ಪುಸ್ತಕ ಪ್ರಕಟಣೆಯ ಪ್ರಸಂಗಗಳು: ಎಚ್. ಗೋಪಾಲಕೃಷ್ಣ ಸರಣಿ
ಪುಸ್ತಕಕ್ಕೆ ಹೆಸರು ಇಡಬೇಕಿತ್ತಲ್ಲ. ಮುಖಪುಟ ಬರೆದಾಗ ಪುಸ್ತಕದ ಹೆಸರೂ ಕೊಟ್ಟರೆ ಕಲರ್ ಕಾಂಬಿನೇಷನ್ಗೆ ಉತ್ತಮ ಎನ್ನುವ ಅಭಿಪ್ರಾಯ ಬಂದಿತ್ತು. ನನ್ನ ಕತೆಗಳ ಹಸ್ತಪ್ರತಿಯ ಒಂದು ಕತೆ ಹೆಸರು ವೈಶಾಖ ಎಂದು. ಈಗಾಗಲೇ ಚದುರಂಗ ಅವರು ವೈಶಾಖ ಎನ್ನುವ ಕಾದಂಬರಿ ಬರೆದು ಅದು ಪ್ರಖ್ಯಾತವಾಗಿತ್ತು. ನನ್ನ ಸಂಕಲನಕ್ಕೂ ವೈಶಾಖ ಹೆಸರು ಇಟ್ಟರೆ ಓದುಗರು ಕನ್ಫ್ಯೂಸ್ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತೆ ಅನಿಸಿತು. ಆದರೂ ಚದುರಂಗರ ವೈಶಾಖ ಕಾದಂಬರಿಯು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೬ನೇ ಬರಹ ನಿಮ್ಮ ಓದಿಗೆ
ಸುಂದರ ಕಾಡಿನ ರೋಚಕ ಕಥೆಗಳು (೬): ರೂಪಾ ರವೀಂದ್ರ ಜೋಶಿ ಸರಣಿ
ಬೆಟ್ಟದ ಬಲಬದಿಯ ಕಿರುದಾರಿ ಹಿಡಿದು ಸಾಗಿದರೆ, ಅಲ್ಲೊಂದು ನೆಲ್ಲಿ ಮರ. ಅದರ ಬುಡದಲ್ಲಿ ನಮ್ಮ ನಾಯಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದುಕೊಂಡಿದೆ. ನಾನು ಗಾಬರಿಯಿಂದ ಜೋರಾಗಿ ಅಳತೊಡಗಿದೆ. ಯಾರೋ ರಾತ್ರಿ ಅಲ್ಲಿರುವ ಪೊದೆಯಲ್ಲಿ ನಾಡ ಬಾಂಬು ಇಟ್ಟಿದ್ದಾರೆ! ಮಾಂಸದ ವಾಸನೆಗೆ ಮರುಳಾಗಿ, ಅದು ಆ ಬಾಂಬನ್ನು ಬಯಲಲ್ಲಿ ತಂದಿಟ್ಟುಕೊಂಡು ಇಡಿದಾಗಿ ಕಚ್ಚದೆ, ಮೆಲ್ಲಗೆ ಒಂದು ಮೂಲೆಯನ್ನು ಬಿಡಿಸಿದೆ. ಅದಕ್ಕೇ ಸ್ವಲ್ಪಭಾಗ ಸಿಡಿದು, ಅದರ ಮೇಲ್ದವಡೆ ಸ್ವಲ್ಪ ಸೀಳಿತ್ತು. ಬಾಯೆಲ್ಲ ರಕ್ತ ಸಿಕ್ತ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹದಿನೈದನೆಯ ಕಂತು
ಹೆಣ್ಣಂದ್ರ ರಕ್ತ ಬಸೀಬೇಕು….: ಸುವರ್ಣ ಚೆಳ್ಳೂರು ಸರಣಿ
