ರಂಗಭೂಮಿ ನಮಗೆ ಅನಿವಾರ್ಯ ಎಂಬ ವಿನಯಶೀಲತೆ
ಪ್ರೇಕ್ಷಕನಿಗಾಗಿಯೇ ನಾಟಕ ಎನ್ನುವುದು ಸತ್ಯ. ಆದರೇ ಅವರು ಬಯಸಿದ್ದನ್ನ ಅವರು ಬಯಸಿದ೦ತೆಯೇ ನೀಡುವುದು ನಾಟಕವಲ್ಲಾ.. ಅವರ ಅರಿವಿಗೆ ಇದು ನಮಗಾಗೇ, ನಮಗೆ ಬೇಕಾದದ್ದನ್ನೇ ಆಡುತ್ತಿದ್ದಾರೆ ಅನ್ನುವ ಭ್ರಮೆಯನ್ನ ಹುಟ್ಟಿಸುತ್ತಾ ರ೦ಗಭೂಮಿಯ ಶಿಸ್ತು, ಬದ್ಧತೆ, ಸಿದ್ಧಾ೦ತವನ್ನ ಅವರಿಗೆ ತಲುಪಿಸುವ ಪರಿಯನ್ನ ನಾಟಕಕಾರ, ನಟ, ತ೦ಡ ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.
‘ರಂಗಭೂಮಿ’ಯಲ್ಲಿ ಮರುಚಿಂತನೆ ಕುರಿತು ಬಾಬು ಹಿರಣ್ಣಯ್ಯ ಬರಹ
ಛತ್ರಪತಿ ಶಿವಾಜಿ ಮಹಾರಾಜನ ಮಗನು ಆಡುವಳ್ಳಿಗೆ ಓಡಿಬಂದ ಕತೆ!
‘ಆಡುವಳ್ಳಿಯ ಇತಿಹಾಸದ ಬಗ್ಗೆ ನನಗೆ ಕುತೂಹಲಕಾರಿಯಾದ ಸುಳಿವು ಆಕಸ್ಮಿಕವಾಗಿ ಸಿಕ್ಕಿದ್ದು ಮರಾಠರ ಇತಿಹಾಸ ಓದುವಾಗ! ಐವತ್ತು ವರ್ಷ ಹಿಂದಿನ ಇಂಗ್ಲಿಷ್ ಲೇಖನವೊಂದರಲ್ಲಿ ಶಿವಾಜಿಯ ಮಗ ರಾಜಾರಾಮನು ಮೊಘಲರಿಂದ ತಪ್ಪಿಸಿಕೊಂಡು, ಆಡುವಳ್ಳಿ ಮಾರ್ಗವಾಗಿ ಹೋಗಿದ್ದನಂತೆ ಎಂಬ ಒಂದು ಸಾಲಿನ ಮಾಹಿತಿ ಸಿಕ್ಕಿತು. ಅರೆ! ಛತ್ರಪತಿಗೂ ಆಡುವಳ್ಳಿಗೂ ಎತ್ತಣಿಂದೆತ್ತ ಸಂಬಂಧ? ಅದರ ಬೆನ್ನತ್ತಿ ಹೋದಾಗ ಸಿಕ್ಕ ಕನ್ನಡ ಕಾವ್ಯದ ಕುರಿತು ಹೇಳುವ ಮುನ್ನ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು’ ಎನ್ನುತ್ತಾರೆ ಪ್ರಸನ್ನ ಆಡುವಳ್ಳಿ. ತನ್ನೂರಿನ ಇತಿಹಾಸ ಕೆದಕುತ್ತ ಸಾಗಿದ ಅವರ ಅನುಭವ ಲೇಖನ ಇಲ್ಲಿದೆ.
ನದಿಯಂಚಿನ ನಡಿಗೆ ಕಾಣಿಸುವ ಚಿತ್ರಗಳು
ಕತೆಗಳು ಎಲ್ಲ ಕಡೆಯೂ ಹರಡಿಕೊಂಡಿರಬಹುದು. ಆದರೆ ನದಿಯ ಕತೆಗಳೆಂದರೆ ಅಂತರಂಗವನ್ನು ತೇವವಾಗಿಸುತ್ತವೆ. ನಮ್ಮ ಪುರಾಣ ಕತೆಗಳೂ ನದಿಯ ಸುತ್ತಲೇ ವಿಸ್ತರಿಸಿಕೊಂಡಿವೆ. ಎಲ್ಲದಕ್ಕೂ ಕಾರಣಗಳನ್ನು ಹುಡುಕುವ ಮನುಷ್ಯರು, ನದಿಯನ್ನೂ ತರ್ಕಗಳು ಮತ್ತು ಕಾರಣಗಳ ಆಧಾರದ ಮೂಲಕವೇ ಗ್ರಹಿಸಲು ಪ್ರಯತ್ನಿಸುತ್ತಾರೆ. ನದಿಯೋ ಪ್ರೇಮಿಯ ಆಹ್ಲಾದಕರ ಮನೋಕಾಮನೆಯಂತೆ, ತರ್ಕದ ಹಂಗಿಲ್ಲದೆ ತನ್ನಪಾಡಿಗೆ ತಾನು ಸಾಗುತ್ತಿರುತ್ತದೆ.
