ಸೋಲೋ, ಗೆಲುವೋ ಸಾಗುವುದೇ ಹಾದಿ: ಡಿ. ಯಶೋದಾ ಬರಹ
ಅವಳ ರಜೆ ಒಂದು ತಿಂಗಳು ಮುಗಿಯುತ್ತಿದ್ದಂತೆ ಕಚೇರಿಯಿಂದ ಫೋನ್ ಬರಲು ಶುರುವಾಯಿತು, ನೀವು ತಕ್ಷಣ ಬಂದು ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆದೇಶ. ಇವಳಿಗೆ ಆಶ್ಚರ್ಯ ತನ್ನ ಎರಡು ತಿಂಗಳ ರಜೆ ಇನ್ನೂ ಮುಗಿದಿಲ್ಲ, ಮಗುವಿಗೆ ಕೇವಲ ಒಂದೇ ಒಂದು ತಿಂಗಳು, ಈ ಪರಿಸ್ಥಿತಿಯಲ್ಲಿ ಮಗುವನ್ನು ಬಿಟ್ಟು ಹೋಗೋದು ಹೇಗೆ? ಕಡೇಪಕ್ಷ ಇನ್ನೊಂದು ತಿಂಗಳು ಕಳೆದರೆ ಅಷ್ಟರಲ್ಲಿ ತಾನು ಮಗುವಿನ ಆರೈಕೆಗೆ ಬೇರೆ ವ್ಯವಸ್ಥೆ ಮಾಡಿ ಕೆಲಸಕ್ಕೆ ಬರಬಹುದು ಎಂದುಕೊಂಡು ಅದನ್ನೇ ಕಂಪೆನಿಯ ಮುಖ್ಯಸ್ಥರಿಗೆ ತಿಳಿಸಿದಳು. ಆದರೆ ಅವರು ಒಪ್ಪಲಿಲ್ಲ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರ ಪಾಡಿನ ಕುರಿತು ಡಿ. ಯಶೋದಾ ಬರಹ
Managing assets with :Ledger Live software :on desktop
Protecting Your Ledger Seed Phrase from Security Threats Ledger seed phrase security Store your Ledger seed phrase in a secure, offline location. Use a safe or a fireproof box to keep it away from potential theft or damage. Avoid situations where someone can access...
ಅನಾಯಾಸೇನ ಮರಣಂ……: ವಸಂತಕುಮಾರ್ ಕಲ್ಯಾಣಿ ಪ್ರಬಂಧ
ಹೊರಗೆ ಬಂದು, ರಿಸೆಪ್ಷನಿಸ್ಟ್ ಲೆಕ್ಕ ಹಾಕಿ, “ಇನ್ನು ಎಂಟುನೂರು ಕಟ್ಟಿ ಸಾಕು” ಎಂದು ಔದಾರ್ಯ ತೋರಿ, ಅದರಂತೆ ಮಾಡಿ ಹೊರ ಬಂದಾಗ ನನ್ನ ಹೆಂಡತಿ ತುಂಬಾ ಖುಷಿಯಲ್ಲಿದ್ದಳು. “ಸದ್ಯ ದೇವರು ಕಾಪಾಡಿದ, ನೀವು ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ. ಡಾಕ್ಟರ್ ತುಂಬಾ ಒಳ್ಳೆಯವರು, ಬೇರೆಯವರಿಗೂ ರೆಕಮೆಂಡ್ ಮಾಡಬಹುದು. ಇನ್ನು ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ.” ಹೀಗೆ ಸತತವಾಗಿ ಹೇಳಿ, ನಾನು ಎಲ್ಲದಕ್ಕೂ ತಲೆಯಾಡಿಸಿ “ಆರು ಸಾವಿರ ಅಂದಿದ್ದರೆ ಸುಮ್ಮನೆ ಕೊಡುತ್ತಿದ್ದೆವು, ಇನ್ನೂರು ಉಳಿದಿದೆಯಲ್ಲ ಅದರಲ್ಲಿ ಸ್ವೀಟ್ ತಗೊಂಡು ಹೋಗೋಣ” ಎಂದಾಗ ಅದಕ್ಕೂ ತಲೆಯಾಡಿಸಿದೆ.
