ತೊಂಭತ್ತು ಸಾವಿರ ವರ್ಷಗಳ ಚರಿತ್ರೆಯಿರುವ, ಬದುಕುಗಳಿದ್ದ, ಅನೇಕತೆಗಳಿದ್ದ, ಈ ವಿಶಾಲ ದ್ವೀಪದಲ್ಲಿ ಕಲೆ, ಸಂಗೀತ, ನೃತ್ಯ, ತಾತ್ವಿಕತೆ, ದರ್ಶನ, ವಿಜ್ಞಾನ, ಅನುಭವ ಕಲಿಕೆ ಎಲ್ಲವೂ ಇತ್ತು. ನೆಲಜೀವಿಗಳಲ್ಲಿ ಅಪೂರ್ವ ಹೊಂದಾಣಿಕೆಯಿತ್ತು. ಈಗಲೂ ನಮ್ಮ ಭಾರತದಲ್ಲಿರುವ ಅನೇಕತೆಗಳ, ವೈವಿಧ್ಯತೆಗಳ ಹಾಗೆ. ಈ ಸಮೃದ್ಧ ನಾಡನ್ನು ತಿದ್ದಿತೀಡಿ ಇಸ್ತ್ರಿಮಾಡಿ, ಹೊಸದಾಗಿ ರೂಪಿಸಿ, ovenನಲ್ಲಿ ಬೇಕ್ ಮಾಡಿದ ಫ್ರೆಶ್ ಕೇಕಿನಂತೆ ಹೊರ ಪ್ರಪಂಚಕ್ಕೆ ಸಾದರಪಡಿಸಿದ ಕತೆಗಳನ್ನ ಕೇಳಿದರೆ ನಾವೇ ಆ ಓವನ್ನೊಳಗೆ ಬೇಯುತ್ತಿರುವ ಕೇಕ್ ಅನ್ನಿಸಿಬಿಡುತ್ತದೆ.
ವಿನತೆ ಶರ್ಮ ಬರೆದ ಆಸ್ಟ್ರೇಲಿಯಾ ಅಂಕಣ.

 

ಆ ಹುಡುಗ ಗೊಳ್ಳೆಂದು ನಕ್ಕುಬಿಟ್ಟ. ಹುಡುಗಿಯರೂ ಕೂಡ ಹಲ್ಲುಬಿಟ್ಟು ‘ಅಷ್ಟೂ ಗೊತ್ತಿಲ್ವಾ?’ ಅನ್ನೋಥರ ಕುತ್ತಿಗೆಯನ್ನ ಕೊಂಕಿಸಿದರು. ಮೇಜಿನ ಮೇಲಿದ್ದ A4 ಹಾಳೆಯ ಮೇಲೆ ನಾನು ಬಿಡಿಸಿದ್ದ ಆ ಕ್ಷಣದ ಆಸ್ಟ್ರೇಲಿಯಾದ ನಕ್ಷೆ ಕೂಡ ಹಾಗೇ ಕಿಚಾಯಿಸಿತು. “ಪಾಪಬಿಡಿ, ನೀವಿನ್ನೂ ನಮ್ಮ ದೇಶಕ್ಕೆ ಹೊಸಬರು” ಅಂತ ಹೇಳಿ ಆ ಮಹರಾಯ ಬಚಾವ್ ಮಾಡಿದ. ನಾನು ಬಿಡಿಸಿದ್ದ ಆಸ್ಟ್ರೇಲಿಯಾದ ನಕ್ಷೆ ಹೇಗಿತ್ತೆಂದರೆ ತಲೆಭಾಗದಲ್ಲಿ ಎರಡು ಕೋಡುಗಲ್ಲು (ಯಾಣ ಚಾರಣವನ್ನು ನೆನಪಿಸಿತು), ಹೊಟ್ಟೆ ಭಾಗವೋ ಚೀವಿಂಗ್ ಗಮ್ ಜಗಿದು ಜಗಿದು ಬಾಯಗಲದಷ್ಟೇ ಮಾಡುವ ಗುಳ್ಳೆಯಂತೆ; ನಕ್ಷೆಯ ಕೆಳಭಾಗ ಹುಡುಗಿಯೊಬ್ಬಳು ಲಂಗವನ್ನು ಆಪಕ್ಕ ಈಪಕ್ಕ ಎಳೆದು ಸಾಂಬಾ ನೃತ್ಯ ಮಾಡಲು ನಿಂತಂತೆ ಇತ್ತು! ನಕ್ಷೆ ಅದ್ಯಾವ ದೇಶವನ್ನು ಹೋಲುತ್ತಿತ್ತೋ ಬಲ್ಲವರಾರ ಬುದ್ಧಿಗೂ ಹೊಳೆಯುವಂತೆ ಮಾತ್ರ ಇರಲಿಲ್ಲ! ನಾನು ಬೋಧಕಳಾಗಿದ್ದ ಆ ತರಗತಿಯಲ್ಲಿ ಗುಂಪು ಚಟುವಟಿಕೆಯ ಒಂದು ಸನ್ನಿವೇಶ ಅದು.

