ಅರ್ಥಗಾರಿಕೆಯ ಭೇಷಜ, ಡಾ. ಹೈಗುಂದ ಪದ್ಮನಾಭಯ್ಯ: ನಾರಾಯಣ ಯಾಜಿ ಬರಹ
ಹೈಗುಂದ ಡಾಕ್ಟರರು ಕಾವ್ಯವನ್ನು ಅರ್ಥಗಾರಿಕೆಗೆ ಆಧಾರವನ್ನಾಗಿ ಬಳಸುತ್ತಿದ್ದರೂ ಅವರ ಆದ್ಯತೆ ಪ್ರಸಂಗಗಳ ಪದ್ಯಗಳಾಗಿತ್ತು. ಇಲ್ಲಿನ ಕಥಾನಕಕ್ಕೆ ನಿಷ್ಠರಾಗಿಯೇ ಅವರು ಕುಮಾರವ್ಯಾಸನನ್ನೊ ಜೈಮಿನಿಯನ್ನೋ ಬಳಸುತ್ತಿದ್ದರು. ಹಾಗಂತ ಅಲ್ಲಿನ ಪದ್ಯಗಳನ್ನು ಯಥಾವತ್ತಾಗಿ ತರುವದಕ್ಕೆ ಇವರ ವಿರೋಧವಿರುತ್ತಿತ್ತು. ಪ್ರಸಂಗಗಳಲ್ಲಿ ಕನ್ನಡವಲ್ಲದೇ ಅನ್ಯ ಭಾಷೆ ಅದು ಸಂಸ್ಕೃತವೇ ಆಗಿರಲಿ ಅದನ್ನು ಬಳಸುವದನ್ನು ಅಷ್ಟೇ ಉಗ್ರವಾಗಿ ವಿರೋಧಿಸುತ್ತಿದ್ದರು.
ಪ್ರಸಿದ್ಧ ಅರ್ಥಧಾರಿಗಳಾಗಿದ್ದ ಡಾ. ಹೈಗುಂದ ಪದ್ಮನಾಭಯ್ಯನವರ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ ನಿಮ್ಮ ಓದಿಗೆ
ಜಿ. ಎಚ್. ನಾಯಕರ ನೆನಪು: ಡಾ. ಎಲ್.ಸಿ. ಸುಮಿತ್ರಾ ಬರಹ
ಮೀರಕ್ಕ ಕೂಡ ಯಾವಾಗಲೂ ನೂಲಿನ ಸೀರೆ ಧರಿಸುವವರು. ನಾವು ಎಂಎ ಓದುತ್ತಿದ್ದಾಗ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಯಾವುದೋ ಕಾರ್ಯಕ್ರಮ ನೋಡಲು ಮೀರಕ್ಕ, ಮಗಳು ಕೀರ್ತಿಯೊಡನೆ ಬಂದಿದ್ದರು. ಅವರುಟ್ಟ ರೇಷ್ಮೆ ಸೀರೆಯನ್ನು ಚೆನ್ನಾಗಿದೆಯೆಂದು ನಮ್ಮ ಗುಂಪಿನಲ್ಲಿದ್ದವರು ಯಾರೋ ಹೇಳಿದಾಗ ಕೀರ್ತಿ ತಕ್ಷಣ ಇದು ಅಮ್ಮನಿಗೆ ಯಾರೋ ಪ್ರಸೆಂಟ್ ಮಾಡಿದ್ದು ಅಪ್ಪ ಬರೀ ಕಾಟನ್ ಸೀರೆ ಕೊಡಿಸ್ತಾರೆ ಅಂತ ತಮಾಷೆಗೆಂಬಂತೆ ಹೇಳಿದಳು.
