ಬಾಡುವಿನ ಹಿಂದೆ ಕಾಡು ಹಾದಿಯಲ್ಲಿ: ಪ್ರಸಾದ್ ಶೆಣೈ ಕಥಾನಕ
“ಮಳೆ ಬೀಳುತ್ತಿರುವಾಗ ಮಳೆಗೆ ನೆನೆದು ಕಾಡು ಸುತ್ತೋದು ಎಷ್ಟು ಚೆಂದವೋ, ಮಳೆ ನಿಂತ ಮೇಲೆ ಅಳು ನಿಲ್ಲಿಸಿದ ಮಗುವಿನ ಹಾಗಿರುವ ಮುಗ್ದ ಕಾಡನ್ನು ನೋಡುವ, ಅನುಭವಿಸುವ, ಮೈಯೆಲ್ಲಾ ವಿಚಿತ್ರ ಥಂಡಿಯಲ್ಲಿ ಕಳೆದುಹೋಗುವ ಕ್ಷಣವಿದೆಯೆಲ್ಲಾ ಅದರಷ್ಟು ಸುಖ ಜೋರಾಗಿ ಮಳೆ ಬಂದರೂ ಆಗಲಿಕ್ಕಿಲ್ಲ ಅನ್ನಿಸುತ್ತದೆ ಕೆಲವೊಮ್ಮೆ. ಹಾವಿನಷ್ಟೇ ಸಪೂರಾದ ದಾರಿ, ಸುತ್ತಲೂ ದಟ್ಟ ಮರಗಳ ಹಸುರು ಜೋರಾದ ಗಾಳಿಗೆ ಉದುರಿ ಬಿದ್ದ ಹೂವ ರಾಶಿ..”
ವಿಶ್ವ ಕಪ್ ಮುನ್ನಾದಿನ ಲಾರ್ಡ್ಸ್ ಮೈದಾನದಿಂದ:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್
“ಲಾರ್ಡ್ಸ್, ಕ್ರಿಕೆಟಿನ ತವರು ಎಂದು ಶತಮಾನದಿಂದ ಕರೆಸಿಕೊಳ್ಳುತ್ತ ಹೊಗಳಿಕೆ ಪ್ರೀತಿ ಮತ್ತು ಹೊಣೆಗಾರಿಕೆಯ ಭಾರ ಹೊತ್ತ ಮೈದಾನ. ಲಾರ್ಡ್ಸ್ ನಲ್ಲಿ ಆಡುವುದು ಅಲ್ಲೊಂದು ಬ್ಯಾಟಿಂಗ್ ಅಥವಾ ಬೌಲಿಂಗ್ ಸಾಧನೆ ಗೈಯುವುದು ಕ್ರಿಕೆಟಿಗರಿಗೂ ಮಹತ್ತರ ವಿಷಯ. ಪ್ರೇಮಿಗಳಿಗೆ ಕಾಶ್ಮೀರದ ಕಣಿವೆಯಲ್ಲೋ, ಸ್ವಿಟ್ಜರ್ಲ್ಯಾಂಡಿನ ಹಿಮ ಶಿಖರದಲ್ಲೋ ಸಿಗುವ ರೋಮಾಂಚನವನ್ನು ಲಾರ್ಡ್ಸ್ ಮೈದಾನ…”
ರಂಗನಬೆಟ್ಟದ ಕುಸುಮಾಲೆಯರ ಖುಷಿಗಳ ಕುರಿತು:ಮಧುರಾಣಿ ಅಂಕಣ
“ಪೋಡಿಗೆ ಹೋಗುವ ದಾರಿಯಲ್ಲಿನ ಇಚ್ಚಿಮರದ ಬಸಪ್ಪನ ದೇಗುಲವು ತಪಸ್ಸಿಗೆ ಕುಳಿತಂತೆ ತೋರುತ್ತಿತ್ತು. ಆ ಒಂಟಿ ಗುಡಿಯ ಮೇಲೆ ನನಗೋ, ಇನ್ನಿಲ್ಲದಷ್ಟು ಮೋಹ ಹುಟ್ಟಿತು. ಬಸಪ್ಪನಿಗೆ ಗದ್ದಲ ಆಗುವುದಿಲ್ಲವಂತೆ. ಹಾಗಾಗಿ ಹೆಂಗಳೆಯರ್ಯಾರೂ ಅಲ್ಲಿ ತಮ್ಮ ಮನದ ಹಾಡು ಬಿಚ್ಚಿಡುವುದಿಲ್ಲ. ಹಾಗಾಗಿ ಹಾಡಿಯ ಎದೆಯೊಳಗಿನ ಹಾಡುಗಳು ರಂಗನಿಗೆ ಕೇಳಿದ್ದು ಹೇಗೋ ನನಗೆ ಆಶ್ಚರ್ಯವಾಯ್ತು. ಮುಕ್ತವಾಗಿ ಗಾಳಿ-ಬೆಳಕಿಗೆ ತೆರೆದುಕೊಂಡು ಬದುಕುವ ಜನರ…”
