ಹೊನ್ನಾವರದ ಚನ್ನಕೇಶವ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇಲ್ಲಿ ಕೇಶವನ ಗುಡಿಯನ್ನು ಕಟ್ಟಿಸಿ ದತ್ತಿ ಒದಗಿಸಿದವನು ಒಂದನೇ ನರಸಿಂಹನ ಮಹಾಪ್ರಧಾನನಾಗಿದ್ದ ಲಕ್ಷ್ಮಯ್ಯ ಹೆಗ್ಗಡೆ. ದೇವಾಲಯದ ಹೊರಭಾಗದಲ್ಲಿ ಇರಿಸಿರುವ ಶಾಸನದಲ್ಲಿ ದೇವಾಲಯ ನಿರ್ಮಾಣ ಮತ್ತು ಅದರ ನಿರ್ವಹಣೆಗೆಂದು ಭೂಮಿಯನ್ನು ದಾನನೀಡಿದ ವಿವರಣೆಯಿದೆ. ಒಕ್ಕಣೆಗೆ ಸಾಕ್ಷೀಭೂತನಾಗಿ ಶಾಸನದ ಮೇಲುಭಾಗದಲ್ಲಿ ಕಾಮಧೇನು, ಸೂರ್ಯ,ಚಂದ್ರ, ಪರಿವಾರದೊಡನೆ ಸ್ವಯಂ ಕೇಶವನೇ ನಿಂತಿದ್ದಾನೆ…”
ಹಿರೇನಲ್ಲೂರಿನ ಮಲ್ಲಿಕಾರ್ಜುನ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇಲ್ಲಿನ ಮಲ್ಲಿಕಾರ್ಜುನ ಗುಡಿಯ ಮೂರೂ ಶಿಖರಗಳು ಕಳಶಸಮೇತವಾಗಿ ಸುಸ್ಥಿತಿಯಲ್ಲಿದ್ದು ಹೊಯ್ಸಳ ವಾಸ್ತುಶಿಲ್ಪದ ಉತ್ತಮ ಮಾದರಿಗಳಾಗಿ ಉಳಿದುಕೊಂಡಿವೆ. ಎಡಭಾಗದ ಶಿಖರದ ಸುಖನಾಸಿಯ ಮುಂದೆ ಹೊಯ್ಸಳ ಲಾಂಛನವಿದೆ. ನಾಲ್ಕು ಸ್ತರಗಳ ವಿನ್ಯಾಸವಿರುವ ಶಿಖರಗಳು, ಶಿಖರಗಳ ಮೇಲಿನ ಕಿರುಕೋಷ್ಠಗಳಲ್ಲಿ ವೇಣುಗೋಪಾಲ, ನರಸಿಂಹ, ಲಕ್ಷ್ಮೀನಾರಾಯಣ, ಗಣಪತಿ, ಶಿವ, ಭೈರವ, ಹನುಮ,…”
ಬನವಾಸಿಯ ಮಧುಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಮಧುಕೇಶ್ವರ ದೇವಾಲಯ ಮೂಲತಃ ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳಲ್ಲಿ ಒಂದಾದ ಮಾಧವನ ಗುಡಿಯಂತೆ. ಕದಂಬರ ಕಾಲದಲ್ಲಿ ನಿರ್ಮಿತವಾಗಿರುವ ಈ ಗುಡಿಯು ಕಾಲಾಂತರದಲ್ಲಿ ಕಲ್ಯಾಣ ಚಾಲುಕ್ಯರಿಂದ ಸೋಂದೆಯ ಅರಸರವರೆಗಿನ ರಾಜಮನೆತನಗಳ ಆಳ್ವಿಕೆಯಲ್ಲಿ ಅನೇಕ ಸೇರ್ಪಡೆ, ಜೀರ್ಣೋದ್ಧಾರಗಳಿಗೆ ಒಳಪಟ್ಟು ಸುಸ್ಥಿತಿಯಲ್ಲಿ ಉಳಿದುಕೊಂಡು ಬಂದಿದೆ. ಗರ್ಭಗುಡಿಯಲ್ಲಿರುವ ಮಧುಕೇಶ್ವರ….”
