”ಇಟ್ಟಲ ಪೇಟೆಯಿಂದ ಸುಮಾರು ಮೂರು ಹರದಾರಿ ಈಶಾನ್ಯಕ್ಕೆ ಪುಣಚೆ ಗ್ರಾಮವಿದೆ. ಇಟ್ಟಲ ಸೀಮೆಯ ಹದಿನೆಂಟು ದೇವಸ್ಥಾನಗಳಲ್ಲಿ ಒಂದಾದ ಮಹಿಷ ಮರ್ದಿನಿಯ ದೇಗುಲವು ಅಲ್ಲೆ ವಿರಾಜಿಸುತ್ತಿದೆ. ದೇವಿಯು ಉಟ್ಟ ಹಸುರು ಸೀರೆಯ ನೆರಿಗೆಗಳಂತೆ ತೆನೆಗಳಿಂದ ತೊನೆಯುವ ಹೊಲಗದ್ದೆಗಳು ಸುತ್ತಲೂ ಹರಡಿವೆ. ಅವುಗಳ ಒಂದಂಚಿನಲ್ಲಿ ಪ್ರಶಸ್ತ ಪರಿವೇಶದಲ್ಲಿ ಉಪ್ಪರಿಗೆಯ ಈ ದೊಡ್ಡ ಮನೆಯು ಮೌನ ಸಂಕೇತದಿಂದ ಗತಕಾಲದ ತನ್ನ ಐಸಿರಿ ಅಗ್ಗಳಿಕೆಗಳನ್ನು ಸಾರುತ್ತಿದೆ”
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು‘ ಸರಣಿಯ ಮೂರನೆಯ ಕಥೆ.

 

ದೊಡ್ಡ ಮನೆಯೆನ್ನಿಸಿಕೊಳ್ಳುವ ಭಾಗ್ಯವು ಎಲ್ಲ ದೊಡ್ಡ ಮನೆಗಳಿಗಿಲ್ಲ. ಕಿರಿಯದಾದರೂ ಹಿರಿಯ ಮನೆತನಕ್ಕೆ ಸೇರಿದ್ದಾದರೆ ಅದು ದೊಡ್ಡ ಮನೆಯೆನ್ನಿಸಿಕೊಳ್ಳುವುದು. ವಿಜಯ ನಗರದ ಅರಸರ ಕಾಲದಲ್ಲಿ ಅರಸರ ಕೂಡು ಕುಟುಂಬಗಳನ್ನು ಮನೆತನದವರೆಂದು ಕರೆಯುತ್ತಿದ್ದರು. ಕಾಲಕ್ರಮದಲ್ಲಿ ಹೆಸರಾಂತ ಹುದ್ದೆದಾರರ, ಪ್ರಖ್ಯಾತ ಯೋಧರ, ನಾಡ ಮನ್ನೆಯರ ವಸತಿಗಳೂ ಮನೆತನಗಳೆಂದು ಗಣಿಸಲ್ಪಟ್ಟವು. ಅಂಥ ಒಂದು ‘ಮನ್ತಾನ’ದ ಮನೆಯೇ ಈ ದೊಡ್ಡ ಮನೆ.

ಇಟ್ಟಲ ಸೀಮೆಯಲ್ಲೆಲ್ಲ ಈ ದೊಡ್ಡ ಮನೆಯ ಕೀರ್ತಿಯು ಹರಡಿತ್ತು. ಸೀಮೆಯ ಮಹತೋಭಾರಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಈ ದೊಡ್ಡ ಮನೆಗೆ ಬೆಳ್ಳಿಯ ಹರಿವಾಣದಲ್ಲಿ ಮುಂದು ಪ್ರಸಾದ. ಈ ಮರ್ಯಾದೆಯ ಆ ಮನೆಯ ಸಂತಾನಕ್ಕೆ ಮೊನ್ನೆ ಮೊನ್ನೆಯವರೆಗೂ ರೂಢಿಸಿಕೊಂಡು ಬಂದಿತ್ತು. ಈಗ ಆ ಮನೆಯಲ್ಲಿ ಆ ಪೀಳಿಗೆಯವರು ಯಾರೂ ಇಲ್ಲ. ಅವರ ಕಡೆಯ ಯಾರೋ ಒಬ್ಬನು ಮನೆ ದೇವರಿಗೆ ದೀಪ ಇಡುತ್ತಾ ಬರುತ್ತಿರುವನು. ತುಳುನಾಡಿನ ಗುತ್ತು ಬೂಡುಗಳಿಗೆ ಸರಿದೊರೆಯೆನಿಸಿ ಕನ್ನಡದ ಈ ದೊಡ್ಡ ಮನೆಯ ಹೇಗೆ ಎದ್ದಿತು ಎಂಬುದು ಕುತೂಹಲಜನಕವಾಗಿದೆ.