ಕೀಟಹಾರಿ ನಾಚಿಕೆ ಮುಳ್ಳು ಮತ್ತು ಘಾಟಿ ಕೋಳಿ: ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥಾನಕ
“ಒಮ್ಮೆ ಹೊರ ಜಗಲಿಯಲ್ಲಿ ಕುಳಿತು ಸುಮ್ಮನೆ ರಸ್ತೆ ನೋಡುತ್ತಿರಬೇಕಾದರೆ ಅಚಾನಕ್ಕಾಗಿ ಕೋಳಿ ವಿಚಿತ್ರವಾಗಿ ಶಬ್ದ ಹೊರಡಿಸಲಾರಂಭಿಸಿತು. ನೋಡ ನೋಡುತ್ತಿದ್ದಂತೆ ಅನತಿ ದೂರದಲ್ಲೇ ಹದ್ದೊಂದು ನೆಲದ ಮಟ್ಟಕ್ಕೆ ಹಾರಿದ್ದು ಕಂಡಿತು. ಮರಿಗಳು ಅವಕ್ಕಾಗಿ ಹೇಂಟೆಯ ಹೊಟ್ಟೆಯೊಳಗಡೆ ಮುದುಡಿಕೊಂಡವು. ಎರಡು ಮರಿಗಳು ತುಂಬಾ ದೂರದಲ್ಲಿದ್ದರಿಂದ ಅವುಗಳಿಗೆ ಕೂಡಿಕೊಳ್ಳಲಾಗಲಿಲ್ಲ.”
ಅಮ್ಮಂದಿರ ತೋಳ ಕೂಸುಗಳು: ಡಾ. ವಿನತೆ ಶರ್ಮಾ ಅಂಕಣ.
“ಅವರಿಗೆ ಸಮಾಧಾನ ಮಾಡುತ್ತ ನಾನು ಆಕೆಯೊಡನೆ ಸಂಭಾಷಣೆ ನಡೆಸುತ್ತಿದ್ದಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಾ ಆಟವಾಡುತ್ತಿದ್ದ ಮಗು ನಮ್ಮ ಬಳಿ ಬಂತು. ಆಶ್ಚರ್ಯವೆಂಬಂತೆ ತಾಯಿಯ ಕಡೆ ತಿರುಗದೆ ನನ್ನ ಬಳಿ ಬಂದು ತೊಡೆಹತ್ತಿ ಅಪ್ಪಿಕೊಂಡು ಅದರ ಭಾಷೆಯಲ್ಲಿ ಅದೇನನ್ನೋ ಹೇಳಿ ನಕ್ಕಿತು. ದತ್ತು ತಾಯಿಯ ಕಣ್ಣಲ್ಲಿ ನೀರು!! ಇಲ್ಲಿಯವರೆಗೂ ಒಂದು ಬಾರಿಯೂ ಮಗು ತಾನೇ ತಾನಾಗಿ ಬಂದು ಆಕೆಯನ್ನು ಅಪ್ಪಿಕೊಂಡಿಲ್ಲ ಎಂದು ಹೇಳುತ್ತಾ ಆಕೆ ಬೇಸರಿಸಿಕೊಂಡರು.”
ಅನುಕ್ಷಣ ಸಾಂದ್ರಗೊಳ್ಳುವ ಸತ್ಯ….: ಆಶಾ ಜಗದೀಶ್ ಅಂಕಣ
“ಕವಿತೆ ಏಕಾಂತದ ನಿಶ್ಯಬ್ದ ನಿತಾಂತ ಧ್ಯಾನ. ತನ್ನ ಗಾಯನ ಪ್ರಸ್ತುತಿ ಇವತ್ತಿಗಿಂತ ನಾಳೆ ಚಂದವಿರಬೇಕು ಎಂದು ಪ್ರತಿಯೊಬ್ಬ ಗಾಯಕನು ಹಂಬಲಿಸುತ್ತಾನೆ, ಹಗಲೂ ಇರುಳೂ ರಿಯಾಝ್ ನಲ್ಲಿ ತೊಡಗುತ್ತಾನೆ. ಶಿಲ್ಪಿಯೊಬ್ಬ ಆರಿಸುವ ಕಲ್ಲಿನಿಂದ ಹಿಡಿದು ಕೆತ್ತಿ ಕೆತ್ತಿ ಸುಂದರ ಕಲಾಕೃತಿಯನ್ನಾಗಿ ಮಾಡಲ್ಲಿಯವರೆಗೂ ವಿರಮಿಸುವುದಿಲ್ಲ. ಇದು ಸಾಹಿತ್ಯವೂ ಸೇರಿದಂತೆ ಎಲ್ಲ ಕಲಾಪ್ರಕಾರಗಳಿಗೂ ಕಲಾವಿದರಿಗೂ ಅನ್ವಯಿಸುವಂತದ್ದು.”
ಕುಣಿಸಿ ದಣಿಸಿ ತಣಿಸಿದ ನೆಬ್ಬೂರರ ನಿರ್ಗಮನ: ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್
“ನೆಬ್ಬೂರರ ಬದುಕನ್ನು ಬಲ್ಲವರು, ಸುಮಾರು ಅರ್ಧ ಶತಮಾನಗಳ ಕಾಲ ಒಂದೇ ಮೇಳಕ್ಕೆ ಅಂಟಿಕೊಂಡು ಇವರು ಹೇಗೆ ಕಳೆದರೋ ಎಂದು ಅಚ್ಚರಿ ಪಟ್ಟಿದ್ದಿದೆ. ದೊರೆಯಬಹುದಾದ ಸ್ವಲ್ಪ ಆರ್ಥಿಕ ಲಾಭಕ್ಕಾಗಿ ಎಲ್ಲೋ ಹೋಗಿ ಅಹಿತಕರವಾದ ಸ್ಥಳದಲ್ಲಿ ಸ್ನೇಹ ಮಾಡುವುದಕ್ಕಿಂತ ಗಂಧದ ಜೊತೆಗೆ ಹೋರಾಡುತ್ತ ಬದುಕುವುದೇ ಲೇಸು ಎಂದು ಅದಕ್ಕೆ ನೆಬ್ಬೂರರು ಉತ್ತರಿಸುತ್ತಿದ್ದರು. ಶಿವರಾಮ ಹೆಗಡೆಯವರಿಂದ…”
ಗದ್ದೆಗೆ ಬಿದ್ದದ್ದು ಧೂಮಕೇತುವೆ?: ಮುನವ್ವರ್ ಜೋಗಿಬೆಟ್ಟು ಪರಿಸರ ಕಥನ
“ಸಹಪಾಠಿಗಳು ಯಾರೂ ಕುತೂಹಲಿಗರಾದಂತೆ ಕಂಡು ಬರಲಿಲ್ಲ. ನಾನು ಕೆಲವು ಗೆಳೆಯರಲ್ಲಿ ಈ ವಿಚಾರವೆತ್ತಿ ನೋಡಿದೆ, ಅವರ್ಯಾರು ಸೊಪ್ಪು ಹಾಕಲಿಲ್ಲ. ಬೆಳಗ್ಗೆ ಪೇಪರ್ ತರುವವನನ್ನು ಕಾಯುತ್ತಾ ನಿಂತೆ. ಅವನದಾಗಲೇ ತಂದು ಕೊಟ್ಟು ಅದು ಅಧ್ಯಾಪಕರ ಕೊಠಡಿಗೆ ಹೋಗಿಯಾಗಿತ್ತು. ಇನ್ನು ಪತ್ರಿಕೆ ನಮಗೆ ಸಿಗಬೇಕಾದರೆ ಸಂಜೆಯಾದ್ರೂ ಆಗಬೇಕಿತ್ತು. ಸಂಜೆವರೆಗೂ ಕಾದೆ. ಕೊನೆಗೆ ಪತ್ರಿಕೆ ಸಿಕ್ಕಿತು.”
ಕವಿತೆಯ ವಿಸ್ತೃತ ರೂಪ: ಕೃಷ್ಣ ದೇವಾಂಗಮಠ ಅಂಕಣ
ನಾವು ಬರೆದದ್ದನ್ನು ಯಾರಾದರೂ ಓದಲಿ ಅಂತ ಬಯಸುವ ಎಲ್ಲ ಕವಿಗಳು ಪರಂಪರೆಯನ್ನು ಹಾಗೆ ಭಾವಿಸಿ ಓದಲೇಬೇಕು.”










