Advertisement
ದಿಲೀಪ್ ಎನ್ಕೆ ಬರೆದ ಈ ದಿನದ ಕವಿತೆ

ದಿಲೀಪ್ ಎನ್ಕೆ ಬರೆದ ಈ ದಿನದ ಕವಿತೆ

ಸ್ವಾಭಿಮಾನದ ಗುಡ್ಡ

ಹೌದು
ನಾ ಸ್ಪರ್ಧಾಳು ಸೋತಿದ್ದೇನೆ ಗೆಲ್ಲುವ ಛಲವನ್ನಲ್ಲ
ಬದುಕು ಚಕ್ರವ್ಯೂಹ

ಹೌದು
ನಾ ಮೈಗಣ್ಣ ಕಳೆದಿದ್ದೇನೆ ಮೆಟ್ಟಿಲಾಗುವ ನಿಂದನೆಗಳನ್ನಲ್ಲ ಬೇವು ನಾಲಗೆಗೆ ವೈರಿ

ಹೌದು
ನಾ ಮುಂಗೋಪಿ
ಕ್ಷಮಿಸಿಬಿಡುತ್ತೇನೆ
ಅಳುವಿನೆಡೆಯ ಗಹಗಹಿಕೆಯನ್ನಲ್ಲ
ಹಲಸು ರುಚಿಗೊಡೆಯ

ಹೌದು
ನಾ ನಾಸ್ತಿಕ ಸಂಕೀರ್ತಿಸುತ್ತೇನೆ ಗೊಡ್ಡುತನಗಳನ್ನಲ್ಲ ಒಬ್ಬರಿಗಾದವರು ದೇವರೇ

ಹೌದು
ನಾ ಸ್ವಾಭಿಮಾನದ ಗುಡ್ಡ ಅಪೇಕ್ಷಿಸುತ್ತೇನೆ
ಬೆವರತ್ತದ ಉಪ್ಪನ್ನಲ್ಲ
ಹಸಿವು ಸನ್ಮಿತ್ರ

About The Author

ಡಾ. ದಿಲೀಪ್ ಎನ್ಕೆ

ಡಾ. ದಿಲೀಪ್ ಎನ್ಕೆ ಚಾಮರಾಜನಗರದ ಕೊಳ್ಳೇಗಾಲದವರು. ಋತುಮಾನಕ್ಕಷ್ಟೇ ಪ್ರೀತಿ (ಕವನ ಸಂಕಲನ), ಬಲಿಷ್ಠ (ಕಥಾ ಸಂಕಲನ), ಚೆಗ್ಗಿ- ಮಾರಿಕುಣಿತದ ಸೊಲು (ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. “ಕನ್ನಡ ದಲಿತ ಕಥಾಸಾಹಿತ್ಯ : ಅಕ್ಷರಸ್ಥ ದಲಿತರ ತಲ್ಲಣಗಳು” ಇವರ ಪಿ.ಎಚ್.ಡಿ ಮಹಾಪ್ರಬಂಧ

1 Comment

  1. Ranganatha N

    ಕವಿತೆ ಸರಳವಾಗಿ ತಾರ್ಕಿಕವಾಗಿ ವಿಚಾರ ಮಂಡಿಸುತ್ತದೆ. ಅದೇ ಸಂದರ್ಭದಲ್ಲಿ ಸ್ಪಷ್ಟವಾಗಿ ತನ್ನ ನಿಲುವುಗಳನ್ನು ಸಾಲು ಸಾಲಾಗಿ ಪ್ರತಿಕ್ರಿಯೆ ನೀಡುತ್ತಿದೆ. ಇನ್ನು ಉತ್ತಮ ಕಾವ್ಯ ಶೈಲಿಯನ್ನು ರೂಡಿಸಿಕೊಳ್ಳಬಹುದಾದ ಸಾಧ್ಯತೆಯಿದೆ

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