ಹಿಂಗ ಒಮ್ಮಿ ನಾನು ನಿಮ್ಮವ್ವ ಆ ದೊಡ್ಡ ಹೊಲಕ್ಕ ರಾಶಿ ಮಾಡಕಂತ ಹೋಗಿದ್ವಿ, ಹೊಲದ್ ದಗದಾ ಅಂದ್ರ ತುಸಾss ಇರತೈತ್ಯನು ಮೈ ಬಗ್ಗಿಸಿ ದುಡದ್ರಷ್ಟss ನೀಗತೈತಿ. ಅವತ್ತು ಮಟ ಮಟ ಮಧ್ಯಾಹ್ನದಾಗ ನಾನು ನಿಮ್ಮವ್ವ ಈ ಮ್ಯಾಗಳಮನಿ ಗಂಗಪ್ಪನ ಹೊಲಕ್ಕ ಆರತಾಸಿನ ದಗದಕ್ಕ ಹೋಗಿದ್ವಿ, ಆಕಿ ಕೂಡ ಅದಾ ನೆಲ್ಲು ಕೊಯ್ಯಾ ಕೆಲಸಕ್ಕಂತ ನಮ್ಮ್ ಜೋಡಿ ಬಂದಿದ್ಲು, ಗಂಗಪ್ಪನ ಹೊಲ ಆ ಮ್ಯಾಗಡಿ ಕಡಿ ಐತ್ಯಲಾ ಆ ದುರ್ಗಮ್ಮನ ಗುಡಿತಾಕ ಅಲ್ಲೆ ಒಂದು ಸಣ್ಣ್ ಹಳ್ಳ ಹರಿತೈತಿ ಅಲಾ ಆ ಹೊಲಕ್ಕೊಗಿದ್ವಿ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ
ಹಕ್ಕಿಗಳ ವಿವಿಧ ಅಂಗಗಳ ವಿಕಾಸ: ಡಾ. ಎಸ್.ವಿ. ನರಸಿಂಹನ್ ಸರಣಿ
ಇತರ ಪ್ರಾಣಿಗಳಿಗಿರುವಂತೆ ಪಕ್ಷಿಗಳಿಗೆ ಹಲ್ಲುಗಳಿಲ್ಲ. ಮೇಲ್ದವಡೆ-ಕೆಳದವಡೆ ಸೇರಿ ಕೊಕ್ಕಾಗಿದೆ. ಈ ಕೊಕ್ಕು ಬೇಟೆಯನ್ನು ಹಿಡಿಯಲು ಅಥವಾ ಆಹಾರವನ್ನು ಸೇವಿಸಲು ಮತ್ತು ಆತ್ಮರಕ್ಷಣೆಗಾಗಿ ಬಳಸಲ್ಪಡುತ್ತವೆ. ಉದಾಹರಣೆಗೆ, ಹಲವಾರು ಜಾತಿಯ ಹಕ್ಕಿಗಳಿಗೆ ಕೀಟ, ಹುಳಗಳನ್ನು ತಿನ್ನುವ ಸ್ವಭಾವ. ಆದರೆ ಅವುಗಳನ್ನು ಹಿಡಿಯುವ ವಿಧಾನ ಬೇರೆ ಬೇರೆ. ನೊಣಹಿಡುಕ, ಜೇನುಮಗರೆಗಳು ಹಾರುತ್ತಿರುವ ಕೀಟಗಳನ್ನು ಅಟ್ಟಿಸಿಕೊಂಡು ಹೋಗಿ ಹಿಡಿದರೆ, ಮೈನಾ, ಚಂದ್ರಮುಕುಟಗಳು ನೆಲದ ಮೇಲಿಂದ ಹೆಕ್ಕಿ ತಿನ್ನುತ್ತವೆ ಹಾಗೂ ಮರಕುಟ್ಟಿಗಗಳು ಮರದ ತೊಗಟೆಯನ್ನು ಕುಕ್ಕಿ ಅದರೊಳಗಿಂದ ಕೀಟಗಳನ್ನು ಆರಿಸಿಕೊಳ್ಳುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಹಕ್ಕಿಗಳ ವಿವಿಧ ಅಂಗಗಳ ವಿಕಾಸದ ಕುರಿತ ಬರಹ
ರಂಗದ ನಂಟು ಅಂಟಿದ ಬಗೆ: ಚಿತ್ರಾ ವೆಂಕಟರಾಜು ಸರಣಿ
ನಾಟಕೋತ್ಸವ ಮುಗಿದು ಅವರೆಲ್ಲ ಹೊರಟುಹೋದ ಮೇಲೆ ಮತ್ತೆ ನಮ್ಮ ದಿನಚರಿಗೆ ಹೊಂದಿಕೊಳ್ಳುವುದಕ್ಕೆ ಬಹಳ ಸಂಕಟವಾಗುತ್ತಿತ್ತು. ಕಿಂದರಿಜೋಗಿಯ ಕುಂಟನಂತೆ ‘ಅಯ್ಯೋ ಹೋಯಿತೆ ಆ ನಾಕ, ಅಯ್ಯೋ ಬಂದಿತೆ ಈ ಲೋಕʼ ಎನ್ನುವ ಭಾವನೆ ಬರುತ್ತಿತ್ತು. ಈಗಿನಷ್ಟು ನಾಟಕ ಪ್ರಯೋಗಗಳು ನೋಡಲು ಸಿಗುತ್ತಿರಲಿಲ್ಲವಾದ್ದರಿಂದ ನೀನಾಸಮ್ ತಿರುಗಾಟವನ್ನು ನಾವು ಕರೆಸಿದಷ್ಟು ವರ್ಷಗಳೂ ನಾಟಕ ಮಾಡಬೇಕು ಅನ್ನೋ ಆಸೆ ಹೆಚ್ಚಾಗುತ್ತಿತ್ತು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ
ಕ್ವಾಲಿಫಿಕೇಷನ್ ಇದ್ದ ಮಾತ್ರಕ್ಕೆ ವ್ಯಕ್ತಿ ಶ್ರೇಷ್ಠವೆಂದು ಅಲ್ಲ!!: ಬಸವನಗೌಡ ಹೆಬ್ಬಳಗೆರೆ ಸರಣಿ
ಹೆಚ್ಚೆಚ್ಚು ಓದಿದಂತೆ ಶಿಕ್ಷಣವು ನಮ್ಮಲ್ಲಿ ಉದಾರತೆಯನ್ನು ಬೆಳೆಸಬೇಕಿತ್ತು. ಹೃದಯ ವೈಶಾಲ್ಯತೆಯನ್ನು ಬೆಳೆಸಬೇಕಿತ್ತು. ಎಲ್ಲರೊಡನೆ ಹೊಂದಿಕೊಂಡು ಹೋಗುವ ಗುಣವನ್ನು ಬೆಳೆಸಬೇಕಿತ್ತು. ಆದರೆ ಕ್ವಾಲಿಫಿಕೇಶನ್ ಅನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತಿದೆ. ನಮ್ಮಲ್ಲಿ ಸಂಕುಚಿತತೆಯನ್ನು ಮೂಡಿಸುತ್ತಿದೆ. ಹೊಂದಾಣಿಕೆಯ ಕೊರತೆಯನ್ನು ಮೂಡಿಸುತ್ತಿದೆ. ಕೆಲವರು ಈ ಮನೋಭಾವ ತೋರುವುದಿಲ್ಲವಾದರೂ ಬಹುತೇಕರು ಇದೇ ರೀತಿಯ ಮನೋಭಾವ ತೋರುತ್ತಾರೆಂಬುದು ನನ್ನ ಅನುಭವಕ್ಕೆ ಬಂದಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ಮೂರನೆಯ ಕಂತು ನಿಮ್ಮ ಓದಿಗೆ
ಕತೆಗಳ ಬೆನ್ನತ್ತಿ….: ಎಚ್. ಗೋಪಾಲಕೃಷ್ಣ ಸರಣಿ
ಕವನಗಳು ನನ್ನ ಮನೆ ಅಡ್ರೆಸಿಗೆ ಬಂದು ಸೇರುವ ಹಾಗೆ ಯೋಜಿಸಿದ್ದೆವು. ಕವನಗಳ ಮಹಾಪೂರ ಹೇಗೆ ಬಂದವು ಅಂದರೆ ಪ್ರಪಂಚದಲ್ಲಿ ಪ್ರತಿ ಮೂರನೇ ಮನುಷ್ಯ ಒಂದು ಕವಿ ಅನಿಸುವ ಮಟ್ಟಿಗೆ! ಅದರ ಆಯ್ಕೆ, ಅವುಗಳಲ್ಲಿ ಯಾವುದಕ್ಕೆ ಬಹುಮಾನ ಮೊದಲಾದವುಗಳನ್ನು ನಾವು ನಾವೇ ನಿರ್ಧಾರ ಮಾಡುತ್ತಿದ್ದೆವು. ಕವನ ಸಂಕಲನದ ಹಸ್ತಪ್ರತಿ ಹಿಡಿದು ಬೆಂಗಳೂರಿನ ಅರಳೆ ಪೇಟೆಯ ಹಲವು ಮುದ್ರಣಾಲಯ ಮತ್ತು ಪೇಪರ್ ಮಾರಾಟದ ಅಂಗಡಿಗಳ ಸರ್ವೇ ಮಾಡಿದೆವು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಸುಂದರ ಕಾಡಿನ ರೋಚಕ ಕಥೆಗಳು-5: ರೂಪಾ ರವೀಂದ್ರ ಜೋಶಿ ಸರಣಿ
