ಯುದ್ಧದ ಬಿಸಿ ನೀಗಿಕೊಂಡು ತಂಪಗಾಗಬೇಕಿದೆ ರಷ್ಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಕಮ್ಯುನಿಸ್ಟ್ ಆಳ್ವಿಕೆಯ ಸಮಯದಲ್ಲಿ ರಷ್ಯನ್ ಬರಹಗಾರರು ನಿರ್ಬಂಧಕ್ಕೆ ಒಳಗಾದರು. ಮುಕ್ತವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗದ ದುಃಸ್ಥಿತಿಗೆ ಸಿಲುಕಿಕೊಂಡರು. ಮರೀನಾ ಟ್ವೆಟೇವಾ ಅವರು ರಷ್ಯಾದ ಹೊರಗಡೆ ಇದ್ದುಕೊಂಡೇ ಕಾವ್ಯರಚನೆ ಮಾಡಿದ್ದು, ರಷ್ಯಾಕ್ಕೆ ಮರಳಿ ಬಂದು ಎರಡೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು ಇವೆಲ್ಲಾ ಸಾಹಿತ್ಯ ಕ್ಷೇತ್ರದ ಮೇಲೆ ಕಮ್ಯುನಿಸ್ಟ್ ಪ್ರಾಬಲ್ಯವನ್ನು ಸೂಚಿಸುತ್ತವೆ. ಸ್ಟಾಲಿನ್ ಮರಣದ ಬಳಿಕ ರಷ್ಯನ್ ಸಾಹಿತ್ಯದಲ್ಲಿ ಹೊಸ ಬಗೆಯ ಬರಹಗಳು ಮತ್ತು ಪ್ರವೃತ್ತಿಗಳು ಕಾಣಿಸಿಕೊಂಡವು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಪದಗಳಷ್ಟೇ ಅಲ್ಲದ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
‘ಒಂದು ಕವಿತೆ ಕೆಲಸ ಮಾಡುತ್ತಿದೆಯೆ ಎಂದು ತಿಳಿಯುವುದು ಹೇಗೆ’ ಎಂಬ ಕವಿತೆಯಲ್ಲಿ, ಇನ್ನೊಬ್ಬರ ಕವಿತೆ ಓದುವಿಕೆಯ ಮೌನವನ್ನು ಆಲಿಸುವ ಮೂಲಕ ಮಾತ್ರ ನಿಮ್ಮ ಮುಂದೆ ಇರುವ ಕವಿತೆ ನಿಜವಾಗಿಯೂ ಯಶಸ್ವಿಯಾಗುತ್ತದೆ. ಅಂತೆಯೇ ‘Harmony’ ಎಂಬ ಕವಿತೆಯಲ್ಲಿ “ವಸ್ತುಗಳು” ಮತ್ತು “ಪದಗಳಲ್ಲದವು” ಪ್ರಾಸದ ಸ್ಥಿತಿಗೆ ಮರಳಬೇಕು ಎಂದು ಸೂಚಿಸುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ವಿವಿದಾರ್ಥದಿ ಪದನಾರಿ: ಸುಮಾವೀಣಾ ಸರಣಿ
ಏನೋ ಹುಷಾರಿಲ್ವೇನೋ ಎನ್ನುತ್ತಾ… ಟೈಂ ಆಗ್ತಾ ಇದೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ! ಬರಿ! ಎನ್ನುತ್ತಲೇ ಇದ್ದೆ ಅವಳು ‘ನೋ’ ‘ನೋ’ ಎನ್ನುವಂತೆ ತಲೆ ಆಡಿಸಿದಳು ಕಡೆಗೆ ಅವಳೆ “ಏನೂ ಪ್ರಿಪೇರ್ ಆಗಿಲ್ಲ ಮೇಡಮ್ ಹೇಗ್ ಬರೀಲಿ?” ಎಂದಾಗಂತೂ ಈಕೆ ಎಷ್ಟು ಸಾಧ್ಯನೋ ಅಷ್ಟು ಬರಿಯಮ್ಮ ಎಂದದ್ದಕ್ಕೆ ಸಾಧ್ಯ… ನೋ! ನೋ ಸಾಧ್ಯ …! ಎಂದು ತಲೆ ಆಡಿಸಿರುವಳಲ್ಲ… ನಿಜ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ನಾಲ್ಕನೆಯ ಬರಹ
