ಎಷ್ಟೊಂದು ಹತ್ತಿರ ಎಷ್ಟೊಂದು ದೂರ: ಕೆವೈಎನ್ ಕಂಡಂತೆ ಸಿದ್ಧಲಿಂಗಯ್ಯ
ತುಳಿತಕ್ಕೆ ಒಳಗಾದ ಜನ ಸಮುದಾಯಗಳಲ್ಲಿ ಅರಿವಿನ ದೀಪ ಹಚ್ಚುವ, ನ್ಯಾಯಬದ್ಧವಾದ ಜೀವಿಸುವ ಹಕ್ಕುಗಳನ್ನು ಕೇಳುವ ಹೋರಾಟಗಳಿಗೆ ಅವರನ್ನು ಅಣಿಮಾಡುವ ಉದ್ದೇಶದಿಂದ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳನ್ನು ಮುನ್ನಡೆಸುವ ಸಾಮೂಹಿಕ ನಾಯಕತ್ವದ ಹೊಣೆಯನ್ನು ಕವಿ ಸಿದ್ಧಲಿಂಗಯ್ಯ ಅವರು ಸಮರ್ಥವಾಗಿಯೇ ನಿರ್ವಹಿಸಿದ್ದರು..”
ನಂಬಿಕೆಗೆ ಇಂಬು ಕೊಡುವ ಹಲವು ಮುಖಗಳು
“ಬಳೆ ಮಾರುವ ಮಾದೇವಿ, ಪಾತ್ರೆ ಕೃಷ್ಣಪ್ಪ, ತರಕಾರಿ ಸಿದ್ಧಪ್ಪ ಎಲ್ಲರೂ ಮಾರುಕಟ್ಟೆಯನ್ನು ನಮ್ಮ ಮನೆಯ ಜಗಲಿಗೇ ಹೊತ್ತು ತರುತ್ತಿದ್ದರು ಎಂದು ಅನಿಸುತ್ತಿತ್ತು. ಇವರೆಲ್ಲ ಸಂವಹನ ಕ್ಷೇತ್ರದ ಪ್ರಮುಖ ಕೊಂಡಿಗಳು ಎಂದೂ ಅನಿಸುತ್ತಿತ್ತು. ಅವರು ಮನೆಯವರೊಡನೆ ಹೇಳಿಕೊಳ್ಳುತ್ತಿದ್ದ ಕಷ್ಟಗಳು, ಅಜ್ಜಿ, ಅಮ್ಮ ಅವರನ್ನು ಮಾತನಾಡಿಸುತ್ತಿದ್ದ ರೀತಿ ನೋಡಿದರೆ ನಂಬಿಕೆ-ಮನುಷ್ಯತ್ವಕ್ಕೆ ಇವರೆಲ್ಲ ಮತ್ತೊಂದು ಹೆಸರು ಎಂದು ಹೇಳಬೇಕನಿಸುತ್ತದೆ.”
ಅಪರಿಚಿತರ ಅಕ್ಕರೆಯ ಬಗ್ಗೆ ಕೀರ್ತನಾ ಹೆಗಡೆ ಬರೆದ ನವಿರು ಬರಹ ನಿಮ್ಮ ಓದಿಗಾಗಿ ಇಲ್ಲಿದೆ.