ನಮ್ಮಲ್ಲಿ ತಂಪು ಜಾಸ್ತಿಯಾದ್ದರಿಂದ ಹಾವುಗಳು ಹೆಚ್ಚಾಗಿ ಇರಲಿಲ್ಲವೆನ್ನಿಸುತ್ತದೆ. ಒಂದು ನಿರುಪದ್ರವಿ ಹಾವಿನ ಬಗ್ಗೆ ಹೇಳಬೇಕು ಅದೆಂದರೆ ಹಸಿರು ಹಾವು. ಹಸಿರು ದಂಟಿಗೆ ಸುತ್ತಿಕೊಂಡು, ಸಪೂರ ಕೋಲಿನಂತೇ ಡೊಂಕಾಗಿ ನಿಂತು ಹುಳ ಹುಪ್ಪಡಿ ಹಿಡಿಯುವ ಈ ಹಾವನ್ನು ಗುರುತಿಸುವುದೇ ಕಷ್ಟ. ನಾವೇ ಅದೆಷ್ಟೋ ಸಲ, ಮುಳ್ಳಣ್ಣು ಕೊಯಿದು ಕೊಳ್ಳುವಾಗಲೋ, ಜಾಜಿ ಹೂ ಕೊಯ್ಯುವಾಗಲೋ ಟೊಂಗೆಯ ಜೊತೆಗೇ ಎಳೆದು ಬಿಡುತ್ತಿದ್ದೆವು. ಆಗ ಅದು ಗಾಬರಿಬಿದ್ದು, ಸರಕ್ಕನೆ ಕೆಳಗಿಳಿದು ಓಡುತ್ತಿತ್ತು. ಅದು ಹೋಗಿ ಎಷ್ಟು ಹೊತ್ತಿನ ತನಕ, ನಾವು ಜೀವ ಬಾಯಿಗೆ ಬಂದವರಂತೇ ಭಯದಿಂದ ಇಷ್ಟಗಲ ಕಣ್ಣುಮಾಡಿ ಮಾತು ಮರೆತು ನಿಂತಿರುತ್ತಿದ್ದೆವು!!
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ
ಆ ಕತಿ ಮತ್ತೆ ಆ ಬಾಯೊಳಗೆ ಮುರಿದ ಕಾಲಿಟ್ಟ ಚಿತ್ರ ನನ್ನೊಳಾಗ ಒಂದಷ್ಟು ಪ್ರಶ್ನೆಗಳನ್ನ ಹುಟ್ಟಿಸಿತು. ಅದನ್ನೆ ಯೋಚಿಸ್ತಿರುವಾಗ ಊರೊಳಾಗ ದೇವಿ ಮೆರವಣಿಗೆ ಬಂದಿತ್ತು, ನೋಡೊಕಂತ ಹೋದಾಗ ಹಳೆ ಗೆಳತ್ಯಾರೆಲ್ಲ ಸಿಕ್ಕಿದ್ದು, ಮನಿಯೊಳಾಗ ಕೆಲಸ ಮಾಡಿ ಅಲ್ಲೆ ಇರ್ತಿದ್ದ ಹೆಣ್ಮಕ್ಕಳು ಜಾತ್ರಿ ನೆಪದಾಗ ಹೊರಾಗ ಬಂದು ಒಬ್ರನ್ನೊಬ್ರು ಖುಷಿಯಿಂದ ಮಾತಾಡಿಸ್ತಾ ನಿಂತಿದ್ದು, ಊರಿನ ಹಾದಿಯೊಳಾಗ ಜಾತಿ ಜನಾಂಗ ಎಲ್ಲಾ ಮರತು ಎಲ್ಲಾರೂ ಒಟ್ಟಾಗಿ ಸೇರಿ ಒಂದೆ ಮನ್ಯಾರೇನೊ ಅನ್ನುವಂಗ ಜಾತ್ರಿ ಕೆಲಸಾನ ಎಲ್ಲಾರೂ ಸೇರಿ ಹಂಚಿಗ್ಯಂಡು ಮಾಡಿದ್ದು ನೋಡಿ, ಎಲ್ಲಾರೂ ಒಟ್ಟಿಗೆ ಸೇರಾಕ ನಾವೆಲ್ಲಾರೂ ಒಂದSS ಅನ್ನೊದು ಮನದಟ್ಟು ಮಾಡಿಕ್ಯಳಾಕ ಜಾತ್ರಿ ಒಂದು ನೆಪ… ಅದ್ರಲ್ಲಿರೊ ಆಕಿ ಕೂಡ!
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ”