ವಸಂತಕುಮಾರ್ ಕಲ್ಯಾಣಿ ಪ್ರಬಂಧ “ಅನಾಯಾಸೇನ ಮರಣಂ…”
ನಮ್ಮೂರ ಮಳೆಗಾಲದ ರಸದೌತಣ: ಭವ್ಯ ಟಿ.ಎಸ್. ಬರಹ
ವಿದ್ಯುತ್ ಇಲ್ಲದ ರಾತ್ರಿಗಳು, ನೆಟ್ವರ್ಕ್ ಇಲ್ಲದೆ ಲೋಕದ ಸಂಪರ್ಕ ಕಡಿದುಕೊಂಡ ಹಗಲುಗಳು. ಇದ್ದಕ್ಕಿದ್ದಂತೆ ಬೀಸುವ ಬಿರುಗಾಳಿ, ಉರುಳಿ ಬೀಳುವ ಮರಗಳು. ಕುಸಿದು ಬೀಳುವ ಗುಡ್ಡ. ಹೀಗೆ ಮಳೆ ಎಂದರೆ ಸಂತಸ, ಸೌಂದರ್ಯಗಳ ಜೊತೆಗೆ ಭಯಾನಕತೆಗಳ ಸಂಮಿಶ್ರಣ. ಕೆಲವೊಮ್ಮೆ ಈ ಮಳೆ ಜಿಗುಪ್ಸೆ ಬೇಸರವೆನಿಸಿದ್ದೂ ಇದೆ. ಆದರೆ ಮತ್ತೆ ಮತ್ತೆ ಈ ಮನ ಪ್ರತಿ ವರ್ಷದ ವರ್ಷಧಾರೆಗೆ ಹಪಹಪಿಸುತ್ತದೆ.
ಮಲೆನಾಡಿನ ಮಳೆಯ ದಿನಗಳ ಕುರಿತು ಭವ್ಯ ಟಿ.ಎಸ್. ಬರಹ ನಿಮ್ಮ ಓದಿಗೆ
ಹಿಮಾಲಯದಲ್ಲಿ ಹಕ್ಕಿಗಳ ಚಿಲಿಪಿಲಿ: ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿತ ರಸ್ಕಿನ್ ಬಾಂಡ್ ಬರಹ
ಈ ಹಾಡು ನನ್ನನ್ನು ಯಾವಾಗಲೂ ಮರುಳುಗೊಳಿಸುತ್ತದೆ. ಈ ಪಕ್ಷಿಯು ಅನುಮಾನದಿಂದ ಕೂಗಿ, ಸರಿಯಾದ ರಾಗವನ್ನು ಪ್ರಯತ್ನಿಸುವಂತೆ, ಅನಂತರ ಆತ್ಮವಿಶ್ವಾಸದಿಂದ ಇಂಪಾಗಿ ಪೂರಾ ಹಾಡನ್ನು ಲಯ ಬದ್ಧವಾಗಿ ಬೆಟ್ಟದ ಸುತ್ತಲೂ ಕೇಳುವಂತೆ ಹಾಡಿತು. ಇದ್ದಕ್ಕಿದ್ದಹಾಗೇ ಸಂಗೀತವು ನಿಲ್ಲುವುದು, ಸ್ವರ ಆರೋಹಣದ ಮಧ್ಯೆ; ಮತ್ತು ನಾನು ಆಶ್ಚರ್ಯದಿಂದ ಹಕ್ಕಿ ಹಾಡುವುದನ್ನು ನಿಲ್ಲಿಸುವುದಕ್ಕೆ ಏನಾಗಿರಬಹುದು ಎಂಬುದಾಗಿ ಚಿಂತಿಸಿದೆ.