ನೆನ್ನೆಯಷ್ಟೇ ಅಗಲಿದ ಹಿರಿಯ ವಿಮರ್ಶಕ ಜಿ. ಎಚ್. ನಾಯಕರ ಕುರಿತು ಡಾ. ಎಲ್.ಸಿ. ಸುಮಿತ್ರಾ ಹಂಚಿಕೊಂಡಿದ್ದ ನೆನಪುಗಳು ನಿಮ್ಮ ಓದಿಗೆ
ಅಕ್ಷರದ ಮೂಲಕ ಚಿರಂಜೀವಿಯಾಗಿರುವ ಶ್ರೀನಿವಾಸ ವೈದ್ಯ
ನವೋದಯಕಾಲದ ಲೇಖಕರು ಎದುರಿಸುವ ಎಲ್ಲಬಗೆಯ ವಿಪ್ಲವ ಮತ್ತು ಆತಂಕಗಳನ್ನು ಒಂದು ಕುಟುಂಬದ ಕಥೆಯಮೂಲಕ ಹೇಳುವ ಶ್ರೀನಿವಾಸ ವೈದ್ಯರ ಕ್ರಿಯಾಶೀಲತೆಯನ್ನು ಇಲ್ಲಿ ಕಾಣಬಹುದಾಗಿದೆ. ಅನೇಕ ಸಲ ಅನಂತಮೂರ್ತಿಯವರ ಮೌನಿಯಲ್ಲಿ ಈ ಕಾದಂಬರಿಯ ನೆರಳು ಬಿದ್ದಿರಬಹುದೇ ಅನಿವುವಷ್ಟು ಪ್ರಭಾವಶಾಲಿಯಾಗಿದೆ. ಬೇರು ಕಳೆದುಕೊಂಡ ವ್ಯಕ್ತಿ ಹೊಸ ಬೇರಿನೊಂದಿಗೆ ಕಂಡುಕೊಳ್ಳುವ ಆರ್ಥಿಕ ಭದ್ರತೆ ಮತು ಸಾಮಾಜಿಕ ಸ್ಥಾನಮಾನವನ್ನೂ ಪಡೆದುಕೊಳ್ಳುವ ಕ್ರಿಯೆ ಬ್ರಿಟಿಷರಿಂದ ಭಾರತಕ್ಕೆ ಸಿಗುವ ಸ್ವಾಂತಂತ್ರ್ಯದ ಜೊತೆಗೆ ಹಾಸುಹೊಕ್ಕಾಗಿದೆ.
ಇಂದು ತೀರಿಹೋದ ಶ್ರೀನಿವಾಸ ವೈದ್ಯರ ಕೃತಿಗಳ ಕುರಿತು ನಾರಾಯಣ ಯಾಜಿ ಬರಹ
ಶ್ರೀನಿವಾಸ ವೈದ್ಯರೆಂದರೆ….
ಅವರು ಈಸಿದಷ್ಟೂ, ಓದುಗರಾದ ನಾವು ಇದ್ದು ಜಯಿಸುತ್ತೇವೆ. ಅಂತರಂಗ-ಬಹಿರಂಗ, ವ್ಯಕ್ತಿ-ಸಮಾಜ ಎಂದೆಲ್ಲ ಕಾಲ್ಪನಿಕ ಗಡಿರೇಖೆ ಹಾಕಿಕೊಳ್ಳದೇ ಒಟ್ಟಂದದಲ್ಲಿ ಸಮಾಜವನ್ನು ತುಂಬಾ ಅಚ್ಛೆಯಿಂದ, ಅಷ್ಟೇ ಅಚ್ಚರಿಯಿಂದ ಅನುಭವಿಸಿದ ಈ ಜೀವಿಯ ಬರವಣಿಗೆಯಲ್ಲಿ ಬದುಕು ತನ್ನೆಲ್ಲ ನೆಳಲು ಬೆಳಕುಗಳೊಂದಿಗೆ ಬಸಿಯುತ್ತದೆ. ಇದು ಹೀಗೇಕೆ ಎಂದೆಲ್ಲ ಕೇಳದೇ, ಅರೆ ಇದು ಹೀಗಿದೆಯಲ್ಲ ಎಂದು ಸೋಜಿಗದಿಂದ ಇರವನ್ನು ಅನುಭವಿಸುವ ಅರಿವಿನ ದಾರಿ ಇದು. `ಅರಿವೇ ಗುರು’ ಎಂದರೆ, `ಹೌದ್ರೀ, ಆದರೆ ಅದೂ ಅಲ್ಲಲ್ಲಿ ಸ್ವಲ್ಪ ಹರಿದಿರ್ತದೆ’ ಎಂದು ಗಹಗಹಿಸಿ ನಗುವ ವೈದ್ಯರ ವಿನೋದ ಅಪ್ಪಟ.
ಉಳಿದದ್ದೀಗ ನೆನಪುಗಳಷ್ಟೇ….
