ಚಂಬಲ್‌ನ ಡಕಾಯಿತರು ಕಾಪಾಡಿದ ವಿಗ್ರಹಗಳು
ನಮ್ಮ ದೇಶವನ್ನು ನೋಡಲು ಸರಿಯಾಗಿ ಒಂದು ಜನ್ಮ ಸಾಕಾಗಲ್ಲ. ಅಲೆದಾಡಲು ಇನ್ನೂ ಅದೆಷ್ಟು ಜನ್ಮಗಳು ಬೇಕೋ. ಅದರಲ್ಲೂ ಈ ಮಧ್ಯಪ್ರದೇಶ ರಾಜ್ಯವನ್ನು ನೋಡಲು ಅರ್ಧ ಜನ್ಮವೇ ಬೇಕೇನೋ. ಪ್ರಸ್ತುತ ನಾನು ಗ್ವಾಲಿಯರ್‌ನಿಂದ ೨೫ ಕಿ. ಮೀ ದೂರದಲ್ಲಿರುವ ಮೊರೇನಾ ಅನ್ನೋ ಜಿಲ್ಲೆಗೆ ಸೇರಿದ ಬಟೇಶ್ವರ ಗುಡಿಗಳು ಜೀವ ತಳೆದ ಕಥೆಯ ಬಗ್ಗೆ ಹೇಳಬೇಕು. ಇವು ೮ ರಿಂದ ೧೦ ನೇ ಶತಮಾನದಲ್ಲಿ ನಿರ್ಮಾಣ ಆಗಿರಬಹುದು ಎನ್ನುತ್ತಾರೆ ಪುರಾತತ್ವಜ್ಞರು. ಆದರೆ ಇದು ಬೆಳಕಿಗೆ ಬಂದಿದ್ದು ೨೦೦೫ ರಿಂದ ಈಚೆಗೆ. ಅಲ್ಲೀ ತನಕ ಏನಾಗಿತ್ತು? ಯಾಕೆ ಯಾರೂ ಇಲ್ಲಿರುವ ವಿಗ್ರಹಗಳನ್ನು ಕಳುವು ಮಾಡಲಿಲ್ಲ? ಅವುಗಳನ್ನು ಚಂಬಲ್ ನ ಡಕಾಯಿತರು ಪರೋಕ್ಷವಾಗಿ ಕಾಯುತ್ತಿದ್ದರು ಎಂದು ಬರೆಯುತ್ತಾರೆ ಗಿರಿಜಾ ರೈಕ್ವ. ದೇವಸನ್ನಿಧಿ ಅಂಕಣದಲ್ಲಿ ಅವರ ಹೊಸ ಬರಹ ಇಲ್ಲಿದೆ.
ಸವಾರಿ ಹೊರಡುವ ಮುನ್ನ ಕೇಳಿರಿ ಸಲಹೆಗಳನ್ನ
ಸ್ಥಳೀಯರ ಜೊತೆಗಿನ ಮಾತು ಪ್ರವಾಸದ ಹೊರಹನ್ನು ಮತ್ತಷ್ಟು ಹೆಚ್ಚಿಸಿ, ಮಾಹಿತಿಯೊದಗಿಸಿ ಅರ್ಥಪೂರ್ಣವೆನಿಸುತ್ತದೆ. ಹಾಗೆ ಮಾತನಾಡುವಾಗ ವೈಯಕ್ತಿಕ ಮಾಹಿತಿ ಕೊಡುವುದರಿಂದ ದೂರ ಉಳಿಯುವುದು ಮತ್ತು ಧಾರ್ಮಿಕ ಹಾಗು ಆಹಾರದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳದಿರುವುದು ಸ್ವಾಗತಾರ್ಹ. ಅರೆಬರೆ ರಾಜಕೀಯ ಜ್ಞಾನದಿಂದ ನಮ್ಮ ದೇಶದ ಬಗ್ಗೆ ಚೀಳು ಅಭಿಪ್ರಾಯ ಬರದಂತೆ ಮಾತನಾಡುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ಬೇರೆಯವರ ಮಕ್ಕಳನ್ನು ಹಿರಿಯರ ಅನುಮತಿಯಿಲ್ಲದೆ ಮುದ್ದು ಮಾಡುವ ಬಗ್ಗೆ ಎಚ್ಚರಿಕೆ ಇರಬೇಕು. ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಪ್ರವಾಸಕ್ಕೆ ಬೇಕಾದ ಸಲಹೆಗಳನ್ನು ನೀಡಿದ್ದಾರೆ.