ಇಟ್ಟಲ ಪೇಟೆಯಿಂದ ಸುಮಾರು ಮೂರು ಹರದಾರಿ ಈಶಾನ್ಯಕ್ಕೆ ಪುಣಚೆ ಗ್ರಾಮವಿದೆ. ಇಟ್ಟಲ ಸೀಮೆಯ ಹದಿನೆಂಟು ದೇವಸ್ಥಾನಗಳಲ್ಲಿ ಒಂದಾದ ಮಹಿಷ ಮರ್ದಿನಿಯ ದೇಗುಲವು ಅಲ್ಲೆ ವಿರಾಜಿಸುತ್ತಿದೆ. ಪ್ರಕೃತಿ ಸ್ವರೂಪಿಣಿಯಾದ ಆ ದೇವಿಯು ಉಟ್ಟ ಹಸುರು ಸೀರೆಯ ನೆರಿಗೆಗಳಂತೆ ತೆನೆಗಳಿಂದ ತೊನೆಯುವ ಹೊಲಗದ್ದೆಗಳು ಸುತ್ತಲೂ ಹರಡಿವೆ. ಅವುಗಳ ಒಂದಂಚಿನಲ್ಲಿ ಪ್ರಶಸ್ತ ಪರಿವೇಶದಲ್ಲಿ ಉಪ್ಪರಿಗೆಯ ಈ ದೊಡ್ಡ ಮನೆಯು ಕಣ್ಣೆಸೆಯುತ್ತಿದೆ. ಮೌನ ಸಂಕೇತದಿಂದ ಗತಕಾಲದ ತನ್ನ ಐಸಿರಿ ಅಗ್ಗಳಿಕೆಗಳನ್ನು ಸಾರುತ್ತಿದೆ. ಒತ್ತಿನಲ್ಲೇ ಆ ಮನೆಯವರ ಒಂದು ಶಿವಾಲಯವಿದೆ. ಅದಕ್ಕೆ ಹೊಂದಿಕೊಂಡು ವಿಶಾಲವಾದ ಕಲ್ಲು ಕಟ್ಟಿದ ತಿಳಿನೀರಿನ ಒಂದು ತಟಾಕವಿದೆ. ಇದಿರಿನ ಬಾಕಿಮಾರು ಗದ್ದೆಯೇ ಹಿಂದಿನ ಹೆಸರಾದ ಕಂಬಳದ ಗದ್ದೆ. ಈ ಮನೆಯ ಮೂಲಪುರುಷನು ಈಶ್ವರಯ್ಯನೆಂಬ ದಳವಾಯಿ. ಇವನು ಹುಟ್ಟು ಕನ್ನಡಿಗನು. ಕ್ಷತ್ರಿಯನು. ಇಕ್ಕೇರಿ ದಂಡಿನೊಡನೆ ಬಂದು ತೆಂಕನಾಡ ಕೋಟೆಗಳಲ್ಲಿ ದಂಡುಕಡಿದು ಕೀರ್ತಿ ಶಿಖರಕ್ಕೇರಿದವನು. ದಳವಾಯಿ ಪದವಿಯಿಂದ ನಿವೃತ್ತನಾಗಿ ಈ ಮನೆಯಲ್ಲಿ ನೆಲೆಸಿದ್ದನು. ಅಂದಿನ ಇಟ್ಟಲ ಹೆಗ್ಗಡೆಗೆ ಅವನಲ್ಲಿ ತುಂಬ ಸ್ನೇಹ ವಿಶ್ವಾಸ. ಗಂಡುಡೆಯುಟ್ಟು ದೊಡ್ಡ ಮುಂಡಾಸನವನ್ನು ಸುತ್ತಿ ಬಿಳಿಯ ಬಗಲು ಕಸೆಯ ನಿಲುವಂಗಿ, ಜರತಾರಿ ಅಂಗರೇಖು ತೊಟ್ಟು ಬಿಗಿದ ಪಟ್ಟಿದಟ್ಟಿಯಲ್ಲಿ ಬೆಳ್ಳಿ ಹಿಡಿಯ ನೀಳ್ಗತ್ತಿಯನ್ನು ಸಿಕ್ಕಿಸಿಕೊಂಡು ಐವತ್ತರ ಹರಯದ ಆ ವೀರನು ಓಲಗದಲ್ಲಿ ಸುಳಿದನೆಂದರೆ ಅವನ ಗಂಡುಗಾಡಿಯಿಂದ ಪಾರ್ಥಂಪಾಡಿ ಚಾವಡಿಯೆಲ್ಲ ಬೆಳಗುತ್ತಿತ್ತು.

ಊರಿನ ಎಲ್ಲ ಕೂಟ ಸ್ಥಾನ ಪಂಚಾಯತಿಗಳಿಗೆಲ್ಲ ಅವನೇ ಅಗ್ರಣಿ. ಅವನ ಮಾತಿಗೆ ಇದಿರಿಲ್ಲ. ಸೀಮೆಯ ಸಾವಿರದೈನೂರು ಆಳಿಗೆ ಅವನಲ್ಲಿ ಅಂಥ ಆದರಾಭಿಮಾನ. ಜಾತ್ರೆ, ಸಮಾರಾಧನೆ, ಅಯನ, ಕಂಬಳಗಳಿಗೆ ಹಣ ಸೂರೆಗುಡುತ್ತಿದ್ದನು. ಅವನ ಆ ದೊಡ್ಡ ಮನೆಗೆ ಹಸಿವಿನಿಂದ ಹೋದವರು ಬರಿ ಹೊಟ್ಟೆಯಲ್ಲಿ ಬಂದುದಿಲ್ಲ. ಸಹಾಯ ಬೇಡಲು ಹೋದವರು ಬರಿಗೈಯಲ್ಲಿ ಮರಳಿದುದಿಲ್ಲ. ಇತಿಗಳಿಗೆಲ್ಲ ಅವನೇ ಮೊಕ್ತೇಸರ. ಶುಭ ಶೋಭನಗಳಿಗೆ ಅವನಿಗೆ ಓಲಗದ ಹೇಳಿಕೆ. ಮದುವೆ ಮುಂಜಿಗಳಲ್ಲಿ ಅವನ ಮನೆಗೆ ಮೊದಲು ಸೇಸೆಯ ಮರ್ಯಾದೆ. ಅವನು ಹೋದಲ್ಲೆಲ್ಲ ಅವನಿಗೆ ಮೂರು ಮಣೆಯ ಮನ್ನಣೆ – ಒಂದು ಅವನ ಖಡ್ಗಕ್ಕೆ. ಒಂದು ಮುಂಡಾಸು ಇರಿಸುವುದಕ್ಕೆ, ಒಂದು ಅವನ ಆಸನಕ್ಕೆ. ಎಲ್ಲಿ ಹೋದರೂ ಅವನ ಮಾತುಕತೆ ನಡೆಯುತ್ತಿತ್ತು. ನಡೆದು ನಡೆದು ಅದು ಇಕ್ಕೇರಿಯ ಹೊನ್ನಾಗಿತ್ತು.

