ಬೀಸುಕಲ್ಲು ಸಾಗಿಸಿದ ಕಥೆ
ಊಟ ಉಪಚಾರವಾದ ಮೇಲೆ ನಾನು ಶ್ರೀದೇವಿ ಜೊತೆ ಅಡುಗೆ ಮನೆ ಸೇರಿದೆ. ನೋಡ್ತೀನಿ ಬಿಸೋಕಲ್ಲು ಒಂದು ಸಿದ್ಧವಾಗಿದೆ! ಒಮ್ಮೆಗೇ ನಾವಿಬ್ಬರು ಮಿಂಚಿನ ಸಂಚಾರವಾದಂತೆ ಕಾರ್ಯಪ್ರವೃತ್ತರಾದೆವು. ಇಬ್ಬರಿಗೂ ಒಂದೇಸಲ ಒಟ್ಟಿಗೇ ಪರಿಸ್ಥಿತಿಯ ಬಗ್ಗೆ ಜ್ಞಾನೋದಯವಾಯಿತು. ತೇಜಸ್ವಿಗೆ ಕಲ್ಲು ಗೋಚರಿಸದಂತೆ ಗೊತ್ತಾಗದಂತೆ ನಮ್ಮ ಮನೆಗೆ ಸಾಗಿಸುವುದಾದರೂ ಹೇಗೆ. ಕೊನೆಗೊಂದು ಉಪಾಯ ಮಾಡಿದೆವು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರೆದ ಬರಹ.
ಕಾಲದ ಗಾಳಕ್ಕೆ ಸಿಕ್ಕ ಮೀನು
ಅವತ್ತು ಅಮ್ಮ, ಅಣ್ಣ ಮನೆಗೆ ಬಂದಾಗ, ತೇಜಸ್ವಿಯವರು ಮನೆಯ ಚಮಚೆ ಬಳಸಿ, ಸ್ಪಿನರ್ ತಯಾರಿಸಿದ ಬಗ್ಗೆ ಸವಿವರವಾಗಿ ಹೇಳಿದೆ. ಅಮ್ಮ ಬೆಚ್ಚಿ ಬಿದ್ದರು. `ಅಲ್ಲೇ, ನೀನು ಕುವೆಂಪು ಎಂದು ಕೆತ್ತಿಸಿದ್ದ ಚಮಚ ಕೊಟ್ಟು ಬಿಟ್ಟೆಯಾ`?. ಈ ಚಮಚಗಳನ್ನು ಚಿತ್ರಕೂಟದ ಮನೆಗೆ ಒಕ್ಕಲು ಬರುವಾಗ ಕುವೆಂಪು ಹೆಸರು ಹಾಕಿಸಿ ಅಮ್ಮ ತಂದಿಟ್ಟವು. ಆಗ ನನ್ನ ಪಜೀತಿ ಏನೆಂದು ಹೇಳಲಿ. ಇವರು ಕೇಳಿದ ಮೇಲೆ ಕೊಡದೇ ಇರುವುದು ಹೇಗೆ ಸಾಧ್ಯ. ತಮಾಷೆಯಾಗಿದೆ ಅಲ್ವೆ. ಅಮ್ಮನಿಗೆ ಕುವೆಂಪು ಮುಖ್ಯ, ನನಗೆ ನನ್ನವರು ಮುಖ್ಯ.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರೆದ ಬರಹ.
ಪ್ರಾಣಿ ಪ್ರಪಂಚದ ತರ್ಕ ಮೀರಿದ ಕತೆಗಳು
ನಮ್ಮ ಕೆಂಚಬೆಕ್ಕಿನೊಂದಿಗೆ ನಿಮ್ಮನ್ನು ಎದುರುಗೊಳ್ಳುತ್ತೇನೆ. ಇವನ ಪರಿಚಯವಾದ ನಂತರ ಕೆಂಚು-ಬಿಳಿ ಮಿಶ್ರಿತ ಎಲ್ಲಾ ಬೆಕ್ಕುಗಳೂ ನನ್ನ ಕಣ್ಣಿಗೆ ಅಪ್ಯಾಯಮಾನವಾಗಿ ಕಾಣುವಂತಾಗಿದ್ದು ಇವನ ವಿಶಿಷ್ಟ ಗುಣದಿಂದ. ಚುರುಕಿನ, ಇಲಿ ಹಿಡಿಯುವ, ಠಣ್ಣನೆ ನೆಗೆದು ಮಡಿಲಲ್ಲಿ ಕೂರುವ ಬೆಕ್ಕೊಂದು ಈಗ ನಿಮ್ಮ ಕಣ್ಮುಂದೆ ಬಂದು ನಿಂತಿರಬೇಕಲ್ಲವೇ? ಆದರೆ ಕೆಂಚ ಹಾಗಲ್ಲವೇ ಅಲ್ಲ. ಇವನು ಬಹಳ ಸೋಮಾರಿ. ಸೋಮಾರಿ ಎನ್ನುವುದಕ್ಕಿಂತ ‘ಹೆದ್‌ರ್‌ಪುಕ್ಲ’. ಬೇಟೆಗೂ ಇವನಿಗೂ ದೊಡ್ಡ ವೈರ. ಇಲಿ, ಹೆಗ್ಗಣ, ಗುಡ್ಡೆಹೆಗ್ಗಣ, ಅಳಿಲು, ಕೋಳಿ ಎಲ್ಲ ಬಿಡಿ ಒಂದು ಜಿರಳೆಯನ್ನೂ ಹಿಡಿಯಲಾರ! ಪ್ರಾಣಿಪ್ರಪಂಚದ ಲವಲವಿಕೆಯ ಕತೆಗಳನ್ನು ಬರೆದಿದ್ದಾರೆ ವಿಜಯಶ್ರೀ ಹಾಲಾಡಿ.
ನೂರಡಿ ರಸ್ತೆಯ ಸಾಹಸಗಳು
ಇಬ್ಬರು ಗೆಳೆಯರು ಸುಂದರೇಶ್ ಮುಂದೆ ಶ್ರೀರಾಂ ಹಿಂದೆ ರಸ್ತೆ ದಾಟುತ್ತಿರಬೇಕಾದರೆ ನಡುವಯಸ್ಸಿನ ಹೆಂಗಸೊಬ್ಬಳು ಬಂದು ಲಪ್ಪೆಂದು ಬಿಗಿಯಾಗಿ ಸುಂದರೇಶ್ ಕೈ ಹಿಡಿದಳು. ಇಬ್ಬರು ಗೆಳೆಯರು ಅನಿರೀಕ್ಷಿತ ನಡವಳಿಕೆಯಿಂದ ತತ್ತರಿಸಿದರು. ಆಗ ಶ್ರೀರಾಂ ಅಕ್ಷರಶಃ ಅವಳ ಕೈ ಕಿತ್ತು ಹಾಕಿ ನೋಡಿದರೆ ಸುಂದರೇಶ್ ಮುಖವೆಲ್ಲ ಕೆಂಪೇರಿ ಬೆವರುತ್ತಿದ್ದರಂತೆ. ಅಲ್ಲದೆ ಸರ ಸರನೆ ರಸ್ತೆ ದಾಟುತ್ತಿದ್ದಾರೆ ! ಇದಕ್ಕೂ ಮೀರಿ “ನನ್ನ ಮರೆತು ಬಿಟ್ರಾ ಅಣ್ಣಾ” ಎಂದು ಬೊಬ್ಬಿಡುತ್ತಾ ಓಡೋಡಿ ಬಂದು ಅವಳು ಸಮೀಪಿಸುತ್ತಿದ್ದಾಳೆ. ಇದೇನೋ ವಿಚಿತ್ರ ಪ್ರಸಂಗವಿರಬೇಕೆಂದು ಅರಿತ ಶ್ರೀರಾಂ ಶೀಘ್ರ ಕಾರ್ಯೋನ್ಮುಖರಾದರು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ.
‘ತವರಿಗೂ ಒಂದು ತವರು ಹಿಂಬಾಗಿಲು’
ಆಧುನಿಕ ಮನೆಗಳಲ್ಲಿ ಹಿಂಬಾಗಿಲಿಗೆ ಜಾಗವೇ ಇರುವುದಿಲ್ಲ. ಒಂದುವೇಳೆ ಹಿಂಬಾಗಿಲು ಇದ್ದರೂ, ಅದರ ವಿನ್ಯಾಸದಲ್ಲಿ ಎಷ್ಟೊಂದು ಒಪ್ಪ ಓರಣ ಇರುತ್ತದೆ. ಕಾಲ ಬದಲಾದಂತೆ ಹಿಂಬಾಗಿಲ ಅವಶ್ಯಕತೆಯೂ ಇಲ್ಲವಾಗಿದೆ. ಆದರೆ ಹಿಂದಿನ ಕಾಲದ ಮನೆಗಳಲ್ಲಿ ಒಪ್ಪ ಓರಣಕ್ಕೆ ಆದ್ಯತೆಯಿಲ್ಲದ ಹಿಂಬಾಗಿಲುಗಳ ಬಳಿಯೇ ಹೃದಯ ಬಿಚ್ಚಿ ಮಾತನಾಡುವ ‘ತಾವು’ ಇರುತ್ತಿತ್ತು. ಹಿಂಬಾಗಿಲುಗಳ ಈ ಲೋಕವು…
ತೇಜಸ್ವಿ ನೆನಪು ಮಧುರ
ಪ್ರೆಸ್ಸು ಮ್ಯಾಗಝಿನೂ ಗಗನಕುಸುಮದಂತೆ ಬಲುದೂರದಲ್ಲಿ ಮಿನುಗಿ ಹೋಗಿದ್ದು ಇವರ ಪ್ರಜ್ಞೆಯ ಪರಧಿಯ ಮೇಲೆ ದಾಖಲಾದ ಅನುಭವ ಇವರನ್ನು ಕಂಗೆಡಿಸಿತ್ತು. ಡಿಗ್ರಿ ಮುಗಿಸಿ ಹತ್ತಿರತ್ತಿರ ನಾಲ್ಕು ವರ್ಷಗಳಾದರೂ ಹೊಟ್ಟೆಪಾಡಿಗಾಗಿ ದುಡಿಮೆ ಮಾಡಲಿಲ್ಲವೆಂದು ಕೊರಗುತ್ತಿದ್ದರು. ಕುಂಟನೋ, ಕುರುಡನೋ, ಹೆಳವನೋ ಆಗಿರುವವನಂತೆ ಇನ್ನೊಬ್ಬರಿಗೆ ಭಾರವಾಗಿ ಕುಳಿತಿರುವೆನಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಿದ್ದರು. ‘ನಿರುದ್ಯೋಗದ ಮುದ್ದೆಯಾಗಿ ಹೋಗಿದ್ದೇನೆ. ತೋಟ ಮಾಡಿಯೇ ತೀರುವೆ’ ಎಂದು ನಿರ್ಧರಿಸಿದರು.’ಮೂಡಿಗೆರೆ ಹ್ಯಾಂಡ್ ಪೋಸ್ಟ್’ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ.
ರಾಜೇಶ್ವರಿ ತೇಜಸ್ವಿ ಎಂಬ ‘ಧೀ ಶಕ್ತಿ’ಯ ನೆನಪಿನಲ್ಲಿ..
‘ನನ್ನ ತೇಜಸ್ವಿ’ ಪುಸ್ತಕದಲ್ಲಿ ತೇಜಸ್ವಿ-ರಾಜೇಶ್ವರಿಯರ ನಡುವಿನ ಪ್ರೇಮನಿವೇದನೆಯ ಸನ್ನಿವೇಶ ಸುಂದರವಾಗಿ ಮೂಡಿಬಂದಿದೆ. ಸಿನೆಮಾದ ಸನ್ನಿವೇಶ ಎಂಬಂತೆ ಮೇಲ್ನೋಟಕ್ಕೆ ಕಾಣಬಂದರೂ, ಸಂವೇದನಾಶೀಲ ಓದುಗರಿಗೆ ಇದರಲ್ಲಿ ಕಂಡುಬರುವುದು ಆಕೆಯ ಸ್ಥೈರ್ಯ! ಸಾಂಪ್ರದಾಯಿಕವಾಗಿ ಪುರುಷನೇ ಪ್ರೇಮನಿವೇದನೆ ಮಾಡಿಕೊಳ್ಳುವುದನ್ನು ಹೆಚ್ಚಾಗಿ ಕಾಣುತ್ತೇವೆ. ಆದರೆ ಆ ಕಾಲದಲ್ಲಿಯೇ ರಾಜೇಶ್ವರಿ ಅವರು ದಿಟ್ಟತನದಿಂದ, ತಮ್ಮ ಪ್ರೇಮನಿವೇದನೆ ಮಾಡಿಕೊಂಡಿದ್ದರು.
ಆನೆಗಳಿಗೆ ತೇಜಸ್ವಿ ತೋಟಾನೇ ಯಾಕೆ ಬೇಕಾಯ್ತು?
ಕಾಫಿ ಬೆಳೆಗಾರರು ತೋಟಗಳನ್ನು ವಿಸ್ತರಿಸುವುದಲ್ಲದೆ ಹೊರರಾಜ್ಯಗಳಿಂದ ಉದ್ಯೋಗಗಳನ್ನರಸಿ ಬರುವವರು- ಇದ್ದಿಲು ಸುಡಲು, ನಾಟ ಕೊಯ್ಯಲು, ಬಿದಿರು ಕಡಿದು ಲೋಡು ಮಾಡಲು ಬಂದವರೆಲ್ಲಾ ಕಾಡೊಳಗೆ ಹೂಡಿದ ತಮ್ಮ ತಾತ್ಕಾಲಿಕ, ಬಿಡಾರಗಳನ್ನೇ ಶಾಶ್ವತ ಮಾಡಿಕೊಂಡು ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಓಟಿನ ಬಲದಿಂದ ಕುಳಿತು ಬಿಡುತ್ತಾರೆ. ಓಟಿನ ಬಲವಿಲ್ಲದ ಮರಗಳು ಕೇವಲ ನಾಟಾಗಳಾಗಿ ನೆಲಕ್ಕುರುಳುತ್ತವೆ. ಕಾಡಿನ ಪ್ರಾಣಿ ಸಮುದಾಯಗಳಿಗಂತೂ ಬದುಕುವುದೇ ಸವಾಲಾಗಿದೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ
ಪೇರಳೆಯ ಸಿಹಿ ಕೊಡುವ ಕಾಡಿನೊಡಲ ಜೀವ
ಈ ಮಾಯಾಲೋಕವೇ ತನ್ನ ನೂರಾರು ಕನಸುಗಳನ್ನೇ ನನಸಿನ ತಟ್ಟೆಯಲ್ಲಿಟ್ಟು ತಿನ್ನಿಸುವ ಮೃಷ್ಟಾನ್ನವಾಗಿತ್ತು ಚಂದ್ರಮ್ಮನಿಗೆ. ಆದರೆ 2005 ರಲ್ಲಿ ನೂರಾರು ಜೀವಗಳಿಗೆ ಉಸಿರು ಕೊಡುತ್ತಿದ್ದ ಕಂಪೆನಿಯ ಉಸಿರೇ ನಿಂತು ಹೋದಾಗ ಚಂದ್ರಮ್ಮನ ಕುಟುಂಬ ತತ್ತರಿಸಿತು. ತನ್ನೊಳಗೆ ಇಳಿದುಹೋದ, ತನ್ನದೇ ಹುಟ್ಟು ಮಗು ಎನ್ನುವ ಪ್ರಾಮಾಣಿಕತೆಯಲ್ಲೇ, ಪ್ರೀತಿಯಿಂದಲೇ ಪೊರೆದ ಕಂಪೆನಿ ಕಣ್ಣು ಮುಚ್ಚಿದಾಗ ಅರೆಕ್ಷಣ ಮುಂದೇನು ಮಾಡೋದು? ಅನ್ನೋ ಚಿಂತೆ ಚಂದ್ರಮ್ಮನನ್ನು ಆವರಿಸಿತಾದರೂ ಅದಾಗಲೇ ಕುದುರೆಮುಖ ಅವಳನ್ನು ಪೊರೆದಿತ್ತು.





