ಕಳ್ಳತನಕ್ಕೆ ಗುಡ್ ಬೈ ಹೇಳಿದ ಗಂಟಿಚೋರರು ಮಾಡಿದ್ದೇನು?
ಆಗ ತುಡುಗು ಮಾಡುವುದು ಅವರ ಆರ್ಥಿಕತೆಯ ಪ್ರಧಾನ ಮೂಲವಾಗಿತ್ತು. ಅಂತೆಯೇ ಹಣ ಬಂಗಾರ ಮಾತ್ರವಲ್ಲದೆ ದಿನಬಳಕೆಯ ವಸ್ತುಗಳನ್ನು ಹೆಚ್ಚು ತುಡುಗು ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಈ ಸಮುದಾಯವು ಮುಖ್ಯವಾಗಿ ತುಡುಗು ಮಾಡುವ ಉದ್ದೇಶದಲ್ಲಿ ಹೊಟ್ಟೆಪಾಡಿನ ಅನಿವಾರ್ಯತೆ ಇತ್ತು. ಹಾಗಾಗಿ ಹಿಂದೆಯೂ ಕೂಡ ಈ ಸಮುದಾಯದಲ್ಲಿ ತುಡುಗುತನ ಇದ್ದದ್ದು ಹೆಚ್ಚಾಗಿ ಹಸಿವನ್ನು ನೀಗಿಸುವ ವಸ್ತುಸಂಗತಿಗಳಿಗೆ ಸಂಬಂಧಿಸಿದ್ದು ಎನ್ನುವುದನ್ನು ಗಮನಿಸಬೇಕು.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹತ್ತನೆಯ ಕಂತು.
ʻಕೀಸ್ ಟು ದ ಹೌಸ್ʼ: ವಿಷಾದದ ಸೋಂಕಿಲ್ಲದೆ ಸಾಗುವ ಭಾವಕಥನ
ತಂದೆಗೆ ಅಪರಾಧಿ ಪ್ರಜ್ಞೆ ಕಾಡುತ್ತಿರುತ್ತದೆ. ಹದಿನೈದು ವರ್ಷ ವಿಕಲಾಂಗನನ್ನು ಸಹಿಸಲಾರೆ ಎಂಬ ಕಾರಣದಿಂದ ದೂರ ಮಾಡಿ ನಿಶ್ಚಿಂತನಾಗಿ ಜೀವಿಸಿದ್ದ ಸಂಗತಿ ಅವನನ್ನು ಕಾಡುತ್ತದೆ. ತಂದೆಯ ಕರ್ತವ್ಯಗಳನ್ನು ನಿರ್ವಹಿಸುವುದಷ್ಟೇ ಅಲ್ಲ ಅದಕ್ಕಿಂತ ತಂದೆಯಾಗಿ ಪ್ರಾಮಾಣಿಕವಾಗಿ ಪರಿಭಾವಿಸುವುದು ಹೆಚ್ಚಾಗಿ ಸದ್ಯದ ಅಗತ್ಯ. ಇದರಿಂದಾಗಿಯೇ ವಿಕಲಾಂಗನ ಜೊತೆ ಆಡುವ ಮಾತುಗಳು ಕಡಿಮೆ ಇದ್ದರೂ ಅವುಗಳ ಭಾವಲಯದಲ್ಲಿ ವಿವರಣೆಗೆ ಮೀರಿದ ಅಂಶ ಇರಬೇಕಾಗುತ್ತದೆ. ಇದಕ್ಕೆ ಅತ್ಯಂತ ಸಹಜವಾಗಿ ಅಪಾರ್ಥಕ್ಕೆ ಅವಕಾಶವಿಲ್ಲದಂತೆ ಒಳಮಾಡಿಕೊಳ್ಳುವ ಮನಸ್ಥಿತಿ ವಿಕಲಾಂಗನಿಗೆ ಇರುವುದೂ ಅಷ್ಟೇ ಅವಶ್ಯ.