ಅರಸೀಕೆರೆಯ ಶಿವ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಇತರ ಅನೇಕ ಹೊಯ್ಸಳ ದೇಗುಲಗಳಲ್ಲಿ ಕಾಣುವ ಹಲವು ಸ್ತರಗಳ ಮಾದರಿಯಂತಲ್ಲದೆ, ಒಂದರ ಮೇಲೊಂದು ಗೋಪುರವಿರುವಂತೆಯೂ ಮೇಲಿನ ಕಿರುವೇದಿಕೆ(ಸ್ತೂಪಿ)ಯ ಮೇಲೆ ಕಳಶವಿರುವಂತೆಯೂ ವಿನ್ಯಾಸಮಾಡಲಾಗಿದೆ. ಐದು ಹಂತಗಳ ಕಿರುಗೋಪುರಗಳಿದ್ದು, ಎಲ್ಲ ದಿಕ್ಕುಗಳಿಗೆ ಅಭಿಮುಖವಾಗಿ, ಕೆಳಹಂತದ ಒಂದೊಂದು ಕಿರುಗೋಪುರದ ಮುಂಭಾಗದಲ್ಲಿ ದೇವತಾಮೂರ್ತಿಯನ್ನು ಕಾಣಬಹುದು. ಉಳಿದಂತೆ ಹೊಯ್ಸಳ ಕಲೆಯ ವೈಶಿಷ್ಟ್ಯವಾದ ಸಿಂಹಮುಖ…”
ಕೋಲಾರದ ಸೋಮೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ದೇವಾಲಯದೊಳಗೆ ಕಾಲಿರಿಸುತ್ತಿದ್ದಂತೆ ಕಟ್ಟಡದ ತುಂಬೆಲ್ಲ ನಿಂತ ಭವ್ಯವಾದ ಕಂಬಗಳು ಬೆರಗುಗೊಳಿಸುತ್ತವೆ. ಇಂಥ ಅರವತ್ನಾಲ್ಕು ಕಂಬಗಳನ್ನುಳ್ಳ ಮುಖಮಂಟಪವು ದೇಗುಲದ ಪ್ರಮುಖ ಆಕರ್ಷಣೆ. ಮಂಟಪದ ಸುತ್ತಲಿನ ಪ್ರತಿಯೊಂದು ಕಂಬದಲ್ಲೂ ನಿಂತ ಭಂಗಿಯಲ್ಲಿರುವ ಸಿಂಹವೊಂದನ್ನು ಕೆತ್ತಲಾಗಿದ್ದು ಇವೆಲ್ಲ ಸಿಂಹಗಳು ಕೂಡಿ ಇಡಿಯ ಮಂಟಪವನ್ನು ಹೊತ್ತಂತೆ ಭಾಸವಾಗುತ್ತದೆ. ಪ್ರತಿ ಕಂಬದ ಮೇಲೂ ಚಿತ್ರವಿಚಿತ್ರವಾದ ಪ್ರಾಣಿಪಕ್ಷಿಗಳು…”
ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಬಸದಿಯೊಳಕ್ಕೆ ಕಾಲಿರಿಸುತ್ತಿದ್ದಂತೆ ವಿಶಾಲವಾದ ಜಗತಿಯ ಮೇಲೆ ನಿರ್ಮಿತವಾದ ಮಾನಸ್ತಂಭವು ಕಣ್ಸೆಳೆಯುತ್ತದೆ. ಐವತ್ತು ಅಡಿಗಳಷ್ಟು ಎತ್ತರದ ಈ ಭವ್ಯಸ್ತಂಭವನ್ನು ಭೈರರಸನ ಪತ್ನಿ ನಾಗಲಾದೇವಿ ಎಂಬಾಕೆಯು ನಿರ್ಮಾಣ ಮಾಡಿಸಿದಳಂತೆ. ಕಂಬದ ಬುಡದ ಚೌಕದಲ್ಲಿ ಸುತ್ತ ನಾಲ್ಕೂ ಕಡೆಗಳಲ್ಲಿ ಆಕರ್ಷಕ ಕಲಾವಿನ್ಯಾಸಗಳಿವೆ. ಮೇಲೆ ಹೋದಂತೆ ಕಂಬದ ಹೊರಮೈ ಅನೇಕ ಕೋನಗಳನ್ನು ಪಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ.”
