ವ್ಯಕ್ತಿತ್ವಗಳ ಮುಖವಾಡ ಕಳಚುವ ಅವಳ ಕಣ್ಣಿನ ಕಥೆ: ರಾಮ್ಪ್ರಕಾಶ್ ರೈ ಸರಣಿ
ಇಲ್ಲಿ ಕ್ರೈಮ್ ಇದ್ದರೂ, ಅನ್ಯಾಯವಿದ್ದರೂ ಸಾಮಾನ್ಯ ಮಹಿಳೆಯೊಬ್ಬಳು ತನ್ನ ಯುಕ್ತಿಯೊಂದರ ಶಕ್ತಿಯಿಂದ ಆರಕ್ಷಕರು, ಕ್ರಮಬದ್ಧ ತನಿಖೆ ಎಲ್ಲವ ಮೀರಿಸಿ ಬೇಧಿಸುವ ಹಾದಿಯೇ ಬಲು ರೋಮಾಂಚಕ. ಕಥನ ಕಟ್ಟುವಿಕೆಯೂ ಈ ದಾರಿಗೆ ಹಾದಿಗಲ್ಲಿನಂತೆ ಪೂರಕವಾಗಿಯೇ ಇದೆ. ಅದು ಮಾತ್ರವಲ್ಲದೆ, ಪ್ರಿಯಾಳನ್ನು ಸೂಪರ್ ಹ್ಯೂಮನ್ ಎಂದೋ, ಅತಿಮಾನುಷ ಶಕ್ತಿ ಉಳ್ಳವಳು ಎಂಬಂತೆ ಬಿಂಬಿಸದೆ ಸಾಮಾನ್ಯ ಮಹಿಳೆಯೊಬ್ಬಳಂತೆ ತೋರಿಸಿದ್ದು, ಕಥನಕ್ಕೆ ಪ್ರಾಮಾಣಿಕ ಸ್ಪರ್ಶವನ್ನು ನೀಡಿದೆ ಮತ್ತು ಅದು ತೀರಾ ನೈಜವಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಮಂತ್ರುಕ್ಕೆ ಮಾವಿನ್ ಕಾಯೂ ಉದುರ್ತೈತೆ: ಸುಮಾ ಸತೀಶ್ ಸರಣಿ
ಊಟ ಸೇರ್ದಿದ್ರೆ, ಉಸಾರು ತಪ್ಪೀರೆ ದಿಷ್ಟಿ ಮಂತ್ರ ಹಾಕೋರು. ಇದ್ರಾಗೆ ನಾಕು ತರ. ಸೆರಗು ನಿವಾಳ್ಸಿಕಂತಾ ಮಂತ್ರ ಹಾಕೋದು ಒಂದು ರಕಮಾದ್ರೆ, ಇಬೂತಿ(ವಿಭೂತಿ), ಸಕ್ಕರೆ, ಉಪ್ಪು ಮಂತ್ರಿಸಿ ಕೊಡೋದು ಬ್ಯಾರೆ ರಕಮುಗ್ಳು. ಅವ್ರೇ ಬಂದ್ರೆ ಸೆರಗು ನಿವಾಳ್ಸಿ ಮಂತ್ರ ಹಾಕೋರು. ಅವುರ್ ಬದ್ಲಿ ಬ್ಯಾರೆಯೋರ್ ಬಂದ್ರೆ ಉಪ್ಪೋ ಸಕ್ಕರೇನೋ ಮಂತ್ರಿಸಿ ಊಟದಾಗೆ ಕಲ್ಸಿ ಕೊಡೋಕೆ ಹೇಳೋರು. ಇಬೂತಿ ಆದ್ರೆ ಹಣೆ ಮ್ಯಾಗೆ ಹಚ್ಚೋಕೆ ಹೇಳೋರು. ಮಂತ್ರ ಬಿದ್ದ ಮ್ಯಾಕೆ ಊಟ ತಿಂಡಿ ಸರ್ಯಾಗಿ ಸೇರೋದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಲೇಖಕರ ಅಜ್ಜಿ-ಅಜ್ಜಂದಿರು ಹಾಕುತ್ತಿದ್ದ ಅಂತ್ರ-ಮಂತ್ರಗಳ ಕುರಿತ ಬರಹ ನಿಮ್ಮ ಓದಿಗೆ
ಜೀವಶಾಸ್ತ್ರದಲ್ಲಿ ಸ್ಕೋರ್ ಮಾಡಿಸಿದ ಕೈಬೆರಳ ತಂತ್ರ!! ಬಸವನಗೌಡ ಹೆಬ್ಬಳಗೆರೆ ಸರಣಿ
