ಓಬಿರಾಯನ ಕಾಲದ ಕತೆ: ಮಾ. ವರ್ಧಮಾನ ಹೆಗ್ಡೆಯವರು ಬರೆದ ಕತೆ “ಸುಕುಮಾರ’ ಯಾ `ಅಣ್ಣೀ”
“ಆತನ ವಿಚಿತ್ರ ಡ್ರೆಸ್ಸ್, ಮುಖದಲ್ಲಿ ಫ್ರೆಂಚ್ ಕಟ್ ಮೀಸೆಯನ್ನು ನೋಡಿ ಆರಿಗರಿಗೆ ಪ್ರಥಮ ಆತನ ಪರಿಚಯವೇ ಆಗಲಿಲ್ಲ. ಬರುತ್ತಲೇ `ಗುಡ್ ಮಾರ್ನಿಂಗ್ ಫಾದರ್’ ಎಂದು ಹೇಳಿದ್ದನ್ನು ಕೇಳಿ ಸ್ವರದಿಂದ ಅಣ್ಣಿ ಎಂದು ತಿಳಿದು, `ಸಾವಿರಾರು ರೂಪಾಯಿ ಖರ್ಚು ಮಾಡಿ ಇಷ್ಟಾದರೂ ಇಂಗ್ಲೀಷ್ ಓದಿದಿಯಲ್ಲಾ ಸಾಕು’ ಎಂದರು.”
ಡಾ. ಕೆ. ಚಿನ್ನಪ್ಪ ಗೌಡರ ಕವನಸಂಕಲನಕ್ಕೆ ಡಾ. ಬಿ.ಎ. ವಿವೇಕ ರೈ ಮುನ್ನುಡಿ
“ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ.”
ಅಸ್ಪೃಶ್ಯರು : ಆಶಾ ಜಗದೀಶ್ ಅನುವಾದಿಸಿದ ರಸ್ಕಿನ್ ಬಾಂಡ್ ಬರೆದ ಮೊದಲ ಕತೆ.
“ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು. ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ. ಅವನಿಗೆ ನನ್ನದೇ ವಯಸ್ಸು… ಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು.”
ವಾಸುದೇವ ನಾಡಿಗ್ ಕವನ ಸಂಕಲನಕ್ಕೆ ದಿಲೀಪ್ ಕುಮಾರ್ ಮುನ್ನುಡಿ.
“ಕರವಸ್ತ್ರದ ಅನನ್ಯತೆ ತಿಳಿಯುವುದು ಹಿಂದಿನ ಸಂಕಲನಗಳಲ್ಲಿನ ಭಾಷೆ-ಬಂಧ-ಪ್ರತಿಮೆಗಳಲ್ಲಿಂದ ಬಿಡುಗಡೆ ಹೊಂದದೆ ಇಂದಿಗೆ ತೆರೆದುಕೊಂಡಿರುವ ತೀವ್ರವಾದ ಭಾವದ ಅಭಿವ್ಯಕ್ತಿಯ ಸ್ಥಿತಿಗೆ ಬಾಯಾಗುವ ಹಂಬಲದಿಂದ. ಎಲ್ಲ ಕಾವ್ಯಗಳೂ ತೀವ್ರವಾದ ಭಾವದ ಅಭಿವ್ಯಕ್ತಿಗೆ ತುಡಿಯುತ್ತಿದ್ದರೂ ಒಂದು ಸಂಕಲನದಿಂದ ಮತ್ತೊಂದು ಸಂಕಲನಕ್ಕೆ ಬೆಳೆದಿರುವ ಇವರ ಕಟ್ಟುವಿಕೆಯಿಂದ.”