ಭೂಗೋಳದ ಮೇಲೆ ಮಾನವರು ರಚಿಸಿರುವ ದೇಶಗಳ ನಕ್ಷೆಗಳನ್ನ ನೋಡಿದರೆ ದಕ್ಷಿಣದ ಮೂಲೆಯಲ್ಲಿ ‘ಡೌನ್ಅಂಡರ್’ ಆಸ್ಟ್ರೇಲಿಯಾ ದೇಶವಿದೆ. ಅಲ್ಲಿಗೆ ನಾನು ಕಾಲಿಟ್ಟ ಎರಡನೇ ವರ್ಷ ಅದು. ಇನ್ನೂ ‘ಹೊರಗಿನ’ ಭಾವನೆ ಇತ್ತು. ಆ ಹುಡುಗನ ಗುಂಪು ಅವತ್ತು ನಡೆಸಿದ ಕಲಿಕಾ ಚಟುವಟಿಕೆ ನನ್ನಲ್ಲಿ ಚಿಂತನೆಯ ಚಿಕ್ಕ ಅಲೆಯನ್ನೇ ಎಬ್ಬಿಸಿತು. ಒಬ್ಬ ವಲಸಿಗಳಾಗಿ ಅವನ ದೇಶದಲ್ಲಿ ನನ್ನ ಗುರುತು ಏನು? ಇನ್ನೊಂದು, ಆ ದಿನ ತರಗತಿಯ ವಿದ್ಯಾರ್ಥಿಗಳು ನಕ್ಷೆ ಮೇಲೆ ಜನರ ನೆಲೆಗಳನ್ನು ಗುರ್ತಿಸಿದ್ದು. ಈ ಎರಡೂ ಆಗ ಮೇಲ್ನೋಟದ ಮಟ್ಟಿಗೆ ಸ್ವಲ್ಪ ಕ್ಷೋಭೆಯನ್ನು ಉಂಟುಮಾಡಿದ್ದರೂ ಅವು ಕಾರಣಾಂತರಗಳಿಂದ ಮುಖ್ಯವಾಗದೆ ಮನದ ತಳಕ್ಕೆ ಸರಿದವು.

ಬ್ರಿಸ್ಬನ್ನಲ್ಲಿ ನೆಲೆಸಿದ ಮೇಲೆ ನನಗಾದ ಕೆಲ ಅನುಭವಗಳು ವಲೊಂಗೊಂಗ್ ಮತ್ತು ಮೆಲ್ಬರ್ನ್ಗಳಿಗಿಂತಲೂ ಭಿನ್ನವಾದವು. ಆ ಹಿನ್ನೆಲೆಯಲ್ಲಿ ಮೇಲಿನ ಎರಡು ಪ್ರಶ್ನೆ/ವಿಷಯಗಳು ನನ್ನ ಮುಖ್ಯದೃಷ್ಟಿಗೆ ಗೋಚರವಾದವು. ಆಗ ಆಸ್ಟ್ರೇಲಿಯಾದ ಸಂಪೂರ್ಣವಾಗಿ ಬೇರೆಯದೇ ಆದ, ನಕ್ಷೆ ಕಣ್ಣಿಗೆ ಬಿತ್ತು. ಜನರ ನೆಲೆಗಳು ಎಲ್ಲಿವೆ, ಯಾಕೆ, ಚರಿತ್ರೆಯಲ್ಲಿ ಅವು ದಾಖಲಾದ ಪರಿ ಹೇಗೆ, ಯಾರ್ಯಾರು ಎಲ್ಲೆಲ್ಲಿ ನೆಲೆಸಬಹುದು/ಬಾರದು, ಅಥವಾ ನೆಲೆಸಿದ್ದಾರೆ ಎಂಬ ಪ್ರಶ್ನೆಗಳ ಬಾಲವನ್ನು ಹಿಡಿದುಹೋದೆ. ಹೇಳಿಕೇಳಿ ಯೂನಿವರ್ಸಿಟಿಯಲ್ಲಿ ಇದ್ನಲ್ಲಾ!!

