ನೋವ ನುಂಗಿದ ಗಿರಣಿ

ನೋವ ನುಂಗಿಕೊಂಡರೂ ಗಂಟಲಿಗೆ ಹಗ್ಗ ಬಿಗಿದಿರಿ ಎಂಥಾ ವಿಪರ್ಯಾಸ
ಸತ್ತವನ ಶವದೆದುರು ಕತ್ತಲೆಯ ದೀಪ ಹಚ್ಚಿದಿರಿ
ಎಂಥಾ ವಿಪರ್ಯಾಸ

ಬೆರಳು ನುಂಗುವ ಹಸಿ ಗಿರಣಿ ವಿಷಾದವನ್ನೇ ಬಿಂಬಿಸುವಾಗ
ಎಲೆಗೆ ಮೀಸಲಿನ ಹೂವಿಗೆ ಗುಂಡಿಟ್ಟು ಕೊಂದಿರಿ ಎಂಥಾ ವಿಪರ್ಯಾಸ

ಹಚ್ಚಿಕೊಂಡ ನೆನಪುಗಳ ಅಳಿಸಲು ಈಗ ಕೊಡಲಿಗಳು ಬೇಕಿಲ್ಲ
ನಗುವೆ ಕುಣಿಕೆ ಹಿಡಿದು ಕೊಲ್ಲಲು ಬಂದದ್ದು
ಎಂಥಾ ವಿಪರ್ಯಾಸ

ಮಾರಬೇಡಿರಿ ಕನಸುಗಳನು ತೂತಿರಬಹುದು ಕಣ್ಣುಗಳು
ಮಾತಲೆ ಬಣ್ಣಿಸಿ ಈ ಗಟ್ಟಿಗುಂಡಿಗೆಗೆ ನೀವೇ ಇರಿದದ್ದು ಎಂಥಾ ವಿಪರ್ಯಾಸ

ಪ್ರಾಮಾಣಿಸಿದರು ನಂಬಿಕೆಯಿಲ್ಲದ ಜೀವ ಬದುಕು ಕಲಿಯುವುದಿಲ್ಲ ಪ್ರಕಾಶ
ಅನುರಾಗವನೆ ವಿಷಾದಿಸಿ ವ್ಯಾಪಾರವಾಗಿಸಿದ್ದು ಎಂಥಾ ವಿಪರ್ಯಾಸ

ಮೂಲತಃ ಹನೂರು ತಾಲೂಕಿನ ಪೊನ್ನಾಚಿಯ ಪ್ರಕಾಶ್ ಸದ್ಯ ಒಡೆಯರ್ ಪಾಳ್ಯದಲ್ಲಿ
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದಾರೆ
ಓದು ಮತ್ತು ಕವಿತೆಗಳ ರಚನೆ ಇವರ ಹವ್ಯಾಸ

 

(ಕಲೆ: ಫ್ರಾನ್ಸಿಸ್ಕೋ ಗೋಯಾ)