Advertisement

ವ್ಯಕ್ತಿ ವಿಶೇಷ

ಜಂಕ್ಷನ್ ಪಾಯಿಂಟಿನ ಕಥೆಗಾರನಿಗೆ ಕೆಂಡಸಂಪಿಗೆಯ ಅಭಿನಂದನೆಗಳು

ಜಂಕ್ಷನ್ ಪಾಯಿಂಟಿನ ಕಥೆಗಾರನಿಗೆ ಕೆಂಡಸಂಪಿಗೆಯ ಅಭಿನಂದನೆಗಳು

ಕನ್ನಡದ ತರುಣ ಕತೆಗಾರ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ತಮ್ಮನ್ನು ಕಲಾಭ್ಯಾಸಿ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಮೊದಲ ಕಥಾಸಂಕಲನ ‘ನೀಲಕುರಿಂಜಿ’ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಗಳು ಪ್ರಕಟವಾದಾಗ ಎದುರಾಗುವ ಸಂಭ್ರಮಗಳು, ಜೊತೆಗೇ ಬರುವ ಟೀಕೆಗಳು ಇತ್ಯಾದಿ  ಸಾಹಿತ್ಯ ಕೃತಿಗಳು ಎದುರಿಸಬೇಕಾದ ʻಮಂಥನʼ ಎಂದು ಹೇಳುತ್ತ ಈ ಕ್ಷಣವನ್ನು ಸ್ವೀಕರಿಸಿದ್ದೇನೆ ಎನ್ನುತ್ತಾರೆ ದಾದಾಪೀರ್ . ಕೆಂಡಸಂಪಿಗೆಯಲ್ಲಿ ‘ಜಂಕ್ಷನ್ ಪಾಯಿಂಟ್’ ಅಂಕಣ ಬರೆಯುತ್ತಿರುವ ದಾದಾಪೀರ್ ಪ್ರಶಸ್ತಿ ಪಡೆದ ಸಂಭ್ರಮವನ್ನು ಸಂಕೋಚದಿಂದಲೇ ಇಲ್ಲಿ ಹಂಚಿಕೊಂಡಿದ್ದಾರೆ.

read more
ʻನವ್ಯದ ನಂತರ ಕನ್ನಡ ಸಾಹಿತ್ಯ ಮರುಭೂಮಿ ಎನಿಸಿದೆʼ

ʻನವ್ಯದ ನಂತರ ಕನ್ನಡ ಸಾಹಿತ್ಯ ಮರುಭೂಮಿ ಎನಿಸಿದೆʼ

ಜಿ. ರಾಜಶೇಖರ ಅವರು ಸೇವಾ ನಿವೃತ್ತರಾಗುವ ತನಕವೂ ನಾನು ಊರಿಗೆ ಹೋದಾಗಲೆಲ್ಲ ಉಡುಪಿಯ ಅಜ್ಜರಕಾಡುವಿನಲ್ಲಿರುವ ಎಲ್ ಐ ಸಿ ಕಛೇರಿಗೆ ಹೋಗಿ ಅವರನ್ನು ಭೇಟಿ ಮಾಡಿ ಬರುತ್ತಿದ್ದೆ. ಅವರಲ್ಲಿ ಒಂದಷ್ಟು ಮಾತುಕತೆ ನಡೆಸಿದ ನಂತರ ಕ್ಯಾಂಟೀನ್ ನಲ್ಲಿ ಚಹ ಕುಡಿಸದೆ ಅವರೆಂದೂ ಕಳುಹಿಸಿದ್ದಿಲ್ಲ. ಆದರೆ ಅವರ ಮಾತುಗಳು ಸದಾ ಪ್ರೇರಣಾದಾಯಿ ಆಗಿಯೇ ಉಳಿದವೆ ಎನ್ನುವ ಶ್ರೀನಿವಾಸ ಜೋಕಟ್ಟೆ ಅವರು, ಎರಡು ದಶಕಗಳ ಹಿಂದೆ  ಜಿ.ರಾಜಶೇಖರ ಅವರೊಡನೆ ನಡೆಸಿದ  ಸಂದರ್ಶನವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಆ ಸಂದರ್ಶನದ ಕೆಲವು ಮುಖ್ಯಾಂಶಗಳು ಇಲ್ಲಿವೆ.

read more
ಮುಕ್ತಛಂದದ ಶಾಂತಿನಾಥ ದೇಸಾಯಿ

ಮುಕ್ತಛಂದದ ಶಾಂತಿನಾಥ ದೇಸಾಯಿ

ನವ್ಯ ಸಾಹಿತ್ಯದ ಪ್ರಬಲ ಪ್ರತಿಪಾದಕರಾಗಿದ್ದ ಶಾಂತಿನಾಥ ದೇಸಾಯಿ ಮತ್ತು ರಾಮಚಂದ್ರ ಶರ್ಮ ಕೊನೆಯವರೆಗೂ ನವ್ಯ ಲೇಖಕರಾಗಿದ್ದರು ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ರಾಮಚಂದ್ರ ಶರ್ಮರ ವಿಷಯದಲ್ಲಿ ಇದನ್ನು ಒಪ್ಪಬಹುದಾದರೂ ಶಾಂತಿನಾಥ ದೇಸಾಯಿಯವರ ವಿಷಯದಲ್ಲಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಶಾಂತಿನಾಥ ದೇಸಾಯಿಯವರು ಮೊದಮೊದಲು ಬರೆದ ಕಥೆ-ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ಕಂಡು ಬರುವುದಿಲ್ಲವೆಂಬುದು ನಿಜವಾದರೂ ನಂತರದ ವರ್ಷಗಳಲ್ಲಿ ಅವರು ನವ್ಯತೆಯನ್ನು ಮೀರಿ ಸ್ಪಷ್ಟ ಸಾಮಾಜಿಕ ಪ್ರಜ್ಞೆಯಿಂದ ಬರೆದರು. ಶಾಂತಿನಾಥ ದೇಸಾಯಿ ಅವರ ಜನ್ಮದಿನದ ಸಂದರ್ಭದಲ್ಲಿ ವಿಕಾಸ ಹೊಸಮನಿ ಬರೆದ ಲೇಖನ ಇಲ್ಲಿದೆ. 

read more
ವ್ಯಕ್ತಿವಿಶಿಷ್ಟತೆಯೆಡೆಗಿನ ಅಸ್ಪಷ್ಟ ಹೆಜ್ಜೆಗಳು

ವ್ಯಕ್ತಿವಿಶಿಷ್ಟತೆಯೆಡೆಗಿನ ಅಸ್ಪಷ್ಟ ಹೆಜ್ಜೆಗಳು

ಚಿಂತನಶೀಲರಾದ ಹೊಸ ತಲೆಮಾರಿನ ಯುವಜನರನ್ನು ರೂಪಿಸುವ ನಿಟ್ಟಿನಲ್ಲಿ ಸದಾ ಚಟುವಟಿಕೆಯಿಂದ ಇದ್ದ ಜಿ. ರಾಜಶೇಖರ್‌ ಅವರು ತೀರಿಕೊಂಡಿದ್ದಾರೆ. ಉಡುಪಿ ಎಂದರೆ ಜಿ.ರಾಜಶೇಖರ್‌ ಎಂದು ಹೇಳುವಷ್ಟು ಪ್ರಖರವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದ ಅವರು ಹೊಸವಿಚಾರಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಸದಾ ಮುಕ್ತರಾಗಿದ್ದರು. ಸಿದ್ಧಾಂತಗಳು ಮತ್ತು ಆದರ್ಶ, ಅವುಗಳನ್ನು ವಾಸ್ತವವಾಗಿ ಕಾಣುವಲ್ಲಿ ಎದುರಾಗುವ ಸವಾಲುಗಳ ಕುರಿತು ತಮ್ಮದೇ ಆದ ನಿಲುವುಗಳನ್ನು ಪ್ರಾಮಾಣಿಕವಾಗಿ ಮಂಡಿಸುತ್ತಿದ್ದರು. ಅವರೊಂದಿಗಿನ ಸಹಮತ  – ಭಿನ್ನಮತಗಳ ನಡುವೆ ಸ್ನೇಹದ ದಾರಿ ಸವೆಸಿದವರು ಡಿ.ಎಸ್.‌ ನಾಗಭೂಷಣ್.‌  ರಾಜಶೇಖರ್‌ ಅವರ ಅಭಿನಂದನಾ ಗ್ರಂಥಕ್ಕೆ ಅವರು ಬರೆದಿದ್ದ ಲೇಖನವೊಂದು ನಿಮ್ಮ ಓದಿಗಾಗಿ ಇಲ್ಲಿದೆ.