ಮೇಜಿನ ಮೇಲಿದ್ದ A4 ಹಾಳೆಯ ಮೇಲೆ ನಾನು ಬಿಡಿಸಿದ್ದ ಆ ಕ್ಷಣದ ಆಸ್ಟ್ರೇಲಿಯಾದ ನಕ್ಷೆ ಕೂಡ ಹಾಗೇ ಕಿಚಾಯಿಸಿತು. “ಪಾಪಬಿಡಿ, ನೀವಿನ್ನೂ ನಮ್ಮ ದೇಶಕ್ಕೆ ಹೊಸಬರು” ಅಂತ ಹೇಳಿ ಆ ಮಹರಾಯ ಬಚಾವ್ ಮಾಡಿದ. ನಾನು ಬಿಡಿಸಿದ್ದ ಆಸ್ಟ್ರೇಲಿಯಾದ ನಕ್ಷೆ ಹೇಗಿತ್ತೆಂದರೆ ತಲೆಭಾಗದಲ್ಲಿ ಎರಡು ಕೋಡುಗಲ್ಲು (ಯಾಣ ಚಾರಣವನ್ನು ನೆನಪಿಸಿತು), ಹೊಟ್ಟೆ ಭಾಗವೋ ಚೀವಿಂಗ್ ಗಮ್ ಜಗಿದು ಜಗಿದು ಬಾಯಗಲದಷ್ಟೇ ಮಾಡುವ ಗುಳ್ಳೆಯಂತೆ; ನಕ್ಷೆಯ ಕೆಳಭಾಗ ಹುಡುಗಿಯೊಬ್ಬಳು ಲಂಗವನ್ನು ಆಪಕ್ಕ ಈಪಕ್ಕ ಎಳೆದು ಸಾಂಬಾ ನೃತ್ಯ ಮಾಡಲು ನಿಂತಂತೆ ಇತ್ತು! ನಕ್ಷೆ ಅದ್ಯಾವ ದೇಶವನ್ನು ಹೋಲುತ್ತಿತ್ತೋ ಬಲ್ಲವರಾರ ಬುದ್ಧಿಗೂ ಹೊಳೆಯುವಂತೆ ಮಾತ್ರ ಇರಲಿಲ್ಲ!

ದೇಶದ ಸ್ವದೇಶಿ ಜನಸಮುದಾಯಗಳ ನಕ್ಷೆ ಹೇಗಿತ್ತು, ಅದೇ ದೇಶದ ಈಗಿನ ಪ್ರಮುಖ ನಗರಗಳು ಎಲ್ಲಿವೆ ಎಂಬುದನ್ನ ಗಮನಿಸಿದರೆ ಕುತೂಹಲವಾಗುತ್ತದೆ. ಕ್ಷೋಭೆ ತನ್ನಂತಾನೆ ಆವರಿಸಿಕೊಳ್ಳುತ್ತದೆ. ಇಷ್ಟವಿದ್ದರೆ ಚರಿತ್ರೆಯ ಕಡೆಗೆ ವಾಲುತ್ತೇವೆ. ಇಲ್ಲದಿದ್ದರೆ ನಾವು ವಲಸಿಗರು ನೆಮ್ಮದಿಯ ಮರೆವನ್ನು ಆರಿಸಿಕೊಂಡು ಗುಂಪಿನಲ್ಲಿ ಗೋವಿಂದ ಎಂಬಂತೆ ಇರುತ್ತೇವೆ ಅಥವಾ ಇರಬಹುದು. ಅದು ನಮ್ಮಗಳ ಆಯ್ಕೆಗೆ, ಅನುಕೂಲಕ್ಕೆ ಬಿಟ್ಟದ್ದು.