ಅಡಿಗರ ರಾಮನವಮಿಯ ದಿವಸ ಪದ್ಯದ ಬಗ್ಗೆ ಅವರೊಡನೆ ಚರ್ಚಿಸುತ್ತಿದ್ದ ದಿನಗಳು ನನ್ನ ಬದುಕಿನ ಸುವರ್ಣ ಯುಗ. ಅವ್ರಿಗೆ ತಂತ್ರದ ಬಗ್ಗೆ ವಿಶೇಷ ಆಸಕ್ತಿ ಎಂದಾಗ ಒಪ್ಪಿಕೊಂಡಿದ್ದರು. ಅಡಿಗರ ಕುರಿತ ದೂರುಗಳನ್ನೂ, ಮೆಚ್ಚುಗೆಯನ್ನೂ ಮುಕ್ತವಾಗಿ ಹೇಳುತ್ತಿದ್ದರು. ನೀವೇಕೆ ನಿಮ್ಮ ಬರೆಯುವ ರೀತಿಯನ್ನು ಪದೇ ಪದೇ ಬದಲಾಯಿಸಿದಿರಿ.
ತಮ್ಮ ಗ್ರಹಿಕೆಗೆ ಸಿಕ್ಕ ಕೆ.ವಿ. ತಿರುಮಲೇಶರ ಕುರಿತು ಬರೆದಿದ್ದಾರೆ ಮಾಲಿನಿ ಗುರುಪ್ರಸನ್ನ
ಇಷ್ಟೊಂದು ನಿಬಿಡತೆಯಲ್ಲು ಯಾಕಿಷ್ಟು ಏಕಾಂತ
ಹೊಸಬರನ್ನು ಮೆಚ್ಚುವ ಜೊತೆಗೆ ಹಳಬರನ್ನು ತುಂಬ ಸಭ್ಯವಾಗಿ ಕ್ರಿಟಿಕಲ್ ಆಗಿ ಚುಚ್ಚುತ್ತಲೂ ಇದ್ದರು. ಹಲವು ಖ್ಯಾತ ಹಿರಿಯ ಕವಿಗಳ ಕವಿತೆಗಳ ಬಗ್ಗೆ ಅವರ ಅನಾಸಕ್ತಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಆದರೆ ಅದು ಯಾವತ್ತೂ ಅನಾದರ ಆಗಿರಲಿಲ್ಲ. ಒಮ್ಮೆ ಮಾತಿನ ಮಧ್ಯೆ, `ಅವರು ಫೋನ್ ಮಾಡಿದ್ದರು. ಅವರದ್ದು ನೋಡಿ ಜರ್ನಲಿಸ್ಟಿಕ್ ಸಾಹಿತ್ಯ. ಹಾಗೆ ಹೇಳಿದರೆ ಅವರಿಗೆ ಸಿಟ್ಟು ಬರುತ್ತೆ. ಆದರೆ ಸತ್ಯ ಸತ್ಯವೇ ತಾನೆ’ ಎಂದರು.
ಕೆ.ವಿ. ತಿರುಮಲೇಶರೊಟ್ಟಿಗಿನ ಒಡನಾಟ ಹಾಗೂ ಅವರ ಬರಹಗಳ ಕುರಿತು ಬರೆದಿದ್ದಾರೆ ಕಥೆಗಾರ ವಿಕ್ರಂ ಹತ್ವಾರ್
ಇಲ್ಲೇ ಇದ್ದವರು ಇನ್ನಿಲ್ಲವಾದರು…
ಹೈದರಾಬಾದ್‌ನ ಲೋಕಲ್ ಟ್ರೇನ್‌ಗಗಳಲ್ಲಿ ಸುತ್ತಿದ, ರಸ್ತೆಬದಿ ನಿಂತು, ಕೆಂಡದಲ್ಲಿ ಕಾಯಿಸಿದ ಮುಸುಕಿನ ಜೋಳ ತಿನ್ನುವ, ಭಾನುವಾರದ ಫುಟ್‌ಪಾತ್ ಪುಸ್ತಕಗಳ ಅಂಗಡಿಗಳನ್ನು ಆಸಕ್ತಿಗಳಿಂದ ತಿರುಗುತ್ತ ಪುಸ್ತಕ ಕೊಳ್ಳುವ, ಹೈದರಾಬಾದನ್ನು, ಇಲ್ಲಿಯ ಕನ್ನಡ ಸಂಘಗಳನ್ನು, ಕನ್ನಡಿಗರನ್ನು, ಬಹಳ ಆಸ್ಥೆ – ಅಕಾರಾಸ್ಥೆಗಳಿಂದ ಪ್ರೀತಿಸುವ, ಆ ಮಹಾನ್ ಚೇತನಕ್ಕೆ, ಕಣ್ತುಂಬಿದ ವಿದಾಯ ಹೇಳುವುದನ್ನು ಬಿಟ್ಟು, ಬೇರೇನು ಉಳಿದಿದೆ!!
