ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ
ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು. ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು ಈ ರೀತಿಯ ಬರಹದಿಂದ ಸಾಧ್ಯ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ
ವಿಷಮಯ ವಿಶ್ವದ ವಿಷಾದ ಗಾಥೆ: ನಾಗೇಶ್ ಹೆಗಡೆ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ ಸಂಪತ್ತುಗಳನ್ನೆಲ್ಲ ಮಾಡುತ್ತಾನೆ. ಆದರೆ ಪ್ರಕೃತಿ ಮಾನವನಿಗೆ ಕೊಟ್ಟ ನಿಸರ್ಗದತ್ತವಾದ ಸಂಪತ್ತನ್ನೆಲ್ಲ ಲೂಟಿ ಮಾಡುತ್ತಿದ್ದಾನೆ. ನಾವು ಪ್ರಕೃತಿಗೆ ಕೊಡಬೇಕಾದ ಗೌರವವನ್ನು ಕೊಡದೆ ಅವಿಧೇಯತೆಯಿಂದ ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಪ್ರಕೃತಿಯ ಮುನಿಸನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ, ಅದು ಸಾಧ್ಯವೇ? ಪ್ರಕೃತಿಯ ವಿರುದ್ಧ ಮನುಷ್ಯ ಗೆದ್ದಿದ್ದೇ ಆದರೆ ಮುಂದೆ ಅವನಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಚಿಂತಕ ಯೂಜಿನ್ ಶುಮಾಕರ್‌ರ ಮಾತನ್ನು ಲೇಖಕರು ಉಲ್ಲೇಖಿಸುತ್ತಾರೆ.
ನಾಗೇಶ್ ಹೆಗಡೆ ಬರೆದ ‘ಪರಿಸರದ ಮಹಾ ದುರಂತಗಳು’ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ
‘ಸೀತೆ ಹೂ’ ಅರಳುವ ಸಮಯ…: ಶಾಂತಾ ಜಯಾನಂದ್ ಕವನ ಸಂಕಲನಕ್ಕೆ ಎಚ್.ಆರ್. ಸುಜಾತಾ ಮುನ್ನುಡಿ
ನಿಸರ್ಗ ಪ್ರೇಮ, ಸಂಸಾರ ಹೊಂದಾಣಿಕೆ, ಸಾಮಾಜಿಕ ನಡವಳಿಕೆ, ಸಾಮಾಜಿಕ ನ್ಯಾಯ, ಹೆಣ್ಣಿನ ಶೋಷಣೆ, ಎಲ್ಲವನ್ನೂ ಒರೆಗೆ ಹಚ್ಚುವ ಸಾಮರ್ಥ್ಯ ಶಾಂತಾ ಜಯಾನಂದರ ಕವನಗಳಲ್ಲಿ ಕಾಣಸಿಗುತ್ತವೆ. ರೂಪದರ್ಶಿ, ಕುಂಬಳ ಬಳ್ಳಿಯ ಹೂವು, ಸೀತೆಹೂ, ಸೀರೆ ಮಾರುವ ಹುಡುಗ, ವಿಮಾನ ನಿಲ್ದಾಣ, ಬುದ್ಧ, ನೀಲಿ ಕುರಿಂಜಿ, ಪಯಣ, ಸಾಲು ಮರದ ತಿಮ್ಮಕ್ಕ, ಪಂಚ ಪತಿವ್ರತೆಯರು, ಮುಂತಾದ ಕವನಗಳು ಜಗತ್ತಿನ ಚಲನೆಯನ್ನೂ , ಅದರಲ್ಲಿ ಉಳಿಯುವ ನೆನಪನ್ನು, ತಾತ್ವಿಕ ಧೋರಣೆಯನ್ನು ತೆರೆದು ತೋರುತ್ತವೆ.
ಶಾಂತಾ ಜಯಾನಂದ್ ಕವನ ಸಂಕಲನ “ಸೀತೆ ಹೂ” ಕೃತಿಗೆ ಎಚ್.ಆರ್. ಸುಜಾತಾ ಮುನ್ನುಡಿ
‘ಕಾಲಾಯಾತಸ್ಮೈ ನಮಃ’: ಕೆ ಸತ್ಯನಾರಾಯಣ ಕಾದಂಬರಿಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ
ಮಕ್ಕಳಿಗೆ ಯಾವ ಹಂತದಲ್ಲಿ ತಾಯಿ ತಂದೆಯರು ಬೇಕೆನಿಸುವುದಿಲ್ಲ ಅಥವಾ ಸಾಕೆನಿಸುತ್ತಾರೆ? ಎಂಬ ಗೊಂದಲದ ಆದರೆ ಪ್ರಸ್ತುತ ಪ್ರಶ್ನೆಯೂ ಇಲ್ಲಿದೆ! ನಮ್ಮ ತಲೆಮಾರಿನವರು ತಂದೆ ತಾಯಿಯರ ಮಾನಸಿಕ ಜಗತ್ತಿನಿಂದ ಕ್ರಮೇಣ ದೂರವಾದರೆ, ಇಂದಿನವರದು ಧಿಡೀರ್ ದೂರವಾಗುವಿಕೆ! ಭಾವನೆಗಳ ಘರ್ಷಣೆ! ಕೋಚಿಂಗ್ ಸೆಂಟರಿನಲ್ಲಿ ಡೆಪ್ಯೂಟಿ ಕರೆಸ್ಪಾಂಡೆಂಟ್ ಆಗಿದ್ದ ಮೇಲ್ ಮಧ್ಯಮ ವರ್ಗದ ರಂಗನಾಥ್ ಮತ್ತು ಶಿಕ್ಷಕಿ ಸುಧಾ ದಂಪತಿಗಳ ಮಕ್ಕಳು ವಿಕ್ರಮ್ ಹಾಗೂ ಪ್ರಾರ್ಥನಾ.
ಕೆ ಸತ್ಯನಾರಾಯಣ ಕಾದಂಬರಿ “ಕಾಲಜಿಂಕೆ”ಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ
ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್ ಹೊಸ ಕಾದಂಬರಿಯ ಆಯ್ದ ಭಾಗ
ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ
ನಮಗೊಂದು ಸೊಸೆ ಬೇಕು: ಕೆ. ಸತ್ಯನಾರಾಯಣ ಹೊಸ ಕಾದಂಬರಿಯ ಆಯ್ದ ಭಾಗ
ಸತೀಶ ದುರ್ದಾನ ತೆಗೆದುಕೊಂಡವನಂತೆ ರೂಮಿಗೆ ಹೋಗಿ ಬಾಗಿಲನ್ನು ಪಟಾರನೆ ಹಾಕಿಕೊಂಡ. ಹಾಲ್‌ನಲ್ಲೇ ಉಳಿದಿದ್ದ ಮೂರ್ತಿ-ಅನಿತಾ ಕೂಡ ಕಾಲೆಳೆದುಕೊಂಡು ರೂಮಿಗೆ ಹೋದರು. ಇಬ್ಬರೂ ಮಂಚದ ಮೇಲೆ ನೀಟಾಗಿ ಹಾಸಿದ್ದ ಹಾಸಿಗೆಯ ಮೇಲೆ ಕುಳಿತುಕೊಂಡು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಮಾತೇ ಹೊರಡಲಿಲ್ಲ. ಅನಿತಾ ಹತ್ತು ಸಲ ಬಚ್ಚಲು ಮನೆಗೆ ಹೋಗಿ ಬಂದರು. ಮೂರ್ತಿ ಒಂದಿಪ್ಪತ್ತು ಸಲ ಕೂದಲನ್ನು ಕಿತ್ತು ಹಾಕಿದರು. ಬಲಗೈ ಮಧ್ಯ ಬೆರಳಿನ ಉಗುರನ್ನು ಕಡಿಯುತ್ತಲೇ ಇದ್ದರು. ದೀಪ ಆರಿಸಿ ಮಲಗಲು ಇಬ್ಬರಿಗೂ ಭಯವಾಯಿತು. ಬಲ್ಬ್ ಪ್ರತಿದಿವಸವೂ ಹೊರಡಿಸುವುದಕ್ಕಿಂತ ಹೆಚ್ಚಿನ ಕಾಂತಿಯನ್ನು ಹೊರಡಿಸುತ್ತಿದೆ ಅನಿಸಿತು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ನಮಗೊಂದು ಸೊಸೆ ಬೇಕು” ಕೃತಿಯ ಆಯ್ದ ಭಾಗ