ಮನಸ್ಸಿನ ಮಾರ್ಗದಲ್ಲೊಂದು ವೈಚಾರಿಕ ರಾಗಾಲಾಪಗಳು: ರಾಮ್ ಪ್ರಕಾಶ್ ರೈ ಕೆ ಸರಣಿ
ಚಿತ್ರದ ಕಟ್ಟುವಿಕೆ ವಿಶೇಷವೆನಿಸಿಕೊಳ್ಳುವುದು ಪಿ. ವಾಸು ಆಯ್ದುಕೊಳ್ಳುವ ಕಥಾವಸ್ತು ಹಾಗೂ ಅದರ ಮೌಲ್ಯದ ಕಾರಣಕ್ಕೆ. ಅವರ ಆಪ್ತಮಿತ್ರ, ಆಪ್ತ ರಕ್ಷಕ, ಶಿವಲಿಂಗ ಹಾಗೂ ಆಯುಷ್ಮಾನ್ಭವ ಚಿತ್ರಗಳೆಲ್ಲವೋ ಮನೋ ವೈಜ್ಞಾನಿಕ ಅಂಶಗಳನ್ನು ಆಧರಿಸಿದವೇ ಆಗಿವೆ ಹಾಗೂ ಸಂಗೀತದ ಬಳಕೆಯೂ ಅತೀ ವಿಶೇಷವಾಗಿರುವಂಥದ್ದು. ಇಲ್ಲಿ ಚಿತ್ರದ ಅಭೂತ ಪೂರ್ವ ವಿಜಯಕ್ಕೆ ಇನ್ನೊಂದು ಕಾರಣವೆಂದರೆ ತಾರಾಗಣ. ವಿಜಯ್ ಪಾತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಮೋಘ ಅಭಿವ್ಯಕ್ತಿ..
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಪಿ. ವಾಸು ನಿರ್ದೇಶನದ ‘ಆಪ್ತಮಿತ್ರ’ ಸಿನಿಮಾದ ವಿಶ್ಲೇಷಣೆ
ಅಣ್ಣನಿಗೆ ಗೊತ್ತಿಲ್ಲದ ದೊಡ್ಡಣ್ಣ ಸಿಕ್ಕಿದರು!: ಗುರುಪ್ರಸಾದ ಕುರ್ತಕೋಟಿ ಸರಣಿ
ನಾನು ದೊಡ್ಡಣ್ಣ ಅವರನ್ನು ಗುರುತಿಸಿದ ಕೊಡಲೇ ಅವರಿಗೆ ನಾನು ಕನ್ನಡಿಗ ಅಂತ ಗೊತ್ತಾಗಿ ಹೋಯ್ತು.. ಅವರು ನನ್ನ ಕೈ ಹಿಡಿದುಕೊಂಡು ನೀವು ಕನ್ನಡದವರ? ಬನ್ನಿ ಬನ್ನಿ ಅಂತ ಅಲ್ಲಿಯೇ ಹತ್ತಿರದಲ್ಲಿದ್ದ ಬೆಂಚ್ ಮೇಲೆ ಕೂತು ನನ್ನನ್ನೂ ಜೊತೆಯಲ್ಲಿ ಕೂಡಿಸಿಕೊಂಡರು. ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಅಣ್ಣ ಇದ್ಯಾವುದರ ಪರಿವೆಯೇ ಇಲ್ಲದಂತೆ ನಿಂತಿದ್ದ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತಾರನೆಯ ಬರಹ
ಅಪ್ಪ ಅಂಬೋ ಆಲದಮರ: ಸುಮಾ ಸತೀಶ್ ಸರಣಿ
ಅಪ್ಪ ಅವ್ರ ಕಾಲದ ಗಂಡಸ್ರಿಗಿಂತ ವಸಿ ಮುಂದ್ವರೆದ ಯೋಚ್ನೆ ಮಾಡೋರು. ಎಲ್ರೂ ಓದ್ಬೇಕೂನ್ನೋರು. ತಾತಂಗೆ, ನಮ್ಮತ್ತೆದೀರ್ಗೆ ಲೈಬ್ರರೀಯಿಂದ ಕತೆ ಪುಸ್ತಕ ತಂದ್ಕೊಡೋರು. ತಂಗಿದೀರು ಕತೆ ಬರಿತೀವಿ ಅಂದ್ರೆ ಪುಸ್ತಕ ಪೆನ್ನು ತಂದ್ಕೊಟ್ಟು ಬೆನ್ನು ತಟ್ಟೋರು. ಸಂಗೀತ ಕಲಿಸಾಕೆ ಹಾರ್ಮೋನಿಯಂ ಮೇಷ್ಟ್ರು ಇಟ್ಟಿದ್ರು. ಕೊನೆ ತಂಗೀಗೆ ಮೊದ್ಲನೇ ಸಲ ಹೆರಿಗೇಲಿ ಮಗ ಹೋಗಿಬಿಟ್ತಂತೆ. ಮಂಕಾಗಿ ಬಿಟ್ಟಾಗ ಅಪ್ಪ ಕತೆಪುಸ್ತಕ ತಂದ್ಕೊಟ್ಟು ಓದೋಕೆ ಯೋಳತಿದ್ರಂತೆ. ನಾಗರ ಪಂಚಮಿ ಬಂದ್ರೆ ಎಲ್ಲಾ ಅಕ್ಕತಂಗೀರೂ ಖುಷೀಲಿಂದ್ಲೆ ಬೆನ್ನು ತೊಳ್ಯೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಂದೆಯವರ ಕುರಿತ ಬರಹ ಇಲ್ಲಿದೆ
ಮಕ್ಕಳನ್ನು ಮಕ್ಕಳಂತಿರಲು ಬಿಡಿ ಪಾಪ!: ಬಸವನಗೌಡ ಹೆಬ್ಬಳಗೆರೆ ಸರಣಿ
ನಾನು ತುಂಬಾ ಸ್ವಾಭಿಮಾನಿಯಾದ್ದರಿಂದ ನನ್ ಮಾಮ ‘ಖರ್ಚಿಗೆಂದು ದುಡ್ಡು ಕೇಳಲು ನಾಚಿಕೆಪಟ್ಟುಕೊಳ್ಳಬೇಡ’ ಎಂದರೂ ನಾನು ಮಾತ್ರ ಹಾಗೆ ಕೇಳುತ್ತಿರಲಿಲ್ಲ. ಮನೆಯವರಿಂದಲೂ ಅಷ್ಟೇನೂ ಆರ್ಥಿಕ ಸಹಕಾರ ಇರಲಿಲ್ಲ. ಮೊದಲೇ ಬೆಂಗಳೂರಿಗೆ ಹೊಸಬ. ಮೊದಲು ಒಂದೆರಡು ದಿನ ನನ್ನ ಮಾಮನೇ ನನ್ನನ್ನು ಕಾಲೇಜಿಗೆ ಡ್ರಾಪ್ ಕೊಟ್ಟ. ಮೂರನೇ ದಿನದಿಂದ ನನಗೇ ಬರಲು ತಿಳಿಸಿದ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ
ಭಾವೈಕ್ಯದ ಜಗದ್ಗುರು: ರಂಜಾನ್ ದರ್ಗಾ ಸರಣಿ
ಅವರು ಬಹಳ ಕಷ್ಟಪಟ್ಟು ಮಠವನ್ನು ಬೆಳೆಸಿದರು. ಅವರು ಶ್ರಮಜೀವಿಗಳಂತೆ ಕಾರ್ಯ ಮಾಡಿದರು. ಯಾವುದೇ ಆರ್ಥಿಕ ಸೌಲಭ್ಯಗಳಿಲ್ಲದ ವೇಳೆ ಡಂಬಳದಿಂದ ಗದಗಿಗೆ ಮತ್ತು ಗದಗದಿಂದ ಡಂಬಳದ ವರೆಗೆ ಕಾಲ್ನಡಿಗೆಯಲ್ಲಿ ಸುತ್ತುತ್ತ, ಬಾವಿ ತೋಡುವಂಥ ಕಠಿಣ ಕಾಯಕ ಮಾಡಿದರು. ಜೊತೆಗಿದ್ದ ಭಕ್ತರ ಮತ್ತು ಆಳುಗಳು ಬಾವಿ ತೋಡಿ, ರಾತ್ರಿ ಸುಸ್ತಾಗಿ ಮಲಗಿದ್ದಾಗ ಅವರ ಅರವಿಗೆ ಬಾರದಂತೆ ಪಾದಗಳಿಗೆ ಔಷಧಿ ಹಚ್ಚುವುದನ್ನೂ ಮಾಡಿದರು!
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಕೋಟಿಗೊಬ್ಬರು “ಎಂ.ಎಸ್.ರಾಮಯ್ಯ”: ಎಚ್. ಗೋಪಾಲಕೃಷ್ಣ ಸರಣಿ
ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ









