ಇನ್ನು ನಿರುತ್ತರದಲ್ಲಿ ರಾಜೇಶ್ವರಿಯೂ ಇಲ್ಲ
ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ಮುಂಜಾನೆ ತೀರಿಕೊಂಡಿದ್ದಾರೆ. ವಯೋಸಹಜ ಅನಾರೋಗ್ಯ ಅವರನ್ನು ಕಾಡಿತ್ತು. ರಾಜೇಶ್ವರಿ ತೇಜಸ್ವಿ ಅವರು ಕೆಂಡಸಂಪಿಗೆಯ ಮೂಲಕವೇ ಬರವಣಿಗೆ ಶುರು ಮಾಡಿದ್ದರು.
ನೂತನ ಅಳೀಮಯ್ಯರ ಮುಂದೆ ಪ್ರೆಸ್ಟೀಜು ಪ್ರಶ್ನೆ
ಆ ಮನೆಯ ಬೆಡ್‌ರೂಮು ದೊಡ್ಡದಾದ ಬಿರುಕಿನಿಂದ ಕೂಡಿತ್ತು. ಆ ಕೋಣೆಯಲ್ಲಿ ಮಲಗಿದಾಗ, ಕಿಟಕಿಯಲ್ಲಿ, ರಾತ್ರಿಯ ರಮಣೀಯ ಚಂದ್ರನನ್ನು, ಇರುಳಿನ ಹೊಳೆವ ತಾರೆಗಳನ್ನು ನೋಡಿ ಆನಂದಿಸಬಹುದಾಗಿತ್ತು! ಮಲಗಿದಲ್ಲಿಯೇ ಆಗಸವನ್ನು ನೋಡುತ್ತಾ ಕಾವ್ಯರಚಿಸಬಹುದಾಗಿತ್ತು! ಕಾಡಿನಲ್ಲಿದ್ದ ಆ ಕ್ವಾಟ್ರರ್ಸನಲ್ಲಿ ಕೋಗಿಲೆಯ ಹಾಡೋ, ನವಿಲುಗಳ ನರ್ತನವೋ ನಮ್ಮ ಭಾಗ್ಯಕ್ಕೆ ಸಿಗಲಿಲ್ಲ.
ಅಭಿನಯಕ್ಕೆ ಅಲಂಕಾರದ ಮೊನಚು ಕೊಡುವ ಹಸ್ತಾಭಿನಯ
ವೇದಿಕೆಯಲ್ಲಿ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ, ನರ್ತಿಸಿದ್ದಾರೆ ಎಂದಾಗ ನಾವು ಅವರಲ್ಲಿ ಕಂಡಂತಹ ವಿಶೇಷತೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಕಲಾವಿದರ ಕಣ್ಣುಗಳು ಮಾತನಾಡುತ್ತಿದ್ದವು, ಕೈಗಳೂ ಮಾತನಾಡುತ್ತಿದ್ದವು, ಕಾಲುಗಳೂ ಮಾತನಾಡುತ್ತಿದ್ದವು ಹೀಗೆ… ಇಲ್ಲಿ ಒಂದೊಂದು ಅಂಗಗಳು ತಮ್ಮ ಅಭಿನಯದ ಮೂಲಕ ನಮ್ಮ ಮನಸ್ಸನ್ನು ತಟ್ಟುವ ಕೆಲಸವನ್ನು ಮಾಡಿರುತ್ತವೆ ಎಂದೇ ಅರ್ಥ. ಹಾಗೆಂದರೆ ಇಲ್ಲಿ ಮಾತು ಎಂಬ ಪದ ಕಲಾವಿದ…
ಈ ಜೋರು ಮಳೆಯೂ, ಬೊಬ್ಬೆಯೂ.. ನಿಮಗೇನಾದರೂ ಕೇಳಿಸುತ್ತಿದೆಯಾ ?
