ಸಾಂಗತ್ಯದ ಸಹಸ್ರಾವತಾರ

ನಿನ್ನ ಸಾಂಗತ್ಯದ ವಿನಹ
ಜಗದೊಳು ನನಗಿನ್ನಾವ
ಆಸೆಗಳೂ ಇಲ್ಲದಿರುವಾಗ
ಅನಿಸಲೇಬೇಕು
ಜಗದ ಧನಿಕ ನಾನೆಂದು

ನಿನ್ನ ನಗುವ ಬೆಳದಿಂಗಳು
ತುಂಬಿ ತುಳುಕಿ
ಜಗವ ತೋಯಿಸುತ್ತಿರಲು
ಅನಿಸಲೇಬೇಕು
ಚಂದ್ರಶೇಖರ ನಾನೆಂದು

ಆರಡಿಯ ದೇಹ
ಪ್ರೀತಿ ಭಿಕ್ಷೆಗೆ ಮೊರೆಯಿಟ್ಟು
ಮೂರಡಿಗೇ ಇಳಿದಿರಲು
ಅನಿಸಲೇಬೇಕು
ವಾಮನವತಾರವೇ ನಾನೆಂದು