read more
ಎ.ಎನ್. ಮುಕುಂದ ಅವರ ಎರಡು ಭೇಟಿಗಳ ನೆನಪು

ಎ.ಎನ್. ಮುಕುಂದ ಅವರ ಎರಡು ಭೇಟಿಗಳ ನೆನಪು

ಪ್ರೀತಿಯನ್ನು ಪರಿಮಳದಂತೆ ತಮ್ಮ ಸುತ್ತಲಿರುವವರಿಗೆ ಷರತ್ತೇ ಇಲ್ಲದೆ ಹಂಚಿದ ಎ.ಎನ್. ಮುಕುಂದ ಅವರು ಇಂದು ಅಗಲಿದ್ದಾರೆ. ತಾವು ಪ್ರೀತಿಸಿದ ಕಸುಬನ್ನು ಇನ್ನಷ್ಟು ಚಂದಗೊಳಿಸುತ್ತ , ತನ್ನ ಒಡನಾಡಿಗಳ ಜೊತೆ ಅದಮ್ಯ ಜೀವನ ಪ್ರೀತಿ ಹಂಚುತ್ತಾ ಬಾಳಿದವರು ಅವರು. ಲೇಖಕರಿಗೆ ಕವಿಭಾವ ಕವಿಸಮಯ ಎಂಬುದೊಂದಿರುತ್ತದೆ, ಅದನ್ನು ಕವಿಗಳು ಅಕ್ಷರಬೀಜಗಳಾಗಿಸಿ ನೆಡುತ್ತಾರೆ. ಅಂತೆಯೇ ಈ ಫೋಟೋಗ್ರಾಫರ್ ಕವಿಗಳದೇ ಆದ ಒಂದು ಭಾವ ಕ್ಷಣವನ್ನು ನೆರಳು ಬೆಳಕು ಮತ್ತು ಬಣ್ಣಗಳ ಅಪೂರ್ವ ಸಂಗಮದಲ್ಲಿ ಸೆರೆಯಾಗಿಸುತ್ತಾರೇನೋ ಅನಿಸುತ್ತದೆ ಎನ್ನುವ ಜಯಶಂಕರ ಹಲಗೂರು ಅವರು ಮುಕುಂದ ಅವರೊಡನೆ ಒಡನಾಡಿದ ಕ್ಷಣಗಳನ್ನು ಹೆಕ್ಕಿ ಲೇಖನವೊಂದನ್ನು ಬರೆದಿದ್ದಾರೆ

read more
ಮತನಿರಪೇಕ್ಷ ಪ್ರಾಜ್ಞ ಸಾಧು ಕರೀಮುದ್ದೀನ್

ಮತನಿರಪೇಕ್ಷ ಪ್ರಾಜ್ಞ ಸಾಧು ಕರೀಮುದ್ದೀನ್

ತೊಂಬತ್ತು ವರುಷದ ಪ್ರೊ. ಕರಿಮುದ್ದೀನ್ ಅವರು ಅಪಾರ ಜ್ಞಾನ ಭಂಡಾರದ ಮೇರುವಿನಂತೆ ನೆಟ್ಟಗೆ‌ ಕುತೂಹಲದಿಂದ ಕುಳಿತಿದ್ದರು.ಅವರ ಕಣ್ಣುಗಳಲ್ಲಿ ಸಾತ್ವಿಕತೆಯ ಪ್ರಖರತೆಯಿದೆ. ಮಕ್ಕಳಿಗೆ ಮಾನವೀಯತೆಯ ಶಿಕ್ಷಣ ಕೊಡಬೇಕು ಎಂದು ಆಗ್ರಹಿಸುತ್ತಾರೆ ಅವರು. ಮೂಲಭೂತವಾದವನ್ನು ಖಂಡತುಂಡವಾಗಿ ನಿರಾಕರಿಸುವವರು. ಶ್ರೀರಂಗಪಟ್ಟಣದ ಪ್ರಸಿದ್ಧ “ಗಂಜಾಂ”  ಬಡಾವಣೆಯಲ್ಲಿ ತಲೆತಲಾಂತರದ ಒಂದು ಹಳ್ಳಿ ಮನೆಯ ಪುಟ್ಟ ಕೋಣೆಯಲ್ಲಿ, ಅಣ್ಣನ ಮಕ್ಕಳ ನಿಗಾದಲ್ಲಿ ವಾಸ ಮಾಡುತ್ತಿರುವ ಅವರನ್ನು ಕಂಡುಬಂದು ಬರೆದಿದ್ದಾರೆ ಗಿರಿಜಾ ಶಾಸ್ತ್ರಿ

read more
ಗಾಂಧಿ ಕಥನ ಕುರಿತು ನಾಗಭೂಷಣ ಕಥನ

ಗಾಂಧಿ ಕಥನ ಕುರಿತು ನಾಗಭೂಷಣ ಕಥನ

ನಿನ್ನೆ ಇರುಳು ತೀರಿಹೋದ ನಿಷ್ಠುರ ಮನಸಿನ ಕನ್ನಡದ ವಿಮರ್ಶಕ ಡಿ.ಎಸ್.ನಾಗಭೂಷಣ ಕೈಗೆತ್ತಿಕೊಂಡ ಕೆಲಸವನ್ನು ತಪಸ್ಸಿನಂತೆ ಕುಳಿತು ಮುಗಿಸುತ್ತಿದ್ದ ಶ್ರಮಜೀವಿ ಬರಹಗಾರರಾಗಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆಕಾಶವಾಣಿ ದೆಹಲಿಯಿಂದ ಬರುತ್ತಿದ್ದ ಕನ್ನಡ ವಾರ್ತೆಗಳ ಪರಿಚಿತ ಮತ್ತು ಜನಪ್ರಿಯ ರೇಡಿಯೋ ಧ್ವನಿಯಾಗಿದ್ದರು.. ಮಹಾ ಜಗಳಗಂಟರೂ ಮತ್ತು ಅಷ್ಟೇ ಮುಗ್ಧರೂ ಆಗಿದ್ದ ನಾಗಭೂಷಣರು ತಮ್ಮ ರೇಡಿಯೋ ಕಾರ್ಯಕ್ರಮ, ಪತ್ರಿಕಾ ಸಂಪಾದಕೀಯ ಬರಹಗಳು ಮತ್ತು ಸಾರ್ವಜನಿಕ ಭಾಷಣಗಳಿಂದ ಬಹಳ ಕಾಲ ನೆನಪಿನಲ್ಲಿ ಉಳಿಯಬಲ್ಲವರು. ಈ ಸಲದ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಪುಸ್ತಕದ ಕುರಿತು ಈ ಹಿಂದೆ ಅವರು ಬರೆದಿದ್ದ ಲೇಖನವೊಂದು ಅವರ ನೆನಪಿಗಾಗಿ ಇಲ್ಲಿದೆ.

read more
ಪ್ರೀತಿ, ಕೃತಜ್ಞತೆ, ವಿಷಾದ, ಮತ್ತೇನಿಲ್ಲ…

ಪ್ರೀತಿ, ಕೃತಜ್ಞತೆ, ವಿಷಾದ, ಮತ್ತೇನಿಲ್ಲ…

ಪರಿಸರ ಪರ ಬರಹಗಾರ  ಎಂಬ ಪರಿಚಯದೊಂದಿಗೆ ನಾಗೇಶ್ ಹೆಗಡೆ ಅವರೊಂದಿಗೆ ಸ್ನೇಹ ಬೆಳೆದರೆ,  ನಂತರ ಅರಿವಿಗೆ ಬರುವುದು ಅವರ ಜೀವನಪ್ರೀತಿ. ವಿಜ್ಞಾನ ಬರಹಗಾರ  ಎಂದು ಗುರುತಿಸಿಕೊಂಡರೂ ಅವರಿಗೆ ಸಂಗೀತ, ಸಾಹಿತ್ಯ, ಭಾಷಾ ವಿಲಾಸ ಸಹಜವಾಗಿ ಒಲಿದು ಬಂದ ಕ್ಷೇತ್ರಗಳು. ಅವರ ಕುರಿತು 62 ಮಂದಿ ಲೇಖಕರು ಬರೆದ
ಬರಹಗಳನ್ನೊಳಗೊಂಡ ‘ನೆಲಗುಣ’ ಅಭಿನಂದನಾ ಗ್ರಂಥವೊಂದನ್ನು ಎಸ್. ದಾವಣಗೆರೆ ಅವರು ಸಂಪಾದಿಸಿದ್ದಾರೆ. ಆ ಪುಸ್ತಕದಲ್ಲಿ ಹಿರಿಯ ಕತೆಗಾರ, ಪತ್ರಕರ್ತ ರಘುನಾಥ ಚ.ಹ. ಅವರು ಬರೆದ ಲೇಖನವೊಂದನ್ನು ಕೆಂಡಸಂಪಿಗೆ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. 

read more
ನನ್ನ ಹಾಡು ನನ್ನದು ಎಂದ ಸಾಹಿರ್

ನನ್ನ ಹಾಡು ನನ್ನದು ಎಂದ ಸಾಹಿರ್

ಪರಸ್ಪರ ಆಕರ್ಷಣೆ ಅವಕಾಶಗಳಿದ್ದ ಯಾವ ಪ್ರಣಯಾಸಕ್ತಿಗಳನ್ನೂ ಸಹ ಸಾಹಿರ್ ಒಂದು  ಹಂತದ ನಂತರ ಮುಂದುವರೆಸುವ ಇಚ್ಛೆ ತೋರಿಸುತ್ತಿರಲಿಲ್ಲ. ಸಾಹಿರನ ಕಥೆ ವ್ಯಥೆಗಳನ್ನು ಆಪ್ತವಾಗಿ ಬಲ್ಲ ಒಡನಾಡಿಗಳು ಹಾಗು ವಿಮರ್ಶಕರು ಈ ವಿಷಯವಾಗಿ ಅನೇಕ ರೀತಿಯ ಟೀಕೆ ಟಿಪ್ಪಣಿಗಳನ್ನು ಕೊಡುತ್ತಾರೆ. ಹೆತ್ತರವರ ನಡುವಿನ ವಿರಸ ಘರ್ಷಣೆಗಳ ಮಧ್ಯೆ ಸಿಲುಕಿ ನಲುಗಿ ಹೀಗೆ ಜವಾಬ್ದಾರಿಗಳಿಂದ ದೂರ ಸರಿಯುತ್ತಾನೆ ಎಂದು ಅನೇಕರು ಹೇಳುತ್ತಾರೆ. ಮಾರ್ಚ್ 8 ಅಂದರೆ ಆತನ 101ನೆಯ…

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