ನಮ್ಮಪ್ಪನ ಸೂಟ್ಕೇಸು:ಒರ್ಹಾನ್ ಪಾಮುಕ್ ಮಾಡಿದ ನೋಬಲ್ ಸ್ವೀಕೃತಿ ಭಾಷಣ
“ಎಷ್ಟೋ ದಿನ, ತಿಂಗಳು, ವರ್ಷ ನನ್ನ ಟೇಬಲ್ಲಿನ ಮುಂದೆ ಕೂತು, ಖಾಲಿ ಹಾಳೆಯ ಮೇಲೆ ಒಂದೊಂದೇ ಹೊಸ ಪದ ಸೇರಿಸುತ್ತ, ನಾನು ಹೊಸ ಲೋಕ ಸೃಷ್ಟಿಸುತ್ತಿದ್ದೇನೆ ಅನ್ನುವ ಭಾವ, ನನ್ನೊಳಗಿರುವ ಇನ್ನೊಬ್ಬ ವ್ಯಕ್ತಿಗೆ ಜೀವ ಕೊಡುತ್ತಿದ್ದೇನೆ ಅನ್ನುವ ಭಾವ ಅನುಭವಿಸಿದ್ದೇನೆ.”
ದಿಗ್ಭ್ರಮೆ ವೆಂಕಟ್ರಮಣನ ದಶಾವತಾರಂಗಳು:ಭಾರತಿ ಹೆಗಡೆ ಕಥಾನಕ
ಅವತ್ತು ಹೊತ್ತು ಕಂತುವ ಮೊದಲೇ ದಿಗ್ಭ್ರಮೆ ವೆಂಕಟ್ರಮಣನಿಗೆ ನಿಧಿ ಸಿಕ್ಕಿದ ಸುದ್ದಿ ಊರೆಲ್ಲ ಹರಡಿ ಕೆಲವು ಹೆಂಗಸರು ಮತ್ತು ಹುಡುಗರು ಅವನ ಮನೆಯ ಬಳಿ ಜಮಾಯಿಸಿ ಬಿಟ್ಟಿದ್ದರು. ಆಗೆಲ್ಲ ಅಲ್ಲಿ ಕೊಪ್ಪರಿಗೆ ಚಿನ್ನ ಸಿಕ್ಕಿತಂತೆ, ಇಲ್ಲಿ ಸಿಕ್ಕಿತಂತೆ ಎಂಬ ಸುದ್ದಿ ದಟ್ಟವಾಗಿತ್ತು
ನಕ್ಷತ್ರವಾಗಿ ಮಿನುಗುತ್ತ ಹೋದ ಮಳೆಯಂತಹ ಕವಯತ್ರಿ ಇವಳು
“ಈ ಕವಿತೆಗಳನ್ನು ಓದುತ್ತಿದ್ದರೆ ಉಗುಳು ನುಂಗುವ ಹಾಗಾಗುತ್ತದೆ. ಎಷ್ಟೆಲ್ಲ ಸೊಗಸಿದೆ ಈ ಲೋಕದಲ್ಲಿ ಭಗವಂತಾ…ಸಖ್ಯವೆಂದರೆ ಇದೆಯೋ ಎನಿಸುತ್ತದೆ. ಇದನ್ನು ಬರೆದ ಕಾಲಕ್ಕೆ ಇದನ್ನು ಬರೆದವಳು ಖಂಡಿತ ಹೆಣ್ಣಲ್ಲ, ಹೆಣ್ಣು ಹೀಗೆ ಬರೆಯಲೇ ಆರಳು ಎಂದೆಲ್ಲ ವಾಗ್ವಾದಗಳಾಗಿದ್ದವು. “
ಪರಸಂಗವೆಂಬ ಬೆಂಕಿಕೆಂಡ,ಪರಸಂಗವೆಂಬ ಮಂಜುಗಡ್ಡೆ
”ಅವಳಿಗೆ ದೈಹಿಕ ಸ್ಪರ್ಶ ಮನಸ್ಸನ್ನು ಮುಟ್ಟುವುದಿಲ್ಲ ಎಂದು ಸಾಬೀತು ಪಡಿಸಲೇಬೇಕು, ಆದರೆ ಅವನ ಎಲ್ಲಾ ಸ್ಪರ್ಶ ಸಂವೇದನೆಗಳೂ ಮನಸ್ಸಿನ ಮೂಲಕವೇ ಹಾದು ಹೋಗಬೇಕು. ಹಾಗಾಗಿಯೇ ಅವನು ಯಾವುದೇ ಕ್ಯಾಶುವಲ್ ಸಂಬಂಧಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಾರ. ಅವಳನ್ನು ಬಿಡಲಾರ!
ಹಿಮನಗರಿಯೊಂದರ ರಾಜಕೀಯ ಸಂಕಟಗಳ ಕಥನ
“ಜಗತ್ಪ್ರಸಿದ್ಧ ಟರ್ಕಿಷ್ ಬರಹಗಾರ ಒರ್ಹಾನ್ ಪಾಮುಕ್ ಅವರ ರಾಜಕೀಯ ಕಾದಂಬರಿ `ಹಿಮ’ 2002 ರಲ್ಲಿ ಪ್ರಕಟಗೊಂಡಿದೆ. ಟರ್ಕಿ ದೇಶದ ಈಶಾನ್ಯ ದಿಕ್ಕಿನಲ್ಲಿರುವ `ಕಾರ್ಸ್’ ಎಂಬ ಸಣ್ಣ ನಗರವೊಂದರಲ್ಲಿ ನಡೆಯುವ ಘಟನಾವಳಿಗಳ ಸುತ್ತ ಹೆಣೆದ ಈ ಕಥಾನಕ ಒಂದು ವಿನೂತನ ಬಗೆಯ ರಾಜಕೀಯ ಕಾದಂಬರಿ.”
