ಜರ್ಮನಿಯಿಂದ ಕನ್ನಡಕ್ಕೆ ಬಂದ ‘ಈಡಾ’
ಕ್ಷಣ ಮೌನ. ಉರ್ಸುಲಾಳ ಜೊತೆ ಮಾತನಾಡದೆಯೇ ಹಾಯಾಗಿ ಕುಳಿತಿರಬಹುದು. ಅವಳು ಪೆದ್ದುಪೆದ್ದಾಗಿ ಏನೇನೋ ಪ್ರಶ್ನೆಗಳನ್ನು ಕೇಳುವುದಿಲ್ಲ. ತನ್ನ ಮೇಲೆ ಹುಡುಗನೊಬ್ಬ ಬಂದೆರಗಿದ ಘನವಾದ ವಿಷಯವನ್ನು ಹಂಚಿಕೊಳ್ಳಲು ಮಾತ್ರ ಬಾಯಿ ತೆರೆಯುವಳು. ಕೆಲವೊಮ್ಮೆ ನಾವಿಬ್ಬರೂ ಒಂದೇ ಬೆಂಚಿನ ಮೇಲೆ ಪಕ್ಕಪಕ್ಕದಲ್ಲೇ ಸುಮಾರು ಹೊತ್ತು ಕುಳಿತು ಒಂದೇ ಒಂದು ಶಬ್ದವನ್ನೂ ಉಸುರದೆ ಹೋದಂತಹ ದಿನಗಳಿವೆ. ನೀರಿನಿಂದ ಹೊರಬಂದು ಕಣ್ಣುಗಳನ್ನು ಮುಚ್ಚಿಕೊಂಡು ಬಿಸಿಲಿನ ಶಾಖಕ್ಕೆ ಮೌನವಾಗಿ ಮೈಯೊಡ್ಡಿ ಕುಳಿತಂತಹ ದಿನಗಳಿವೆ.
ಜರ್ಮನಿಯ ಕಾರೊಲೀನ ವಾಲ್ ಬರೆದ ‘22 ಬಾನೆನ್ʼ ಕಾದಂಬರಿಯನ್ನು ಹರ್ಷ ರಘುರಾಮ್ ಜರ್ಮನ್ ಭಾಷೆಯಿಂದ ನೇರವಾಗಿ ಕನ್ನಡಕ್ಕೆ ಅನುವಾದಿಸಿದ್ದು, ಈ ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ
ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ
‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ ಎನ್ನುತ್ತಾರೆ. ‘ಕಾಲ’ ಎನ್ನುವುದೇ ನಿಲ್ದಾಣವಾದರೆ ಅಲ್ಲಿ ಚರಿತ್ರೆ, ಸಂಸ್ಕೃತಿ, ನಾಗರಿಕತೆ ಇತ್ಯಾದಿಗಳು ಬಂದು ಹೋಗುತ್ತಿರುತ್ತವೆ. ಹೇಗೆ ಕುಂಬಳೆಯ ರೈಲು ನಿಲ್ದಾಣದಲ್ಲಿ ಮದರಾಸು ಮೇಲ್, ಜನತಾ, ಜಯಂತಿ ಮೊದಲಾದ ವೇಗಧೂತ ರೈಲುಗಳು ನಿಲ್ಲುವುದಿಲ್ಲವೋ ಹಾಗೆ ಅನುಸರಿಸಲಾಗದ, ಹೊಂದಿಕೊಳ್ಳಲಾರದವು ಸರ್ರನೆ ಸರಿದು ಹೋಗುತ್ತವೆ.
