Advertisement

ಸರಣಿ-2

ಮಾತೇನೋ ಸರಿಯಿತ್ತು, ಹೇಳಬಾರದಾಗಿತ್ತು: ಕೆ. ಸತ್ಯನಾರಾಯಣ ಕಥಾ ಸರಣಿ

ಮಾತೇನೋ ಸರಿಯಿತ್ತು, ಹೇಳಬಾರದಾಗಿತ್ತು: ಕೆ. ಸತ್ಯನಾರಾಯಣ ಕಥಾ ಸರಣಿ

ನನಗೇನು ಹಾಗೆನಿಸಲಿಲ್ಲ. ಏಕೆಂದರೆ, ನಾನೆಂದೂ ಆತ್ಮಸಾಕ್ಷಾತ್ಕಾರವನ್ನು ನನ್ನ ಜೀವನದ ಗತಿ ಎಂದು ಭಾವಿಸಿಕೊಂಡಿರಲಿಲ್ಲ. ಜೀವನಕ್ಕೆ ಒಂದು ಗುರಿ ಇರಬೇಕೆನ್ನುವುದು ನಾವು ಮೂಡಿಸಿಕೊಂಡ ತಿಳುವಳಿಕೆ. ಇನ್ನೊಬ್ಬರು ಹೇಳಿಕೊಟ್ಟ ಗಿಣಿ ಮಾತು. ಇದೆಲ್ಲ ಸಹಜವಾಗಿ ಮೂಡಲು ನಮ್ಮ ತಂದೆ ತಾಯಿಗಳು ನಮ್ಮನ್ನು ಕೇಳಿ, ನಂತರ ನಮ್ಮನ್ನು ಹುಟ್ಟಿಸಿರುವುದಿಲ್ಲ. ಅವರಿಗೂ ನಮ್ಮ ಜೀವನಕ್ಕೆ ಒಂದು ದಿಕ್ಕು, ಗುರಿ ಇರಬೇಕು ಎಂದೇನು ಅನಿಸಿರುವುದಿಲ್ಲ. ನಮಗೂ ಗೊತ್ತಾಗುವುದಿಲ್ಲ. ಅದನ್ನೆಲ್ಲ ಯೋಚಿಸಬಾರದು. ಸುಮ್ಮನೆ ಬದುಕಬೇಕು. ಬದುಕು ಬಂದ ಹಾಗೆ. ನಂತರ ಸುಮ್ಮನೆ ಹೋಗಿಬಿಡಬೇಕು. ಮಧ್ಯಾಹ್ನ ಮುಗಿದ ಮೇಲೆ ಸಂಜೆ ಹರಡಿಕೊಳ್ಳುವ ಹಾಗೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

read more
ಪರಿಮಳದ ಹೊಲಮಾಳಗಳು, ಹಲಸಿನ ಮರದ ಕರಡಿ ಹಾಗೂ ಹೆಣ ಕುಯ್ಯುವ ಮರ: ಎಸ್. ಗಂಗಾಧರಯ್ಯ ಅನುಭವ ಕಥನ

ಪರಿಮಳದ ಹೊಲಮಾಳಗಳು, ಹಲಸಿನ ಮರದ ಕರಡಿ ಹಾಗೂ ಹೆಣ ಕುಯ್ಯುವ ಮರ: ಎಸ್. ಗಂಗಾಧರಯ್ಯ ಅನುಭವ ಕಥನ

ಮೆಲ್ಲಗೆ ಮೇಲಿಂದ ಏನೋ ಗೊರಗುಡುವ ಸದ್ದು ಕೇಳಿಸಿದೆ. ಮರದ ಎಲೆಗಳು ತುಂಬಾ ಕತ್ರಾಗಿದ್ದರಿಂದ ಮೇಲೆ ನೋಡಿದ್ದಾರೆ. ಏನೂ ಕಂಡಿಲ್ಲ. ಮತ್ತೊಂದೆರಡು ಮಾರು ಹತ್ತಿದ್ದಾರೆ. ಅಷ್ಟರೊಳಗೆ ಆ ಗೊರಗುಡುವ ಸದ್ದು ಕೊಂಚ ಜೋರಾಗಿದೆ. ಕೆಂಪ್ಲಿಂಗಜ್ಜನಿಗೆ ಅನುಮಾನ ಬಂದು ನಿಂತಲ್ಲಿಯೇ ತುಂಬಾ ಸೂಕ್ಷ್ಮವಾಗಿ ಸುತ್ತಲೂ ಕಣ್ಣಾಡಿಸಿದ್ದಾರೆ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹನ್ನೆರಡನೆಯ ಕಂತು

read more
ಎಡಿಟರಾದ ನಾನು… ಮತ್ತು ನರಿ ತಿಂದ ನಸುಗುನ್ನಿಕಾಯಿ…: ಎಚ್. ಗೋಪಾಲಕೃಷ್ಣ ಸರಣಿ

ಎಡಿಟರಾದ ನಾನು… ಮತ್ತು ನರಿ ತಿಂದ ನಸುಗುನ್ನಿಕಾಯಿ…: ಎಚ್. ಗೋಪಾಲಕೃಷ್ಣ ಸರಣಿ

ವಿವರಣೆ ಕೊಟ್ಟೆ ಹೀಗೆ… ಈಗ ನೋಡಿ ನೀವು ಇಷ್ಟು ಇದೀರಿ. ನಾನು ಹೀಗಿದ್ದೀನಿ. ಎರಡನ್ನೂ ಸೇರಿಸಲು ಸಾಧ್ಯವೇ…..?” ಅಂದೆ. ಅವರಿಗೆ ತಾನು ಕುಳ್ಳು ಎನ್ನುವ ಹೆರೆಡಿಟರಿ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಎನ್ನುವುದು ಆಗ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಈ ಎಕ್ಸಾಂಪಲ್ ಕೊಡ್ತಾ ಇರ್ಲಿಲ್ಲ. ಇದು ಆಮೇಲೆ ಯಾವಾಗಲೋ ಗೊತ್ತಾಗಿದ್ದು. ಪಾಪ ಅವರಿಗೆ ಅಷ್ಟೊಂದು ಜನರೆದುರು ನೆತ್ತಿ ಮೇಲೆ ಮೊಟಕಿದ ಹಾಗಾಗಿರಬೇಕು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೨ನೇ ಬರಹ ನಿಮ್ಮ ಓದಿಗೆ

read more
ಗುಬ್ಬಚ್ಚಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗುಬ್ಬಚ್ಚಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಗುಬ್ಬಚ್ಚಿಯ ಕೂಗು ಸಣ್ಣ ಸಣ್ಣ ಚಿಲಿಪಿಲಿ ಧ್ವನಿಗಳು. ಗುಂಪಾಗಿ ಹಾರಾಡುವಾಗ, ಪರಸ್ಪರ ಸಂಪರ್ಕಕ್ಕಾಗಿ ಮತ್ತು ಎಚ್ಚರಿಸಲು ಅಥವಾ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಚಿರ್.ಪ್, ಟಿಶ್.ಲ್ಪ್.. ಅಥವಾ ಫಿಲ್.ಪ್ ಮುಂತಾದ ಕೂಗುಗಳ ಮೂಲಕ ಸಂಪರ್ಕಿಸುತ್ತವೆ. ಅಲ್ಲದೆ, ಗೂಡಿನ ಮಾಲೀಕತ್ವವನ್ನು ಘೋಷಿಸಲು ಮತ್ತು ಸಂತಾನವೃದ್ಧಿ ಋತುವಿನಲ್ಲಿ ಸಂಗಾತಿಯನ್ನು ಆಕರ್ಷಿಸಲು ಗಂಡು ಗುಬ್ಬಚ್ಚಿ ಇಂತಹ ಕರೆಗಳನ್ನು ಪುನಃ ಪುನಃ ಮತ್ತು ವೇಗದೊಂದಿಗೆ ಕೂಗುತ್ತದೆ. ಗುಬ್ಬಚ್ಚಿಗಳು ರಾತ್ರಿ ಎಲೆಭರಿತ ಮರಗಳು, ಮುಳ್ಳು ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತವೆ.
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗುಬ್ಬಚ್ಚಿ” ಹಕ್ಕಿಯ ಕುರಿತ ಬರಹ ಇಲ್ಲಿದೆ

read more
ಪತ್ತೇದಾರಿ ಇಲಾಖೆಯೇ ಬೇಡವೆಂದ ಗೃಹಸಚಿವ:  ಕೆ. ಸತ್ಯನಾರಾಯಣ ಕಥಾ ಸರಣಿ

ಪತ್ತೇದಾರಿ ಇಲಾಖೆಯೇ ಬೇಡವೆಂದ ಗೃಹಸಚಿವ: ಕೆ. ಸತ್ಯನಾರಾಯಣ ಕಥಾ ಸರಣಿ

ಸಮಾಜವನ್ನು ಸರಿಯಾದ ಹಾದಿಗೆ ಹಾಕುತ್ತಿದ್ದೇವೆ ಎಂದು ತೋರಿಸಲು, ನಂಬಿಕೆ ಹುಟ್ಟಿಸಲು ನಮ್ಮ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಒಂದು ಹಂತದ ತನಕ ನಮ್ಮ ಇಲಾಖೆ, ಪತ್ತೇದಾರರು, ವಕೀಲರು ಇದನ್ನೆಲ್ಲ ಗಮನಿಸಬಹುದು, ನಿರ್ವಹಿಸಬಹುದು. ಈಗ ಹಾಗಿಲ್ಲ. ಇದೇ ಸಮಾಜದ ಮುಖ್ಯವಾಹಿನಿಯೂ, ಜೀವನಶೈಲಿಯೂ ಆಗಿರುವುದರಿಂದ, ನಮ್ಮ ಇಲಾಖೆಯ ಅಗತ್ಯವಿಲ್ಲವೆನಿಸುತ್ತದೆ. ಅಂದರೆ ಇದು ಒಟ್ಟು ಸಮಾಜಕ್ಕೆ ಸೇರಿದ ಜವಾಬ್ದಾರಿ. ಹಾಗಾಗಿ ನಾನಾಗಲೀ, ನಮ್ಮ ಇಲಾಖೆಯಾಗಲೀ ಮುಂದುವರೆಯುವ ಅಗತ್ಯವಿಲ್ಲ. ಬರಕಾಸ್ತು ಮಾಡುವುದೇ ಒಳ್ಳೆಯದು. ಹಾಗೆಂದು ಈ ಸಮ್ಮೇಳನದ ಮೂಲಕ ಕರೆ ಕೊಡುತ್ತಿದ್ದೇನೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

read more
ಚಿಕ್ಕಯನಾಕನಹಳ್ಳಿಯ ತಾತಯ್ಯನ ಗೋರಿ ಮತ್ತದರ ಕುದುರೆ: ಎಸ್. ಗಂಗಾಧರಯ್ಯ ಅನುಭವ ಕಥನ

ಚಿಕ್ಕಯನಾಕನಹಳ್ಳಿಯ ತಾತಯ್ಯನ ಗೋರಿ ಮತ್ತದರ ಕುದುರೆ: ಎಸ್. ಗಂಗಾಧರಯ್ಯ ಅನುಭವ ಕಥನ

ನಮ್ಮ ಇಂಥ ದೈನೇಸಿ ಸ್ಥಿತಿಯ ಅರಿವಾಯಿತು ಎಂಬಂತೆ ಹುಚ್ಚೆದ್ದು ಓಡುತ್ತಿದ್ದ ಕುದುರೆ ಓಟದ ಬಿರುವನ್ನು ಕೊಂಚ ಕುಗ್ಗಿಸಿಕೊಂಡು ಎತ್ತಿ ಕುಕ್ಕಿದಂತೆ ಒಮ್ಮೆಗೇ ಕೆನೆದು ಮತ್ತೆ ಮಾಮೂಲಿ ಓಟಕ್ಕಿಟ್ಟುಕೊಂಡಿತು. ಇದನ್ನು ನಿರೀಕ್ಷಿಸದಿದ್ದ ಹಿಂದೆ ಕುಳಿತಿದ್ದ ನಾನು ಹೇಳದೇ ಕೇಳದೇ ಅಂತಾರಲ್ಲ ಹಂಗೆ ದೊಪ್ಪನೆ ಕೆಳಗೆ ಬಿದ್ದುಬಿಟ್ಟೆ. ಬಿದ್ದ ರಭಸಕ್ಕೆ ಕುಂಡಿಗಳನ್ನು ಗುಂಡು ಕಲ್ಲೊಂದರಿಂದ ಜಜ್ಜಿದಂತಾಯ್ತು. ತಕ್ಷಣ ಏನು ಮಾಡಬೇಕೆಂದು ತೋಚದೆ ಕೂತಲ್ಲೇ ಬಿಕ್ಕಳಿಸತೊಡಗಿದೆ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹನ್ನೊಂದನೆಯ ಕಂತು

read more
ಬೋಳುಮಂಡೆಯವನಾಗಿ ನನ್ನ ಸ್ವಗತ: ಬಸವನಗೌಡ ಹೆಬ್ಬಳಗೆರೆ ಸರಣಿ

ಬೋಳುಮಂಡೆಯವನಾಗಿ ನನ್ನ ಸ್ವಗತ: ಬಸವನಗೌಡ ಹೆಬ್ಬಳಗೆರೆ ಸರಣಿ

ಹಲವರು ದೇವರಿಗೆ ತಮ್ಮ ಹರಕೆ ತೀರಿಸಲು ದೇವರಿಗೆ ಮುಡಿ ಕೊಡುತ್ತಾರೆ. ಆದರೆ ತಲೆಯಲ್ಲಿ ಕೂದಲಿಲ್ಲದೇ ಬೋಳಾಗಿರುವ ನನಗೆ ಈ ರೀತಿ ಮುಡಿ ಕೊಡಲು ಸಾಧ್ಯವಿಲ್ಲ ಎಂದು ಬೇಸರವಾಗುವುದಿಲ್ಲ. ತುಂಬಾ ಆಶಾವಾದಿ ನಾನು. ಇದಕ್ಕೆ ಬದಲಾಗಿ ನನ್ನ ಕೂದಲನು ಮುಡಿ ತೆಗೆದುಕೊಳ್ಳುವ ವಿಷಯದಲ್ಲಿ ದೇವರಿಗೇ ಅದೃಷ್ಟ ಇಲ್ಲ ಎಂದೇ ನಾನು ಭಾವಿಸುತ್ತೇನೆ! ಏಕೆಂದರೆ ಅನೇಕರು ಮಡಿ ಕೊಟ್ಟು ಹರಕೆ ತೀರಿಸಿಕೊಳ್ಳುತ್ತಾರೆ. ಆದರೆ ಮುಡಿ ಕೊಡುವಷ್ಟು ಕೂದಲನ್ನು ನಮ್ಮಿಂದ ಈಗಾಗಲೇ ಕಿತ್ತುಕೊಂಡಿರುವುದರಿಂದ ಮುಡಿ ಕೊಡುವ ಪ್ರಮೇಯವೇ ಬರುವುದಿಲ್ಲ! ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more
ಜಗನ್‌ ಮೋಹನ್‌ ಎಂಬ ವಠಾರ: ಕೆ. ಸತ್ಯನಾರಾಯಣ ಕಥಾ ಸರಣಿ

ಜಗನ್‌ ಮೋಹನ್‌ ಎಂಬ ವಠಾರ: ಕೆ. ಸತ್ಯನಾರಾಯಣ ಕಥಾ ಸರಣಿ

ಬಿಂದಿಗೆ-ಬಕೆಟ್‌ ಇಡಲು ಬಂದವರನ್ನು ಕಂಡು ಗೇಲಿ ಮಾಡುತ್ತಿದ್ದೆವು. ನಾಲ್ಕು ದಿನ ಸುಮ್ಮನೆ ಇರಲು ಬಂದಿದ್ದ ನಾವು ಕೂಡ ಈ ಗೇಲಿಯಲ್ಲಿ ದೊಡ್ಡಪ್ಪನ ಮಕ್ಕಳ ಜೊತೆ ಸೇರಿಕೊಳ್ಳುತ್ತಿದ್ದೆವು. ಇದಕ್ಕಾಗಿ ವಠಾರದ ಉಳಿದ ಮನೆಗಳವರಿಗೆ ಯಾವತ್ತೂ ನಮ್ಮನ್ನು ಕಂಡರೆ ಆಗುತ್ತಿರಲಿಲ್ಲ. ನಲ್ಲಿ ನೀರು ಬಂದಮೇಲೂ ನಿಲ್ಲುವ ತನಕವೂ ಜಗಳ, ಕಿತ್ತಾಟ. ಒಂದೊಂದು ಸಲ ದಿನ-ಎರಡು ದಿನಕ್ಕೊಮ್ಮೆ ನೀರು ಬರುವುದು ನಿಂತು ಹೋಗುತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

read more
ಮಾಕಳ್ಳಿಯ ಮಾಂತ್ರಿಕ ಕಥಿಕರು: ಎಸ್. ಗಂಗಾಧರಯ್ಯ ಅನುಭವ ಕಥನ

ಮಾಕಳ್ಳಿಯ ಮಾಂತ್ರಿಕ ಕಥಿಕರು: ಎಸ್. ಗಂಗಾಧರಯ್ಯ ಅನುಭವ ಕಥನ

ಮುಂದೆ ಬುಡುಗೊಚ್ಚ ತಮಗೆ ಬೇಕಾದಾಗಲೆಲ್ಲಾ ಎಡಬಿಡದೆ ಹಾಗೇ ಮಾಡಿದರಂತೆ. ಅದರಂತೆ ಸಾವಿರಾರು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಂಡರಂತೆ. ಒಂದು ದಿನ ಹೀಗೆ ಅಜ್ಜ ಹತ್ತಾರು ಹೂಗಳನ್ನು ಒಟ್ಟಿಗೇ ಬೊಗಸೆಯಲ್ಲಿ ಹಿಡಿದುಕೊಂಡು ಬೆಳ್ಳಿ ರೂಪಾಯಿಗಳನ್ನು ಮಾಡಿಕೊಳ್ಳುತ್ತಿರಬೇಕಾದರೆ, ಆ ಹೂಗಳು `ಇನ್ನು ನಿನ್ನ ಹಿತ್ತಲಿನಲ್ಲಿ ನಮ್ಮ ಸರದಿ ಮುಗಿಯಿತು, ನಾವಿನ್ನು ಹೊರಡುತ್ತೇವೆ,’ ಅಂದವಂತೆ. ಅಜ್ಜನಿಗೆ ವಿಪರೀತ ದುಃಖವಾಗಿ ಪರಿ ಪರಿಯಾಗಿ ಬೇಡಿಕೊಂಡರಂತೆ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹತ್ತನೆಯ ಕಂತು

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