ಓಬಿರಾಯನಕಾಲದ ಕತೆ: ಹುರುಳಿ ಭೀಮರಾವ್ ಬರೆದ ಕತೆ “ಮಾರಯ್ಯನ ಕವಾತು ”
“ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು…”
“ಈ ಬಾರಿ”: ಕುಸುಮಗೀತ ಅನುವಾದಿಸಿದ ಹಿಮಾಂಶು ಜೋಷಿ ಬರೆದ ಹಿಂದಿ ಕತೆ
“ಅವಳಂತೂ ಸುಮ್ಮಸುಮ್ಮನೆ ಗಾಬರಿ ಮಾಡಿಕೊಳ್ಳುತ್ತಾಳೆ, ತನ್ನ ತಾಯಿ ಹಾಗೇ ಅಲ್ಲವಾ, ನೂರಕ್ಕೆ ನೂರರಷ್ಟು!” ಅವರು ನಸುನಗುತ್ತಾ ಹೇಳುತ್ತಾರೆ, “ಭಾರತದಲ್ಲಿ ಭಾರಿ ಹೊಡೆದಾಟ ಬಡಿದಾಟ ನಡೆದಿದೆ. ಇಡೀ ದೇಶ ರಕ್ತದಿಂದ ತೊಯ್ದು ಹೋಗುತ್ತಿದೆ ಎಂದು ಅಲ್ಲಿ ಎಲ್ಲರಿಗೂ ಅನ್ನಿಸಿದೆಯಂತೆ…. ನಾನು ಕಳೆದ ತಿಂಗಳು ತಾನೆ ಶ್ಯಾಮಾಳ ಮದುವೆಗಾಗಿ ಅಮೃತಸರಕ್ಕೆ ಹೋಗಿದ್ದೆ….”
ರಘು ವೆಂಕಟಾಚಲಯ್ಯ ಅವರ “ಬಿದಿರಿನ ಗಳ” ಕಾದಂಬರಿಯ ಒಂದು ಅಧ್ಯಾಯ
“ಈ ವಯ್ಯ ನನ್ ಕಾಲುಂಗ್ರ ಬುಟ್ಟು ಮ್ಯಾಲಕ್ಕೆ ಯಾವತ್ತೂ ದಿಟ್ಸಿ ನೋಡಿಲ್ಲ. ತಂದೆ ಮಗಳಂಗೆ ನಮ್ ಸಂಬಂಧ. ಎಸ್ಟೊರ್ಸ ಆದ್ರು ಮಕ್ಳಾಗ್ದಿದ್ದಾಗ ಪೂಜೆ ಮಾಡ್ಸಿ ಯಂತ್ರಾನೂ ತಾವ್ ಕಟ್ದೆ ನನ್ ಯಜಮಾನನ್ ಕೈಲಿ ಕಟ್ಸುದ್ರು. ನನ್ನ ಯಾವತ್ತೂ ತಾಯಿ, ಅವ್ವ ಅಂತ, ಕೆಂಪಮ್ಮ ಅಂತ ಕರೆದವ್ರೆ ಒರ್ತು ಸದರ ಅಂತ ಇಲ್ವೇಇಲ್ಲ. ನಮ್ ಅಟ್ಟಿಗ್ ಬಂದ್ರು ಚೌಡೇಸ್ವರಿ ಅಂಕಣ ದಾಟಿ ಒಳಗ್ ಬಂದಿಲ್ಲ.”
ಯಂ. ಆರ್. ಶಾಸ್ತ್ರಿ ಬರೆದ ಕತೆ “ರಂಗಪ್ಪನ ಪಠೇಲಿಕೆ”
“ರಂಗಪ್ಪನ ಖರ್ಚು ಬಹಳ ಕಡಿಮೆ. ಬೀಡಿ, ಸಿಗರೇಟು, ಎಲೆ-ಅಡಿಕೆ, ಕಾಫಿ ಮೊದಲಾದ ಎಲ್ಲಾ ಅಭ್ಯಾಸಗಳು ಅವನಿಗಿದ್ದರೂ ಅವನಾಗಿ ಯಾವುದನ್ನೂ ಹಣಕೊಟ್ಟು ಕೊಂಡುಕೊಳ್ಳುವವನಲ್ಲ. ಹಾಗೆ ಯಾರಾದರೂ ಸಿಗರೇಟೋ, ಬೀಡಿಯೋ ಕೊಟ್ಟರೆ, ‘ಸ್ವಾಮೀ ಈ ದುರಭ್ಯಾಸದಿಂದಾಗಿ ನನ್ನ ಮನೆ ಹಾಳಾಗಿ ಹೋಯಿತು. ಗ್ರಾಮಸಂಚಾರಿಗಳಾದ ನಮಗೆ ಎಲ್ಲರೂ ಮಿತ್ರರೇ.”
ಕುಂವೀಯವರ “ನಿಜಲಿಂಗ” ಕಾದಂಬರಿಯ ಕುರಿತು ಓ.ಎಲ್.ನಾಗಭೂಷಣ ಸ್ವಾಮಿ
“ಓದುಗರು ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’”