ಯುದ್ಧ ಎಂಬ ಅಮಾನುಷ ಕ್ರೌರ್ಯದ ಕಪ್ಪು ಮತ್ತು ಬಿಳುಪು ಆಯಾಮಗಳು
‘ಸಿಟಿ ಆಫ್ ಲೈಫ್ ಆ್ಯಂಡ್ ಡೆತ್’, ಒಂದು ರೀತಿ ಯುದ್ಧದ ನೈತಿಕ ವ್ಯಂಗ್ಯದ ಕನ್ನಡಿ. ಯುದ್ಧ ಬರೀ ರಾಷ್ಟ್ರ, ರಾಷ್ಟ್ರವನ್ನು ಅತ್ಯಾಚಾರ ಮಾಡುವ ಕ್ರಮ ಮಾತ್ರವಲ್ಲ, ಬದಲು ರಾಷ್ಟ್ರವು ಪ್ರತೀ ಎದುರಾಳಿಯ ವಿರುದ್ಧ ಉಂಟುಮಾಡುವ, ಕೈಗೊಳ್ಳುವ ಸಂಗತಿಗಳೂ ಕೂಡಾ ನೈತಿಕವೇ ಆಗುತ್ತದೆ ಎನ್ನುವುದನ್ನೂ ಈ ಸಿನಿಮಾ ಸೂಚಿಸುತ್ತದೆ.
ಚೌಡಿ ಮೈಮೇಲೆ ಬಂದಾಗ ದುಗ್ಗತ್ತೆ ಕೊಂಕಣಿಯಲ್ಲಿ ಯಾಕೆ ಮಾತನಾಡುತ್ತಾಳೆ?
”ದುಗ್ಗತ್ತೆ ಯಾಕೆ ಮೈಮೇಲೆ ಬಂದಾಗ ಕೊಂಕಣಿ ಮಾತಾಡ್ತಾಳೆ ಅಥವಾ ಅವಳ ಮೈಮೇಲೆ ಬರುವ ಚೌಡಿಗೇ ಕೊಂಕಣಿ ಬರುತ್ತದಾ…? ಅಥವಾ ಚೌಡಿ ಎಲ್ಲ ಭಾಷೆಯನ್ನೂ ಮಾತಾಡುತ್ತದಾ…? ಹೀಗೇ ಏನೇನೋ ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದವು.
ಕಾಲಾಂತರದೊಳಗೆ ಕೈ ಹಿಡಿದು ನಡೆಸುವ ಪ್ರೊಫೆಸರ್ ಶೆಟ್ಟರ್ ಅವರ ಪುಸ್ತಕ
”ಈ ಕೃತಿಯನ್ನು ಓದುತ್ತ ನನಗೆ ಇತಿಹಾಸವೆಂಬ ಜ್ಞಾನ ಶಾಖೆಯ ಕುರಿತು ಇನ್ನಷ್ಟು ಗೌರವ ಮೂಡಿದೆ: ಇತಿಹಾಸ ಒಂದು ರೀತಿಯಲ್ಲಿ ವಿಜ್ಞಾನಕ್ಕೆ ಸಮಾನ. ವಿಜ್ಞಾನದಲ್ಲಿ ಪ್ರಯೋಗವಿದೆ, ಇತಿಹಾಸದಲ್ಲಿ ಇಲ್ಲ, ಅದೊಂದು ವ್ಯತ್ಯಾಸ; ಇನ್ನು ವಿಜ್ಞಾನಕ್ಕೆ ಕಾಲದ ಹಂಗಿಲ್ಲ, ಇತಿಹಾಸ ಕಳೆದುಹೋದುದನ್ನು ಹುಡುಕುತ್ತದೆ.”
ಸಿಹಿಯಲ್ಲದ ಸತ್ಯವ ಹೇಳುವ ‘ಸ್ವೀಟ್ ಕಂಟ್ರಿ’ ಎಂಬ ಸಿನೆಮಾ
ಆಸ್ಟ್ರೇಲಿಯಾದ ಉತ್ತರ ಭಾಗದ ೧೯೨೦ರ ದಶಕದ ಕತೆಯುಳ್ಳ ‘ಸ್ವೀಟ್ ಕಂಟ್ರಿ’ ಪಾಶ್ಚಾತ್ಯ ಚಿತ್ರಶೈಲಿಯಿಂದ ಪ್ರೇರಿತವಾದ ಚಿತ್ರ. ಹಾಗೆಂದು ಚಿತ್ರದಲ್ಲಿ ಬಳಸಲ್ಪಟ್ಟ ಬಣ್ಣ ನೋಡುಗರನ್ನು ಸದಾ ನೆನಪಿಸುತ್ತಿರುತ್ತದೆ.









