ಚಿ ಛೀ ಚೀನಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಅಂದವಾಗಿ ಬರೆಯುವ ಕಲೆಯಾದ ಕ್ಯಾಲಿಗ್ರಫಿ ಮತ್ತು ಚಿತ್ರಕಲೆಗಳ ಬಗ್ಗೆ ಚೀನಾದ ಜನರಿಗೆ ಅತೀವವಾದ ಆಸಕ್ತಿಯಿದೆ. ಚಿತ್ರಕಲೆ ಮತ್ತು ಕ್ಯಾಲಿಗ್ರಫಿ ಕಲೆಗಳು ಚೀನಾದಲ್ಲಿ ಒಂದಕ್ಕೊಂದು ಪೂರಕ ಎನ್ನುವಂತೆ ಬೆಳೆದುಕೊಂಡು ಬಂದಿವೆ. ವರ್ಣಚಿತ್ರವನ್ನು ರಚಿಸಿದ ಬಳಿಕ ಆ ವರ್ಣಚಿತ್ರಕ್ಕೆ ಸರಿಹೊಂದುವ ಕವಿತೆಯನ್ನು ಕಲಾತ್ಮಕವಾಗಿ ಬರೆಯಲಾಗುತ್ತಿತ್ತು. ಹೀಗೆ ಕ್ಯಾಲಿಗ್ರಫಿಯು ಚಿತ್ರಕಲೆಯ ಸೊಬಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಲೆಗೆ ಅನುಗುಣವಾಗಿ ಕ್ಯಾಲಿಗ್ರಫಿ ಸ್ಪಂದಿಸುತ್ತಿತ್ತು. ಹಿಂದಿನ ಕಾಲದ ಚೀನೀಯರಿಗೆ ಅಕ್ಷರಗಳ ಬಗ್ಗೆ ವಿಪರೀತವೆನಿಸುವ ಮೋಹವಿತ್ತು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ವೈಚಾರಿಕತೆಯ ಶುಷ್ಕತೆಯನ್ನು ದೂರವಿಡುವ ರೂಪಕಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
“ವಿಜ್ಞಾನಿಗಳಿಗೆ ಕವಿಗಳೆಂದರೆ ಅನುಮಾನ; ಕವಿಗಳು, ಒಂದು ರೀತಿಯಲ್ಲಿ, ಜವಾಬ್ದಾರಿ ಇಲ್ಲದವರು ಎಂದು ಅವರು ಭಾವಿಸುತ್ತಾರೆ. ಹಾಗೂ ತನ್ನ ವೈಜ್ಞಾನಿಕ ವೃತ್ತಿಯನ್ನು ಕೂಡ ತನ್ನ ಸಾಹಿತ್ಯಿಕ ಸ್ನೇಹಿತರು ಅದೇ ರೀತಿಯಾಗಿ ಶಂಕಿಸುತ್ತಾರೆ ಎಂದು ಅವರು ಒಪ್ಪಿಕೊಂಡರು…”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚೆಕ್ ಗಣರಾಜ್ಯದ ಕವಿ ಮಿರೊಸ್ಲಾವ್ ಹೊಲುಪ್-ರವರ (Miroslav Holub, 1923-1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಅನ್ಯಭಾಷಾ ಪದಯಾನಾ: ಸುಮಾವೀಣಾ ಸರಣಿ