ಪ್ರಕೃತಿ ಸ್ವರೂಪಿಣಿಯಾದ ಆ ದೇವಿಯು ಉಟ್ಟ ಹಸುರು ಸೀರೆಯ ನೆರಿಗೆಗಳಂತೆ ತೆನೆಗಳಿಂದ ತೊನೆಯುವ ಹೊಲಗದ್ದೆಗಳು ಸುತ್ತಲೂ ಹರಡಿವೆ. ಅವುಗಳ ಒಂದಂಚಿನಲ್ಲಿ ಪ್ರಶಸ್ತ ಪರಿವೇಶದಲ್ಲಿ ಉಪ್ಪರಿಗೆಯ ಈ ದೊಡ್ಡ ಮನೆಯು ಕಣ್ಣೆಸೆಯುತ್ತಿದೆ. ಮೌನ ಸಂಕೇತದಿಂದ ಗತಕಾಲದ ತನ್ನ ಐಸಿರಿ ಅಗ್ಗಳಿಕೆಗಳನ್ನು ಸಾರುತ್ತಿದೆ. ಒತ್ತಿನಲ್ಲೇ ಆ ಮನೆಯವರ ಒಂದು ಶಿವಾಲಯವಿದೆ. ಅದಕ್ಕೆ ಹೊಂದಿಕೊಂಡು ವಿಶಾಲವಾದ ಕಲ್ಲು ಕಟ್ಟಿದ ತಿಳಿನೀರಿನ ಒಂದು ತಟಾಕವಿದೆ. ಇದಿರಿನ ಬಾಕಿಮಾರು ಗದ್ದೆಯೇ ಹಿಂದಿನ ಹೆಸರಾದ ಕಂಬಳದ ಗದ್ದೆ. ಈ ಮನೆಯ ಮೂಲಪುರುಷನು ಈಶ್ವರಯ್ಯನೆಂಬ ದಳವಾಯಿ. ಇವನು ಹುಟ್ಟು ಕನ್ನಡಿಗನು.

ಕ್ರಿ.ಶ. 1715ರಲ್ಲಿ ಕೆಳದಿಯಲ್ಲಿ ಎರಡನೇ ಸೋಮಶೇಖರ ನಾಯಕನು ಪಟ್ಟವೇರಿ ಪರಮ ಪ್ರಸಿದ್ಧಿಯನ್ನು ಪಡೆದಿದ್ದನು. ನೆಗಳ್ತೆವೆತ್ತ ಶಿವಪ್ಪನಾಯಕನು ಚಂದ್ರಗಿರಿ, ಬೇರ, ಚಿತ್ತಾರಿ ಕೋಟೆಗಳನ್ನು ಬಲ್ಪಗೈಸಿ ನೀಲೇಶ್ವರದವರೆಗೆ ಗಡಿಯನ್ನೊತ್ತಿ ತೊಲಗದ ಕಂಬವನ್ನು ನಿಲ್ಲಿಸಿದ್ದರೂ ಆ ಪ್ರದೇಶದ ಹಿಡಿತವಿನ್ನೂ ಬೇರುಗೊಂಡಿರಲಿಲ್ಲ. ಎಡಬಲದ ಮಲೆಯಾಳಿಗಳು ಆಗಾಗ ಗುಲ್ಲೆಬ್ಬಿಸುತ್ತಿದ್ದರು. ಒಮ್ಮೆ ಕೋಲತ್ತರಸ ರವಿವರ್ಮರಾಜನು ಕುಹಕೋಪಾಯಗಳಿಂದ ಕುಂಬಳೆಯರಸನನ್ನು ಕೂಡಿಕೊಂಡು ನಾಯಿಮಾರ, ಮಾಪಿಳ್ಳೆ ಮೊದಲಾದ ಮಲೆಯಾಳಿ ಜನರ ಪಡೆಯೊಂದಿಗೆ ಬಲವೆತ್ತಿ ಬಂದು ಚಂದ್ರಗಿರಿ ಕೋಟೆಯನ್ನು ಲಗ್ಗೆಯಿಟ್ಟನು. ಪರಿಸರದ ಊರು ಕೇರಿಗಳನ್ನು ಕೊಳ್ಳೆಹೊಡೆದನು. ತಿರುಕಣ್ಣೂರು ತಿರೂರು ಕೋವಿಲಗಳನ್ನು ಸುಲಿದು ಊರಿಗೆ ಕಿಚ್ಚಿಟ್ಟನು. (ಹಾಗೆ ಸುಟ್ಟು ಕರಿಪುಡಿಯಾದ ಭಾಗವು ಈಗಲೂ ಕರಿಪೇಡಿಯೆಂದು ಕರೆಯಲ್ಪಡುತ್ತಿದೆ.) ಇದನ್ನು ಕಂಡು ಸೋಮಶೇಖರ ನಾಯಕನು ಕೆರಳಿ ಮಲೆತು ಮಾರ್ಮಲೆವ ಮಲೆಯಾಳಿಗಳನ್ನು ಹತ್ತಿಕ್ಕುವುದಕ್ಕಾಗಿ ಚಂದ್ರಗಿರಿ ಕೋಟೆಗೆ ಬಲ್ದಂಡನ್ನು ಕಳುಹಿಸಿದನು. ಆ ಕನ್ನಡ ಸೇನೆಯು ಮುನಿದೆತ್ತಿ ಬಂದು ಭೋಂಕನೆ ಬರಸಿಡಿಲಂತೆರಗಿ ಅರಿಪಡೆಯನ್ನು ತರಿದು ತೂರಿ ದೆಸೆಗೆಡಿಸಿತು. ಕೋಲತ್ತರಸನು ಕೈಯೂರಿ ಕೈದುವನಿಕ್ಕಿ ಕೈ ಮುಗಿದು ಮುತ್ತಿಗೆ ಕಿತ್ತು ಕಾಲ್ತೆಗೆದನು. ಕುಂಬಳೆಯರಸನು ಸೆರೆಸಿಕ್ಕಿ ವೇಣುಪುರ ಕೋಟೆಯಲ್ಲಿ ಬಂಧಿತನಾದನು. ಈ ಭೀಕರ ಯುದ್ಧದಲ್ಲಿ ಈಶ್ವರಯ್ಯನ ಪಟುತರ ಭುಜ ಬಲವು ಬೆಳಕಿಗೆ ಬಂತು.