ಡಾ. ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ರಸ್ಕಿನ್ ಬಾಂಡ್ ಅವರ “ರೇನ್ ಇನ್ ದ ಮೌಂಟೇನ್ಸ್” ಕೃತಿಯ ಒಂದು ಬರಹ ನಿಮ್ಮ ಓದಿಗೆ
‘ದಿ ಫೈಯರ್’….: ಡಾ. ಶ್ರೀಪಾದ ಭಟ್ ಬರಹ
ವಸಾಹತುಶಾಹಿಯ ದೌರ್ಜನ್ಯಕ್ಕೆ ತೀವ್ರ ಬಲಿಯಾಗಿ ಅದರಿಂದ ಹೊರಬಂದು ಸ್ವತಂತ್ರ ವ್ಯಕ್ತಿತ್ವಕ್ಕಾಗಿ ನಡೆಸಿದ ಪ್ರಯತ್ನದ ಭಾಗವಾಗಿ ಇಂತಹ ಬರಹಗಳನ್ನು ನಾವು ಮುಖಾಮುಖಿಯಾಗುವುದು ಸಾಂಸ್ಕೃತಿಕ ಸ್ವರೂಪದಲ್ಲಿ ವಸಾಹತುಶಾಹಿಗೆ ಎದುರಾಗುವ ಒಂದು ಬಗೆ ಎಂದೇ ಈ ಪ್ರಯತ್ನವನ್ನು ನೋಡಬಹುದಾಗಿದೆ. ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ, ಲ್ಯಾಟಿನ್ ಅಮೇರಿಕಕ್ಕೂ ಒಂದೇ ಆಗಿದೆ ಎಂಬುದನ್ನು ತಜ್ಞರು ಈಗಾಗಲೇ ತಿಳಿಸಿಯಾಗಿದೆ.
ಸಂತೋಷ ಪಟ್ಲ ನಿರ್ದೇಶನದ ‘ದಿ ಫೈಯರ್’ ರಂಗ ಪ್ರಯೋಗದ ಕುರಿತು ಡಾ. ಶ್ರೀಪಾದ ಭಟ್ ಬರಹ
ಶಾಲೆ ಕಳ್ಳ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ
ಎಷ್ಟೋ ಸಲ ಗೇಟ್ ಹತ್ತಿರ ಹೋಗುವಾಗಲೇ ಶಾಲೆಯ ಪ್ರಾರ್ಥನೆ ಶುರುವಾಗುತ್ತಿತ್ತು. ಪ್ರಾರ್ಥನೆ ಹೇಳುವ ಮಕ್ಕಳ ಸಮೂಹ ಗಾಯನದಲ್ಲಿ, “ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ…” ಅಂತ ಕೇಳುವಾಗಲೇ ಅಳು ಉಕ್ಕಿ ಉಕ್ಕಿ ಬರುತ್ತಿತ್ತು. ತಡ ಆಯ್ತು, ಇನ್ನು ಟೀಚರ್ ಹೊಡಿತಾರೆ, ಅಮ್ಮ ಬಿಟ್ಟು ಹೋದ್ರು ಅನ್ನೋದು ಮಾತ್ರವಲ್ಲದೇ ಎದೆಯಲ್ಲಿ ಯಾವುದೋ ಏಕಾಂಗಿ ಭಾವ ಉಕ್ಕಿ ದುಃಖ ಉಮ್ಮಳಿಸಿ ಬರುತ್ತಿತ್ತು. ಅದು ಆ ಪ್ರಾರ್ಥನೆಯ ರಾಗದಿಂದ ಹಾಗಾಗುತ್ತಿತ್ತೋ ಅಥವಾ ಬೇರಾವುದರಿಂದಲೋ ಗೊತ್ತಾಗುತ್ತಿರಲಿಲ್ಲ. ನಿಂತಲ್ಲಿಯೇ ಜೋರಾಗಿ ಅತ್ತು ಬಿಡುತ್ತಿದ್ದೆ.