ಅನ್ಯಾಭಾಷಾ ಸಂಸರ್ಗದಿಂದ ಕನ್ನಡ ಲಾಗಾಯಿತ್ತಿನಿಂದಲೂ ಅನೇಕ ಶಬ್ದಗಳನ್ನು ಕೊಳ್ಳುತ್ತಲೇ ಬಂದಿದೆ. ಆರ್ಯರು, ಗ್ರೀಕರು, ರೋಮನ್ನರು, ಪಾರಸಿಕರು, ಯವನ, ಪೋರ್ಚುಗಿಸರು, ಫ್ರೆಂಚರು, ಇಂಗ್ಲಿಷರು ಮೊದಲಾದವರ ಸಂಪರ್ಕ ಕನ್ನಡಿಗರಿಗಿತ್ತು. ಜೊತೆಗೆ ಅಕ್ಕಪಕ್ಕದ ದ್ರಾವಿಡ ಭಾಷೆಗಳು ಮತ್ತು ಮರಾಠಿ ಮೊದಲಾದ ಭಾಷೆಗಳು ವ್ಯಾಪಾರ ಸಂಬಂಧಗಳ ಮೂಲಕ ಕನ್ನಡದ ಮೇಲೆ ಪ್ರಭಾವ ಬೀರಿದ ಕಾರಣ ಕನ್ನಡ ಅನೇಕ ಪದಗಳನ್ನು ಅನಾಯಾಸವಾಗಿ ಸ್ವೀಕರಿಸಿದೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎಂಟನೆಯ ಬರಹ
“ಡೀಲ್” ಬೆನ್ನಟ್ಟಿದ ಕುರಿಗಳು ಸಾರ್ ಕುರಿಗಳು: ಗುರುಪ್ರಸಾದ ಕುರ್ತಕೋಟಿ ಸರಣಿ
ಅಂತೂ ಅಂಗಡಿಯ ಬಾಗಿಲು ತೆರೆದುಕೊಂಡಿತು. ಸ್ವರ್ಗದ ಬಾಗಿಲೆ ತೆರೆಯಿತೋ ಏನೋ ಎಂಬಂತೆ ಜನರ ಕಣ್ಣುಗಳು ಅರಳಿದವು! ಸರ ಸರ ಅಂತ ಚಟುವಟಿಕೆಗಳು ಗರಿಗೆದರಿದವು. ಕುರಿ ದೊಡ್ಡಿ ಬಾಗಿಲು ತೆಗೆದಾಗ ಹೇಗೆ ಕುರಿಗಳು ನುಗ್ಗುತ್ತವೋ ಹಾಗೆಯೇ ಎಲ್ಲರೂ ಒಳ ನುಗ್ಗಿದರು. ನಾವೂ ಬ್ಯಾ ಅನ್ನುತ್ತ ನುಗ್ಗೆ ಬಿಟ್ಟೆವು. ಎಲ್ಲಿ ನೋಡಲಿ ಎಲ್ಲಿ ಬಿಡಲಿ ಎಂಬಂತಹ ಪರಿಸ್ಥಿತಿ. ಕೆಲವೇ ನಿಮಿಷಗಳಲ್ಲಿ ಹಲವಾರು ಜನರ ಕೈಯಲ್ಲಿ ಏನೇನೋ ವಸ್ತುಗಳು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೊಂಭತ್ತನೆಯ ಬರಹ
ಪೆಟ್ಟಿಗೆ ಅಂಗ್ಡೀಲಿ ಪೈಸಾ ಲೆಕ್ಕ: ಸುಮಾ ಸತೀಶ್ ಸರಣಿ