ಸೋಮಶೇಖರ ನಾಯಕನು ಮಲೆಯಾಳಿಗಳನ್ನು ಹಿಮ್ಮೆಟ್ಟಿಸಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತೆಂಕನಾಡ ಗಡಿಯನ್ನು ಇನ್ನೂ ಮುಂದೊತ್ತಬೇಕೆಂದು ಸೇನೆಯನ್ನಟ್ಟಿದನು. ಆ ಮಹಾಸೈನ್ಯವು ಚಿತ್ತಾರಿ ಕೋಟೆಯಲ್ಲಿ ಪಾಳೆಯ ಬಿಟ್ಟು (ನಡೆ) ತಳಿಗೋಂಟೆಯನ್ನು ನಡೆಸುತ್ತ ಜಂತ್ರದ ಒಡ್ಡವಣೆಯ ಚಳಕದಿಂದ ಒತ್ತೊತ್ತಿ ಮುಂದುವರಿಯುತ್ತ ಇದಿರಾಂತವರನ್ನು ತಳ್ತಿರಿಯುತ್ತ ಉರವಣೆಯಿಂದ ಕಾದಿ ಶತ್ರುಗಳನ್ನು ನೆಲೆಗೆಡಿಸಿ ಅಲವತ್ತನಾಡು ನೀಲೇಶ್ವರಗಳನ್ನು ಹಾಯ್ದು ಪೆರಂಪುಯ ನದಿಯ ವರೆಗೆ ನುಗ್ಗಿ – ಆ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. ಸೋಮಶೇಖರ ನಾಯಕನು ಕಾಂಞಂಗಾಡಿನಲ್ಲಿ ‘ಹೊಸದುರ್ಗ’ವನ್ನು ಕಟ್ಟಿಸಿ ಫೌಜನ್ನಿಟ್ಟು ಭದ್ರಪಡಿಸಿದನು. ಈ ಮಹಾ ಕಾಳಗದಲ್ಲಿ ಈಶ್ವರಯ್ಯನ ಪರಾಕ್ರಮಕ್ಕೆ ಕಲಶವಿಟ್ಟಿತು. ಅವನ ಅದಟು, ಆರ್ಪು, ಅಂಗವಣೆಗಳನ್ನು ಕಂಡು ಬಾರಕೂರು ಸೂರಪ್ಪಯ್ಯನೇ ಮೊದಲಾದ ಚಮೂಪತಿಗಳು ಶಹಭಾಸ್ ಎಂದರು. ಶತ್ರು ಸೈನ್ಯವು ಬೆರಗಾಯಿತು. ಸೋಮಶೇಖರ ನಾಯಕನು ಸ್ವತಹ ಅವನ ರಣವಿಕ್ರಮದ ಆಯತಿಕೆಯನ್ನು ಕೊಂಡಾಡಿ ಅವನನ್ನು ದಳವಾಯಿ ಪದವಿಗೇರಿಸಿ ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದನು.

ಬಳಿಕ ಸೋಮಶೇಖರ ನಾಯಕನು ತುಳುನಾಡಿನ ವ್ಯವಸ್ಥೆಗಿಳಿದನು. ಆಗ ತುಳುರಾಯರೆಲ್ಲ ಕೆಳದಿಯ ದೊರೆತನವನ್ನು ಲೆಕ್ಕಿಸದೆ ಕಪ್ಪಕಾಣಿಕೆಗಳನ್ನು ಕೊಡದೆ ಕಂಡು ನಡೆಯದೆ ಮನ ಬಂದಂತೆ ವರ್ತಿಸುತ್ತಿದ್ದರು. ಸೋಮಶೇಖರ ನಾಯಕನು ಅವರ ವಿಶಾಲ ರಾಜ್ಯಗಳ ಬಹುಭಾಗವನ್ನು ಕಿತ್ತುಕೊಂಡನು. ಅವರ ಆಯ ಬೀಯಗಳನ್ನು ಬಣಿತೆಗೆ ತಂದು ಅವರು ಕೊಡತಕ್ಕ ಕಪ್ಪಕಾಣಿಕೆ ಹಣ ಮಣಿಹಗಳನ್ನು ಏರಿಸಿದನು. ತೆಂಗು ಮೊದಲಾದ ಫಲಮರಗಳಿಗೆ ಕಂದಾಯವನ್ನು ನಿಗದಿ ಮಾಡಿದನು. ಆಪತ್ತು ಅನುವರ ಬಂದಲ್ಲಿ ಆಳು ಅಂಬು ಅರಿಕೊಪ್ಪರಿಗೆಯಿತ್ತು ನೆರವಾಗಬೇಕೆಂದು ಕಟ್ಟು ಮಾಡಿದನು. ಈ ಕಟ್ಟು ಕಟ್ಟಳೆಗಳನ್ನು ಮೀರಿ ನಡೆಯದಂತೆ ಅಲ್ಲಲ್ಲಿ ಒಡೆಯರನ್ನು ನೇಮಿಸಿದನು. ಹೀಗೆ ತುಳುರಾಯರ ಮಲೆಪನ್ನು ಇಳಿಸಿದನು.

ಊರಿನ ಎಲ್ಲ ಕೂಟ ಸ್ಥಾನ ಪಂಚಾಯತಿಗಳಿಗೆಲ್ಲ ಅವನೇ ಅಗ್ರಣಿ. ಅವನ ಮಾತಿಗೆ ಇದಿರಿಲ್ಲ. ಸೀಮೆಯ ಸಾವಿರದೈನೂರು ಆಳಿಗೆ ಅವನಲ್ಲಿ ಅಂಥ ಆದರಾಭಿಮಾನ. ಜಾತ್ರೆ, ಸಮಾರಾಧನೆ, ಅಯನ, ಕಂಬಳಗಳಿಗೆ ಹಣ ಸೂರೆಗುಡುತ್ತಿದ್ದನು. ಅವನ ಆ ದೊಡ್ಡ ಮನೆಗೆ ಹಸಿವಿನಿಂದ ಹೋದವರು ಬರಿ ಹೊಟ್ಟೆಯಲ್ಲಿ ಬಂದುದಿಲ್ಲ. ಸಹಾಯ ಬೇಡಲು ಹೋದವರು ಬರಿಗೈಯಲ್ಲಿ ಮರಳಿದುದಿಲ್ಲ. ಇತಿಗಳಿಗೆಲ್ಲ ಅವನೇ ಮೊಕ್ತೇಸರ. ಶುಭ ಶೋಭನಗಳಿಗೆ ಅವನಿಗೆ ಓಲಗದ ಹೇಳಿಕೆ. ಮದುವೆ ಮುಂಜಿಗಳಲ್ಲಿ ಅವನ ಮನೆಗೆ ಮೊದಲು ಸೇಸೆಯ ಮರ್ಯಾದೆ. ಅವನು ಹೋದಲ್ಲೆಲ್ಲ ಅವನಿಗೆ ಮೂರು ಮಣೆಯ ಮನ್ನಣೆ – ಒಂದು ಅವನ ಖಡ್ಗಕ್ಕೆ. ಒಂದು ಮುಂಡಾಸು ಇರಿಸುವುದಕ್ಕೆ, ಒಂದು ಅವನ ಆಸನಕ್ಕೆ. ಎಲ್ಲಿ ಹೋದರೂ ಅವನ ಮಾತುಕತೆ ನಡೆಯುತ್ತಿತ್ತು. ನಡೆದು ನಡೆದು ಅದು ಇಕ್ಕೇರಿಯ ಹೊನ್ನಾಗಿತ್ತು.

ಆ ಕಾಲದಲ್ಲಿ ಇಟ್ಟಲ ರಾಜ್ಯದಲ್ಲಿ ‘ದೋರ್ದಂಡ ವಿದಾಯ ಶ್ರುತ ಪ್ರತಾಪ’ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಪ್ರಜಾರಂಜಕನಾಗಿ ರಾಜ್ಯವನ್ನಾಳುತ್ತಿದ್ದನು. ಅವನ ಒರ್ನುಡಿಯು ನಿಲವು, ಗುಣೋನ್ನತಿ, ಆರ್ಪುಗಳ ಬೆಳ್ಜಸವು ಹಬ್ಬಿತ್ತು. ಕೆಳದಿಯ ಅಧಿರಾಜರಿಗೆ ಅಧೀನನಾಗಿದ್ದನು. ಆದರೆ ಸೋಮಶೇಖರ ನಾಯಕನು ಅವನ ಒಳವನ್ನು ಅರಿತಿರಲಿಲ್ಲ. ಹೊಸ ಕಟ್ಟುಕವಲುಗಳಿಗೆ ಹೆಗ್ಗಡೆಯೂ ಕಟ್ಟುಬಿದ್ದಿದ್ದನು. ಹೇರಿಸಲ್ಪಟ್ಟ ಕಪ್ಪ ಕಾಣಿಕೆ ಕರ ಕಂದಾಯಗಳನ್ನು ಅವನೂ ತೆರದೆ ನಿರ್ವಾಹವಿರಲಿಲ್ಲ. ಆದರೆ ತೆರುವಷ್ಟು ರಾಜಾದಾಯವಿರಲಿಲ್ಲ. ಸೀಮೆಯ ಹದಿನೆಂಟು ದೇವಸ್ಥಾನ ಹಲವಾರು ಧಾರ್ಮಿಕ ವಿನಿಯೋಗಗಳಿಗೆ ತತ್ವಾರವಾಯಿತು. ಕಪ್ಪ ಕಾಣಿಕೆಯೆಲ್ಲ ಬಾಕಿಬಿತ್ತು. ನಾಯಕನ ಕಟ್ಟಾಣತಿಯಂತೆ ಹೆಗ್ಗಡೆಗೂ ಸೆರೆಮನೆ ಪ್ರಾಪ್ತಿಯಾಯಿತು. ಕಪ್ಪಕಾಣಿಕೆಯನ್ನು ತೆರಲಾರದೆ ಹೆಗ್ಗಡೆಯು ಕೆಳದಿಯ ಸೆರೆಮನೆಯಲ್ಲಿ ಸೊರಗುತ್ತಿದ್ದನು. ಕಪ್ಪವನ್ನು ಹೇಗೆ ತುಂಬಲಿ? ಯಾರ ಮೊರೆ ಸಾರಲಿ? ಏನು ಮಾಡಲಿ? ಎಂಬ ಎದೆಗುದಿಯಿಂದ ಬೇವಸಪಡುತ್ತಿದ್ದನು.

ಆಗ ಈಶ್ವರಯ್ಯನು ಇಕ್ಕೇರಿಯ ದಳವಾಯಿಯಾಗಿ ಆಸ್ಥಾನದಲ್ಲಿ ವರ್ಚಸ್ಸನ್ನು ಬೀರಿದ್ದನು. ಸೆರೆಮನೆಯ ಅಧಿಕಾರವೂ ಅವನ ಕೈಲ್ಲಿದ್ದಿತು. ಅವನು ರಾಜಕಾರ್ಯದ ಮೇಲೆ ಇಟ್ಟಲ ಸೀಮೆಯನ್ನು ಹಲವು ಬಾರಿ ಸಂದರ್ಶಿಸಿದ್ದನು. ಹೆಗ್ಗಡೆಯನ್ನು ಬಲ್ಲವನಾಗಿದ್ದನು. ಅವನಲ್ಲಿ ಗೌರವಾದರ ತಳೆದಿದ್ದನು. ಅವನಂಥ ಸ್ವಾಮಿನಿಷ್ಠ ಸಾಮಂತನಿಗೆ ಈ ದುರ್ದೆಸೆ ಬಂದುದಕ್ಕಾಗಿ ಸಂತಾಪ ಪಡುತ್ತಿದ್ದನು. ಅವಸರ ದೊರೆತಾಗಲೆಲ್ಲ ಅವನ ಸ್ವಾಮಿನಿಷ್ಠೆ ಧರ್ಮಶ್ರದ್ಧೆಯ ಕುರಿತು ಪ್ರಧಾನಿ ನಿರ್ವಾಣಯ್ಯ, ಅವನ ತಮ್ಮ ಗುರುವಪ್ಪ ಮೊದಲಾದ ಪ್ರಮುಖರೊಡನೆ ಪ್ರಸ್ತಾಪಿಸುತ್ತಾ ಬಂದನು. ಅರಮನೆಯಲ್ಲೆಲ್ಲ ಅವನ ಗುಣೋನ್ನತಿಯ ಮಾತು ಬೆಳೆಯಿತು. ದೊರೆ ಕಿವಿಗೂ ಮುಟ್ಟಿತು.

ಮಹಾನವಮಿಯ ಸಾಯಂಕಾಲ ಸಮಯ. ಈಶ್ವರಯ್ಯನು ಸೆರೆಮನೆಯ ಸಂದರ್ಶನಕ್ಕೆ ಬಂದವನು ಇಟ್ಟಲರಸನನ್ನು ಕಂಡು ಸಲುಗೆಯಿಂದ ಮಾತೆತ್ತಿದನು.
‘ಸುಖವಷ್ಟೆ ಅರಸರೆ?’
‘ಸೆರೆಮನೆಯ ಸುಖ ದಳವಾಯಿಗಳೆ.’
‘ನಿಮ್ಮ ಸುಖಕ್ಕಾಗಿ ಎಚ್ಚರ ವಹಿಸಲಾಗಿದೆ.’
‘ಅದನ್ನು ಬಲ್ಲೆನು ದಳವಾಯಿಗಳೇ. ನಿಮ್ಮ ಉಪಕಾರವನ್ನೆಂದಿಗೂ ಮರೆಯಲಾರೆನು. ಆದರೆ ಸುಖದ ವಿಚಾರ ಹೇಳಿದನಷ್ಟೆ. ಇವತ್ತು ಈ ಸೆರೆ. ನಾಳೆ ಅರಮನೆಯ ಸೆರೆ. ಬದುಕೇ ಒಂದು ಸೆರೆ. ಈ ಸೆರೆಯಿಂದ ಬಿಡುಗಡೆಯೆಂದಿಗೋ? ಸುಖವೆಲ್ಲಿಯೋ? ಕಾಣೆ.’
‘ಸತ್ಯವನ್ನರಸುವ ನೀವು ಸುಖವನ್ನು ಕಂಡೇ ಕಾಣುವಿರಿ. ಈ ಸೆರೆಯಿಂದ ವಿಮೋಚನೆಗೊಳ್ಳುವಿರಿ. ಸೆರೆಮನೆಯ ಈ ಕುಲಿಮೆಯಲ್ಲಿ ನಿಮ್ಮ ಧರ್ಮಕೀರ್ತಿಯು ಪುಟಗೊಂಡಿದೆ. ಮಹಾರಾಜರಿಗೆ ನಿಮ್ಮ ಸ್ವಾಮಿನಿಷ್ಠೆಯ ಅರಿವಾಗಿದೆ. ನಾಳೆ ವಿಜಯ ದಶಮಿ. ಮಹಾರಾಜರು ಸಾಮಂತರಿಗೆಲ್ಲ ದರ್ಶನ ಕೊಡುವರು. ನೀವೇನು ಮಾಡುವಿರಿ?’
‘ನಾನೇನು ಮಾಡಲಿ? ಮಹಾರಾಜರನ್ನು ಬರಿಗೈಯಲ್ಲಿ ಕಾಣುವುದೇ?’
‘ಅದಕ್ಕಾಗಿ ಚಿಂತಿಸಬೇಡಿ ನೀವು. ಸಾವಿರ ಹೊನ್ನನ್ನು ನಾನಿಂದೇ ಒದಗಿಸಿ ಕೊಡುವೆನು. ಅದನ್ನು ಮಹಾರಾಜನಿಗೆ ಕಾಣಿಕೆಯಾಗಿ ಒಪ್ಪಿಸಿ, ಶ್ರೀಮಂತ ನಿರ್ವಾಣ ಶೆಟ್ಟರ ಹೊಣೆಯ ಮೇಲೆ ಕಪ್ಪದ ಹಣಕ್ಕೆ ಸ್ವಲ್ಪ ಅವಧಿಯನ್ನು ಕರುಣಿಸುವಂತೆ ಯಾಚಿಸಿಕೊಳ್ಳಿ. ನಿರ್ವಾಣ ಶೆಟ್ಟರನ್ನು ನಾನು ಒಪ್ಪಿಸುವೆನು.’

ಈಶ್ವರಯ್ಯನ ಅಂತಃಕರಣಪೂರ್ವಕವಾದ ಈ ಮಾತುಗಳನ್ನು ಕೇಳುತ್ತಿದ್ದಂತೆ ಹೆಗ್ಗಡೆಯ ಎದೆಯಾಳದಿಂದ ಕೃತಜ್ಞತೆಯು ಉಕ್ಕಿ ಬಂದು ಕಣ್ಣು ನೆನೆಯಿತು. ಕೊರಳು ಕಟ್ಟಿತು. ಅವನ ಚಿತ್ರ ಮುಗ್ಧಾವಸ್ಥೆಯನ್ನು ಕಂಡು ಈಶ್ವರಯ್ಯ ಅಲ್ಲಿ ನಿಲ್ಲಲಾರದಾದ. ವಿಜಯ ದಶಮಿಯ ಕೋಲಾಹಲ. ನಗರವೆಲ್ಲ ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿದೆ. ನಾಡಹಬ್ಬದ ಆನಂದವೇ ಆನಂದ. ಅರಮನೆಯಲ್ಲಿ ಜನರು ಕಿಕ್ಕಿರಿದು ನೆರೆದಿದ್ದಾರೆ. ಸೋಮಶೇಖರ ನಾಯಕನು ಪಾಲಕಿಯನ್ನೇರಿ ವೈಭವದ ಬನ್ನಿ ಮೆರವಣಿಗೆಯನ್ನು ಮುಗಿಸಿ ಐದಂಕಣದ ರಾಜ ಭವಂತಿಯ ಬಣ್ಣದ ಚಾವಡಿಯಲ್ಲಿ ಓಲಗ ಕೊಡುತ್ತಿದ್ದಾನೆ. ಮಂತ್ರಿ ಮನ್ನೆಯರು ಪರಿಜನರು ನೆರೆದಿದ್ದಾರೆ. ಸಾಮಂತರೆಲ್ಲ ಕಪ್ಪ ಕಾಣಿಕೆಗಳನ್ನು ಹಿಡಿದುಕೊಂಡು ಸಾಲುಕಟ್ಟಿ ನಿಂತಿದ್ದಾರೆ. ಕರಣಿಕನು ಯಿಟ್ಟಲರಸನ ಬಿರುದಿನ ಹೆಸರನ್ನು ಕರೆದನು. ಅವನು ಸೆರೆಮನೆಯಲ್ಲಿರುವನೆಂದು ಸೆರೆಮನೆಯಧಿಕಾರಿ ಈಶ್ವರಯ್ಯನು ಅರಿಕೆ ಮಾಡಿಕೊಂಡನು. ಅವನನ್ನು ಕರೆತರುವಂತೆ ಅಪ್ಪಣೆಯಾಯಿತು. ಭಟರು ಅವನನ್ನು ಕರೆತಂದು ಮುಂದೆ ನಿಲ್ಲಿಸಿದರು. ಹೆಗ್ಗಡೆಯು ‘ಮಹಾರಾಜರಿಗೆ ಜಯವಾಗಲಿ’ಎಂದು ಉದ್ದಂಡ ನಮಸ್ಕರಿಸಿದನು.
‘ಕಪ್ಪವನ್ನೇಕೆ ಒಪ್ಪಿಸಲಿಲ್ಲ ಅರಸರೇ? ನಿಮ್ಮ ಅರಿಕೆಯೇನಿದೆ?’ ಎಂದು ಮಹಾರಾಜನು ಕೇಳಿದನು.