ಸುಂದರವಾದ ಇಂಟೀರಿಯರ್ ಡೆಕೊರೇಶನ್ ಮಾಡಿದ ಅಡುಗೆ ಮನೆಯಲ್ಲಿ ದಿನಸಿ ಸಾಮಾನು ತುಂಬಿಡಲು ಎಷ್ಟೊಂದು ಚಂದದ ಡಬ್ಬಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ಅತ್ತ ಸುರಿಯುತ್ತಿರುವ ಭಾರೀ ಮಳೆಯೂ, ಕೃಷಿ ಕ್ಷೇತ್ರದ ಕುರಿತು ನಡೆಯುತ್ತಿರುವ ಚರ್ಚೆಗಳು, ಏರುಪೇರಾದ ಹವಾಮಾನದ ಆತಂಕಗಳು ಯಾಕೋ ಕಂಗಾಲು ಮಾಡುತ್ತಿವೆ. ಅಂತಹುದೇ ಆತಂಕಗಳನ್ನು ನಮ್ಮ ನಡುವಿನ ಕತೆ…
ಮುದ್ದು ಮಕ್ಕಳ ಉಸಿರು-ಉಲ್ಲಾಸದ ಹಸಿರು
ಶಿಶು ಲೋಕದಲ್ಲಿ ಎಲ್ಲವೂ ಎಷ್ಟು ಸರಾಗ! ಮೂವರೂ ಮಕ್ಕಳು ಪುಣ್ಯಕೋಟಿಯ ಕಥೆಗೆ ಕಣ್ಣೀರುಗರೆದವರೇ. ಪಂಚತಂತ್ರ, ಜಾತಕ, ಅರೇಬಿಯನ್ ನೈಟ್ಸ್, ಈಸೋಪ, ಅಮರಚಿತ್ರ ಕಥಾ ಸರಣಿಗಳು-ಇವರ ಕುತೂಹಲ ತಣಿಸಲು ಕಥೆಗಳ ಕಣಜವೇ ಬೇಕು. ಸಹಜವಾಗಿಯೇ ಪುಸ್ತಕಗಳ ಒಲವು. ನಾನು ರಾತ್ರಿಯಿಡೀ ಪ್ರಯಾಣ ಮಾಡಿ ಮಗಳ ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಧನ್ಯ ಮತ್ತು ಮಾನ್ಯ ಹೊಸದಾಗಿ ಕೊಂಡ ಪುಸ್ತಕಗಳ ರಾಶಿ ಮುಂದಿಟ್ಟು ನಮಗೆ ವಿವರಿಸಲಾರಂಭಿಸುವುದು…
ಕನಕ ಕನಸಿದ ‘ಕಲ್ಯಾಣ’: ಉದಾರಚರಿತದ ರೂಪಕ
ಕುರುಬ ಸಮುದಾಯದ’ಕನಕ’, ಕನಕದಾಸರಾಗಿದ್ದುದರ ಬಗ್ಗೆ ಅನೇಕ ಕಥನಗಳಿವೆ. ಆದರೆ ಈ ಹಾದಿಯಲ್ಲಿ ಕನಕರು ಕುಲದ ಕಾರಣಕ್ಕಾಗಿ ಎದುರಿಸಬೇಕಾಗಿ ಬಂದ ಸಂಕಟಗಳನ್ನು ನಾವು ಗಮನಿಸಬೇಕು. ಶ್ರೀನಿವಾಸ ಶೆಟ್ಟಿ, ಪುರಂದರ ದಾಸರಾಗಲು ಇರುವ ಅವಕಾಶ ಕನಕನಾಯಕ ಕನಕದಾಸರಾಗೋದಕ್ಕೆ ಇರಲಿಲ್ಲ. ಅವರು ತಮ್ಮ ಹುಟ್ಟಿನ ಸೂತಕದ ಕಾರಣಕ್ಕಾಗಿ ಮತ್ತೆ ಮತ್ತೆ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳಬೇಕಾಯ್ತು.