ಊರಲ್ಲಿ ಫಲಿತಾಂಶ ಕೇಳಿ ಏನೂ ಹೇಳಲಿಲ್ಲ. “ವಿಜ್ಞಾನವೆಂದರೆ ಕಷ್ಟ; ಅಂತಾದ್ರಲ್ಲಿ ನೀನು ಇಷ್ಟಾದ್ರೂ ತೆಗೆದೆಯಲ್ಲಾ ಅಂತಾ ಖುಷಿ ಪಟ್ಟರು”! ಅವರು ನನ್ನ ಫಲಿತಾಂಶದಲ್ಲಿ ಬೇಸರ ಪಟ್ಟುಕೊಳ್ಳದಿರಲು ಇನ್ನೊಂದು ಕಾರಣವಿದೆ. ಅವರಿಗೆ ನನ್ನ ಹಾಸ್ಟೆಲ್ ಹುಡುಗರ ಫಲಿತಾಂಶ ಹೇಳಿದ್ದು. ನಮ್ಮ ಹಾಸ್ಟೆಲ್ಲಿನಲ್ಲಿ ಇದ್ದ ಸೆಕಂಡ್ ಪಿಯುಸಿಯ 24 ವಿದ್ಯಾರ್ಥಿಗಳ ಪೈಕಿ ಪಾಸ್ ಆಗಿದ್ದು ಇಬ್ಬರೇ!! ಅದು ನಾನು ಮತ್ತು ಲಿಂಗರಾಜ ಮಾತ್ರ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಉಸಿರೇ….. ಉಸಿರು……: ಸುಮಾವೀಣಾ ಸರಣಿ
‘ಉಸಿರಿ’ನ ಹೇಳಿಕೆ ಇಲ್ಲಿಗೆ ಮುಗಿಯಲಿಲ್ಲ, ಇನ್ನೂ ಇದೆ. ‘ಉಸಿರು’ ಈ ಪದದ ಅಕ್ಷರಗಳನ್ನು ಕೊಂಚ ಅದಲು-ಬದಲು ಮಾಡಿದರೆ‘ಉರು(ಸು)ಸ್’ ಆಗುತ್ತದೆ. ಅಂದರೆ ಮುಸಲ್ಮಾನರ ಧಾರ್ಮಿಕ ಆಚರಣೆ ಎಂದಾಗುತ್ತದೆ. ಇನ್ನೂ ಉಸಿರಿನ ಅಕ್ಷರಗಳನ್ನು ಅದಲು ಬದಲು ಮಾಡುತ್ತೇವೆ ಎಂದರೆ ‘ಉರಿಸು’ ಎಂದಾಗುತ್ತದೆ. “ಮನೆಮನೆಯಲ್ಲಿ ದೀಪ ಉರಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗುವ ತಬ್ಬಿದಾಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ?’’ ಎಂಬ ಜಿ.ಎಸ್. ಎಸ್ ಅವರ ಕವನದ ಸಾಲುಗಳು ನೆನಪಾಗದೆ ಇರುತ್ತವೆಯೇ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹನ್ನೊಂದನೆಯ ಬರಹ ನಿಮ್ಮ ಓದಿಗೆ
“ಧೈರ್ಯಶಾಲಿ ಮತ್ತು ಬಂಡಾಯಗಾರ ಅರಬ್ ಕವಿ”: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅಡೋನೀಸ್ ಅವರ ಕಾವ್ಯ ಮತ್ತು ವಿಮರ್ಶೆ ಅರೇಬಿಕ್ ಕಾವ್ಯದ ಬೆಳವಣಿಗೆಯ ಮೇಲೆ ದೂರಗಾಮಿ ಪ್ರಭಾವ ಬೀರಿವೆ. ಶಾಸ್ತ್ರೀಯ ಕಾವ್ಯದಲ್ಲಿ ಆಳವಾಗಿ ಬೇರೂರಿದ್ದಾಗ್ಯೂ ಸಮಕಾಲೀನ ಅರೇಬಿಕ್ ಸಮಾಜದ ಅವಸ್ಥೆ ಮತ್ತು ಪ್ರತಿಕ್ರಿಯೆಗಳನ್ನು ತೋರಿಸುವಂತಹ ಹೊಸ ಕಾವ್ಯಾತ್ಮಕ ಭಾಷೆ ಮತ್ತು ಲಯಗಳನ್ನು ಸೃಷ್ಟಿಸಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸಿರಿಯಾ (Syria) ದೇಶದ ಅರೇಬಿಕ್ (Arabic) ಭಾಷಾ ಕವಿ ಅಡೋನೀಸ್-ರವರ (Adonis – Ali Ahmad Said Esber) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಲೋನ್ ಸಿಕ್ಕಲು ಇಂಟರ್ವ್ಯೂ!: ಎಚ್. ಗೋಪಾಲಕೃಷ್ಣ ಸರಣಿ
ಮನೆ ಒಳಗೆ ಸೇರಿಕೊಂಡು ಬಿಟ್ಟರೆ ಯಾವ ಓನರಿಣಿ ಕಾಟವೂ ಇರುದಿಲ್ಲ, ರಾತ್ರಿ ಹನ್ನೆರಡಕ್ಕೆ ಯಾರೂ ಬಾಡಿಗೆ ವಸೂಲಿಗೆ ಬರುಲ್ಲ, ಬೆಳಿಗ್ಗೆ ಬೆಳಿಗ್ಗೆ ಬಂದು ಬಾಡಿಗೆ ಕೊಡಿ ಅಂತ ಕೇಳೋದಿಲ್ಲ, ಅದಕ್ಕಿಂತ ಮುಖ್ಯವಾಗಿ ಹೆಂಡತಿಯ ಒಂದೇ ಒಂದು ಆಸೆ ಸಂಬಳದ ಮೊದಲ ಹತ್ತು ರುಪಾಯಿ ದೇವರಿಗೆ ಅದರಲ್ಲೂ ರಾಘವೇಂದ್ರ ಸ್ವಾಮಿಗೆ ರಾಯರ ಮಠಕ್ಕೆ ಅಭಿಷೇಕಕ್ಕೆ ಕೊಡಬೇಕು ಅನ್ನುವುದು…
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೆರಡನೆಯ ಕಂತು
“ಎತ್ತಿನ ಜ್ವರಕ್ಕೆ ಎಮ್ಮೆಗೆ ಬರೆ -ನೆನಪಿನ ಬಾಳೆ”: ಪೂರ್ಣೇಶ್ ಮತ್ತಾವರ ಸರಣಿ
ಕಾಲು ಗಂಟೆಗೂ ಮೊದಲು ನಾನು “ಬಾಳೆ ಎಲೆಯ ಛತ್ರಿ” ನಡಿಗೆ ನಡೆಸಿದ್ದು ನಮ್ಮ ಜೂನಿಯರ್ಗಳಿಗೆ ನನ್ನ ನಿರೀಕ್ಷೆಯನ್ನೂ ಮೀರಿ ಅತ್ಯಾಕರ್ಷಕವಾಗಿ ಕಂಡಿದೆ. ಅದೆಷ್ಟು ಅತ್ಯಾಕರ್ಷಕವೆಂದರೆ ಅವರು ಊಟ ಮುಗಿಸಿ ತಮ್ಮ ತಮ್ಮ ಡಾರ್ಮಿಟರಿಗಳಿಗೆ ಹೋಗುವ ಬದಲು ನೇರ ಎಂ.ಪಿ.ಹಾಲ್ ನ ಹಿಂಬದಿಯಲ್ಲಿದ್ದ ಬಾಳೆ ತೋಟಕ್ಕೆ ನುಗ್ಗಿದ್ದಾರೆ. ಎಲ್ಲರೂ “ನನಗೊಂದು ಎಲೆ.. ನನಗೊಂದು ಎಲೆ..” ಎನ್ನುತ್ತಾ ಇಡೀ ಬಾಳೆ ತೋಟವನ್ನೇ ಲೂಟಿ ಮಾಡಲು ಶುರು ಮಾಡಿದ್ದಾರೆ.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹತ್ತನೆಯ ಬರಹ