`ಜಗದ ಜಗಲಿಯಲಿ ನಿಂತು’: ವೈಶಾಲಿ ಪ್ರವಾಸ ಲೇಖನ ಮಾಲೆ ಆರಂಭ
ಮಾಯಾ ಜನರ ಈ ಖಗೋಳಶಾಸ್ತ್ರದ ನಂಬಿಕೆ ಮತ್ತು ಅವಲಂಬನೆ ಎಷ್ಟರ ಮಟ್ಟಿಗಿತ್ತೆಂದರೆ ಅದು ಅವರ ಜೀವನದ ಪ್ರತಿ ನಡೆಯಲ್ಲೂ ಹಾಸುಹೊಕ್ಕಾಗಿತ್ತು. ಜಗತ್ಪ್ರಸಿದ್ದ ಮಾಯನ್ ಪಿರಾಮಿಡ್ “ಚಿಚೆನ್ ಇಟ್-ಸಾ” ಇದಕ್ಕೊಂದು ನಿದರ್ಶನ. ಇದು ಅವರ ಸರ್ಪದೇವತೆ ಕುಕುಲ್ಕಾನ್ ಮಂದಿರ. ಇಂದಿಗೂ ಇಕ್ವಿನಾಕ್ಸ್ ದಿನ ನಡುಮಧ್ಯಾಹ್ನ, ಸೂರ್ಯನ ನೆರಳು ಪಿರಮಿಡ್ಡಿನ ಮೇಲೆ ಹೇಗೆ ಬೀಳುತ್ತದೆಂದರೆ, ಸರ್ಪವೊಂದು ಮೇಲಿಂದ ಕೆಳಗೆ ಹರಿದಂತೆ ಕಾಣುತ್ತದೆ. ಆ ದೃಶ್ಯ ನೋಡಲು ಪ್ರತಿವರ್ಷ ಸಾವಿರಾರು ಜನ ಸೇರುತ್ತಾರೆ. ವೈಶಾಲಿ ಹೆಗಡೆ ಬರೆಯುವ ʻಜಗದ ಜಗಲಿಯಲಿ ನಿಂತುʼ ಅಂಕಣದ ಮೊದಲ ಬರಹ ಇಲ್ಲಿದೆ
ಸಾಟಿಯಿಲ್ಲದ ಸ್ಲೊವೇನಿಯಾ: ಪೋಸ್ಟೋಯ್ನಾ ಗುಹೆಗಳು
ಕಾರಿನಲ್ಲಿ ಸ್ಲೊವೇನಿಯಾದ ಯಾವುದೇ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಎರಡು ತಾಸಿನಲ್ಲಿ ಪ್ರಯಾಣಿಸಬಹುದು. ಅಷ್ಟು ಪುಟ್ಟ ದೇಶ. ಪುಟ್ಟ ರಾಷ್ಟ್ರವಾದರೂ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನೊಳಗೊಂಡಿದೆ. ಪ್ರವಾಸಿಗಳಿಗೆ ಹೇರಳ ಅವಕಾಶಗಳನ್ನು ತೆರೆದಿಟ್ಟಿರುವ ಸ್ಲೊವೇನಿಯಾ ಪ್ರಕೃತಿ ಪ್ರೇಮಿಗಳನ್ನು ಎಲ್ಲ ಋತುಗಳಲ್ಲೂ ಕೈಬೀಸಿ ಕರೆಯುತ್ತದೆ. ಸ್ಲೊವೇನಿಯಾದ ಶುಭ್ರ ಸ್ಪಟಿಕದಂತಹ ಸ್ವಚ್ಚ ನದಿಗಳು ನನ್ನ ಅಚ್ಚುಮೆಚ್ಚು. ಪ್ರಪಂಚದ ಅತ್ಯಂತ ಸುಂದರ ಸರೋವರಗಳಲ್ಲಿ ಒಂದಾದ “ಲೇಕ್ ಬ್ಲೆಡ್” ಕೂಡ ಸ್ಲೊವೇನಿಯಾದಲ್ಲಿದೆ. ನಾನು ಗಮನಿಸಿದಂತೆ ಕನ್ನಡದ ಹಲವಾರು ಚಲನಚಿತ್ರಗಳ ಹಾಡುಗಳು ಸ್ಲೊವೇನಿಯಾದಲ್ಲಿ ಚಿತ್ರೀಕರಣಗೊಂಡಿವೆ.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ
ಕಾಮಾಕ್ಯದಲ್ಲಿ ದೊರೆತ ಅನಿರೀಕ್ಷಿತ ಆಶೀರ್ವಾದ
ಪುರಾಣಗಳಲ್ಲಿ ಉಲ್ಲೇಖಗೊಂಡಿರುವ 51 ಶಕ್ತಿಪೀಠಗಳ ಪೈಕಿ ಕಾಮಾಕ್ಯ ದೇವಿಯ ಈ ದೇವಸ್ಥಾನವೂ ಒಂದು ಎಂದು ಹೇಳಲಾಗುತ್ತದೆ. ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತಾರಾ, ಕಾಳಿ, ಭೈರವಿ, ಧೂಮಮತಿ ಎನ್ನುವ ಹೆಸರುಗಳಲ್ಲಿ ಇಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಮುಖ್ಯ ಗೋಪುರದಲ್ಲಿ ಅವಳನ್ನು ಮಾತಂಗಿ, ತ್ರಿಪುರ ಸುಂದರಿ ಮತ್ತು ಕಮಲ ಎನ್ನುವ ಹೆಸರುಗಳಲ್ಲಿ ವಿಗ್ರಹಗಳನ್ನು ಸ್ಥಾಪಿಸಿ ತಾಂತ್ರಿಕ ಶೈಲಿಯಲ್ಲಿ ಆರಾಧಿಸಲಾಗುತ್ತದೆ. ಎಲ್ಲಾ ದೇವಿಯರ ಗರ್ಭಗುಡಿಯಲ್ಲಿಯೂ ಹತ್ತು ಇಂಚು ಆಳದ ಯೋನಿಯಾಕಾರದ ಕಪ್ಪುಶಿಲೆಯೊಳಗಿನಿಂದ ಸದಾಕಾಲವೂ ನೀರಿನ ಬುಗ್ಗೆ ಉಕ್ಕುತ್ತಿರುತ್ತದೆ. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ
ಸದ್ದಿಲ್ಲದೆ ಕಾಣೆಯಾಗುವ ನಾಡಿನ ಶಿಲ್ಪ ಸಂಪತ್ತು