ಸಜ್ಜನಿಕೆಯ ಋಣವೊಂದು ಹೃದಯದಲ್ಲಿ ಉಳಿದಿದೆ
ಒಳ್ಳೆಯತನವನ್ನು ನಾವು ಎಷ್ಟೇ ಸದರದಿಂದ ನೋಡಿದರೂ, ಸ್ವಂತ ಮಕ್ಕಳ ವಿಷಯಕ್ಕೆ ಬಂದಾಗ ಅವರಿಗಾಗಿ ನಾವು ಒಳ್ಳೆಯತನದ ಮಾದರಿಗಳನ್ನು ಹುಡುಕಲು ಶುರು ಮಾಡುತ್ತೇವೆ. ದೊಡ್ಡವರಿಗೂ ಮಕ್ಕಳಿಗೂ ಸಮಾನವಾಗಿ ಇಷ್ಟವಾಗುವವರು ಬಹಳಿಲ್ಲ. ಕೆಲವರು ಗೊತ್ತಿಲ್ಲದಂತೆಯೇ ನಮಗೂ ಇಷ್ಟವಾಗುತ್ತಾರೆ, ಮಕ್ಕಳಿಗೂ ಮೆಚ್ಚುಗೆಯಾಗುತ್ತಾರೆ. ನಮಗರಿವಿಲ್ಲದಂತೆಯೇ ಅವರು ನಮ್ಮ ಜೀವನದಲ್ಲಿ ಮುಖ್ಯವಾಗಿರುತ್ತಾರೆ. ಅವರು ಅಗಲಿದಾಗ ಉಮ್ಮಳಿಸಿ ಬರುವ ದುಃಖವೂ, ಇದ್ದಕ್ಕಿದ್ದಂತೆಯೇ ಕಾಡಲು ಶುರುವಾಗುವ…
ಒಂದು ದಕ್ಷಾಧ್ವರ ಪ್ರದರ್ಶನದಲ್ಲಿ ಜಗನ್ಮಾತೆಯಾಗುವ ದಾಕ್ಷಾಯಿಣಿ
ಒಂದು ನಿರ್ದಿಷ್ಟ ಪಠ್ಯವು ಇವತ್ತಿನ ತನಕ ರಂಗದಲ್ಲಿ ವ್ಯಾಖ್ಯಾನಗೊಂಡ ಲೋಕದೃಷ್ಟಿಯೊಳಗೆ ಮತ್ತು ಒಂದು ಕಲಾರೂಪದ ಮಿತಿಯೊಳಗೇ ಹೇಗೆ ವಿಸ್ತಾರಗೊಳ್ಳುತ್ತದೆ ಎನ್ನುವುದನ್ನು ನೋಡದಿದ್ದರೆ ಪ್ರದರ್ಶನಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಒಂದು ಪಾತ್ರವನ್ನು ಹೇಗೆ ಆ ಮಿತಿಯೊಳಗೇ ಅನಾವರಣಗೊಳಿಸಿ, ಬೇರೆ ರೀತಿಯ ಅಸ್ಮಿತೆಯನ್ನು ಸ್ಥಾಪಿಸಬಹುದೆಂದು…
ನಮ್ಮ ಚಿತ್ರಗಳಿಗೆ ಅವರು ಬಣ್ಣ ತುಂಬುತ್ತಿದ್ದಾರೆ
ಕೋವಿಡ್ ಸೋಂಕಿನ ಭಯದಿಂದ ಕಳೆದೆರಡು ವರ್ಷಗಳಲ್ಲಿ ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಇದೀಗ ಮತ್ತೆ ಪುಟಾಣಿ ಮಕ್ಕಳು ಶಾಲೆಯ ತರಗತಿಗಳನ್ನು ಪ್ರವೇಶಿಸಿದ್ದಾರೆ. ಹಾಗಾಗಿ ಮನೆಯೊಳಗೂ ಜೀವನೋತ್ಸಾಹ ತುಂಬಿದೆ. ಮಕ್ಕಳಿಗಾಗಿ ಶಾಪಿಂಗ್, ಸ್ಪರ್ಧೆಗಳಿಗಾಗಿ ತಯಾರಿ, ಪರೀಕ್ಷೆಗಳಿಗಾಗಿ ಓದು, ಆಟೋಟಗಳಿಗಾಗಿ ಸಿದ್ಧತೆಗಳನ್ನು ಮಾಡುವುದರಲ್ಲಿ ಮಕ್ಕಳೂ, ಅವರ ಜೊತೆಗೆ ಪೋಷಕರೂ ಬ್ಯುಸಿಯಾಗಿದ್ದಾರೆ.