ಆಸ್ಟ್ರೇಲಿಯಾ ಎಂಬ ಹೆಸರು ಹುಟ್ಟಿದ್ದೇ ಅನ್ವೇಷಕ ಮ್ಯಾಥ್ಯೂಫ್ಲಿನ್ದೆರ್ಸ್ ‘ಈ ದಕ್ಷಿಣ ಭೂಭಾಗ’ ಎಂದು ಸೂಚಿಸಲು ಲ್ಯಾಟಿನ್ ಭಾಷೆಯ ಆ ಪದವನ್ನು ಬಳಸಿದಾಗ. ಅಲ್ಲಿಯವರೆಗೂ ಅಬ್ ಒರಿಜಿನಲ್ ಅಥವಾ ಸ್ವದೇಶಿ ಜನರು ಒಂದು ಏಕೈಕ ದೇಶ ಎಂಬ ಪರಿಕಲ್ಪನೆಗೆ ವ್ಯತಿರಿಕ್ತವಾಗಿ, ಅನೇಕತೆಗಳೊಂದಿಗೆ ನಾಡಿನ ಉದ್ದಗಲಕ್ಕೂ ವಿವಿಧ ಜನ ಪಂಗಡಗಳಾಗಿ ಬದುಕಿದ್ದರು. ತಮ್ಮ ಬದುಕುಗಳನ್ನು ಸುಮಾರು ಅರವತ್ತು-ತೊಂಬತ್ತು ಸಾವಿರ ವರ್ಷಗಳಷ್ಟು ಹಿಂದೆಯೇ ರೂಪಿಸಿಕೊಂಡಿದ್ದರು. ಅದಕ್ಕೆ ಸಾಕಷ್ಟು ಪುರಾವೆಗಳಿವೆ.

ಅವರು ಭಾಷೆಗಳ ಆಧಾರದಿಂದ ಮತ್ತು ಜನ ಪಂಗಡಗಳಲ್ಲಿ ಇದ್ದ ರಕ್ತಸಂಬಂಧದಿಂದ ತಮ್ಮ ನೆಲೆಗಳನ್ನು ಗುರ್ತಿಸಿದ್ದರು. ದೇಶದ ನದಿಗಳು ಮನುಷ್ಯರ ನಾಗರಿಕತೆಯ ತೊಟ್ಟಿಲು, ಮಡಿಲು ಅನ್ನೋದಕ್ಕೆ ಅಪವಾದವೆಂಬಂತೆ, ನದಿಯಿದ್ದರೂ ಸರಿ, ಇಲ್ಲದಿದ್ದರೂ ಸರಿ ಅನ್ನೋ ರೀತಿಯಲ್ಲಿ, ಅಕ್ಷರಶಃ ನೆಲಕ್ಕೆ ಹತ್ತಿರವಾದ, ಪ್ರಕೃತಿ-ಆಧಾರಿತ ಜೀವನ ಕ್ರಮಗಳನ್ನು ರೂಪಿಸಿಕೊಂಡಿದ್ದರು. ಅದನ್ನು ನಾಗರಿಕತೆಯೆಂದು ಕರೆಯಬೇಕೋ, ಬೇಡವೋ ಎನ್ನುವ ತಲೆಬಿಸಿ ಇನ್ನೂರು ವರ್ಷಗಳ ಹಿಂದೆ ಯೂರೋಪಿಯನ್ ವಸಾಹತುಶಾಹಿಗಳಿಗೆ ಎಷ್ಟರ ಮಟ್ಟಿಗೆ ಆಗಿತ್ತೋ ಅಷ್ಟೇ ತಲೆಬಿಸಿ ಈಗಲೂ ದೇಶದ ಹಲವಾರು ಭಾಗಗಳಲ್ಲಿ ಬಿಳಿಯ ಆಸ್ಟ್ರೇಲಿಯನ್ನರನ್ನು ಬಿಡದ ಮೈಗ್ರೇನ್ ತರಹ ಕಾಡುತ್ತಿದೆ. ನನಗೂ ಆ ಬಿಸಿಯ ಚುರುಕು ಸಾಕಷ್ಟು ತಟ್ಟಿದೆ.