ಕೆ.ವಿ. ತಿರುಮಲೇಶರ ಕುರಿತು ಗೋನವಾರ್ ಕಿಶನ್ ರಾವ್ ಆಪ್ತ ಬರಹ
ಸಮೃದ್ಧ ಜೀವನಾನುಭವವೇ ಸಾಹಿತ್ಯದ ಜೀವ: ನಾ. ಮೊಗಸಾಲೆ
ತಲೆಮಾರು ಎನ್ನುವುದು ಮುಂದುವರಿಯುತ್ತಾ ಹೋದ ಹಾಗೆ ಕೌಶಲ್ಯ ಎನ್ನುವುದು ಹಿಂದಿಗಿಂತ ಹೆಚ್ಚು ಶಕ್ತ ಅಥವಾ ಹೆಚ್ಚೋ ಎಂಬಂತೆ ಮುಂದುವರಿಯುವುದು ನಮ್ಮ ಅನುಭವ ಅಥವಾ ಪ್ರಕೃತಿ ನಿಯಮ. ಪ್ರತಿಭೆ, ಕೌಶಲ್ಯ, ಮತ್ತು ಚಿಂತನೆಗಳಲ್ಲಿ ನಾವು ನಮ್ಮ ಹಿರಿಯರಿಗಿಂತ ಮುಂದುವರಿದಿದ್ದೇವೆ ಎನ್ನುವುದನ್ನು ನಾನೂ ನೀವೂ ಒಪ್ಪಿಕೊಳ್ಳುವುದಾದರೆ ನಮ್ಮ ಮುಂದಿನ ಪೀಳಿಗೆಯೂ ಖಂಡಿತ ನಮಗಿಂತ ಮುಂದಿರುತ್ತದೆ ಎನ್ನುವುದನ್ನು ಒಪ್ಪಬೇಕು.
ಡಾ. ನಾ. ಮೊಗಸಾಲೆಯವರೊಟ್ಟಿಗೆ ನಡೆಸಿದ ಮಾತುಕತೆಯನ್ನು ಹಂಚಿಕೊಂಡಿದ್ದಾರೆ ಡಾ. ಸುಭಾಷ್ ಪಟ್ಟಾಜೆ
ಆಚೆ ಕೇರಿಯ ಭಾಗ್ಯಮ್ಮ ಮತ್ತು ಈಚೆ ಕೇರಿಯ ದೇವಮ್ಮ
ಮಾರ್ಗೋಡನಹಳ್ಳಿಯ ಒಕ್ಕಲುಗೇರಿಯ ಭಾಗ್ಯಮ್ಮ ಬನ್ನೂರು ಬಸ್ಟಾಂಡಿನ ಬಳಿ ಸೊಪ್ಪು ಮಾರುತ್ತಿದ್ದವರು. ಸಮಯ ಸಿಕ್ಕಾಗ ದನದ ದಲ್ಲಾಳಿ ಕೆಲಸ, ಹೆಣ್ಣು ತೋರೋದು, ನಾಟಿ ಕೀಳೋದೂ ಇತ್ಯಾದಿಗಳನ್ನೂ ಮಾಡುತ್ತಿದ್ದರು. ಇವರ ಗೆಳತಿ ದಲಿತರ ಕೇರಿಯ ದೇವಮ್ಮನದು ಕೂಲಿಯ ಕೆಲಸ. ಸಮಯ ಒದಗಿ ಬಂದಾಗ ಭಾಗ್ಯಮ್ಮನ ಜೊತೆ ಸೊಲ್ಲು ಹೇಳಲು ಹೋಗುತ್ತಾರೆ. ಇವರಿಬ್ಬರು ಸೊಲ್ಲೆತ್ತಿ ಹಾಡಲು ತೊಡಗಿದರೆ ಇಬ್ಬರಲ್ಲಿ ಯಾರು ಹಿಂದು ಯಾರು ಮುಂದು, ಯಾರು ಜಾಣೆ ಯಾರು ಮುಗ್ಧೆ ಎಂಬುದು ಗೊತ್ತಾಗುವುದಿಲ್ಲ. ಕಳೆದ ಮಂಗಳವಾರ ಇರುಳು ತೀರಿಹೋದ ಭಾಗ್ಯಮ್ಮನವರ ನೆನಪಿನಲ್ಲಿ ಸೂರ್ಯಪುತ್ರ ಈ ಹಿಂದೆ ಬರೆದಿದ್ದ ಬರಹ