ಹಾಸನದ ಚನ್ನರಾಯಪಟ್ಟಣದ ಬಳಿ ಹರಿಹರಪುರ ಅಂತ ಒಂದು ಸ್ಥಳವಿದೆ. ಅಲ್ಲೊಂದು ಹರಿಹರೇಶ್ವರನ ದೇವಾಲಯವಿದ್ದರೂ ಒಳಗೆ ದೇವರಿಲ್ಲ. ತ್ರಿಕೂಟೇಶ್ವರ ಅಂದರೆ ಮೂರು ಗರ್ಭಗುಡಿಗಳು ಒಂದು ನವರಂಗವನ್ನು ಹೊಂದಿರುತ್ತದೆ. ಅದರ ಪ್ರಕಾರ ಅಲ್ಲಿ ಮೂರು ಮೂರ್ತಿಗಳಿರಬೇಕಿತ್ತು. ಮುಖ್ಯ ದೇವರು ಹರಿಹರೇಶ್ವರ. ಇನ್ನೆರಡು ರಂಗನಾಥ ಮತ್ತು ಸರಸ್ವತಿಗೆ ಸೇರಿದ್ದು. ಆದರೆ ಇವತ್ತು ಮೂರೂ ಖಾಲಿ. ಎಲ್ಲಿ ಹೋದವು ಆ ಮೂರ್ತಿಗಳು ? ಅವು ಹರಿಹರಪುರದಿಂದ ೬೫೦೦ ಕಿ.ಮೀ ದೂರದಲ್ಲಿರುವ ಡೆನ್ಮಾರ್ಕಿನ ಕೋಪನ್ ಹೇಗನ್ ಮ್ಯೂಸಿಯಂನ ಏರ್ ಕಂಡೀಷನ್ ರೂಮಿನಲ್ಲಿ ತಣ್ಣಗೆ ಕುಳಿತಿವೆ. ಇಲ್ಲಿಂದ ಅಲ್ಲಿಗೆ ಹೋಗಿದ್ದಾದರೂ ಹೇಗೆ? ಗಿರಿಜಾ ರೈಕ್ವ ಬರೆಯುವ ಅಂಕಣ.
ದೇಮಾಜಿ ಎಂಬ ಸುಂದರ ತಾಣದಲ್ಲೊಂದು ತಂಗುದಾಣ
ಅಸ್ಸಾಮಿನ ಹಳ್ಳಿಗಳು, ತಾಲೂಕುಗಳು ಅರುಣಾಚಲ ಪ್ರದೇಶದಂತೆ ಅಲ್ಲ. ಟಾರು ಮೆತ್ತಿಸಿಕೊಂಡ ವಿಶಾಲ ರಸ್ತೆಗಳು ಪ್ರಯಾಣಿಗರಿಗೆ ಹಿತವಾಗಿವೆ. ಒಂದೊಂದೇ ಮರಗಿಡಗಳು ಕಿಟಿಕಿಯಿಂದಾಚೆಗೆ ನನ್ನಿಂದ ದೂರದೂರವಾಗುತ್ತಿರುವುದನ್ನು ನೋಡುತ್ತಲೇ ಮುಂದೆ ಹೋಗುತ್ತಿದ್ದೆ. ಅಸ್ಸಾಂ ಪೂರ್ತೀ ತುಂಬಾ ಖುಷಿ ನೀಡುವ ನೋಟವೆಂದರೆ ಅಲ್ಲಿನ ಹೆಣ್ಣು ಮಕ್ಕಳು ವಯೋಬೇಧವಿಲದೆ ಸೀರೆಗಳನ್ನುಟ್ಟು ಸೈಕಲ್‌ಗಳಲ್ಲಿ ಓಡಾಡುತ್ತಾರೆ. ರಸ್ತೆಯ, ಅಲ್ಲಿನ ಜನರ, ವಾಹನಗಳ, ಇಕ್ಕೆಲಗಳ ಹಸುರಿನ ಉಸಿರಿನಂಥಾ ಹೆಣ್ಣುಗಳು.
ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ
ಸಿಸಿಲಿಯ ಬೀಳ್ಕೊಡುಗೆ ಸಿಕ್ಕ ಅನಿರೀಕ್ಷಿತ ಉಡುಗೊರೆ!