ಇಂದು ಕೆ.ವಿ. ತಿರುಮಲೇಶರ ಹುಟ್ಟುಹಬ್ಬ. ಕಳೆದ ವರ್ಷ ತೀರಿಹೋದ ಅವರ ನೆನಪಿಗೆ ಅವರ ‘ಅವಧ’ ಕವನ ಸಂಕಲನದ ಕುರಿತ ಸುಮಾವೀಣಾ ಬರಹ ಇಲ್ಲಿದೆ
ಚಕ್ರವ್ಯೂಹದೊಳಗಿನ ಮಾಯಾಲೋಕ…: ಗೊರೂರು ಶಿವೇಶ್ ಬರಹ
ಕಾದಂಬರಿಯ ಕೊನೆಯಲ್ಲಿ ಆ ಕಡತ ಮುಸುಕುಧಾರಿಗಳ ಕೈಗೆಸಿಕ್ಕು ಅದರ ಮಹತ್ವ ತಿಳಿಯದ ಅವರು ನದಿನೀರಿಗೆ ಎಸೆದು ಅದು ಬಿಡಿಬಿಡಿಯಾಗಿ ಬಿದ್ದು ನೀರುಪಾಲಾಗುತ್ತದೆ. ಇದ್ದ ಒಂದು ಪ್ರತಿಯೂ ಮಾಯವಾದರೂ ಎಲ್ಲಿಯಾದರೂ ಮತ್ತೊಂದು ಪ್ರತಿಯನ್ನು ಹುಡುಕಿಯೆ ತೀರುತ್ತೇನೆ ಮತ್ತು ಅದರ ಸಹಾಯದಿಂದ ರತ್ನಮಾಲಾ ವಜ್ರವನ್ನು ಪಡೆದೆ ತೀರಬೇಕೆಂದು, ಮುಂದೆ ಅದನ್ನು ಹಂಚಿಕೊಳ್ಳಬಹುದೆಂದು ರಾಜಪ್ಪ ತಿಳಿಸಿ, ಅದಕ್ಕೆ ಮೂವರು ಒಪ್ಪಿ ಜುಗಾರಿಕ್ರಾಸ್ನ ಬಸ್ ಹತ್ತುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ನೆನ್ನೆ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ, ಅದರ ನಿಮಿತ್ತ ತೇಜಸ್ವಿಯವರ “ಜುಗಾರಿ ಕ್ರಾಸ್” ಕೃತಿಯ ಕುರಿತು ಗೊರೂರು ಶಿವೇಶ್ ಬರಹ
ಶಾಪ ವಿಮೋಚನೆಯ ಹಂಬಲದ ಮಹತ್ವಾಕಾಂಕ್ಷಿ ಕಥನಗಳು: ಗೋವಿಂದರಾಜು ಕಥಾಸಂಕಲನದ ಮುನ್ನುಡಿ
‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ತಮ್ಮ ಆಶಯ ಮತ್ತು ಭಿನ್ನ ದೇಹದ ಮೂಲಕ ಗಮನಸೆಳೆಯುತ್ತವೆ ಹಾಗೂ ಕಥೆಗಾರನ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಹುಟ್ಟಿಸುತ್ತವೆ. ಭಾವಾವೇಶಕ್ಕೆ ಒಳಗಾಗದೆ ಒಡಲ ಸಂಕಟವನ್ನು ಕಲೆಯಾಗಿಸುವುದು ಸಾಧ್ಯವಾಗಿರುವುದರಿಂದಲೇ, ಈ ಕಥೆಗಳು ಓದುಗರೊಳಗೆ ತಮ್ಮ ಕಂಪನಗಳನ್ನು ವಿಸ್ತರಿಸಿಕೊಳ್ಳುವ ಕಸುವು ಹೊಂದಿವೆ.
ಗೋವಿಂದರಾಜು ಎಂ ಕಲ್ಲೂರು ಕಥಾ ಸಂಕಲನ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ
“ನಿಯುಕ್ತಿ ಪುರಾಣ”…: ದೀಪಾ ಫಡ್ಕೆ ಬರಹ
`ನಿಯುಕ್ತಿ ಪುರಾಣ’ದ ಕೃತಿಕಾರ ಮೈಸೂರು ಒಡೆಯರ ಚರಿತ್ರೆಯ ಕೆಲವು ಅಂಗಗಳನ್ನು ಅಥವಾ ಮುಖ್ಯ ಅಂಶಗಳನ್ನು ಇಟ್ಟುಕೊಂಡು ಅದಕ್ಕೆ ಕಲ್ಪನೆಯಿಂದ ರಕ್ತಮಾಂಸವನ್ನು ತುಂಬಿದ್ದಾರೆ. ಹದಿನೈದು, ಹದಿನಾರು ಮತ್ತು ಹದಿನೇಳನೇ ಶತಮಾನದ ಮಹಿಷೂರಿನ ನಾಲ್ವಡಿ ಚಾಮರಾಜ ಒಡೆಯರು, ಐಮಡಿ ಚಾಮರಾಜ ಒಡೆಯರು ಮತ್ತು ರಾಜ ಒಡೆಯರ ಬದುಕನ್ನು ಬೋಳೊಡೆಯ, ಬೆಟ್ಟದೊಡೆಯ ಮತ್ತು ಮುನ್ನೊಡೆಯ ಎನ್ನುವ ಆಡು ಹೆಸರುಗಳನ್ನು ನೀಡಿ ಅವರ ಮೂಲಕ ಪುರಾಣವನ್ನು ಪೌರಾಣಿಕ, ಕಾಲ್ಪನಿಕ, ಜಾನಪದ ಮತ್ತು ಐತಿಹಾಸಿಕ ನೆಲೆಗಳಲ್ಲಿ ಪೋಣಿಸಿ ಕಥನವಾಗಿಸಿದ್ದಾರೆ.