ಅವರು ಭಾಷೆಗಳ ಆಧಾರದಿಂದ ಮತ್ತು ಜನ ಪಂಗಡಗಳಲ್ಲಿ ಇದ್ದ ರಕ್ತಸಂಬಂಧದಿಂದ ತಮ್ಮ ನೆಲೆಗಳನ್ನು ಗುರ್ತಿಸಿದ್ದರು. ದೇಶದ ನದಿಗಳು ಮನುಷ್ಯರ ನಾಗರಿಕತೆಯ ತೊಟ್ಟಿಲು, ಮಡಿಲು ಅನ್ನೋದಕ್ಕೆ ಅಪವಾದವೆಂಬಂತೆ, ನದಿಯಿದ್ದರೂ ಸರಿ, ಇಲ್ಲದಿದ್ದರೂ ಸರಿ ಅನ್ನೋ ರೀತಿಯಲ್ಲಿ, ಅಕ್ಷರಶಃ ನೆಲಕ್ಕೆ ಹತ್ತಿರವಾದ, ಪ್ರಕೃತಿ-ಆಧಾರಿತ ಜೀವನ ಕ್ರಮಗಳನ್ನು ರೂಪಿಸಿಕೊಂಡಿದ್ದರು.

ಹಾಗೆ ನೋಡಿದರೆ ನಾಗರಿಕತೆಗಳನ್ನು ಹುಟ್ಟುಹಾಕಿ ಬೆಳೆಸಲು ಈ ಬೃಹತ್ ದೇಶ ಖಂಡದಲ್ಲಿ ನದಿಗಳು ಕಡಿಮೆ. ಅವು ಹೇಳಿಕೊಳ್ಳುವ ತರಹದ ಮಹಾನ್ ನದಿಗಳೂ ಅಲ್ಲ. ಮರುಭೂಮಿ ವಾತಾವರಣವಿರುವ ದೇಶದಲ್ಲಿ ಶುದ್ಧನೀರಿನ ಸೆಲೆ ಕಡಿಮೆ. ಆದರೆ ನಾಡಿನ ಸುತ್ತ ಘಟಾನುಘಟಿ ಸಮುದ್ರಗಳು. ಬಹು ಸುಂದರವಾದ, ಆಕರ್ಷಕ ಸಮುದ್ರಗಳೇ ಸ್ವದೇಶಿ ಜನರಿಗೆ ಮುಳುವಾಯ್ತೇನೋ ಅನ್ನಿಸುತ್ತೆ. ಯಾಕೆಂದ್ರೆ ವಲಸಿಗಳಾದ ನನ್ನನ್ನೂ ಸೇರಿಸಿಕೊಂಡು ಎಲ್ಲರಿಗೂ ಆಸ್ಟ್ರೇಲಿಯಾ ಅಂದ್ರೆ ಸಮುದ್ರ, ಬೀಚ್, ಶುದ್ಧ ಮರಳು.

ಹದಿನೆಂಟು/ ಹತ್ತೊಂಬತ್ತನೇ ಶತಮಾನಗಳ ಬ್ರಿಟನ್ ಬಹುಆಂತರಿಕ ಸಮಸ್ಯೆಗಳಿದ್ದ ನಾಡು. ಅಲ್ಲಿಂದ ಹೊರದೂಡಲ್ಪಟ್ಟ ಮಂದಿ ಸಾವಿರಾರು. ಇನ್ನೂ ಸಾವಿರಾರು ಕುಟುಂಬಗಳು, ವ್ಯಾಪಾರಸ್ಥರು, ಕಸುಬುದಾರರು, ಜಾಣರು, ಕೋಣರು, ದುಷ್ಟರು, ದುರಾಸೆಕೋರರು, ಕೆಳವರ್ಗದವರು, ಅವಕಾಶ ವಂಚಿತರು ಬ್ರಿಟನ್ನಿಂದ ಹೊರಬಿದ್ದು ಹೊಸ ನಾಡನ್ನು ಸೇರಿ ಹೊಸಬಾಳನ್ನು ಕಟ್ಟಿಕೊಳ್ಳುವ ಆಸೆ/ದುರಾಸೆ/ಕನಸು ಹೊತ್ತು ಬಂದವರು. ಅವರು ಆಸ್ಟ್ರೇಲಿಯಾದ ನಿರ್ಮಾಪಕರೂ, ನಿರ್ದೇಶಕರೂ, ಸಿನಿಮಾಟೋಗ್ರಾಫರ್ ಗಳೂ… ಎಲ್ಲ ಪಾತ್ರಧಾರಿಗಳೂ ಆದರಂತೆ. ಯಾವ ಮನುಷ್ಯಪ್ರಾಣಿಯೂ ಇಲ್ಲವಾಗಿದ್ದ ನೆಲದಲ್ಲಿ ಅವರು ನೆಲೆಸಿ ನಾಗರಿಕತೆಯನ್ನು ಬೆಳೆಸಿದರಂತೆ. ಅದೇ ನೆಲದಲ್ಲಿ ಸಾವಿರ ಸಾವಿರ ಕಥೆಗಳಿದ್ದವು. ಆ ‘Dreamtime Stories’ ಎಲ್ಲಾ ಕಾಲಕ್ಕೂ ಸಲ್ಲುವ ಜೀವನದರ್ಥ ಎನ್ನುವುದು ‘ಸ್ವದೇಶೀಯರು ಅನಾಗರೀಕರು’ ಎನ್ನುವ ಹಣೆಪಟ್ಟಿಯಲ್ಲಿ ಹುದುಗಿ ಗೋರಿಗಳಾದವು.