ಬಿಸಿಲಿನ ತುಣುಕುಗಳಿಗೆ ಒಂದ್ ಪತ್ರ ಬರೆದು…..: ದೇವರಾಜ್ ಹುಣಸಿಕಟ್ಟಿ ಬರಹ
ಈ ಲೋಕದ ಹಂಗುಗಳು, ದರ್ದುಗಳು ಇರ್ಶೆಯನ್ನೇ ಹಾಸಿ ಹೊದ್ದು ಮಲಗಿವೆ. ಪ್ರೇಮಿಗಳ ಲೆಕ್ಕದಲ್ಲಂತು ಥೇಟ್ ರಾಕ್ಷಸಿ ಸೊರೂಪ… ಇಡೀ ಇತಿಹಾಸದುದ್ದಕ್ಕೂ ಇದು ದಿಟವಾಗಿದೆ… ಇಲ್ಲಾ ಅಂದ್ರೆ ರೋಮಿಯೋ ಜೂಲಿಯಟ್, ಮಮತಾಜ್ ಷಹ ಜಹಾನ್ ಇನ್ನೂ ಅದೆಷ್ಟೋ ಕಥನಗಳು ರೂಪ ಪಡೆದಿರುತ್ತಿರಲಿಲ್ಲ…
ಅಮೃತಾ ಪ್ರೀತಮ್ ಒಂದಷ್ಟು ಕವಿತೆಗಳನ್ನು “ಬಿಸಿಲಿನ ಅದೆಷ್ಟೋ ತುಣುಕುಗಳು” ಎಂಬ ಸಂಕಲನದಡಿ ರಶ್ಮಿ ಎಸ್ ಕನ್ನಡಕ್ಕೆ ಅನುವಾದಿಸಿದ್ದು, ಈ ಸಂಕಲನದ ಕುರಿತು ದೇವರಾಜ್ ಹುಣಸಿಕಟ್ಟಿ ಬರಹ
ಕರ್ವಾಲೋ ಮರು ಓದು, ಒಂದು ಧ್ಯಾನ: ದೇವಿಕಾ ನಾಗೇಶ್ ಬರಹ
ಇರುವೆಯಿಂದ ರಕ್ಷಿಸಿಕೊಳ್ಳಲು ಆ ಪ್ರಾಣಿ ಇದ್ದಕ್ಕಿದ್ದಂತೆ ಪಕ್ಕದ ದೊಡ್ಡ ಮರಕ್ಕೆ ಹಾರಿ ಮರ ಕೂತು ತನ್ನ ದೇಹಕ್ಕೆ ಅಂಟಿಕೊಂಡಿದ್ದ ಕೆಂಪಿರುವೆಗಳನ್ನು ತಿನ್ನತೊಡಗಿತು. ಇದು ಕಂಡು ಆಶ್ಚರ್ಯ ಚಕಿತರಾದ ಲೇಖಕರು ಹಾರೋ ಓತಿಕ್ಯಾತ ಇದು ಎಂದು ಖಾತ್ರಿಯಾದ ಖುಷಿಯಲ್ಲಿ ತನ್ನ ತಂಡದವರನ್ನು ಕೂಗಿ ಕರೆದರು. ಆದರೆ ಹಾರುವ ಓತಿಕ್ಯಾತ ಇದ್ದಲ್ಲಿ ನಿಲ್ಲುತ್ತದೆಯೇ? ಲೇಖಕರು ಅದನ್ನೇ ತದೇಕ ಚಿತ್ತರಾಗಿ ಕಣ್ಣಲ್ಲೇ ಹಿಂಬಾಲಿಸುತ್ತ ತಾವು ಕಂಡ ಈ ಅದ್ಭುತ ಸರೀಸೃಪವನ್ನು ತನ್ನ ತಂಡದವರಿಗೆ ಪರಿಚಯಿಸುವ ಆತುರದಲ್ಲಿದ್ದರು…
ಪೂರ್ಣಚಂದ್ರ ತೇಜಸ್ವಿಯವರ ಪ್ರಮುಖ ಕಾದಂಬರಿ “ಕರ್ವಾಲೋ”ದ ಮರು ಓದು, ದೇವಿಕಾ ನಾಗೇಶ್ ಬರಹ
ಅರಳುವ ಭಾವಲೋಕ: ದೀಪಾ ಗೋನಾಳ ಕವನ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮಾತುಗಳು
ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ದೀಪಾ ಗೋನಾಳ ಕವನ ಸಂಕಲನ “ನಿನ್ನ ನೆನಪ ಕುಡಿದವಳು” ಕುರಿತು ಓ.ಎಲ್. ನಾಗಭೂಷಣ ಸ್ವಾಮಿ ಬರಹ