ಎಂಡದ ಗಡಿಗೆ ಹೊತ್ತ ಸರಸಿಯರು
ಪೆಂಟೆಯ ಸರಸಿಯರು ನನ್ನ ತಾಯಿಯ ಬಗ್ಗೆ ವಿಪರೀತ ಕುತೂಹಲ ತೋರುತ್ತಿದ್ದರು. ‘ಒಮ್ಮೆ ಕರೆದುಕೊಂಡು ಬಾ’ ಎನ್ನುತ್ತಿದ್ದರು. ಆಕೆ ಹೊಸಿಲು ದಾಟಿ ಬರುವಂತಿರಲಿಲ್ಲ. ತಾಯಿಗೆ ಮನೆಯೇ ಸೆರೆಯಾಗಿತ್ತು. ಹಾಗೆ ಹೊರಗೆ ತಾಯಿ ಹೋಗುವಂತಿದ್ದರೆ ಅಪ್ಪ ತಲೆಕಡಿಯುತ್ತಿದ್ದನೇನೊ. ನನಗೆ ಆ ಹೆಂಗಸರ ಬಗ್ಗೆ ಕೆಡುಕಿರಲಿಲ್ಲ. ಹೊಳೆಯಲ್ಲಿ ಅವರು ಈಜಾಡುತ್ತಿದ್ದರು. ಈಜು ಕಲಿಸಲು ನೀರಿಗಿಳಿಸಿ ಕೈಕಾಲು ಬಡಿಸುತ್ತಿದ್ದರು. ಗತಕಾಲದ ನನ್ನ ಹಳೆಯ ಚಡ್ಡಿ ನಿಲ್ಲುತ್ತಿರಲಿಲ್ಲ. ಅದನ್ನತ್ತ ಬಿಚ್ಚಿ ದಂಡೆಗೆ ಎಸೆಯುತ್ತಿದ್ದರು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ, ‘ನನ್ನ ಅನಂತ ನೀಲಿ ಆಕಾಶ’ ಸರಣಿಯ ಹೊಸ ಬರಹ
ಒಂದು ನೊಣದ ಕಥೆ….
ಅಂದು ಬೆಳಿಗ್ಗೆ ಕೋರ್ಟಿಗೆ ಹೋದ ನನಗೆ ಕಟ ಕಟೆಯಲ್ಲಿ ಮುಖಾಮುಖಿಯಾಗಿದ್ದು ಆಗ ಬೆಂಗಳೂರಿನಲ್ಲಿ ಇದ್ದಂತಹ ಇಬ್ಬರು ಪ್ರಸಿದ್ಧ, ಘಟಾನುಘಟಿ ಕ್ರಿಮಿನಲ್ ವಕೀಲರುಗಳಲ್ಲಿ ಒಬ್ಬರು. ಶವಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನಾನು ನೀಡುತ್ತ ಹೋದಂತೆ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೆಲವು ದಿವಸಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದಿದ್ದ ನಾನು ಪರೀಕ್ಷೆಗೆಂದು ಬಹಳಷ್ಟು ಓದಿದ್ದೆ. ಆದ್ದರಿಂದ ಪಾಟೀ ಸವಾಲು ಎದುರಿಸುತ್ತ, ಸಾವು ಸಂಭವಿಸಿ ಅಂದಾಜು ಎಷ್ಟು ದಿನಗಳಾಗಿರಬಹುದು ಎಂಬುದನ್ನು ಹೇಳಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಹೊಸ ಬರಹ.
‘ಸಮಷ್ಟಿ ನೀತಿ’ ಒಪ್ಪುವ ಔಚಿತ್ಯದ ಚರ್ಚೆ
ಯಕ್ಷಗಾನಕ್ಕೆ ಲಕ್ಷಣಗ್ರಂಥವಿಲ್ಲ, ಪ್ರಪಂಚದ ಹಲವು ಪ್ರದರ್ಶನ ಕಲೆಗಳಿಗೂ ಶಾಸ್ತ್ರ ಹೇಳುವ ‘ಪಠ್ಯ’ಗಳಿಲ್ಲ. ನಾಟ್ಯಶಾಸ್ತ್ರ, 11 ನೇ ಶತಮಾನದಲ್ಲಿ ಕ್ಷೇಮೆಂದ್ರ ಬರೆದ ‘ಔಚಿತ್ಯ ವಿಚಾರ ಚರ್ಚಾ’ ಇತ್ಯಾದಿ ಗ್ರಂಥಗಳಿದ್ದರೂ ಆ ಕಾಲದಲ್ಲೇ ಕಲಾಪ್ರಕಾರಗಳು ಅವುಗಳನ್ನು ಎಷ್ಟು ಅನುಸರಿಸುತ್ತಿದ್ದವೊ ಗೊತ್ತಿಲ್ಲ. ಆದರೆ ಪಠ್ಯಗಳು ಒಂದಕ್ಕೊಂದು ಪ್ರತಿಕ್ರಿಯಿಸುತ್ತಾ, ಒಂದನ್ನೊಂದು ವ್ಯಾಖ್ಯಾನಿಸುತ್ತಾ ತಮ್ಮದನ್ನು ಸೇರಿಸುವ ‘ಅಂತರ್ ಪಠ್ಯೀಯತೆ’ಯು ಪಠ್ಯ ಮತ್ತು ಪ್ರಯೋಗಕ್ಕೂ ಅನ್ವಯಿಸುತ್ತದೆ. ಕೃತಿ ಆರ್. ಪುರಪ್ಪೇಮನೆ ಬರೆಯುವ ‘ಯಕ್ಷಾರ್ಥ ಚಿಂತಾಮಣಿ’ ಸರಣಿಯಲ್ಲಿ ಯಕ್ಷಗಾನ ಔಚಿತ್ಯದ ಕುರಿತ ಲೇಖನ.