ಬ್ರಿಟಿಷರು ಆಸ್ಟ್ರೇಲಿಯಾಕ್ಕೆ ಬಂದು ತಮ್ಮ ಆಡಳಿತವನ್ನು ಜಾರಿಗೆ ತರುವ ಇನ್ನೂರು ವರ್ಷಗಳ ಪ್ರಕ್ರಿಯೆಯಲ್ಲಿ ದ್ವೀಪದೇಶದ ಕರಾವಳಿಯ ಅಂಚಿನಲ್ಲಿ ನಗರಗಳನ್ನು ಅಭಿವೃದ್ಧಿಪಡಿಸಿದರು. ಪ್ರಮುಖ ನಗರಗಳಾದ ಡಾರ್ವಿನ್, ಕೈರ್ನ್ಸ್, ಟೌನ್ಸ್ವಿಲ್, ಬ್ರಿಸ್ಬನ್, ಸಿಡ್ನಿ, ಮೆಲ್ಬರ್ನ್, ಅಡಿಲೇಡ್, ಪರ್ತ್ ಇರುವುದು ಸಮುದ್ರದ ಕಿನಾರೆಗಳಲ್ಲೇ. ಬಹುಪಾಲು ಬಿಳಿಯ ಆಸ್ಟ್ರೇಲಿಯನ್ನರು ವಾಸಿಸುವುದು ಇಂತಹ ಮಹಾನಗರಗಳ, ನೀರಿಗೆ ಮುಖಮಾಡಿದ ಬಡಾವಣೆಗಳಲ್ಲೇ. ಒಳಪ್ರದೇಶದ ಪಟ್ಟಣಗಳಲ್ಲಿ ಇರುವ ಜನಸಂಖ್ಯೆ ಕಡಿಮೆ. ಅಲ್ಲಿ ಹೋಗಿ ಇರಲು, ವಾಸಿಸಲು ಇವರಿಗೆ ಕಷ್ಟ. ಅಲ್ಲಿ ಸೌಲಭ್ಯಗಳು ಕಡಿಮೆ. ಹೋಗಿ ನೆಲೆಸಲು, ಅವರ ಕುಟುಂಬಗಳಿಗೆ ಬೇಕಿರುವ ಶಾಲೆ, ಕಾಲೇಜು, ಆಸ್ಪತ್ರೆ, ವಾಹನಗಳು ಓಡಾಡುವ ದೊಡ್ಡ, ಸುರಕ್ಷಿತ ರಸ್ತೆಗಳು, ಇರಲು ಅನುಕೂಲವಾದ ಮನೆಗಳು… ಇಲ್ಲ ಇಲ್ಲ ಇಲ್ಲ. ಆಸ್ಟ್ರೇಲಿಯನ್ ಔಟ್ ಬ್ಯಾಕ್ನಲ್ಲಿ ವಾಸಮಾಡುತ್ತಿರುವ ಹೆಚ್ಚಿನವರು ಸ್ವದೇಶೀ ಜನರು. ಅವರಿಗೂ, ಮತ್ತಿತರಿಗೂ ಕಲಹ ಕಟ್ಟಿಟ್ಟದ್ದೇ, ಅನ್ನುತ್ತಾರೆ.

