ಶಾಲೆ ಬಿಡಿಸಿದ ಲವ್ ಲೆಟರ್…!!: ಬಸವನಗೌಡ ಹೆಬ್ಬಳಗೆರೆ ಸರಣಿ
ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ
ಭಕ್ತವತ್ಸಲ ಸಿದ್ಧಗಂಗಾ ಶ್ರೀಗಳು: ರಂಜಾನ್ ದರ್ಗಾ ಸರಣಿ
ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಕೈ ಹಿಡಿದು ನೀ ನಡೆಸು ಮುಂದೆ…: ಕಾರ್ತಿಕ್ ಕೃಷ್ಣ ಸರಣಿ
ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು.
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿ
ಸನ್ಯಾಸಿನ್ ಅಂದ್ರೆ ಯಾರು?: ಎಚ್. ಗೋಪಾಲಕೃಷ್ಣ ಸರಣಿ
ಸಂಸ್ಥೆಯ ಹಿಂದಿರುವ ವಿವೇಕಾನಂದರ ಒತ್ತಾಸೆಯ ಸ್ಪೂರ್ತಿದಾಯಕ ನಿಲುವು ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲ ಮತ್ತು ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೇ ರೀತಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ೩೭೦ಎಕರೆ ಜಮೀನು ದಾನವಾಗಿ ನೀಡಿದ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ್ ಒಡೆಯರ್ ಅವರನ್ನು ಸಹ ಸಂಪೂರ್ಣವಾಗಿ ಮರೆಯಲಾಗಿದೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ
ಅಯ್ಯೋ ಉಪ್ಪಿಟ್ಟಾ!: ಚಂದ್ರಮತಿ ಸೋಂದಾ ಸರಣಿ
ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ…
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ನಾಲ್ಕನೆಯ ಕಂತು
ಪೂರ್ಣೇಶ್ ಮತ್ತಾವರ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಶುರು..
ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್‌ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ!
ನವೋದಯ ಶಾಲಾ ದಿನಗಳ ನೆನಪುಗಳ ಕುರಿತು ಪೂರ್ಣೇಶ್ ಮತ್ತಾವರ ಬರೆಯುವ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ
ಕೂರಾಪುರಾಣ ೫: ಸೂಜಿಗಳು ಮತ್ತು ಸಂಕಷ್ಟಗಳು
ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ
ಅಡ್ಡ ಹೆಸರಿನ ಅವಾಂತರಗಳು: ಅನುಸೂಯ ಯತೀಶ್ ಸರಣಿ
ನನ್ನ ಮನದಿಂಗಿತವನ್ನು ಅರಿತ ಅವರು ಅಲ್ರೀ ಈ ಮಕ್ಕಳು ನಮಗೆಲ್ಲ ಎಷ್ಟು ಚಂದ ಚಂದ ಅಡ್ಡ ಹೆಸರುಗಳನ್ನು ಇಟ್ಟು ಕರೆಯುತ್ತಾರೆ. ನಮ್ಮ ಬೆನ್ನ ಹಿಂದೆ ಕರಿತಾರೆ. ಅವರು ಇಷ್ಟು ದಿನ ಅವರಿಗೆ ಮಾತ್ರ ಗೊತ್ತಿತ್ತು. ಈಗ ನಮಗೂ ತಿಳಿಯಿತು. ಇನ್ನು ಎಷ್ಟು ಜನ ಗೊತ್ತಿದ್ಯೋ ಏನೋ ಗೊತ್ತಿಲ್ಲ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಪಶ್ಚಿಮ ಪೂರ್ವಗಳ ಅಪೂರ್ವ ಸಂಗಮ ಟರ್ಕಿ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಸಂವಿಧಾನದ ಪ್ರಕಾರ ಟರ್ಕಿ ಜಾತ್ಯತೀತ ರಾಷ್ಟ್ರವಾಗಿದ್ದರೂ, ಅನುದಿನದ ಬದುಕಿನಲ್ಲಿ ಅದು ಪಾಲನೆಯಾಗುತ್ತಿಲ್ಲ. ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತಿದೆ. ಧರ್ಮವನ್ನು ಮಕ್ಕಳಿಗೆ ಕಲಿಸುವುದಕ್ಕಾಗಿಯೇ ಪಠ್ಯಕ್ರಮವನ್ನು ರೂಪಿಸಲಾಗಿದೆ. ಟರ್ಕಿಯಲ್ಲಿರುವ ಹೆಚ್ಚಿನ ಜನರು ಮುಸ್ಲಿಂ ಧರ್ಮಕ್ಕೆ ನಿಷ್ಠರಾಗಿದ್ದು, ಇಸ್ಲಾಂ ಜಗತ್ತು ಸ್ಥಾಪನೆಯಾಗಬೇಕೆಂಬ ಆಶಯವನ್ನು ಇಟ್ಟುಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ “ಟರ್ಕಿ” ಕುರಿತ ಬರಹ ನಿಮ್ಮ ಓದಿಗೆ