ಭೂಮ್ತಾಯಿ ಮ್ಯಾಗ್ಳ ಗಿಡ ಗಂಟಿ ಬುಟ್ರೆ ದಿಷ್ಟಿ ನಿವಾಳ್ಸೋದೇ ದೊಡ್ಡ ಮದ್ದು: ಸುಮಾ ಸತೀಶ್
ನಾವು ಉಣ್ಣಾವಾಗ ಒಂದು ಕಡಿಕ್ಕೆ ಕುಂತು ಉಂಡು, ಗೋಮೆ ಇಕ್ಕಿ ಎದ್ದೇಳ್ ಬೇಕು. ಅದ್ ಬುಟ್ಟಿ ಓಡಾಡೋ ಜಾಗದಾಗೆ ಉಂಡ್ರೆ, ತಟ್ಟೆಗ್ಳಾಗಿಂದ ಮುಸ್ರೆ ಪಸ್ರೆ ಚೆಲ್ಲಾಕಿಲ್ವೇ? ಅದುನ್ನ ಯಾರಾನಾ ತುಳುದ್ರೆ ಕಾಲ ರಂಜು ಆಗ್ತೈತೆ ಅಂತಿದ್ರು. ಭೂಮ್ತಾಯಿ ಕೊಡಾ ಅನ್ನವಾ ಅಂಗೆ ಮರ್ವಾದೆ ಇಲ್ದಂಗೆ ಚೆಲ್ಲೀರೆ, ಅದ್ನ ತುಳ್ದು ಪಳ್ದು ಮಾಡೀರೆ ನಮ್ಗೆ ಒಳ್ಳೇದಾಯ್ತೈತೆ? ಅಂಬೋರು. ಇದೂ ಒಂತರಾ ದಿಟವೇಯಾ. ಕಿಲೀನ್ ಆಗಿರ್ಬೇಕು ಅಂಬ್ತ ಪಾಠ ಹೇಳ್ತೈತೆ. ಭೂಮ್ತಾಯಿ ಕೊಡಾ ಪ್ರಸಾದ್ವ ಚೆಲ್ಬಾರ್ದು ಅಂತ್ಲೂ ಹೇಳ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಮದ್ದುಗಳ ಕುರಿತ ಬರಹ ನಿಮ್ಮ ಓದಿಗೆ
ಚಿನ್ನದ ದ್ವೀಪ, ಶವದ ಹೂವು ಮತ್ತು ಮಲೇಷ್ಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಮಲಯ ಪೆನಿನ್ಸುಲಾ ಮತ್ತು ಬೋರ್ನಿಯೊದ ಉತ್ತರ ಕರಾವಳಿ ಪ್ರದೇಶವು ಪ್ರಪಂಚದ ಪ್ರಮುಖ ಕಡಲ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಏಷ್ಯಾದ ಇತರ ಭಾಗಗಳ ಜನರು ಇಲ್ಲಿಗೆ ಭೇಟಿ ಕೊಡುತ್ತಾರೆ. ಈ ಕಾರಣದಿಂದಾಗಿ ಆಗ್ನೇಯ ಏಷ್ಯಾದ ಬೇರೆ ರಾಷ್ಟ್ರಗಳಲ್ಲಿ ಕಂಡುಬರುವಂತೆ ಮಲೇಷ್ಯಾದಲ್ಲಿಯೂ ಜನಾಂಗೀಯ ವೈವಿಧ್ಯತೆಯಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಮಲೇಷ್ಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ









