ನನ್ ಹೆಂಡ್ತಿ ನಂಗ ಅನಿವಾರ್ಯ,ಮಂದಿಗಲ್ಲಾ: ಪ್ರಶಾಂತ್ ಆಡೂರ ಪ್ರಹಸನ
”ಹಂಗ ನಾವ ದೋಸ್ತರ ಒಬ್ಬರಿಗೊಬ್ಬರ ಅರ್ಥಾ ಮಾಡ್ಕೋತಿದ್ದವಿ ನಮ್ಮ ಸುಖಃ ದುಃಖ ಇಷ್ಟ ಅಲ್ಲದ ಚಟಾನೂ ಹಂಚಗೊತ್ತಿದ್ವಿ ಅಂತ ನಮ್ಮೊಳಗ ಏನು ಸಮಸ್ಯೆ ಬರಲಿಲ್ಲ ಅನ್ರಿ. ಆದರೂ ನಾ ನಮ್ಮ ದೋಸ್ತರಿಗೆ ಒಂದ ಮಾತ ಭಾಳ ಕ್ಲೀಯರ್ ಮಾಡಿದೆ. ’ದೋಸ್ತ ನಮ್ಮಮ್ಮ ಹೆಂಡಂದಿರೂ ನಮಗ ಅನಿವಾರ್ಯ, ಬ್ಯಾರೆಯವರಿಗಲ್ಲಾ. ನಾವ ಕಟಗೊಂಡೇವಿ ನಾವ ಅನುಭವಸಬೇಕ’ ಅಂತ ಸೀದಾ ಹೇಳಿ ಈ ಇಶ್ಯುಕ್ಕೇಲ್ಲಾ ಮಂಗಳಾರತಿ ಹೇಳಿ ಬಿಟ್ಟೆ”.
ಸಾವಿರ ಸಾವಿರ ಸೇತುವೆಗಳ ನಗರಿ:ಸೀಮಾ ಅಂಕಣ
”ನಾನಂತೂ ಇಲ್ಲಿಗೆ ಬಂದ ಪ್ರಾರಂಭದಲ್ಲಿ ಸಿಕ್ಕ ಒಂದು ಅವಕಾಶವನ್ನೂ ಬಿಡದೆ ಸೇತುವೆಗಳನ್ನು ತೆರೆದು ಮುಚ್ಚುವ ಕಾರ್ಯಾಚರಣೆಯನ್ನು ತಲ್ಲೀನಳಾಗಿ ನೋಡುತ್ತಿದ್ದೆ, ಫೋಟೋ ತೆಗೆಯುತ್ತಿದ್ದೆ, ವಿಡಿಯೋ ಮಾಡುತ್ತಿದ್ದೆ. ಆದರೆ ಕೆಲ ತಿಂಗಳುಗಳ ನಂತರ ಅದು ದಿನನಿತ್ಯದ ಚಟುವಟಿಕೆ ಎಂದೆನಿಸಿ ವಿಶೇಷವಾಗಿ ಕಾಣಿಸುವುದು ನಿಂತುಹೋಯಿತು.”
ಈಸ್ಟರ್ ವಾರಾಂತ್ಯದ ಸುಖಯೋಗ:ಯೋಗೀಂದ್ರ ಅಂಕಣ
“ಚೈತ್ರಕಾಲದ ಆರಂಭವನ್ನು ಪ್ರತಿನಿಧಿಸುವ, ವಸಂತ ಮಾಸದ ದೇವತೆಯನ್ನು ಆರಾಧಿಸುವ ಹಬ್ಬ ಅಂದು ಇದಾಗಿತ್ತಂತೆ. ಇಲ್ಲಿನ ವರ್ಷದ ಆರು ತಿಂಗಳುಗಳ ಕಳೆಗೆಟ್ಟ ಪ್ರಕೃತಿಗೆ ಒಮ್ಮೆಲೇ ಚೇತನ ಬರಲಾರಂಭಿಸಿದರೆ ಅದು ಹಬ್ಬವೂ ಹೌದು ಪೂಜೆಯೂ ಹೌದು. ಅನಾದಿಕಾಲದ ಈ ಸಂಭ್ರಮ ಒಂದಾನೊಂದು ಕಾಲದಲ್ಲಿ ಪೆಗನ್ ಜನರು ಎಂದು ಕರೆಸಿಕೊಳ್ಳುವ ಯೂರೋಪಿನ ಪೂರ್ವಜ “ಮಣ್ಣಿನ ಮಕ್ಕಳ” ಹಬ್ಬ ಆಗಿತ್ತು. “
ತುಂಗೆ ಮತ್ತು ಭದ್ರೆಯ ಬಳುಕು:ಪ್ರಸಾದ್ ಶೆಣೈ ಕಥಾನಕ
“ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ.”
ಅಂತೂ ಇಂತು ಪ್ರಶಾಂತನ ಮಗಾ ಪಾಸ್ ಆದಾ: ಪ್ರಶಾಂತ್ ಆಡೂರ ಅಂಕಣ
“ನನ್ನ ಹೆಂಡತಿ ಅಂತೂ ತನ್ನ ಫೋನ ತೊಗೊಂಡ ತಮ್ಮ ತವರಮನಿಯವರಿಗೆಲ್ಲಾ ಫೋನ ಮಾಡಿದ್ದ ಮಾಡಿದ್ದ. ಅಕಿಗೆ ತಾ ಎಸ್.ಎಸ್.ಎಲ್.ಸಿ ಪಾಸ್ ಆದಾಗರ ಇಷ್ಟ ಖುಷಿ ಆಗಿತ್ತೊ ಇಲ್ಲೊ ಆ ದೇವರಿಗೆ ಗೊತ್ತ. ಏನ ಅಗದಿ ಮಗಗ ಕನ್ಯಾ ಗೊತ್ತಾಗಿ ಒಂದ ಹತ್ತ ತೊಲಿ ಬಂಗಾರ, ಒಂದ ಪ್ಲಾಟ್, ಐದ ಲಕ್ಷ ವರದಕ್ಷಣಿ ಸಿಕ್ಕೊರಂಗ ಎಲ್ಲಾರಿಗೂ ಹೇಳಿದ್ದ ಹೇಳಿದ್ದ.”
ಆಸ್ಟ್ರೇಲಿಯಾದ ಚಿಣ್ಣರಿಗೆ ಚಿಕ್ಕಚಿಕ್ಕ ಕಥೆಗಳು
”ಆಸ್ಟ್ರೇಲಿಯಾದ ಮಕ್ಕಳಿಗೆ ಇಷ್ಟವಾದ, ಪ್ರಸಿದ್ಧವಾದ, ಅವರ ಹಿರಿಯರೂ ಮೆಚ್ಚುವ ಕೆಲ ಮಕ್ಕಳ ಕತೆಗಳೇ ಹಾಗಿವೆ. ಪುಸ್ತಕ ಅನ್ನುವುದಕ್ಕಿಂತಲೂ ಅವನ್ನು ಚಿಕ್ಕಚಿಕ್ಕ ಕತೆಗಳು ಅಂತ ಕರೆದರೇನೇ ಅವಕ್ಕೆ ಶೋಭೆ ಅನ್ನಿಸುತ್ತೆ. ಕತೆಗಳ ಜೊತೆ ಚಿತ್ರಗಳನ್ನೂ ಸೇರಿಸಿರುವುದರಿಂದ ಅವು ಚಿತ್ರಕಥೆಗಳು ಎಂದೂ ಪ್ರಸಿದ್ಧಿ.”
ಇರುವ ಮಹಾನಗರಿಯಲ್ಲಿ ನನಗಂತ ಏನಿದೆ?:ರೂಪಶ್ರೀ ಅಂಕಣ
”ನಾನಿಲ್ಲಿರೋಕೆ ಲಾಯಕ್ಕಿಲ್ಲ ಅಂತ ಬೆಂಗಳೂರಿಗೆ ಯಾವಾಗಲೋ ಗೊತ್ತಾಗಿರಬೇಕು ಅದಕ್ಕೇ ಎಷ್ಟೇ ದಿನ ಬೇರೆ ಊರಿಗೆ ಹೋದರೂ ಇದು ನನ್ನನ್ನ ತನ್ನತ್ತ ಎಳೆಯೋದಿಲ್ಲ. ಮನುಷ್ಯನ ಸಕಲ ಬೇಡಿಕೆಗಳಿಗೂ ಉತ್ತರದ ಗೋಡೌನಿನಂಥಾಗಿರೋ ಈ “ಎಲ್ಲ” ಇರುವ ಮಹಾನಗರಿಯಲ್ಲಿ ನನಗಂತ ಏನು ಇದೆ? ಅಂತ ಹುಡುಕುತ್ತ ಕುಳಿತಿರೋಳು ನಾನು.”
ಕಡಲ ಕೆಳಗಿನ ಚಂದದ ದೇಶ:ಸೀಮಾ ಅಂಕಣ
”ಎಲ್ಲಿನೋಡಿದರಲ್ಲಿ ನೀರು ಕಾಣಸಿಗುವ ಈ ದೇಶದಲ್ಲಿ ಈಜು ಕಲಿಯುವುದನ್ನು ಜನರು ಕಡ್ಡಾಯವೆಂಬಂತೆ ಪರಿಗಣಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳು ಹುಟ್ಟಿ ಮೂರು ತಿಂಗಳಾದ ಕೂಡಲೇ ಅವರನ್ನು ನೀರಿಗೆ ಪರಿಚಯಿಸುತ್ತಾರೆ. ಆ ಮಕ್ಕಳು ನಾಲ್ಕು, ಐದು, ಆರು ವರ್ಷದವರಾಗುತ್ತಿದ್ದಂತೆಯೇ ಈಜು ಕಲಿತು ಡಿಪ್ಲೋಮ ಹೊಂದಿ, ಮೀನಿನಂತೆ ಈಜಬಲ್ಲವರಾಗುತ್ತಾರೆ.”
ರೀ… ಫೋನ ಮಾಡಿದವರ್ ಯಾರ್ ರೀ…?:ಪ್ರಶಾಂತ ಆಡೂರ ಪ್ರಹಸನ
“ಇತ್ತಲಾಗ ನನ್ನ ಹೆಂಡತಿ ನಿದ್ದಿ ನಾ ಬ್ಯಾರೆ ಹೆಣ್ಣ ಮಕ್ಕಳ ಜೊತಿ ನಡರಾತ್ರಿ ಒಳಗ ಮಾತಾಡೊದ ಕೇಳಿ ಹಾರಿ ಹೋತ.. ಅಕಿ ಕಣ್ಣ ಪಿಕಿ ಪಿಕಿ ತಗದ ನಮ್ಮ ಮಾತ ಕೇಳಲಿಕತ್ತಿದ್ಲು. ಕಡಿಕೆ ಅಕಿ ತಲಿಕೆಟ್ಟ ಆ ಫೋನ ಮಾಡಿದೊಕಿಗೆ ‘ಇಷ್ಟ ನಡ ರಾತ್ರಿ ಒಳಗ ನನ್ನ ಗಂಡಗ ಯಾಕ ಫೋನ ಮಾಡಿ, ನಿಂಗ ನನ್ನ ಗಂಡಗ ಏನ ಸಂಬಂಧ’ ಅಂತ ಝಾಡಸಲಿಕ್ಕೆ ನನ್ನ ಕೈಯಾಗಿಂದ ಫೋನ ಕಸಗೊಂಡ್ಲು.”