ರಂಗಭೂಮಿಯಲ್ಲಿ ಮರುಚಿಂತನೆ ಮತ್ತು ಗಾಂಧಿ ನಡಿಗೆ
ನಾಟಕ ! ಹಾಗೆಂದರೇನು? ಎಂದು ನಮಗೆ ನಾವು ಕೇಳಿಕೊಳ್ಳುವದರೊಂದಿಗೆ ಆರಂಭವಾಗುವ ಚಿಂತನೆ, ಅದರ ಸಂಘಟನೆ, ತಾಂತ್ರಿಕತೆ, ವ್ಯವಹಾರ, ಪ್ರೇಕ್ಷಕ ವರ್ಗದ ಅನಿಸಿಕೆ ಇತ್ಯಾದಿ ಹಲವು ಆಯಾಮಗಳಲ್ಲಿ ಇಂದು ಮುಂದುವರಿಯಬೇಕಿದೆ. ಸತ್ಯವನ್ನು ಸರಳಮಾರ್ಗದಲ್ಲಿ ಸಾಧಿಸಹೊರಟ ಗಾಂಧಿ ಚಿಂತನೆಯ ಮಾರ್ಗ ನಮ್ಮ ಮರುಚಿಂತನೆಗೆ ಅಗತ್ಯ ಹಾದಿಗಳನ್ನು ಕಾಣಿಸಬಲ್ಲವು ಎಂಬ ನಂಬಿಕೆ ನಮ್ಮದು.
ಬೆಳೆಯುವ ಪೈರು ಭಾದ್ರಪದದೊಳೆ ಸುಟ್ಟು ಹೋಯಿತು..
ಸಾಹಿತ್ಯವೆಂದರೆ ಬದುಕಿನ ಪ್ರತಿಬಿಂಬ ಎಂದಾದರೆ, ಸಾಹಿತ್ಯಕೃತಿಗಳಲ್ಲಿ ಬರುವ ಭಾವ, ರಸ ಲಯಗಳಲ್ಲಿಯೂ ಸಾಮ್ಯತೆಯೊಂದು ಇರಲೇಬೇಕಲ್ಲವೇ, ಈ ನಿಟ್ಟಿನಲ್ಲಿ ಯೋಚಿಸಿದಾಗ, ಗ್ರೀಕ್ ಪುರಾಣ ಕತೆ ‘ಟೆರಿಯಸ್’ ಮತ್ತು ಕನ್ನಡದ ಮದಲಿಂಗ ಕಥನ ಗೀತೆಯ ನಡುವೆ ಬಹಳ ಸಾಮ್ಯತೆಗಳಿವೆ. ಇವೆರಡೂ ಕತೆಗಳ ವಿಶ್ಲೇಷಣೆ ನಡೆಸುವ ಮೂಲಕ ಅವುಗಳ ನಡುವಿನ ಸಾಮ್ಯತೆಯನ್ನು ಸುಮಾವೀಣಾ ಅವರು ಗುರುತಿಸಿದ್ದಾರೆ.
ಪ್ರೊಫೆಸರ್ ಶಂಭು ಮಹಾಜನ್ ರವರ ಮಂಗಳೂರು ಉಪನ್ಯಾಸವು
ಕಂಪ್ಯೂಟರ್ ಗೆ ಕನ್ನಡ ಕಲಿಸಿದವರೆಂದೇ ಪ್ರಖ್ಯಾತರಾದ ಹಿರಿಯ ವಿದ್ವಾಂಸ ಕೆ.ಪಿ.ರಾವ್ ಅವರು ‘ವರ್ಣಕ’ ಎಂಬ ಹೊಸ ಕಾದಂಬರಿಯೊಂದನ್ನು ಬರೆದಿದ್ದಾರೆ. ಇದರ ಕಥಾ ನಾಯಕ ಪ್ರೊ.ಶಂಭು ಮಹಾಜನ್ ಅವರು ನಡೆಸುವ ಭಾಷಾಜ್ಞಾನದ ಅನ್ವೇಷಣೆಯೇ ಕಾದಂಬರಿಯ ಹೂರಣ. ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಕುರಿತು ನೀಡುವ ಉಪನ್ಯಾಸವು ಕಾದಂಬರಿಯ ಆತ್ಮವೆಂದೇ ಹೇಳಬಹುದು.ಆ ಉಪನ್ಯಾಸದ ಪೂರ್ಣಪಾಠ ನಿಮ್ಮ ಓದಿಗಾಗಿ.