ಶಾಲೆಗೆ ಹೋಗುವುದನ್ನು ತಪ್ಪಿಸಲು ನೋಡುವ ಶಾಲೆ ಕಳ್ಳರ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ
ನಮ್ಮ ಭೂಮಿಗೆ ಈ ಪುಟ್ಟ ಕಾಣಿಕೆಯನ್ನಾದರೂ ಕೊಡೋಣ..: ಬಿ.ಸಂ.ಸುವರ್ಚಲಾ ಬರಹ
ಹೆಚ್ಚಿನವರ ಕೈಯಲ್ಲಿ ಇಂದು ದುಡ್ಡು ಸುಲಭವಾಗಿ ಓಡಾಡುತ್ತಿದೆ. ಅದಕ್ಕೆ ತಕ್ಕನಾಗಿ ಆಸ್ತಿ, ಅಂತಸ್ತುಗಳು, ಬಳಸುವ ವಸ್ತುಗಳು ಇರಬೇಕೆಂದು ಬಯಸುವವರೇ ಹೆಚ್ಚು. ಪಟ್ಟಣಗಳು, ಮಾಲ್ ಸಂಸ್ಕೃತಿಗಳು ಜನರ ಕೊಳ್ಳುಬಾಕತನವನ್ನು ಇನ್ನಷ್ಟು ಉತ್ತೇಜಿಸುತ್ತಿವೆ. ಇತರರಿಂದ ಪ್ರಭಾವಕ್ಕೊಳಗಾಗುವ ಅನೇಕರು ಇತರರಂತೆ ನಾವೂ ಇರಬೇಕೆನ್ನುತ್ತಾ ತಮ್ಮ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಕೊಳ್ಳುತ್ತಾ ಜೀವನ ಸವೆಸುತ್ತಿದ್ದಾರೆ. ಹೊಸವರ್ಷದ ಹೊಸ್ತಿಲಲ್ಲಿ ನಾವೀಗ ಇದ್ದೇವೆ. ಇನ್ನಾದರೂ ನಾವು ಎಚ್ಚೆತ್ತುಕೊಂಡರೆ, ಒಂದಷ್ಟು ನಮ್ಮ ಅಗತ್ಯತೆ, ಅನಗತ್ಯತೆಗಳನ್ನು ಅರ್ಥ ಮಾಡಿಕೊಂಡರೆ, ಸಹಜ-ಸರಳವಾಗಿ, ಪರಿಸರಕ್ಕೆ ಪೂರಕವಾಗಿ, ಸುಸ್ಥಿರ ಜೀವನ ನಡೆಸಲು ಖಂಡಿತಾ ಸಾಧ್ಯವಿದೆ.
ಪರಿಸರ ಕಾಳಜಿಯ ಕುರಿತು ಬಿ.ಸಂ.ಸುವರ್ಚಲಾ ಬರಹ
ವ್ಯಕ್ತಮಧ್ಯದ ಬಿಂದುವೊಂದರಲ್ಲಿ ನಿಂತು…: ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಮೇ ತಿಂಗಳ ಹದಿನೇಳನೇ ತಾರೀಖು ನನ್ನ ಬಹುಕಾಲದ ಕನಸು ನನಸಾದ ದಿನ. ಪಿಎಚ್.ಡಿ. ವಿದ್ಯಾರ್ಥಿ ಎಂದೆನಿಸಿಕೊಂಡು ಅದಾಗಲೇ ಏಳು ವರ್ಷ ಕಳೆದಿತ್ತು. ಮಹಾಪ್ರಬಂಧ ಸಿದ್ಧಪಡಿಸಿ, ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ವರ್ಷ ಒಂದಾಗಿತ್ತು. ನನ್ನ ಸಂಶೋಧನೆಗೆ ಅರ್ಥಪೂರ್ಣ ಮುಕ್ತಾಯವೊಂದು ದೊರಕುವುದಿಲ್ಲವೋ ಏನೋ ಎಂಬ ಆತಂಕ ಹೃದಯವನ್ನೊತ್ತಿ ನಿಂತಿತ್ತು. ಆ ಕ್ಷಣದಲ್ಲಿಯೇ ಮುಕ್ತ ಮೌಖಿಕ ಪರೀಕ್ಷೆಗೆ ಕರೆಬಂದದ್ದು. ಮೇ ಹದಿನೇಳರಂದು ನಾನು ಮೌಖಿಕ ಪರೀಕ್ಷೆಯನ್ನು ಎದುರಿಸಬೇಕಿತ್ತು. ಅದಕ್ಕೂ ಎರಡು ದಿನ ಮೊದಲು ಅಮ್ಮನ ಆರೋಗ್ಯ ಹದಗೆಟ್ಟು ಬೆಳ್ಳಂಬೆಳಗ್ಗೆಯೇ ಆಸ್ಪತ್ರೆ ಸೇರಿಕೊಳ್ಳುವಂತಾಯಿತು. ಒಂದು ವಾರ ಆಸ್ಪತ್ರೆಯಲ್ಲಿಯೇ ಇರದೆ ಬೇರೆ ದಾರಿಯಿರಲಿಲ್ಲ.
ಹೊಸ ವರ್ಷಕ್ಕೆ ಹಳೆಯ ನೆನಕೆಗಳೊಂದಿಗೆ ಡಾ. ವಿಶ್ವನಾಥ ನೇರಳಕಟ್ಟೆ ಬರಹ








