಹದಲ್ಲಿ ಬಂದು ನಿಂತು ಕಥಾಭಿತ್ತಿ ಪ್ರಾರಂಭ ಆಗುತ್ತದೆ. ಇಲ್ಲಿನ ಪ್ರತಿಯೊಂದು ಭಾಗದ ನಾಯಕ ಪಾತ್ರವೂ ಶ್ರೀಮಂತರೇ, ರಾಜರೇ. ಅವರ ಸಾವಿನ ಚಿತ್ರಣವೇ ಬದುಕಿನ ಬಗೆಗೆ ಯೋಚಿಸುವ ಹಾಗೆ ಮಾಡುವಲ್ಲಿ ಚಲನೆ ಪಡೆಯುತ್ತದೆ. ಶ್ರವಣಬೆಳಗೊಳದ ನಂದಿಸೇನ ಮುನಿಯ ಶಾಸನದ….”
‘ಎಲ್ಲಿ ಒಮ್ಮೆ ಹೊಡೆದು ತೋರಿಸಿ ನೋಡೋಣ?’: ಶ್ರೀಹರ್ಷ ಸಾಲಿಮಠ ಅಂಕಣ
“ನಮ್ಮ ತಂದೆಯ ಅಕ್ಷರಗಳ ಚರ್ಚೆ ನಮ್ಮ ಬಹುದೂರದ ಸಂಬಂಧಿಕರಲ್ಲೂ ಹರಡಿತ್ತು. ಒಮ್ಮೊಮ್ಮೆ ಕೆಲವರು ನನಗೆ ನಮ್ಮಪ್ಪನ ಪತ್ರಗಳನ್ನು ತೋರಿಸಿ “ನಿಮ್ಮಪ್ಪ ಏನೋ ಬರದಾನ.. ಸಲ್ಪ ಓದಿ ಹೇಳಪ್ಪಾ” ಅಂತ ಕೇಳುತ್ತಿದ್ದರು. ನಾನು ಆ ಪತ್ರದಲ್ಲಿ ಬರೆದಿರುವುದು ಕನ್ನಡವೋ ಇಂಗ್ಲೀಷೋ ಎಂದು ಗುರುತಿಸಲೇ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೆ. ನಮ್ಮ ತಂದೆ ಒಂದೊಂದು ಸಾರಿ ನನ್ನ ಕೈಲಿ ನನ್ನ ಪಕ್ಕ ಕೂತು…”