ಲಕ್ಕುಂಡಿಯ ಬ್ರಹ್ಮಜಿನಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಕನ್ನಡ ನಾಡಿನ ಜೈನವಾಸ್ತುಶಿಲ್ಪದ ಉತ್ತಮ ಮಾದರಿಗಳಲ್ಲೊಂದೆಂದು ಪರಿಗಣಿತವಾಗಿರುವ ಲಕ್ಕುಂಡಿಯ ಬ್ರಹ್ಮಜಿನಾಲಯ ದೊಡ್ಡಆವರಣ, ವಿಶಾಲವಾದ ನಿರ್ಮಿತಿಗಳಿಂದ ಗಮನಸೆಳೆಯುತ್ತದೆ. ಅತ್ತಿಮಬ್ಬೆ ಕಟ್ಟಿಸಿದ ಗುಡಿಯ ಪೂಜಾನಿರ್ವಹಣೆಗೆ ಅನೇಕ ಭಕ್ತರು ದಾನದತ್ತಿಗಳನ್ನು ನೀಡಿದ ಶಾಸನಗಳು ಲಭ್ಯವಿವೆ. ಮುಖಮಂಟಪ, ಮಹಾಮಂಟಪ, ಅಂತರಾಳ, ಗರ್ಭಗುಡಿಗಳೆಲ್ಲವನ್ನೂ ಒಳಗೊಂಡಿರುವ ಈ ಆಲಯದ ಶಿಖರಭಾಗದಲ್ಲೂ ಶುಕನಾಸಿಗೆ… “
ಕುಬಟೂರಿನ ಕೈಟಭೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪುರಾಣಕ್ಕಿಂತ ಐತಿಹಾಸಿಕವಾಗಿ ಹೆಚ್ಚಿನ ಮಹತ್ವ ಪಡೆದ ಈ ಕುಬಟೂರು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ಸಮೀಪವಿದೆ. ಕೈಟಭೇಶ್ವರ ದೇವಾಲಯವಿರುವ ಕುಬಟೂರಿಗೆ ಕುಪ್ಪತ್ತೂರು, ಕೋಟಿಪುರ ಮೊದಲಾದ ಹೆಸರುಗಳೂ ಇವೆ. ಕ್ರಿ.ಶ. ಮೂರನೆಯ ಶತಮಾನದ ಬನವಾಸಿಯ ಕದಂಬರಿಂದ ಮೊದಲುಗೊಂಡು ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಹಾಗೂ ಕೆಳದಿಯ ನಾಯಕರವರೆಗೆ…”
ಭುವನಗಿರಿಯ ಭುವನೇಶ್ವರಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ
“ಪ್ರಕೃತಿ-ಪುರುಷರ ಪ್ರತೀಕವಾದ ಶಕ್ತಿ-ಶಿವರೂಪಿ ದೇವತೆಗಳನ್ನು ಪ್ರಾಚೀನ ಕಾಲದಿಂದಲೂ ಶಿಲಾರೂಪದಲ್ಲಿ ಗುರುತಿಸಿಕೊಂಡು ಆ ದೇವದೇವಿಯರ ಆರಾಧನೆಯನ್ನು ರೂಢಿಯಲ್ಲಿ ಆಚರಿಸುತ್ತ ಬರಲಾಗಿದೆ. ಶಿವನು ಆಲಯಗಳಲ್ಲಿ ಲಿಂಗರೂಪಿಯಾಗಿಯೇ ಗೋಚರಿಸಿದರೆ, ದೇವಿಯ ಶಿಲಾರೂಪವನ್ನು ಲೋಹಮುಖ, ಪುಷ್ಪಾದಿ ಅಲಂಕಾರಗಳಿಂದ ಸಿಂಗರಿಸಲಾಗಿರುತ್ತದೆ. ಭುವನಗಿರಿಯಲ್ಲೂ ಭುವನೇಶ್ವರಿಯರೂಪವು ವ್ಯಕ್ತವಾಗಿರುವುದು ಹೀಗೆಯೇ.”