ಆನ್ ಲೈನ್ – ಆಫ್ ಲೈನ್ ನಡುವಿನ ಕಾಲುಸಂಕ
“ಡಿಜಿಟಲ್ ಕ್ರಾಂತಿಯ ಹುಮ್ಮಸ್ಸಿನ ಗಿಡಕ್ಕೆ ಲಾಕ್ ಡೌನ್ ಎಂಬುದು ಇನ್ನಷ್ಟು ನೀರು ಗೊಬ್ಬರವಾಗಿ ಪರಿಣಮಿಸಿದೆ. ಅದು ಶಿಕ್ಷಣ ಕ್ಷೇತ್ರದಲ್ಲಿ ತಂದ ಬದಲಾವಣೆಗಳಂತೂ ಅಗಾಧವಾದುದು. ಅಷ್ಟೊಂದು ಬದಲಾವಣೆಗಳನ್ನು ಸಮಾಜದ ಎಲ್ಲ ಮಕ್ಕಳೂ ತಾಳಿಕೊಳ್ಳಬಲ್ಲರೇ.. ಅವರಿಗೆ ಪ್ರೀತಿಯಿಂದ ತಿಳಿಹೇಳಬೇಕಾದ ವಿಷಯಗಳೇನು? ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಎದುರು ಇರುವ ಸೂಕ್ಷ್ಮ ಸವಾಲುಗಳ ಬಗ್ಗೆ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
ಬೃಂದಾವನಕೆ ಗೋವನು ಕಾಯಲು…
“ನಮ್ಮ ಆಟ ಒಂದು ಕಡೆಗಾದರೆ ರಾಸುಗಳ ಆಟ ಇನ್ನೊಂದು ಮೋಜಾಗಿರುತ್ತಿತ್ತು. ಒಂದೇ ಮನೆಯ ರಾಸುಗಳು ಹೊತ್ತಾಟ ಮಾಡುತ್ತಿರಲಿಲ್ಲ. ಆದರೆ ಇಲ್ಲಿ ಅನೇಕ ಮನೆಯ ಗಂಟಿಗಳು ಸೇರುತ್ತಿದುದರಿಂದ ತಮ್ಮ ಅಸ್ತಿತ್ವ ಸ್ಥಾಪನೆಗಾಗಿ ಕಾದಾಟ ಸದಾ ನಡೆಯುತ್ತಿತ್ತು. ದನಗಳೆಲ್ಲ ಸಾಮಾನ್ಯವಾಗಿ ಈ ಉಸಾಬರಿಗೆ ಹೋಗುತ್ತಿದ್ದುದು ಕಡಿಮೆ. ಸೊಕ್ಕಿ ಬೆಳೆದ ಗೂಳಿಗಳು ಗದ್ದೆಗಿಳಿಯುತ್ತಿದ್ದಂತೆ ಗುಟುರು ಹಾಕಿ…”
ಸೋಂಕಿನ ಕರಿನೆರಳಿನಡಿ ಉತ್ಸಾಹ ಕಾಪಿಡುವ ಕಾಯಕ
ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಕೊರೊನಾ ಸೋಂಕಿನ ಭಯವಿತ್ತು. ಆದರೆ ಸೋಂಕು ಎಲ್ಲೋ ದೂರದಲ್ಲಿದೆ ಎಂಬ ರಿಯಾಯಿತಿಯನ್ನು ನಾವೇ ಪಡೆದುಕೊಂಡಿದ್ದೆವು. ಲಾಕ್ ಡೌನ್ ಅವಧಿಯಲ್ಲಿ ಎಷ್ಟೊಂದು ಸಾಹಿತ್ಯ ಚಟುವಟಿಕೆಗಳು ನಡೆದವು. ಪುಸ್ತಕ ಬಿಡುಗಡೆಗಳು, ವೆಬಿನಾರ್ ಗಳು ಸಾಲು ಸಾಲಾಗಿ ನಡೆದವು. ಆದರೆ ಈ ವರ್ಷ ಸೋಂಕು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಮನೆಯ ಕದ ತಟ್ಟಿದೆ. ಬರವಣಿಗೆಯ ಉತ್ಸಾಹದ ಅಲೆಯು ತಗ್ಗಿರುವ ಈ ಸಂದರ್ಭದ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.
ರಂಗೋಲಿ ಕಲಿಸಿ ಬಲಿಪಾಡ್ಯಮಿಗೆ ಹೊರಟ ಅಜ್ಜಿ
“ಪ್ರಯಾಸದಲ್ಲಿಯೇ ಏರು ದಾರಿಯನ್ನು ಏರಿ ಹೋಗುತ್ತಿರಬೇಕಾದರೆ ಅಜ್ಜಿ ಅರ್ಧಕ್ಕೆ ಸಿಕ್ಕೇ ಬಿಟ್ಟರು. “ಪೋಲಿಸರ ಕೈಗೆ ಕಳ್ಳ ಸಿಕ್ಕಂತಾಯಿತು ನನ್ನ ಪರಿಸ್ಥಿತಿ!”. “ನಾನು ಬರೋವರೆಗೂ ಕಾಯೋದಕ್ಕೇನಾಗಿತ್ತು?” ಎನ್ನುತ್ತಾ ಜೋರಾಗಿ ಕಿರುಚಲು ಪ್ರಾರಂಭ ಮಾಡಿದಳು. ನನಗೆ ಮಾತನಾಡಲು ಅವಕಾಶವೇ ಕೊಡಲಿಲ್ಲ. ಮೊದಲೆ ಅದು ರಸ್ತೆ! ಹೋಗೋರು ಬರೋರು ಎಲ್ಲ ನಮ್ಮನ್ನೆ ನೋಡೋರು ಅದಕ್ಕೆಲ್ಲಾ ಹೆದರುವ ಜಾಯಮಾನ ಆಕೆಯದ್ದಾಗಿರಲಿಲ್ಲ ಬಿಡಿ!”