(ಆಸ್ಟ್ರೇಲಿಯಾ ಮೂಲ ನಿವಾಸಿಗಳ ಕ್ರಿಕೆಟ್ ತಂಡ)

ಅವರು ಆಸ್ಟ್ರೇಲಿಯಾದ ನಿರ್ಮಾಪಕರೂ, ನಿರ್ದೇಶಕರೂ, ಸಿನಿಮಾಟೋಗ್ರಾಫರ್ಗಳೂ… ಎಲ್ಲ ಪಾತ್ರಧಾರಿಗಳೂ ಆದರಂತೆ. ಯಾವ ಮನುಷ್ಯಪ್ರಾಣಿಯೂ ಇಲ್ಲವಾಗಿದ್ದ ನೆಲದಲ್ಲಿ ಅವರು ನೆಲೆಸಿ ನಾಗರಿಕತೆಯನ್ನು ಬೆಳೆಸಿದರಂತೆ. ಅದೇ ನೆಲದಲ್ಲಿ ಸಾವಿರ ಸಾವಿರ ಕಥೆಗಳಿದ್ದವು. ಆ ‘Dreamtime Stories’ ಎಲ್ಲಾ ಕಾಲಕ್ಕೂ ಸಲ್ಲುವ ಜೀವನದರ್ಥ ಎನ್ನುವುದು ‘ಸ್ವದೇಶೀಯರು ಅನಾಗರೀಕರು’ ಎನ್ನುವ ಹಣೆಪಟ್ಟಿಯಲ್ಲಿ ಹುದುಗಿ ಗೋರಿಗಳಾದವು.

ಕ್ರಮೇಣ ನಗರಗಳು ಹಾಗೆ ‘ನಾಡನ್ನು ಕಂಡುಹಿಡಿದವರ’ ಅರಸೊತ್ತಿಗೆಗಳಾದರೂ ಹಿಂದೊಮ್ಮೆ ಅವು ಸ್ವದೇಶೀಯರ ಮನೆಗಳಾಗಿದ್ದು, ಅವರು ಪ್ರಕೃತಿ-ಆಧಾರಿತ ಹೆಸರನಿಟ್ಟಿದ್ದು ಅಲ್ಲೆಲ್ಲಾ ಬದುಕಿ ಬಾಳಿದ್ದು ಈಗೀಗ ಬೆಳಕು ಕಾಣುತ್ತಿವೆ. ಅಂಥ ಒಂದು ಸ್ಥಳ ಹೆಸರು Canberra; ದೇಶದ ರಾಜಧಾನಿ. ಅಲ್ಲಿನ ಸ್ವದೇಶಿಗಳ Ngunnawal ಭಾಷೆಯಲ್ಲಿ Kambera ಎಲ್ಲರೂ ಸೇರಿ ಭೇಟಿಯಾಗುವ ಸ್ಥಳ. ನನ್ನ ಮತ್ತೊಂದು ತರಗತಿಯ ಒಂದು ಗುಂಪು ಕಲಿಕಾ ಚಟುವಟಿಕೆಯಲ್ಲಿ ಗುಂಪಿನ ವಿದ್ಯಾರ್ಥಿಗಳು ಇದನ್ನು ವಿವರಿಸಿದಾಗ ಕ್ಲಾಸಿನ ಅರ್ಧಮಂದಿ ಅದು ತಪ್ಪು, ಈ ನಗರ ನಮ್ಮದು, ನಾವು ಯುರೋಪಿಯನ್ನರು ಅದರ ಜನ್ಮದಾತರು, ನಾವು ಒಡೆಯರು, ನಾವು ಕೊಟ್ಟ ಹೆಸರು Canberra, ಅದಕ್ಕೂ ಸ್ವದೇಶಿಗಳಿಗೂ ಸಂಬಂಧವೇ ಇಲ್ಲ; ನಾವು ಅವರಿಗೆ ಅಸ್ಮಿತೆಯನ್ನ ಕೊಟ್ಟಿದ್ದು, ನಾಗರಿಕತೆಯನ್ನ ಕಲಿಸಿದ್ದು, ಎಂದು ವಾದಿಸಿದಾಗ ಕಣ್ಣುಕಣ್ಣು ಬಿಡುವ ಪಾಡು ನನ್ನದು!