ಇತಿಹಾಸದ ಅನರ್ಘ್ಯ ರತ್ನಗಳ ಸುತ್ತ ಅಲೆದಾಟ. ಆರ್ಕಿಮಿಡಿಸ್ ತವರೂರಿನಿಂದ ಹಿಡಿದು ದೇವಾಲಯಗಳ ಕಣಿವೆಯವರೆಗೆ ಇತಿಹಾಸದ ರಸದೌತಣ ಬೇಕೆಂದರೆ ಸಿಸಿಲಿಗೆ ಬರಬೇಕು. ಇತಿಹಾಸದ ಕಥೆಗಳಲ್ಲಿ ಕಳೆದುಹೋಗುವ ಹವ್ಯಾಸವಿರುವವರಿಗೆ ಸಿಸಿಲಿ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ಕ್ರಿ.ಪೂ. ಆರನೇ ಶತಮಾನದ ದೇವಾಲಯಗಳ ಭೇಟಿ, ನನ್ನ ಈವರೆಗಿನ ಯೂರೋಪಿನ ಪ್ರವಾಸಗಳಲ್ಲೇ ಅನನ್ಯ! ಪ್ರಪಂಚದಾದ್ಯಂತ ಇರುವ ಗ್ರೀಕ್ ದೇವಾಲಯಗಳಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ “Temple of Concordia”ದ ಆಕಾರ, ರಚನೆ – ನೋಡಿ ನಿಬ್ಬೆರಗಾಗಿಬಿಟ್ಟೆ.
“ದೂರದ ಹಸಿರು” ಸರಣಿಯಲ್ಲಿ ಗುರುದತ್ ಅಮೃತಾಪುರ ಬರಹ
ಆಪರೇಷನ್ ವಿಜಯ್ ನ ಜೀವಂತ ನೆನಪುಗಳು
ಹಾಲ್ ಆಫ್ ಫೇಂನಲ್ಲಿ ಆಪರೇಷನ್ ವಿಜಯ್ ಹೆಸರಿನಲ್ಲೇ ಒಂದು ಗ್ಯಾಲೆರಿ ತೆರೆದಿದ್ದಾರೆ. ಅಲ್ಲಿ ಕಾರ್ಗಿಲ್ ಯುದ್ಧಕ್ಕೆ ಬಳಸಲಾದ ಗನ್ನುಗಳನ್ನು ಇಡಲಾಗಿದೆ. ಮಾರ್ಗದರ್ಶನ ಮಾಡುತ್ತಿದ್ದ ಆ ಯೋಧ “ಈ ಗನ್ನ್ ಅನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಳ್ಳಿ” ಎಂದ. ನನ್ನ ಆನಂದಕ್ಕೆ ಮಿತಿಯೇಯಿರಲಿಲ್ಲ. ನಿಜಕ್ಕೂ ನಾನು ಆ ಘಳಿಗೆಯಲ್ಲಿ ವೈರಿಪಡೆಯನ್ನು ಸೆದೆಬಡಿದು ಬಿಡುತ್ತೇನೆ ಎನ್ನುವ ಭಾವದಿಂದ ಗನ್ನೊಂದನ್ನು ಕೈಗೆತ್ತಿಕೊಳ್ಳಲು ಹೋದೆ. ಉಹುಂ, ಆಗಲೇ ಇಲ್ಲ! ಎಷ್ಟೊಂದು ಭಾರವಿತ್ತು. ನಗರ ಜೀವನ ಶೈಲಿಗೆ ಹೊಂದಿಕೊಂಡ ನನ್ನ ತಾಕತ್ತು ಸೈನಿಕನ ಉಂಗುಷ್ಠವನ್ನೂ ಹೋಲಲು ಸೋತಿತು. ಕೊನೆಗೆ ಅಲ್ಲಿದ್ದ ಆ ಯೋಧ, ಗನ್ ಎತ್ತಿ ನನ್ನ ಕೈಯಲ್ಲಿ ತೂರಿಸಿದ, ಫೋಟೊ ಸೆರೆಹಿಡಿದ. ‘ಕಂಡಷ್ಟೂ ಪ್ರಪಂಚ’ ಅಂಕಣದಲ್ಲಿ ಅಂಜಲಿ ರಾಮಣ್ಣ ಅವರ ಲೇಖನ ಇಲ್ಲಿದೆ.









