ಈ ದಿನದ ಫೋಟೋ ತೆಗೆದವರು ಎಂ. ಪೂರ್ವಿತಾ. ಊರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಲ್ಲಬ್ಬೆ. ಓದಿದ್ದು ಇಂಜನಿಯರಿಂಗ್. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರುವ ಪೂರ್ವಿತಾ ಅವರಿಗೆ ಕಥಕ್, ಪ್ರೀಸ್ಟೈಲ್ ನೃತ್ಯಗಳ ಜೊತೆಗೆ ‌ಪ್ರವಾಸ ಹಾಗೂ ಫೋಟೋಗ್ರಫಿಯಲ್ಲೂ ಆಸಕ್ತಿಯಿದೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com