ಕೆಲವು ಗಂಟೆಗಳ ಬಂಧವೊಂದು ಬದುಕಾದ ಬಗೆ
‘ಆತ’ನೊಂದಿಗೆ ಮದುವೆ ಮಂಟಪಕ್ಕೆ ಬರುವ ಅವಳು ಕೆಲವೇ ಕ್ಷಣಗಳಲ್ಲಿ ದಾಂಡೇಕರ್ ನೊಂದಿಗೆ ಮದುವೆ ಮನೆಯಿಂದ ಓಡಿ ಹೋಗುತ್ತಾಳೆ. ಅವರಿಬ್ಬರು ಮುಂಬೈ ಪೋಲೀಸ್ ಆಫೀಸ್ ತಲುಪಿ ಅಲ್ಲಿನ ಲೈಬ್ರರಿಯಲ್ಲಿ ಕೆಲವು ಗಂಟೆ ಕಳೆಯುತ್ತಾರೆ. ಆ ಕೆಲವು ಗಂಟೆಗಳ ಸಾಂಗತ್ಯದಲ್ಲಿ ಇಬ್ಬರ ಮಧ್ಯೆ ಪ್ರವಹಿಸುವ ಭಾವಗಳು ಸಾಗರವಾಗಿ ಹೊಮ್ಮುವ ರೀತಿ ಒಂದು ಚೈತನ್ಯ ಭಾವವಾಗಿ ಬಹುಕಾಲ ತಾಕುವಂತದ್ದು.
ಪ್ರೀತಿ ಮತ್ತು ಸಾವನ್ನು ದಟ್ಟ ಭಾವನೆಗಳ ಬಂಧದಲ್ಲಿ ಕಟ್ಟಿಕೊಡುವ ಹಾಡಿನ ಬಗ್ಗೆ ಮಂಜುಳ ಡಿ ಬರೆದ ಪುಟ್ಟ ಬರಹ ಇಲ್ಲಿದೆ.
ಕನ್ನಡದ ಹೊಸ ರೀತಿಯ ಕಾದಂಬರಿಗಳು: ಒಂದು ಪಕ್ಷಿನೋಟ
ಈ ಸಂಶೋಧನೆಗಳನ್ನು ಸರಿಯಾಗಿ ಗ್ರಹಿಸಿದರೆ ವಸಾಹತುಪ್ರಜ್ಞೆಯು ಕಾದಂಬರಿ ಪ್ರಕಾರದಲ್ಲಿ ಪ್ರಬಲವಾಗಿ ಬರುವ ಯುರೋಪಿನ ಕಥಾಹಂದರದ (Plot) ಮೂಲಕ ಹೇಗೆ ಭಾರತೀಯರಿಗೆ ತಮ್ಮ ಅನುಭವವನ್ನು ಹೇಳಲು ಅಡ್ಡಿಯಾಗುತ್ತದೆ ಎಂಬುದು ಅರ್ಥವಾಗುತ್ತದೆ. ಅಂದರೆ ಇಲ್ಲಿಯ ಊರು, ಕೇರಿ, ಜನ, ಜೀವನದ ಬಗ್ಗೆ ಕಾದಂಬರಿಗಳು ಹೇಳಿದರೂ ಕೂಡ ಯುರೋಪಿನ ಕಥಾಹಂದರದ ಚೌಕಟ್ಟು ಅನುಭವಗಳನ್ನು ಮಸುಕಾಗಿಸುತ್ತದೆ.”
ಕಾರುಣ್ಯದ ಕುರಿತು ದೇವನೂರು ಮಾತಿನ ನೆನಪುಗಳು
ಹಿಂಸೆ, ಕ್ಷೋಭೆಗಳೆಂದರೆ ಮನುಷ್ಯನಿಗೆ ಸುಪ್ತ ಮನಸ್ಸಿನಲ್ಲಿ ಬಹಳ ಪ್ರಿಯವಾದ ವಿಷಯವೇನೋ ಎಂಬ ಸಂಶಯ ಕಾಡಲು ಶುರುವಾಗಿದೆ. ಉಣ್ಣಲು, ಆರೋಗ್ಯ ಕಾಪಾಡಿಕೊಳ್ಳಲು ಉಡಲು ಮಹಿಳೆಯರು ನಿರಂತರ ಹೋರಾಟಗಳನ್ನು ನಡೆಸುತ್ತಲೇ ಇರಬೇಕು ಎಂದಾದರೆ, ನಾಗರಿಕತೆಯ ಹೆಜ್ಜೆಗಳು ಮುಂದಡಿ ಇಡುತ್ತಿಲ್ಲವೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.ಮನುಷ್ಯ ಹೃದಯದಲ್ಲಿ ಕಾರುಣ್ಯ ಎಂಬ ಆರ್ದ್ರತೆ ಇಲ್ಲದಿದ್ದರೆ ಬದುಕು ನೆಮ್ಮದಿಯನ್ನುಕಂಡುಕೊಳ್ಳುವುದು ಸಾಧ್ಯವಾಗುವುದಿಲ್ಲ.”