ನಾಗರಾಜ ವಸ್ತಾರೆ ಕಾದಂಬರಿ “ನಿಯುಕ್ತಿ ಪುರಾಣ”ದ ಕುರಿತು ದೀಪಾ ಫಡ್ಕೆ ಬರಹ
ಎಗ್ ರೈಸ್ ತಿಂತೀರಿ ಸರ್ರ…?: ಗುರುಪ್ರಸಾದ ಕುರ್ತಕೋಟಿ ಕೃತಿಯ ಬರಹ
ಬಹುಶಃ ನಾನೂ ಯುವಕನಾಗಿದ್ದಾಗ ಅವನಂತೆಯೇ ಯೋಚಿದ್ದೆನೆ? ಇಲ್ಲವಲ್ಲ! ಎಲ್ಲರೂ ನಮ್ಮ ಹಾಗೆಯೇ ಯೋಚಿಸಬೇಕು ಅಂತಿಲ್ಲವಲ್ಲ! ನಾವೇನಾದರೂ ಪಟ್ಟಣದಲ್ಲಿ ಸುಖ ಇಲ್ಲ ಮಾರಾಯ ಅಂತ ಹೇಳಿದರೆ ಅಲ್ಲಿನವರು “ನಿಮ್ಮ ಹತ್ರ ರೊಕ್ಕ ಜಾಸ್ತಿ ಆಗಿ ಕೊಳಿತೈತಿ ಬಿಡ್ರಿ. ಅದಕ್ಕ ಹಿಂಗ ಮಾತಾಡತೀರಿ” ಅಂತ ಗೊಳ್ಳ ಅಂತ ನಗುತ್ತಾರೆ!
ಕೆಂಡಸಂಪಿಗೆಯಲ್ಲಿ ಪ್ರಕಟವಾದ ಗುರುಪ್ರಸಾದ ಕುರ್ತಕೋಟಿಯವರ ಅಂಕಣ ಬರಹ “ಗ್ರಾಮ ಡ್ರಾಮಾಯಣ” ಇದೀಗ ಪುಸ್ತಕ ರೂಪದಲ್ಲಿ ಅಚ್ಚಾಗುತ್ತಿದ್ದು, ಆಗಸ್ಟ್ ಕೊನೆಗೆ ಓದುಗರ ಕೈ ಸೇರಲಿದೆ. ಅದರ ಒಂದು ಬರಹ ನಿಮ್ಮ ಓದಿಗೆ
ಯಾವ ಭಾಷೆಯಲ್ಲೂ “ಎಲ್ಲವೂ” ಇರುವುದಿಲ್ಲ: ಡಾ. ಎಚ್.ಎಸ್. ಸತ್ಯನಾರಾಯಣ ಬರಹ
“ನೀನು ಇಂಗ್ಲಿಷನ್ನು ಕನ್ನಡ ಭಾಷೆಯ ಅಕ್ಷರ ಸಂಯೋಜನೆ ಜೊತೆ ಹೋಲಿಸಿ ಬರೆಯಬೇಡ. ನೀನು ಇಂಗ್ಲಿಷನ್ನು ಚೆನ್ನಾಗಿ ಕಲಿಯಬೇಕಾಗಿರುವುದು ನಿನ್ನ ಅಗತ್ಯಕ್ಕಾಗೇ ಹೊರತು ಇಂಗ್ಲಿಷಿನವರ ಅಗತ್ಯಕ್ಕಾಗಿ ಅಲ್ಲ. ನಿನಗೆ ಅದರಲ್ಲಿರುವ ಪ್ರಪಂಚದ ಜ್ಞಾನವೆಲ್ಲಾ ಬೇಕಾದರೆ ಈ ಸಬೂಬುಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ಕಲಿ ಅದು ಬಿಟ್ಟು ಕನ್ನಡದಲ್ಲೇ ಎಲ್ಲಾ ಇದೆ ಎಂದು ತಿಳಿದು ಕೂಪಮಂಡೂಕ ಆಗಬೇಡ.”