ಗಂಟಿಚೋರ ಸಮುದಾಯದ ತುಡುಗು ನುಡಿ
ಇಂದು ಬುಡಕಟ್ಟುಗಳ ಭಾಷೆಯ ಬಿಕ್ಕಟ್ಟೆಂದರೆ, ಆಯಾ ಭಾಗದ ಬಹುಸಂಖ್ಯಾತರ ಭಾಷೆಯನ್ನು ಬುಡಕಟ್ಟುಗಳು ಅನಿವಾರ್ಯವಾಗಿ ಬಳಸಬೇಕಾಗಿದೆ. ಹಾಗಾಗಿ ತಮ್ಮ ವೃತ್ತಿ ಬದುಕಿಗೆ ಅಂಟಿಕೊಂಡಿದ್ದ ಭಾಷೆಗಳನ್ನು ಬುಡಕಟ್ಟುಗಳ ಹೊಸ ತಲೆಮಾರು ಬಳಸುತ್ತಿಲ್ಲ. ಬಳಸುವ ಅಗತ್ಯವೂ ಕಾಣುತ್ತಿಲ್ಲ. ಆದರೆ ಎಷ್ಟೋ ಬಾರಿ ಈ ಬುಡಕಟ್ಟು ಭಾಷೆ ನುಡಿಗಟ್ಟುಗಳು ಆಯಾ ಸಮುದಾಯದ ಚರಿತ್ರೆಯನ್ನೂ ಹೇಳುತ್ತಿರುತ್ತದೆ. ಹೀಗೆ ಬುಡಕಟ್ಟುಗಳ ಭಾಷೆಯೊಂದು ನಶಿಸಿದರೆ, ಅದರ ಜತೆ ಆ ಸಮುದಾಯದ ಚರಿತ್ರೆಯೂ ನಶಿಸಿದಂತೆ. ಈ ಬಗ್ಗೆ ನೋಮ್ ಚೋಮಸ್ಕಿಯನ್ನು ಒಳಗೊಂಡಂತೆ ಜಗತ್ತಿನ ಭಾಷಾತಜ್ಞರು ಎರಡು ದಶಕಗಳಿಂದ ಇಂತಹ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಡಾ.ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಒಂಭತ್ತನೇ ಕಂತು.
ಆಧ್ಯಾತ್ಮಿಕ ಗುರುವಿನ ಕಾವ್ಯ ಮತ್ತು ಲಂಡನ್ನ ದಿನಗಳು
ಲಂಡನ್ನಿನ ಸೈಂಟ್ ಪೌಲ್ಸ್ ಎನ್ನುವ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿವೇತನ ಗಳಿಸಿಕೊಂಡ ಹನ್ನೆರಡು ವರ್ಷದ ಅರಬಿಂದೋವಿನ ಔಪಚಾರಿಕ ಶಿಕ್ಷಣ ಆರಂಭವಾಯಿತು. ಭಾಷೆಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದ ಭಾರತೀಯ ಬಾಲಕ ಆಂಗ್ಲ ಹೆಡ್ ಮಾಸ್ತರರ ಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬನಾದ. ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಗ್ರೀಕ್ ಲ್ಯಾಟಿನ್ ಹೀಗೆ ಹಲವು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದ ಅರಬಿಂದೋಗೆ ಲ್ಯಾಟಿನ್ ನಲ್ಲಿ ಇದ್ದ ಪ್ರಭುತ್ವವನ್ನು ಕಂಡ ಹೆಡ್ ಮಾಸ್ತರರು ತಾನೇ ಮುತುವರ್ಜಿಯಿಂದ ಲ್ಯಾಟಿನ್ ಹೇಳಿಕೊಡಲು ಶುರು ಮಾಡಿದರು.
ಯೋಗೀಂದ್ರ ಮರವಂತೆ…
ಪಾತಕಿಯ ಆರ್ತ ಕರೆಯಲ್ಲಿ ಕರುಣೆಯೇ
ಅಪ್ಪನ ನಡವಳಿಕೆ ನಿಗೂಢವಾಗಿತ್ತು. ಎಲ್ಲೂ ಹೋಗ ಕೂಡದು ಎಂದು ಅವ ಕಟ್ಟಪ್ಪಣೆ ವಿಧಿಸಿದ್ದ. ದುಷ್ಟನ ಸಹವಾಸ ಬೇಡ ಎಂದು ಅಪ್ಪ ನಿರ್ಧರಿಸಿರಬಹುದೇ ಎಂದು ಯೋಚಿಸಿದೆ. ಅನುಮಾನವಾಯಿತು. ಅಪ್ಪ ನನ್ನನ್ನು ಕತ್ತಲೆ ಮನೆಯೊಳಗೆ ಕೂಡಿ ಹಾಕಿದ್ದ. ಪಾತಕಿಯ ಬಗ್ಗೆ ಹತ್ತಾರು ಪ್ರಶ್ನೆ ಕೇಳಿದ್ದ. ಅಪ್ಪ ಕೇಳುತ್ತಿದ್ದ ದಾಟಿಗೆ ಹೆದರಿ ಏನೇನೊ ಹೇಳಿದ್ದೆ. ತಾತನ ಹೋಟೆಲಲ್ಲಿ ಜನ ಗಿಜಿಗುಟ್ಟುತ್ತಿದ್ದ ಸದ್ದು ಕೇಳಿಸುತ್ತಿತ್ತು. ತಾತನಿಗೆ ಮೊದಲು ಈ ಸುದ್ದಿ ತಿಳಿಸಬೇಕಿತ್ತು ಎಂದುಕೊಂಡೆ. ಕೈ ಮೀರಿತ್ತು. ಕತೆಗಾರ ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಬರಹ
ಅರವಿಂದ ಕುಡ್ಲ ಬರೆಯುವ ಹೊಸ ಅಂಕಣದಲ್ಲಿ ಶಾಲೆಯ ಕಲರವ
ಶಾಲೆಯೆಂಬುದು ಕಲಿಕೆಯ ತಾಣ. ಆದರೆ ಅದು ಕೇವಲ ಮಕ್ಕಳಿಗಷ್ಟೇ ಕಲಿಕೆಯ ತಾಣವಲ್ಲ. ದೊಡ್ಡವರೂ ಕಲಿಯುವ ಎಷ್ಟೊ ಪಾಠಗಳು ಅಲ್ಲಿವೆ. ಆ ಪಾಠಗಳೋ, ತರಗತಿಯೊಳಗೆ, ಕರಿ ಬೋರ್ಡುಗಳಲ್ಲಿ ಬರೆದ ಅಕ್ಷರಗಳಲ್ಲಷ್ಟೇ ಅಡಗಿಲ್ಲ. ಕುತೂಹಲ ಮತ್ತು ನಿಷ್ಕಲ್ಮಶ ನೋಟದಲ್ಲಿ ಜಗತ್ತನ್ನು ನೋಡುವ ಮಕ್ಕಳ ಕಣ್ಣುಗಳಲ್ಲಿಯೂ ಅಡಗಿದೆ ಎಂದು ನಂಬಿದವರು ಗಣಿತ ಅಧ್ಯಾಪಕ ಅರವಿಂದ ಕುಡ್ಲ. ತಾನು ನಿಸರ್ಗದ ನಿರಂತರ ವಿದ್ಯಾರ್ಥಿ ಎಂದು ನಂಬಿದ ಅವರು, ತಮ್ಮ ಅನುಭವಗಳ ಡೈರಿಯಿಂದ ಕೆಲವು ವಿಚಾರಗಳನ್ನು ಹೆಕ್ಕಿ ಕೆಂಡಸಂಪಿಗೆಯಲ್ಲಿ ಬರೆಯಲಿದ್ದಾರೆ.










