ನನ್ನ ಯಶೋಧೆ ನಾಗಮ್ಮ: ಸುಮಾ ಸತೀಶ್ ಸರಣಿ
ಇದು ನಂಗೆ ಬುದ್ಧಿ ಬಂದ ಮ್ಯಾಗ್ಳ ಕತೆ. ಅದ್ಕೂ ಮುಂಚೆ, ಐದಾರು ವರ್ಷ ಆದ್ರೂ ಎಳೆ ಕೂಸಿಗೆ ಕಾಲು ಮೇಲೆ ಅಡ್ಡಾಕ್ಕಂಡು ನೀರು ಹುಯ್ಯಲ್ವೇ ಅಂಗೇ ಮಾಡೋಳು. ನಮ್ಮಮ್ಮ ಅಯ್ಯೋ ಅದೇನು ಸಣ್ಣ ಮಗೀನೆ ಬಿಡು ಅಂದ್ರೂ ಬಿಡವಲ್ಲಳು. ಮಗೀಗೆ ಮೈನೋವು ಅಂತ ಕಾಲಿನ ಮ್ಯಾಗಾಕ್ಕಂಡು ಕೈಕಾಲು ಹಿಸುಕಿ ಹಿಸುಕಿ, ಅಮ್ಮುಂಗೆ ನೀರು ಹುಯ್ಯೋಕೆ ಏಳೋಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ಬರಹ
ಚಂದ್ರಮ್ಮನ್ನ ಹುಯ್ಯೋದು: ಸುಮಾ ಸತೀಶ್ ಸರಣಿ
ಏಸೊಂದು ಸೆಂದಾಕಿ ಪದ ಬಿಡುತ್ತಿದ್ದರು. ‘ಏಳ್ರಮ್ಮಣ್ಣಿದೀರಾ ನಿದ್ದೆ ಬತ್ತಾ ಐತೆ’ ಅಂಬ್ತ ಗಂಡಸರು ಯೋಳೋತಂಕ ಅಲ್ಲಿಂದ ಅಲ್ಲಾಡಿದ್ರೆ ಸೈ. ತಂಬಿಟ್ಟು ನಂಗೆ ಇಷ್ಟ ಅಂತ ವಸಿ ತುಪ್ಪ ಜಾಸ್ತಿ ಹಾಕಿ ಉಂಡೆ ಕಟ್ಟಿ ನಂಗೇಂತ ಮನೆಯ ನಿಲುವಿನಲ್ಲಿ ಮಕ್ಕಳಿಗೂ ಕಾಣದಂಗೆ ಬಚ್ಚಿಕ್ಕಿ ತಿನ್ನಿಸುತ್ತಿದ್ದ ನಾಗಮ್ಮ ನನ್ನ ಪಾಲಿನ ಯಶೋದೆಯೇ ಸೈ. ಎಡವಿ ಬಿದ್ದರೆ ಮನೆ ಸಿಗುತ್ತಿದ್ದರೂ ನಡುರಾತ್ರಿ ಮಗೀನ ಒಂದುನ್ನೇ ಕಳಿಸಕಾಯ್ತದಾ ಅಂತ ಕರೆತಂದು, ಮನೆ ಬಾಗಿಲು ತೆರೆದು, ‘ಅಮ್ಮಣ್ಣಿ, ಬಿಡ್ಡ ವಚ್ಚಿಂದಿ, ಪಂಡೇಯಮ್ಮೋ’ ಅಂತ ಹೇಳಿಯೇ ಹೋಗುತ್ತಿದ್ದಳು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
‘ಮೀಸೆಯ ಮಹಿಮೆ’ ಎಂಬ ವಿಷಯದ ಬಗ್ಗೆ ನಾನೇಕೆ ಬರೆದೆ?!: ಬಸವನಗೌಡ ಹೆಬ್ಬಳಗೆರೆ ಸರಣಿ
ಅಂದಿನಿಂದ ಮೇಡಂ ಜೊತೆ ನಾನು ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ಪಾಠ ಮಾಡುವಾಗ ವಾದಗಳು ನನ್ನಿಂದ ಇರುತ್ತಿತ್ತು. ಒಮ್ಮೆ ಪೋಷಕರಿಗೆ ಹೆಣ್ಣು ಅಥವಾ ಗಂಡು ಎಂಬ ಲಿಂಗ ನಿರ್ಧಾರವಾಗಲು ಯಾರು ಕಾರಣ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಆಗ ಕಾಲೇಜಿನ ನಮ್ಮ ಸೆಕ್ಷನ್ನಲ್ಲಿದ್ದ 60 ರಲ್ಲಿ 59 ಪ್ರಶಿಕ್ಷಣಾರ್ಥಿಗಳು ಹೆಣ್ಣೇ ಕಾರಣ ಎಂದರು. ನಾನೊಬ್ಬ ಮಾತ್ರ ಒಬ್ಬ ವ್ಯಕ್ತಿಯ ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ ಎಂಬುದನ್ನು ಸಕಾರಣ ಸಹಿತ ತಿಳಿಸಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ
ಏಳು….. ಕೋಡಗ…… ಕೊಡಗು: ಸುಮಾವೀಣಾ ಸರಣಿ
“ಮಗನೆ ಏಳು!” ಎಂದೆ. “ಎಷ್ಟು ಗಂಟೆ” ಎಂದು ನಿದ್ರೆಗಣ್ಣಲ್ಲಿಯೇ ಅವನು ಕೇಳಿದ “ಏಳು” ಎಂದೆ. “ಗಂಟೆ ಏಳಾಗಿದೆ ಎದ್ದೇಳು” ಎನ್ನಬಹುದಾಗಿತ್ತು. ಅವನ ಪ್ರಶ್ನೆ ಮತ್ತು ನನ್ನ ಕಮಾಂಡ್ ಒಂದೇ ಪದದಲ್ಲಿ ಮುಗಿಯಿತು. ಇಂಥ ಬ್ಯಾಡ್ ಅಲ್ಲ ಬೆಡ್ ತರಲೆಗಳು ಸಹಜವೇ ಅಲ್ವೆ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾರನೆಯ ಬರಹ ನಿಮ್ಮ ಓದಿಗೆ
ತ್ಯಾಗದಿಂದ ಹುಟ್ಟಿಕೊಂಡಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ
“ನಾನು ಬರೆಯುವೆ ಕಣ್ಮರೆಯಾಗಲು, ಇದರಿಂದ ಜೀವನವು ನನಗೆ ಬಹಿರಂಗವಾಗುತ್ತೆ, ನಾನಿಲ್ಲದೆನೇ, ಅಂತ್ಯದಲ್ಲಿ ನನ್ನ ಮುಖವು ಕಾಗದದ ಬಿಳಿ ಬಣ್ಣಕ್ಕಿಂತ ಹೆಚ್ಚು ಮಸುಕಾಗಿರುತ್ತೆ, ಪ್ರತಿಬಿಂಬವಿಲ್ಲದೆನೇ. ತನ್ನನ್ನು ತಾನು ಮರೆಯಬಹುದಾದಂತಹ ಜಗತ್ತು. ಕನ್ನಡಿಯಾಗಲ್ಲ, ಒಂದು ಕಲ್ಲಾಗಿ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇಟಲಿ ದೇಶದ ಹೆಸರಾಂತ ಕವಿ ಆ್ಯಂಟೊನೆಲಾ ಅನೆಡಾ-ರವರ (Antonella Anedda, 1955) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಬೇವಿನ್ ಮರ್ದಲ್ಲಿ ಬಾಗ್ಲು ಮಾಡಸ್ತಾರ!: ಎಚ್. ಗೋಪಾಲಕೃಷ್ಣ ಸರಣಿ
ಒಂದೇ ಒಂದು ಭಂಡ ಧೈರ್ಯ ಇತ್ತು ನೋಡಿ. ಅದು ಈಗ ಮುನ್ನೆಲೆಗೆ ಜಿಗಿಯಿತು. ಕೂಡಲೇ ನನ್ನ ಆರನೇ ಸೆನ್ಸ್ ಜಾಗೃತ ಆಯಿತು. ನನ್ನ ಅರಿವಿಗೆ ಬಂದಿದ್ದ ಬೇವಿಗೆ ಸಂಬಂಧಪಟ್ಟ ಲೇಖನಗಳು, ಅವುಗಳ ಬಗ್ಗೆ ಇದ್ದ ನಂಬಿಕೆಗಳು, ನಮ್ಮ ಪೂರ್ವಜರು ಬೇವನ್ನು ಉಪಯೋಗಿಸುತ್ತಿದ್ದ ರೀತಿ ರಿವಾಜು ಎಲ್ಲವೂ ತಲೆಯಲ್ಲಿ ಒಂದರ ಹಿಂದೆ ಒಂದು ಬಂದು ಕ್ಯೂ ನಿಂತವು. ಮಲ್ಲಯ್ಯನ ಕಡೆ ನೋಡಿದೆ. ಅವನ ಮುಖದಲ್ಲಿ ಒಂದು ರೀತಿಯ ವಿಚಿತ್ರ ಕಳೆ ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೆಂಟನೆಯ ಕಂತು
ಮಲೆಯ ಮಕ್ಕಳ ಬೇಸಿಗೆ ರಜಾ – ಮಜಾ: ಭವ್ಯ ಟಿ.ಎಸ್. ಸರಣಿ
