Advertisement

ಸಂಪಿಗೆ ಸ್ಪೆಷಲ್

ಭಾರೀ ಮಾತಿನ ಬಜಾರು ಸುತ್ತಿ ಸಾಗಿದೆ ಸುಮಾರು

ಭಾರೀ ಮಾತಿನ ಬಜಾರು ಸುತ್ತಿ ಸಾಗಿದೆ ಸುಮಾರು

ಕ್ಲಬ್ ಹೌಸ್ ಎಂಬ ವೇದಿಕೆಯೊಂದು ಸಾಹಿತ್ಯ ಚಟುವಟಿಕೆಗಳನ್ನೆಲ್ಲ ಆಕರ್ಷಿಸುತ್ತಿರುವ ಈ ಹೊತ್ತಿಗೆ ಮಾತಿನ ಕುರಿತು ಒಂಚೂರು ಚಿಂತೆಯಾಗಿದೆ. ಸಂವಾದಕ್ಕಾಗಿ ಇಂದು ಅವಕಾಶಗಳೇ ಇಲ್ಲ ಎಂದು ದೂರುತ್ತಿರುವ ಕಾಲದಲ್ಲಿ ಸಂವಾದವೊಂದು ಸರಳಾತಿ ಸರಳವಾಗಿದೆಯಲ್ಲ ಎಂದು ಅಚ್ಚರಿಯಾಗುತ್ತಿದೆ.”

read more
ಬೋನಿಗೆ ಬಂದನಾ ಇಲಿರಾಯನು

ಬೋನಿಗೆ ಬಂದನಾ ಇಲಿರಾಯನು

ನಮ್ಮೂರಿನಲ್ಲಿದ್ದಂತೆ ಈ ನಗರದಲ್ಲಿ ಗದ್ದೆ ಇದೆಯಾ? ಗೊಣಬೆ ಇದೆಯಾ? ಅಥವಾ ಭತ್ತದ ಕಣಜವೋ, ಅಕ್ಕಿ ಮೂಟೆಯೋ ಅವಕ್ಕೆ ಸಿಗುತ್ತಾ? ಅಂದ್ಮೇಲೆ ಯಾರಾದ್ರೂ ಚೂರುಪಾರು ತರಕಾರಿ ಬೆಳೆಯೋಣ ಅಂತ ಹೊರಟರೆ ಅದರಲ್ಲಿ ಬಿಡೋ ಕಾಯಿಗಳನ್ನುತಿನ್ನದೇ ಮತ್ತೇನು ಮಾಡಲು ಸಾಧ್ಯ. ಅಕ್ಕಿ ಭತ್ತ, ತರಕಾರಿ ಏನಾದರೂ ಸರಿ, ಹೊಟ್ಟೆಪಾಡು ನೋಡಿಕೊಳ್ಳಬೇಕು. ಆದರೂ ಈ ಸುಂಡಿಲಿಗಳು ಚಳ್ಳೇ ಹಣ್ಣು ತಿನ್ನಿಸುವುದರಲ್ಲಿ ಭಾರೀ ಹುಶಾರು.

read more
ಕಣ್ಣ ಕಾಡಿನ ಹಾಡು

ಕಣ್ಣ ಕಾಡಿನ ಹಾಡು

ಮೇ ತಿಂಗಳ ಕೊನೆ ಅಂದರೆ ಬ್ಯಾಸಿ ತಿಂಗಳಲ್ಲಿ ಶುರುವಾಗುವ ಚಟ್ ಚಟಾರ್ ಸಿಡಿಲು ಗುಡುಗು ಸಹಿತ ಜಡಿಮಳೆ ಆರಂಭ ಮಾತ್ರ. ಮುಂದೆ ‘ತಕ್ಕೋ ಬಿಡ್ಬೇಡ’ ಎನ್ನುವಂತೆ ಕಾರ್ ತಿಂಗಳಲ್ಲಿ ಕಿವಿ ಸೋಲುವಂಥಾ ಮಳೆ. ಬೆಳಗಿನ ಜಾವದಿಂದ ರಾತ್ರಿಯವರೆಗೆ ಮತ್ತೆ ಇರುಳುಕಪ್ಪಿನಿಂದ ಮರು ಬೆಳಗಿನವರೆಗೆ ಹನಿ ಕಡಿಯದೆ ಜೈಲುಗುಟ್ಟಿ ಸುರಿವ ಮಳೆ. ಮದೂರಿ ಎಂಬ ಊರಿನ ಕಷ್ಟಸುಖವನ್ನು ಹೇಳಿಕೊಂಡಿದ್ದಾರೆ ವಿಜಯಶ್ರೀ ಹಾಲಾಡಿ.

read more
ಆಧ್ಯಾತ್ಮಿಕ ಹೊಳಹಿನ ಕನ್ನಡಿನಲ್ಲಿ ‘ಒಂದು ಸರೀ ಕಡ್ಡಿಗಾಗಿ’

ಆಧ್ಯಾತ್ಮಿಕ ಹೊಳಹಿನ ಕನ್ನಡಿನಲ್ಲಿ ‘ಒಂದು ಸರೀ ಕಡ್ಡಿಗಾಗಿ’

ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರ ಒಂದು ಜಿಲೇಬಿ ಕವನ ಸಂಕಲನದಿಂದ ಆಯ್ದ ಕವನ ‘ಒಂದು ಸರೀ ಕಡ್ಡಿಗಾಗಿ’ ತೀರಾ ಸ್ಥಳೀಯ ನೋಟಗಳ ಪ್ರತಿಮೆಗಳನ್ನು ಹೆಕ್ಕಿ ತೆಗೆದುಕೊಂಡು ಕಾವ್ಯ ದುಕೂಲದಲ್ಲಿ ಅವುಗಳನ್ನು ಬಂಧಿಸಿದ ಪರಿ ವಿಶೇಷವಾದುದು. ಕವನವು ಆಧ್ಯಾತ್ಮಿಕ ಹೊಳಹುಗಳನ್ನಷ್ಟೇ ಅಲ್ಲ, ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಜಿಜ್ಞಾಸೆಯ ಕಿಡಿ ಹಚ್ಚುವ ಸಾಮರ್ಥ್ಯ ಹೊಂದಿದೆ. ಅಂತಹ ವಿಶ್ಲೇಷಣೆಯನ್ನು ಇಲ್ಲಿ ಮಂಡಿಸಿದ್ದಾರೆ ಲೇಖಕಿ ಗೀತಾ ಹೆಗಡೆ

read more
ಅವರವರ ತಟ್ಟೆ ಅವರವರ ಹೊಟ್ಟೆ..

ಅವರವರ ತಟ್ಟೆ ಅವರವರ ಹೊಟ್ಟೆ..

ದಿನ ಬೆಳಗಾದರೆ ನಮ್ಮ ಮನೆಗೆ ಹಾಜರಾಗಲು ಕಾತರದಿಂದ ಕಾಯುವ ಪುಟಾಣಿಗಳಿಬ್ಬರೂ ಆವತ್ತು ಮನೆಯೊಳಗೆ ಬರಲು ಹಿಂದುಮುಂದು ನೋಡುತ್ತಿದ್ದರು. ಹೊರಗೆ ನಿಂತುಕೊಂಡೇ ಮಾತಾಡ್ತೀವಿ ಅನ್ನೋ ತರ ಅವರ ದೇಹಭಾಷೆ ಇತ್ತು.. ನಮಗೆ ಅನುಮಾನ ಬರುವಷ್ಟರಲ್ಲಿ ಅವರೇ, ‘ಅಮ್ಮಾ ಹೇಳಿದಾರೆ, ಇವತ್ತು ನಾವು ಪೋರ್ಕ್‌ ತಿಂದಿದ್ದೀವಿ, ಅದಕ್ಕೆ ನಿಮ್ಮನೆಯೊಳಗೆ ಬರ್ಬಾರ್ದುʼ ಅನ್ನುತ್ತ ಹಲ್ಲುಬಿಟ್ಟರು. ‘ಏ.. ಹಾಗೆಲ್ಲ ಹೇಳ್ಬಾರ್ದು.. ಬನ್ನಿ ಒಳಗೆʼ ಅಂತಂದೆವು.”

read more
ಮತ್ತೆ ಮತ್ತೆ ಕಾಡುವ ‘ಒತ್ತೆಕೋಲ’ದ ಬಣ್ಣಗಳು

ಮತ್ತೆ ಮತ್ತೆ ಕಾಡುವ ‘ಒತ್ತೆಕೋಲ’ದ ಬಣ್ಣಗಳು

‘ದೈವಾರಾಧನೆ ಅಥವಾ ಭೂತಾರಾಧನೆಯು ಕರಾವಳಿ ಜಿಲ್ಲೆಗಳ ಪ್ರಮುಖ ಆರಾಧನಾ ವಿಧಾನ. ಕುಟುಂಬದ ದೈವಗಳಿಗೆ ಸಲ್ಲಿಸುವ ಸೇವೆಗಳಿಗೆ ಇಲ್ಲಿ ಮಹತ್ವದ ಸ್ಥಾನವಿದೆ. ವಿಷ್ಣುಮೂರ್ತಿ ದೈವಕ್ಕೆ ಸಲ್ಲಿಸುವ ಒತ್ತೆಕೋಲ ಸೇವೆ ನನ್ನ ಬಾಲ್ಯದ ಗಾಢ ನೆನಪುಗಳಲ್ಲೊಂದು. ಆದರೆ ಇಂದು ಅದೇ ಕೋಲವನ್ನು ನೋಡುವಾಗ ನನ್ನ ದೃಷ್ಟಿಕೋನವು ಎಷ್ಟೊಂದು ಬದಲಾಗಿದೆಯಲ್ಲ..”

read more
ವಯಸ್ಸೆಷ್ಟು ಎಂಬ ಪ್ರಶ್ನೆಯ ಪೂರ್ವಾಪರ

ವಯಸ್ಸೆಷ್ಟು ಎಂಬ ಪ್ರಶ್ನೆಯ ಪೂರ್ವಾಪರ

ನನ್ನ ಶಿಕ್ಷಕಿ ಗೆಳತಿಯೊಬ್ಬಳಿದ್ದಾಳೆ. ಅವಳಿಗೆ ವಯಸ್ಸು ಐವತ್ತು ದಾಟಿದರೂ ಇನ್ನೂ ಮೂವತ್ತರ ಆಚೆಯೀಚೆಯಂತೆ ಕಾಣುತ್ತಾಳೆ. ನಾವು ಸಿಕ್ಕಾಗಲೆಲ್ಲಾ ಅವಳನ್ನು ಪೀಡಿಸೋದು ನಿನ್ನ ಸೌಂದರ್ಯದ ರಹಸ್ಯ ಏನು? ಅಂತ. ಬಹುಶಃ ಇದು ಅವಳಿಗೆ ಮಾಮೂಲಿ ಪ್ರಶ್ನೆಯಾಗಿರಬಹುದು. ಅವಳು ಅಷ್ಟೇ ಅದನ್ನು ಸಹಜವಾಗಿ ಕೇಳಿ ನಕ್ಕು ಸುಮ್ಮನಾಗುತ್ತಿದ್ದಳೇ ವಿನಃ ತನ್ನ ವಯಸ್ಸನ್ನು ಎಂದೂ ಬಿಟ್ಟು ಕೊಡುತ್ತಿರಲಿಲ್ಲ. ನಾವು ಬಿಡದೇ ಯೋಗ ಮಾಡುತ್ತೀಯ?”

read more
ಅಕ್ಕ ಸುಬ್ಬಕ್ಕನ ಪ್ರವಚನ ವೃತ್ತಾಂತ

ಅಕ್ಕ ಸುಬ್ಬಕ್ಕನ ಪ್ರವಚನ ವೃತ್ತಾಂತ

ಲಾಕ್ ಡೌನ್ ದೆಸೆಯಿಂದ ಕಾರ್ಯಕ್ರಮ ವೇದಿಕೆಗಳು ಸಿಗದೇ ಇದ್ದಾಗ, ಸುಬ್ಬಕ್ಕ ಹೊಸ ಐಡಿಯಾ ಮಾಡಿದಳು. ಅದುವೇ ಫೇಸ್ ಬುಕ್ ಲೈವ್. ಮೊದಲ ದಿನ ಲೈವ್ ಗೆ ಸಿದ್ಧಳಾದ ಆಕೆ, ‘ಲಾಕ್ ಡೌನ್’ ಸಮಯದಲ್ಲಿ ಯಾರೂ  ಮನೆಯಿಂದ ಹೊರ ಹೋಗದೆ ಇರುವುದರಿಂದ ನಾ ಪ್ರತಿದಿನ ಒಂದು ವಿಷಯದ ಕುರಿತು ಪ್ರವಚನ ಮಾಡುತ್ತಿದ್ದೇನೆ. `ಅಕ್ಕ ಸುಬ್ಬಕ್ಕನ ಪ್ರವಚನ’..”

read more
ವೈಷ್ಣೋದೇವಿಯ ಕುದುರೆಗಳು…

ವೈಷ್ಣೋದೇವಿಯ ಕುದುರೆಗಳು…

ಪ್ರಯಾಣವೊಂದು ಪೂರ್ತಿಯಾಗುವಾಗ ಚಿತ್ರವೊಂದು ಮನಸ್ಸಿನಲ್ಲಿ ಮೂಡಿಬಿಡುತ್ತದೆ. ವೈಷ್ಣೋದೇವಿ ದರ್ಶನ ಮುಗಿಸಿ  ಮರಳಿ ಕತ್ರಾ ನಗರಕ್ಕೆ ಬರುವಾಗ ಅಂತಹ ಚಿತ್ರವೊಂದು ಮನಸ್ಸಿನಲ್ಲಿ ತಣ್ಣಗೆ ಕುಳಿತಿತ್ತು. ಜನರನ್ನು, ಲಗೇಜುಗಳನ್ನು ಹೊತ್ತೊಯ್ಯುತ್ತಿದ್ದ ಸಾಲು ಸಾಲು ಕುದುರೆಗಳ ಚಿತ್ರವದು. ಪ್ರಯಾಣದ ಅನುಭವ ತೀವ್ರತೆಯನ್ನು ಹೆಚ್ಚಿಸುವ ಈ ಕುದುರೆಗಳ ಪಾಡಿನ ಕುರಿತು ಇಲ್ಲಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