ಡಾ. ಎಚ್.ಎಸ್. ಸತ್ಯನಾರಾಯಣ ಅವರ “ತೇಜಸ್ವಿ ಪ್ರಸಂಗಗಳು” ಕೃತಿಯ ಕೆಲವು ಪ್ರಸಂಗಗಳು ನಿಮ್ಮ ಓದಿಗೆ
ಕತ್ತಿಯಲಗಿನ ಮೇಲಿನ ನಡಿಗೆ ಒಂಟಿ ನಡಿಗೆ: ಲಲಿತಾ ಪವಾರ ಕಾದಂಬರಿಯ ಪುಟಗಳು
ಕಮಲಮ್ಮನವರಿಗೆ ಕಸಿವಿಸಿಯಾಯಿತು. ತನ್ನ ಮಗಳ ಸೌಂದರ್ಯದ ಬಗ್ಗೆ ಇಡೀ ಕಾಲೇಜು, ನಮ್ ಏರಿಯಾದವರು ಮಾತನಾಡುತ್ತಾರೆಂದರೆ ನಮ್ಮ ಮನೆಯ ಮೇಲೆ ಅವರ ಕಣ್ಣು ಬಿದ್ದಿದೆ ಎಂದೇ ಅರ್ಥ. ನಾನಂತು ಕೆಲಸಕ್ಕೆ ಹೋಗಿ ಬಿಡುತ್ತೇನೆ, ಇವನು ಹೊರಗೆ ಹೊರಟರೆ ಮನೆಯಲ್ಲಿ ಕಾವ್ಯ ಒಬ್ಬಳೇ ಉಳಿದು ಬಿಡುತ್ತಾಳೆ. ಇಂದು ಸಂಜೆ ಮಹಡಿ ಮೇಲಿದ್ದಾಗ ಎದುರುಗಡೆ ಮನೆಯ ಹುಡುಗ ಇಣುಕಿಣುಕಿ ತನ್ನ ಮನೆಯನ್ನು ದೃಷ್ಟಿಸುತ್ತಿದ್ದುದು ಕಂಡು ಬಂದಿತ್ತು.
ಲಲಿತಾ ಪವಾರ ಹೊಸ ಕಾದಂಬರಿ “ಒಂಟಿ ನಡಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ
ನಿಜವಾದ ಸೋದರಮಾವ: ಕೆ. ಸತ್ಯನಾರಾಯಣ ಕೃತಿಯ ಬರಹ
ಬೆಂಗಳೂರಿನಿಂದ ಗೌಹಾತಿಗೆ ಹೊರಟಿದ್ದ ರೈಲಿನಲ್ಲಿ ಒಬ್ಬ ಕನ್ನಡಿಗ ಪ್ರಯಾಣಿಕರ ಪರಿಚಯವಾಯಿತು. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದರು. ಬೆಂಗಳೂರಿಗೆ ಬಂದು ಬಂಧು-ಮಿತ್ರರ ಜೊತೆ ಬದುಕುತ್ತಾರೆ ಎಂಬುದು ನನ್ನ ನಿರೀಕ್ಷೆ. ಆದರೆ ಅವರು ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಿ, ಗೌಹಾತಿಯಲ್ಲೇ ಖಾಯಂ ಆಗಿ ನೆಲೆಸಲು ಹೊರಟಿದ್ದರು. ಈಗ ನಾವು ಅಲ್ಲಿ ಜೀವನ ಲಯಕ್ಕೆ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ತಂದೆ-ತಾಯಿ ಇಬ್ಬರೂ ಖಾಯಿಲೆ ಬಿದ್ದಾಗ ನಮಗಾಗಿ ಬಂದವರು ನೆಂಟರಿಷ್ಟರಲ್ಲ, ನಮ್ಮ ಕಾಲೊನಿಯ ಅಸ್ಸಾಮಿ ಬಂಧುಗಳು. ಅವರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರೊಡನೆಯೇ ಮುಂದೆ ಬದುಕುವುದು ಎಂದುಬಿಟ್ಟರು.
ಕತೆಗಾರ ಕೆ. ಸತ್ಯನಾರಾಯಣ ಅವರ “ನನ್ನ ಪುಸ್ತಕಗಳ ಆತ್ಮಚರಿತ್ರೆ” ಕೃತಿಯ ಒಂದು ಬರಹ ನಿಮ್ಮ ಓದಿಗೆ