ಸುಮಾವೀಣಾ ಬರೆದ ಪ್ರಬಂಧ ನಿಮ್ಮ ಓದಿಗೆ
ಬಿಸಿಲ ನಾಡಿನಲ್ಲಿ ಹೆಕ್ಕಿದ ಕಾವ್ಯಸಾಲುಗಳು
“ವೈಶಾಖ ಮಾಸದ ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ನೆಲ ಕಾದು ಕೆಂಪಾಗಿ, ಉತ್ತು ಬಿಟ್ಟಿದ್ದ ಹೊಲ ಗದ್ದೆಗಳ ಮಣ್ಣು ಧೂಳು ಧೂಳಾಗಿರುವಾಗ ಆಕಾಶದಲ್ಲಿ ಮೋಡ ಮಂದಯಿಸಿ ಕಪ್ಪು ಕಪ್ಪಾಗಿದೆ…. ಆಗ ತಂಗಾಳಿಯ ತೆರೆಯೊಂದು ದೂರದಿಂದ ಬಂದು ಬಡಿದಾಗ ನೆಲದೊಡಲಿಂದ ಕಂಪೊಂದು ಹೊಮ್ಮಿ ಬರುವುದರ ಜೊತೆಗೆ ಕವಿಯ ಮನಸೂ ಅರಳುತ್ತದೆ. ಈ ಕಾರಣವನ್ನು ಕೆಲವರು `ಕಾವ್ಯ ಎನ್ನುವುದು ಕವಿಯ ಕರ್ಮ’…”
ದೂರ ಅನ್ನುವ ಹತ್ತಿರ ಭಾವವಿದು…
ದೂರ ಎನ್ನುವ ಪದ ಕೆಲವರಿಗೆ ತುಂಬಾ ದೂರ, ಕೆಲವರ ಹೃದಯಕ್ಕೆ ತೀರಾ ಹತ್ತಿರ. ‘ದೂರ’ ಪದ ಕೇಳಿದಾಗಲೆಲ್ಲ ನಿಮಗೆ ಯಾವ ಭಾವ ಮೂಡುತ್ತದೋ ನಂಗೆ ಗೊತ್ತಿಲ್ಲ. ಆದರೆ ದೂರ ಎನ್ನುವುದು ನಿಮಗೆ ಹತ್ತಿರದಲ್ಲಿ ಕಾಣಿಸದಿದ್ದದ್ದನ್ನು ಕಾಣಿಸುವ ಬೈನಾಕ್ಯುಲರ್ನಂತೆ. ಹತ್ತಿರ ಇರುವಾಗ ಕಾಣಿಸದ್ದು ದೂರದಲ್ಲಿ ಬೇರೊಂದು ರೀತಿಯಲ್ಲೇ ಕಾಣಿಸುತ್ತದೆ. ನಂಗ್ಯಾಕೋ ದೂರ ಅನ್ನುವ ಪದ ತೀರಾ ಕಾಡುತ್ತಿರುವುದು ಆ ಒಂದು ಪದ ನನ್ನಲ್ಲಿ ಕುತೂಹಲ…”
ಅಮ್ಮ ಒಬ್ಬಳೇ ಕುಳಿತು ನೋಡುವ ಪತ್ತನಾಜೆಯ ಕಾಲ
ದೀಪಾವಳಿ ಸಂದರ್ಭದಲ್ಲಿ ತಿರುಗಾಟ ಆರಂಭಿಸುವ ಕರಾವಳಿಯ ಯಕ್ಷಗಾನ ಮೇಳಗಳು ವೃಷಭ ಮಾಸದ ಹನ್ನೊಂದನೇ ದಿನದಂದು ಅಂದರೆ ಮೇ ತಿಂಗಳಂತ್ಯದಲ್ಲಿ ಪ್ರದರ್ಶನ ಮುಕ್ತಾಯಗೊಳಿಸುತ್ತವೆ. ದೇವಸ್ಥಾನಗಳ ಆಶ್ರಯದಲ್ಲಿ ನಡೆಯುವ ಮೇಳಗಳ ಸಮಾರೋಪವು ಒಂದು ಪುಟ್ಟ ಜಾತ್ರೆಯಂತೆ ವೈಭವಯುತವಾಗಿ ಇರುತ್ತಿತ್ತು. ಆದರೆ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಆಚರಣೆಗಳಿಗೆ ಅವಕಾಶವಿಲ್ಲ. ಸಾಂಕೇತಿಕ ಆಚರಣೆಯ ಕುರಿತು…”