ತೊಂಭತ್ತು ಸಾವಿರ ವರ್ಷಗಳ ಚರಿತ್ರೆಯಿರುವ, ಬದುಕುಗಳಿದ್ದ, ಅನೇಕತೆಗಳಿದ್ದ, ಸಂಸ್ಕೃತಿಗಳಿದ್ದ ಈ ವಿಶಾಲ ದ್ವೀಪದಲ್ಲಿ ಕಲೆ, ಸಂಗೀತ, ನೃತ್ಯ, ತಾತ್ವಿಕತೆ, ದರ್ಶನ, ವಿಜ್ಞಾನ, ಅನುಭವ ಕಲಿಕೆ ಎಲ್ಲವೂ ಇತ್ತು. ನೆಲಜೀವಿಗಳಲ್ಲಿ ಅಪೂರ್ವ ಹೊಂದಾಣಿಕೆಯಿತ್ತು (ಏಕಭಾಷೆ, ಏಕಸಂಸ್ಕೃತಿಯ ನಾಗರಿಕತೆ ಅಲ್ಲ!!). ಈಗಲೂ ನಮ್ಮ ಭಾರತದಲ್ಲಿರುವ ಅನೇಕತೆಗಳ, ವೈವಿಧ್ಯತೆಗಳ ಹಾಗೆ. ಈ ಸಮೃದ್ಧ ನಾಡನ್ನು ತಿದ್ದಿತೀಡಿ ಇಸ್ತ್ರಿಮಾಡಿ, ಹೊಸದಾಗಿ ರೂಪಿಸಿ, ovenನಲ್ಲಿ ಬೇಕ್ ಮಾಡಿದ ಫ್ರೆಶ್ ಕೇಕಿನಂತೆ ಹೊರ ಪ್ರಪಂಚಕ್ಕೆ ಸಾದರಪಡಿಸಿದ ಕತೆಗಳನ್ನ ಕೇಳಿದರೆ ಕ್ಷೋಭೆಯ ಮಿತಿಯನ್ನು ದಾಟಿ ಸ್ವದೇಶೀಯರ ‘ಪರಕೀಯತೆ’ಯ ದನಿಗೆ ನಾವು ‘ಹೊರಗಿನವರು’ ಕೂಡ ತಾಳ ಹಾಕೋಣ ಅನ್ನಿಸತ್ತೆ… ನಾವೇ ಆ ಓವನ್ನೊಳಗೆ ಬೇಯುತ್ತಿರುವ ಕೇಕ್ ಅನ್ನಿಸಿಬಿಡುತ್ತದೆ. ಕೇಕ್ ತಿಂದು ಬಾಯಿ ಚಪ್ಪರಿಸಬೇಕೋ ಅಥವಾ ಕೇಕ್ ಅಲ್ಲದೆ ಎಷ್ಟೋ ಬಗೆಬಗೆಯ ಅನೇಕತೆಗಳ ಖಾದ್ಯಗಳು ಇವೆ, ಅವನ್ನೂ ಮೆಚ್ಚಿ, ಆರಿಸಿಕೊಂಡು, ಉಂಡು ಜೀವಿಸೋಣ ಅಂತ ಹೇಳಬೇಕೆನ್ನಿಸುತ್ತದೆ. ಆಸ್ಟ್ರೇಲಿಯಾ ಬಹುಸಂಸ್ಕೃತಿಗಳ ದೇಶ ಎಂದು ಪ್ರಚಾರ ಮಾಡುವುದರ ಜೊತೆಗೆ, ಇದು ಸ್ವದೇಶಿಗಳ ನೆಲನಾಡು, ಅದನ್ನು ಮೊದಲ ವಾಕ್ಯವನ್ನಾಗಿಸಿ ಅಗ್ರಸ್ಥಾನ ಕೊಡೋಣ, ಅದನ್ನು ನಾಟಕೀಯವಾಗಿ ತೋರಿಸೋದು ಬೇಡ, ಎನ್ನುವ ಚಡಪಡಿಕೆ ಹೆಚ್ಚುತ್ತದೆ.

ಈಗ ನಡೆಯುತ್ತಿರುವ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಆಟಗಳ ಆರಂಭದ ಸಮಯದಲ್ಲಿ ನೂರು ಮಂದಿಯ ಚಿಕ್ಕ ಗುಂಪು ‘ಇದು ಸ್ಟೋಲನ್ ವೇಜಸ್ ಆಟಗಳು, ನಮ್ಮ ಸಂಬಳವನ್ನು ಕದ್ದು ನಡೆಸುತ್ತಿರುವ ವಿಜೃಂಭಣೆ’ ಎಂದು ಪ್ರತಿಭಟನೆ ನಡೆಸಿದರು. ನನ್ನ ಮನಸ್ಸಿನಲ್ಲಿ ನೆನಪಿನ ಲೋಕದ ಗುಬ್ಬಚ್ಚಿಗಳು ಹಾರಾಡುತ್ತಿವೆ.