ಮಾರೋನು ವಾರಕ್ಕೊಂದು ದಪ ಇಸ್ಕೂಲ್ ತಾವ ಬತ್ತಿದ್ದ. ಅದು ಎಲ್ಡು ತರ ಇರ್ತಿತ್ತು. ಒಂದು ಈಗ್ಲೂ ಸಿಗ್ತೈತೆ. ಅದೇ ಮೊಳಕೈ ಉದ್ದುದ್ದು ಕಡ್ಡೀಗೆ ರೋಜಾ(ಗುಲಾಬಿ) ಬಣ್ಣುದ್ದು ಹತ್ತಿ ತರ ಸುತ್ತಿರ್ತಾರಲ್ಲ. ಕೈಗೂ ಬಾಯ್ಗೂ ಅಂಟ್ರುಸ್ತೈತಲ್ಲ ಅದು. ಇನ್ನೊಂದು ರಬ್ಬ್ರು(ರಬ್ಬರ್) ತರ ನಾರಿನಂಗೆ ಇರ್ತಿತ್ತು. ಎಳುದ್ರೆ ಸಾಗ್ತಾನೆ(ಹಿಗ್ಗುವ) ಇರಾ ದಾರ. ಅದುನ್ನ ಕೈಗೆ ವಾಚೋ, ಇಮಾನವೋ, ಸೈಕಲ್ಲೋ, ಕಾರೋ ಮಾಡಿ ಹಾಕೋನು. ಬೇಸಾಗಿ ಮಾಡ್ತಿದ್ದ. ಕಾಸು ಕಮ್ಮಿ ಇದ್ರೆ ಬೆಟ್ಟಿಗೆ ಉಂಗುರ ಮಾತ್ರ ಸಿಗ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಗಣಿತ ಟ್ಯೂಷನ್ನಿನ ಹಾಸ್ಯ ಪ್ರಸಂಗಗಳು… ಬಸವನಗೌಡ ಹೆಬ್ಬಳಗೆರೆ ಸರಣಿ
ಸುಧಾಕರನ ಅಣ್ಣನ ದಿನಚರಿಯೇ ವಿಶೇಷ ಎನಿಸುತ್ತಿತ್ತು. ಅವರು ಮಿತ ಭಾಷಿ, ಏಕಾಂಗಿಯಾಗಿರ್ತಾ ಇದ್ರು. ರಾತ್ರಿ 10 ಕ್ಕೆ ಓದಲು ಕುಳಿತರೆ ಬೆಳಗಿನ ಜಾವ 5 ಗಂಟೆಯವರೆಗೂ ಓದೋದು. ಮತ್ತೆ 5 ಕ್ಕೆ ಮಲಗಿ 10 ಗಂಟೆಗೆ ಎದ್ದು ಕಾಲೇಜಿಗೆ ಹೋಗೋರು. ಇದೇ ರೀತಿಯಾಗಿ ನಮ್ಮ ಹಾಸ್ಟೆಲ್ಲಿನ ಎಂಜಿನಿಯರಿಂಗ್ ಹುಡುಗರು ಓದ್ತಾ ಇದ್ರು. ಈ ರೀತಿ ರಾತ್ರಿಯಿಡೀ ಓದೋಕೆ ‘ನೈಟ್ ಔಟ್ ಮಾಡೋದು’ ಎಂಬ ಪದ ಬಳಸ್ತಾ ಇದ್ರು. ಹಾಸ್ಟೆಲ್ಲಿನ ಮಧ್ಯಭಾಗದಲ್ಲಿದ್ದ ಫೀಲ್ಡಿನಲ್ಲಿ ಸ್ಟಡಿ ಚೇರ್ ಹಾಕ್ಕೊಂಡು ಕುಳಿತು ಓದೋಕೆ ಶುರು ಮಾಡ್ತಿದ್ರು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಕನಸು ಬಿತ್ತಿ ನನಸಾಗಿಸಿದ ಕುಸುಮಕ್ಕ: ರಂಜಾನ್ ದರ್ಗಾ ಸರಣಿ
ಅವರು ಉತ್ತರ ಕನ್ನಡದ ಎಲ್ಲೆಂದರಲ್ಲಿ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು. ಒಂದು ಕಡೆ ಮಹಿಳೆಯರ ಸಂಘಟನೆ. ಇನ್ನೊಂದು ಕಡೆ ಸಾಕ್ಷರತಾ ಸಭೆ, ಮತ್ತೊಂದು ಕಡೆ ದೇಶೀಯ ಔಷಧಿಗಳ ಮಹತ್ವದ ಕುರಿತು ಮಾತನಾಡುವುದು, ಇನ್ನೊಂದು ಕಡೆ ಸರಳ ಜೀವನ ವಿಧಾನದ ಬಗ್ಗೆ ತಿಳಿ ಹೇಳುವುದು. ಹೀಗೆ ನಮ್ಮ ಕುಸುಮಕ್ಕನ ಅವತಾರಗಳು ಬಹಳವಾಗಿದ್ದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 91ನೇ ಕಂತು ನಿಮ್ಮ ಓದಿಗೆ