ಅಜ್ಜಿ ಮನೆಯ ಹತ್ತಿರ ಒಂದು ಹಳ್ಳ ಇತ್ತು. ಅಲ್ಲಿಗೆ ಅಜ್ಜಿ ಬಟ್ಟೆಗಳನ್ನು ತೊಳೆಯಲು ತೆಗೆದುಕೊಂಡು ಹೋದರೆ ನಾವು ಹಿಂದೆ ಹೊರಟುಬಿಡುತ್ತಿದ್ದೆವು. ಅಜ್ಜಿಯೊಂದಿಗೆ ಬಟ್ಟೆ ತೊಳೆಯುವುದು ಕೂಡ ನಮಗೆ ಒಂದು ಆಟವಾಗಿತ್ತು. ಜೊತೆಗೆ ನೀರಾಟವಾಡಲು ಒಳ್ಳೆಯ ಅವಕಾಶ. ಒಬ್ಬರಿಗೊಬ್ಬರು ನೀರೆರೆಚುತ್ತಾ ಸಂಭ್ರಮಿಸುತ್ತಿದ್ದೆವು. ಅಜ್ಜಿ, ನೀರ್ ಕಂಡ್ರೆ ಸಾಕು ಈ ಹುಡ್ಗುರನ್ನ ಹಿಡಿಯೋರೇ ಇಲ್ಲ… ಅಂತ ಬೈದು ನಮ್ಮನ್ನೆಲ್ಲಾ ಕೂಗಿ ಕರೆದು ಮನೆಗೆ ಕರೆತರುತ್ತಿದ್ದಳು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ
ಉತ್ತರ ಆಫ್ರಿಕಾದ ಇಸ್ಲಾಮಿಕ್ ರಾಷ್ಟ್ರ ಅಲ್ಜೀರಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಅಲ್ಜೀರಿಯಾದ ಜನರು ಫುಟ್ಬಾಲ್, ವಾಲಿಬಾಲ್ ಕ್ರೀಡೆಗಳ ಬಗ್ಗೆ ಹೆಚ್ಚು ಒಲವನ್ನು ಇಟ್ಟುಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ವರ್ಷಗಳಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಇಲ್ಲಿಯ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಬಾಕ್ಸಿಂಗ್ನಲ್ಲಿ ಸಾಧನೆ ಮೆರೆದಿದ್ದಾರೆ. ಸಾವಿರದೈನೂರು ಮೀಟರ್ಗಳ ಓಟದ ಸ್ಪರ್ಧೆಯಲ್ಲಿ ಅಲ್ಜೀರಿಯಾದ ಅಥ್ಲೀಟ್ಗಳ ಸಾಧನೆ ಮೆಚ್ಚುವಂಥದ್ದಾಗಿದೆ. ಹಲವು ಸಲ ಗೆಲುವಿನ ಮಾಲೆಯನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಕಾರವಾರದ ಆ ದಿನಗಳು: ರಂಜಾನ್ ದರ್ಗಾ ಸರಣಿ
‘ನಮ್ಮ ಕಷ್ಟ ಸುಖದಲ್ಲಿ ಇವರು. ಇವರ ಕಷ್ಟ ಸುಖದಲ್ಲಿ ನಾವು. ನಮ್ಮ ನಡುವೆ ಧರ್ಮಗಳು ಅಡ್ಡ ಬರುವುದಿಲ್ಲ. ಧರ್ಮಗಳ ಗೋಜಿಗೆ ನಾವು ಹೋಗುವುದಿಲ್ಲ. ಅವುಗಳ ಪಾಡಿಗೆ ಅವು ಇರುತ್ತವೆ. ನಮ್ಮ ಪಾಡಿಗೆ ನಾವು ಇರುತ್ತೇವೆ. ಕೆಲಸ ಮಾಡುವವರಿಗೆ ಎಲ್ಲ ಧರ್ಮಗಳು ಒಂದೇ. ಕೆಲಸವಿಲ್ಲದವರಿಗೆ ಮತ್ತು ಕೆಲಸವಿಲ್ಲದೆ ಬದುಕಬೇಕೆನ್ನುವವರಿಗೆ ಧರ್ಮಗಳು ಬೇರೆ ಬೇರೆಯಾಗಿ ಕಾಣುತ್ತವೆ. ಆ ಅವರು ಉಗ್ರರೂಪ ತಾಳಿ ಅನ್ಯ ಧರ್ಮೀಯರನ್ನು ಕೊಲ್ಲುತ್ತಾರೆ ಇಲ್ಲವೆ ಅವರಿಂದ ಕೊಲೆಗೀಡಾಗುತ್ತಾರೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 100ನೇ ಕಂತು ನಿಮ್ಮ ಓದಿಗೆ