ಆಗ ಈಶ್ವರಯ್ಯನು ಇಕ್ಕೇರಿಯ ದಳವಾಯಿಯಾಗಿ ಆಸ್ಥಾನದಲ್ಲಿ ವರ್ಚಸ್ಸನ್ನು ಬೀರಿದ್ದನು. ಸೆರೆಮನೆಯ ಅಧಿಕಾರವೂ ಅವನ ಕೈಲ್ಲಿದ್ದಿತು. ಅವನು ರಾಜಕಾರ್ಯದ ಮೇಲೆ ಇಟ್ಟಲ ಸೀಮೆಯನ್ನು ಹಲವು ಬಾರಿ ಸಂದರ್ಶಿಸಿದ್ದನು. ಹೆಗ್ಗಡೆಯನ್ನು ಬಲ್ಲವನಾಗಿದ್ದನು. ಅವನಲ್ಲಿ ಗೌರವಾದರ ತಳೆದಿದ್ದನು. ಅವನಂಥ ಸ್ವಾಮಿನಿಷ್ಠ ಸಾಮಂತನಿಗೆ ಈ ದುರ್ದೆಸೆ ಬಂದುದಕ್ಕಾಗಿ ಸಂತಾಪ ಪಡುತ್ತಿದ್ದನು. ಅವಸರ ದೊರೆತಾಗಲೆಲ್ಲ ಅವನ ಸ್ವಾಮಿನಿಷ್ಠೆ ಧರ್ಮಶ್ರದ್ಧೆಯ ಕುರಿತು ಪ್ರಧಾನಿ ನಿರ್ವಾಣಯ್ಯ, ಅವನ ತಮ್ಮ ಗುರುವಪ್ಪ ಮೊದಲಾದ ಪ್ರಮುಖರೊಡನೆ ಪ್ರಸ್ತಾಪಿಸುತ್ತಾ ಬಂದನು. ಅರಮನೆಯಲ್ಲೆಲ್ಲ ಅವನ ಗುಣೋನ್ನತಿಯ ಮಾತು ಬೆಳೆಯಿತು. ದೊರೆ ಕಿವಿಗೂ ಮುಟ್ಟಿತು.

‘ಮಹಾಪ್ರಭು! ಕೆಳದಿಯ ರತ್ನ ಸಿಂಹಾಸನಕ್ಕೆ ಇಟ್ಟಲ ಹೆಗ್ಗಡೆಯವರೆಂದೂ ಎರಡೆಣಿಸಿದವರಲ್ಲ. ಧರ್ಮವನ್ನು ಮೀರಿ ನಡೆದವರಲ್ಲ. ಸ್ವಾಮಿ ಭಕ್ತಿಗೆ ತಪ್ಪಿದವರಲ್ಲ. ಕಪ್ಪಕಾಣಿಕೆಗಳು ರಾಜಾದಾಯಕ್ಕೆ ಮಿಕ್ಕಿರುವುದರಿಂದ ಬಾಕಿಯಾಗಿ ಹೋದುದು ನಿಜ. ಅದಕ್ಕಾಗಿ ಕೊರಗುತ್ತಿದ್ದೇನೆ. ಶ್ರೀಮಂತ ನಿರ್ವಾಣ ಶೆಟ್ಟರ ಹೊಣೆಯ ಮೇಲೆ ಸ್ವಲ್ಪ ಅವಧಿಯನ್ನು ಕರುಣಿಸುವ ಕೃಪೆಯಾಗಬೇಕು’ ಎಂದು ಅರಿಕೆ ಮಾಡಿಕೊಂಡು ಸಾವಿರ ಹೊನ್ನು ಕಾಣಿಕೆಯಿಟ್ಟು ಹೆಗ್ಗಡೆಯು ಕೈ ಮುಗಿದನು. ಹೆಗ್ಗಡೆಯ ಧೀರವೃತ್ತಿ ವೀರಕಳೆಯನ್ನು ಕಂಡು ಅವನ ದೈನ್ಯೋಕ್ತಿಯನ್ನು ಕೇಳಿ ಮಹಾರಾಜನಿಗೆ ಹರ್ಷವಾಯಿತು.

‘ಅರಸರೇ! ಇಟ್ಟಲರಸರೆಲ್ಲ ಕೆಳದಿ ಸಿಂಹಾಸನದ ಏಕನಿಷ್ಠ ಭಕ್ತರೆಂದು ಕೇಳಿರುವೆವು. ನಿಮ್ಮ ಈ ಸ್ವಾಮಿನಿಷ್ಠೆ ಧರ್ಮಕೀರ್ತಿಗಳು ಸಾತತ್ಯವಾಗಿ ನಡೆದು ಬರಲಿ! ನಿಮ್ಮ ಅರಿಕೆಯಂತೆ ಅವಧಿಯನ್ನು ಕರುಣಿಸಲಾಗುವುದು. ನಿಮ್ಮ ಊರ್ಜಿತ ಧರ್ಮಕಾರ್ಯಗಳಿಗಾಗಿ ನೀವು ತೆರತಕ್ಕ ಕಪ್ಪ ಕಾಣಿಕೆಯನ್ನು ಅರ್ಧಕ್ಕಿಳಿಸಿರುವೆವು’ ಎಂದು ಮಹಾರಾಜನು ಅವನನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು ಉಚಿತಾಭರಣಾಂಬರ ತಾಂಬೂಲಗಳನ್ನಿತ್ತು ಸತ್ಕರಿಸಿ ಬೀಳ್ಕೊಟ್ಟನು. ಸೀಮೆಗೆ ಮರಳಿದೊಡನೆ ಯಿಟ್ಟಲ ಹೆಗ್ಗಡೆಯು ಹೊಣೆ ನಿತ್ತು ಮಾನವನ್ನುಳಿಸಿದ ನಿರ್ವಾಣ ಶೆಟ್ಟಿಗೆ ತನ್ನ ಹಿಡಿತದ ಕಾಡುಮಠದಲ್ಲಿಯೂ, ಇಷ್ಟೆಲ್ಲಕ್ಕೂ ಕಾರಣನಾದ ದಳವಾಯಿ ಈಶ್ವರಯ್ಯನಿಗೆ ಪುಣಚೆ ಗ್ರಾಮದಲ್ಲಿಯೂ ಜಹಗೀರನ್ನು ಮಾನ್ಯಬಿಟ್ಟು ಶಾಸನವಿರಿಸಿದನು. ಈಶ್ವರಯ್ಯನು ದಳವಾಯಿ ಪದವಿಯಿಂದ ನಿವೃತ್ತನಾದ ಮೇಲೆ ಈ ಮಾನ್ಯದ ಭೂಮಿಯಲ್ಲಿ ಮಹಿಷಿಮರ್ದಿನಿಯ ಪಾದತಲದಲ್ಲಿ ನೆಲೆಗೊಂಡನು. ಅವನು ವಾಸವಾಗಿದ್ದ ಹೆಸರ್ಗೊಂಡ ಮನೆಯೇ ಈ ದೊಡ್ಡ ಮನೆ.

ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ:
ಮೊದಲಿನ ಎರಡು ಬರಹಗಳಲ್ಲಿ ಮೂಡುಬಿದ್ರಿಯ ಚೌಟ ಅರಸನೊಬ್ಬನನ್ನು ವಿಜಯನಗರದ ಅರಸರು ಹಿಡಿತದಲ್ಲಿ ಇಟ್ಟುಕೊಂಡಿದ್ದ ರೀತಿಯನ್ನು ಗಮನಿಸಿದೆವು. ಕೆಳದಿಯ ಅರಸರ ಕಾಲದಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಬೇಕಲ ರಾಮ ನಾಯಕರ ‘ದೊಡ್ಡಮನೆ ಈಶ್ವರಯ್ಯ’ ಎಂಬ ಕತೆಯಲ್ಲಿ ತುಳುನಾಡಿನ ಅರಸ ವಿಟ್ಲದ ಡೊಂಬ ಹೆಗ್ಗಡೆಗೆ ಕೆಳದಿ ಅರಸರ ಕಪ್ಪ ಒಪ್ಪಿಸಲು ಕಷ್ಟವಾದುದು, ಅವನನ್ನು ಬಂಧಿಸಿ ಸೆರೆಮನೆಯಲ್ಲಿಟ್ಟುದು, ಅವನು ದಳವಾಯಿ ಈಶ್ವರಯ್ಯನ ಸಹಾಯದಿಂದ, ನಿರ್ವಾಣ ಸೆಟ್ಟಿ ಎಂಬವನಿಂದ ಸಾಲವೆತ್ತಿ ಅರಸನಿಗೆ ಒಪ್ಪಿಸಿದುದು, ಅವನ ವಿಧೇಯತೆಯನ್ನು ಮೆಚ್ಚಿದ ಕೆಳದಿಯ ಅರಸ ಸೋಮಶೇಖರ ನಾಯಕನು ಕಪ್ಪವನ್ನು ಅರ್ಧಕ್ಕರ್ಧ ಇಳಿಸಿ ಬಾಕಿಯನ್ನು ಕೊಡಲು ಸಮಯಾವಕಾಶ ಕೊಟ್ಟುದು ಮುಖ್ಯವಾಗಿ ಬರುತ್ತದೆ.
ಹೀಗೆ ತುಳುನಾಡಿನ ಅರಸರನ್ನು ಅಂಕೆಯಲ್ಲಿಟ್ಟುಕೊಳ್ಳುವುದಕ್ಕೆ ಅವರನ್ನು ಉಪಾಯವಾಗಿ ಬಂಧಿಸಿ ತಂದು ವರ್ಷಗಟ್ಟಲೆ ಸೆರೆಮನೆಯಲ್ಲಿ ಕೊಳೆಹಾಕುವುದು ವಿಜಯನಗರದ ಅರಸರ ಮತ್ತು ಕೆಳದಿಯವರ ಒಂದು ಉಪಾಯವಾಗಿತ್ತು. ಮೂಡಬಿದಿರೆಯ 2 ನೆ ಭೋಜರಾಯ ಮತ್ತು 3 ನೆ ಭೋಜರಾಯರನ್ನು ಹೀಗೆ ಬಂಧಿಸಿಡಲಾಗಿತ್ತು ಎಂದು ಕೈಫಿಯತ್ತಿನಲ್ಲಿ ಹೇಳಲಾಗಿದೆ. ಗಣಪತಿ ರಾವ್ ಐಗಳ ಅವರ ‘ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’ ಪುಸ್ತಕದಲ್ಲಿ, ಮೂಡಬಿದಿರೆಯ ಚೌಟ ರಾಣಿ 3 ನೇ ಅಬ್ಬಕ್ಕ ದೇವಿಯನ್ನು (1726 – 1749) ಇಕ್ಕೇರಿಯ ಅರಸು ಸೋಮಶೇಖರ ನಾಯಕನು ಬಂಧಿಸಿ ಬಿದನೂರಿಗೆ ಕೊಂಡೊಯ್ಯುವ ಯೋಜನೆ ಹಾಕಿದ್ದನು, ಅವಳು ಉಪಾಯವಾಗಿ ತಪ್ಪಿಸಿಕೊಂಡು ಮಲಬಾರು ಜಿಲ್ಲೆಯ ಚರಕಲ್ಲು ಎಂಬಲ್ಲಿ ನೆಲೆಸಿದ್ದಳು ಎಂಬ ವಿಷಯ ಬರುತ್ತದೆ. ಅಲ್ಲದೆ ಕೆಳದಿಯವರ ಬಗ್ಗೆ ಜನರಲ್ಲಿ ಇದ್ದ ಹೆದರಿಕೆಯನ್ನು, ಅವರ ಮಿತಿಮೀರಿದ ಕಪ್ಪ ಕಂದಾಯ ಹೇರಿಕೆಗಳನ್ನು, ಅದನ್ನು ಸಂಗ್ರಹಿಸಿಕೊಡಲು ತುಳುನಾಡ ಅರಸರಿಗೆ ಕಷ್ಟವಾಗುತ್ತಿದ್ದುದನ್ನು ‘ದೊಡ್ಡಮನೆ ಈಶ್ವರಯ್ಯ’ ಕತೆಯಿಂದ ತಿಳಿಯಬಹುದು.