ದೊಡ್ಡಬೊಮ್ಮಸಂದ್ರ ಪುರ ಪ್ರವೇಶ: ಎಚ್. ಗೋಪಾಲಕೃಷ್ಣ ಸರಣಿ
ಅಲ್ಲೊಂದು ಮೂಲೆಯಲ್ಲಿ ತೆಂಗಿನ ತಡಿಕೆ, ಸೊಂಟದಷ್ಟು ಎತ್ತರ. ಒಳಗಡೆ ಒಂದು ಗಂಡಸು. ಉರಿಯುತ್ತಿರುವ ಸೀಮೆ ಎಣ್ಣೆ ಸ್ಟೋವು. ಆಗ ಒಂದು ಕಡೆ ಸೀಮೆ ಎಣ್ಣೆ ತುಂಬಲು ಒಂದು ಸಿಲಿಂಡರ್ ಆಕಾರದ ಡಬ್ಬ ಮತ್ತು ಅದಕ್ಕೆ ಅಂಟಿದ ಹಾಗೆ ಸೀಮೆ ಎಣ್ಣೆ ಉರಿಯ ಬರ್ನರ್ ಇರುವ ಒಲೆ ತುಂಬಾ ಪಾಪ್ಯುಲರ್. ಅದರ ಮೇಲೆ ಒಂದು ಬಾಂಡಲಿ ಮತ್ತು ಕುದಿ ಎಣ್ಣೆ ಒಳಗೆ ಬೋಂಡಾ. ಒಬ್ಬ ಸ್ಟೋವಿನ ಆಕಡೆ ಕೂತು ಕೈಯಲ್ಲಿ ಪುಟ್ಟ ಜಾಲರಿ ಸೌಟು ಹಿಡಿದು ಕೂತು ಬೋಂಡಾ ಕರೀತಾ ಕೂತಿದ್ದಾನೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆಂಟನೆಯ ಕಂತು ನಿಮ್ಮ ಓದಿಗೆ
ಫ್ರೂಟ್ ಕಟರ್ ಕರುಣಿಸಿದ ದಾನಿ ಪಟ್ಟ!: ಪೂರ್ಣೇಶ್ ಮತ್ತಾವರ ಸರಣಿ
ಕೆಲವರು ಕಬ್ಬಿಣದ ರಾಡ್‌ನ ಒಂದು ತುದಿಗೆ ವೈರ್ ಕಟ್ಟಿ ಮತ್ತೊಂದು ತುದಿಯನ್ನು ನೀರಲ್ಲಿ ಬಿಟ್ಟು ಪರ್ಯಾಯ ವಾಟರ್ ಹೀಟರ್ ಮಾಡಿಕೊಂಡರೆ ಮತ್ತೆ ಕೆಲವರು ಪೆನ್ಸಿಲ್‌ನ ತುದಿಗೆ ಸೂಪರ್ ಮ್ಯಾಕ್ಸ್ ಬ್ಲೇಡ್ ಸಿಕ್ಕಿಸಿ ಪರ್ಯಾಯ ರೆಡಿ ಶೇವರ್ ಮಾಡಿಕೊಂಡು ಬಿಡುತ್ತಿದ್ದರು. ಮುಂದುವರೆದು, ಐರನ್ ಬಾಕ್ಸನ್ನು ಕಾಯಿಸಿ ಅದರ ಮೇಲೆ ಮೊಟ್ಟೆ ಹೊಯ್ದು ಅದನ್ನು ಪರ್ಯಾಯ ಆಮ್ಲೆಟ್ ಪ್ಯಾನ್ ಮಾಡ ಹೊರಟ ಮಹನೀಯರೂ ಇದ್ದರು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಏಳನೆಯ ಬರಹ









