ಸುಮಾ ಸತೀಶ್ ಹೊಸ ಸರಣಿ “ರಂಗಿನ ರಾಟೆ” ಆರಂಭ…
ಹಳ್ಳಿಯೂರ ಬದುಕು ಹಗಲು-ರಾತ್ರಿಯ ಪರಿವಿಲ್ಲದೆ ಕತೆ ನೇಯುವ ಕಥಾಕಣಜ. ಸುಮಾ ಸತೀಶ್ ಇಂಥ ಕಣಜದ ಹತ್ತು ಹಲವು ಕತೆಗಳನ್ನು “ರಂಗಿನ ರಾಟೆ” ಸರಣಿಯಲ್ಲಿ ಪ್ರತೀ ಬುಧವಾರ ಕೆಂಡಸಂಪಿಗೆಯ ಓದುಗರ ಮುಂದೆ ಇಡಲಿದ್ದಾರೆ. ಈ ಹೊಸ ಸರಣಿಯ ಮೊದಲ ಕಂತು ಇಲ್ಲಿದೆ
ಇಂಗ್ಲೀಸ್ನ್ಯಾಗೆ ಹೆಸರು ಬರೆಯಲು ಕಲಿತ ಮಂಜಣ್ಣ!: ಬಸವನಗೌಡ ಹೆಬ್ಬಳಗೆರೆ ಸರಣಿ
ಹೆಸರು ಕಲಿತ ಮಂಜಣ್ಣ ಸಂಬಳವಿದ್ದ ಮನೆಗೆ ಹೋಗಿ ದನಗಳನ್ನೆಲ್ಲಾ ಕಟ್ಟಿ ಹಾಕಿ ಎಣ್ಣೆ ಅಂಗಡಿಗೆ ಹೋಗಿ, ಹೆಸರು ಕಲಿತ ಖುಷಿಗೆ ತುಸು ಹೆಚ್ಚೇ ಕುಡಿದಿದ್ದಾನೆ. ಮನೆ ಓಣಿಯಾಗೆಲ್ಲಾ ತೂರಾಡುತ್ತಾ ‘ನಂಗೆ ಇಂಗ್ಲೀಸ್ನ್ಯಾಗೆ ಹೆಸ್ರು ಬರೆಯೋಕೆ ಬರುತ್ತೆ’ ಎಂದು ಕೂಗಾಡುತ್ತಾ ಹೋಗಿದ್ದಾನೆ. ಮನೆಗೆ ಹೋಗಿ ಮಣ್ಣ ನೆಲದ ಮೇಲೆ ಕಲ್ಲಲ್ಲಿ ಮನೆ ತುಂಬಾ ಕೆತ್ತಿದ್ದಾನೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ
ಪತ್ರಿಕಾ ರಂಗದ ನಾಡೋಜ ಪಾಟೀಲ ಪುಟ್ಟಪ್ಪ: ರಂಜಾನ್ ದರ್ಗಾ ಸರಣಿ
ಬಡವರ ಬಗ್ಗೆ, ಹದಗೆಟ್ಟ ರಾಜಕೀಯ ಸ್ಥಿತಿಯ ಬಗ್ಗೆ ಮತ್ತು ಸಾಮಾಜಿಕ ನಿಷ್ಕ್ರಿಯತೆಯ ಬಗ್ಗೆ ಪಾಪು ಮರಗುತ್ತಿದ್ದರು. ಸಾಹಿತ್ಯ, ರಾಜಕಾರಣ, ಸಿನಿಮಾರಂಗ ಮುಂತಾದ ಕ್ಷೇತ್ರಗಳಲ್ಲಿನ ದೊಡ್ಡವರ ಸಣ್ಣತನದ ಬಗ್ಗೆ ಮತ್ತು ಸಣ್ಣವರ ದೊಡ್ಡತನದ ಬಗ್ಗೆ ವಿವರಿಸುತ್ತಿದ್ದರು. ಅವರ ಮಾತುಗಳು ರಂಜಕತೆಯಿಂದ ಮತ್ತು ಕೆಲವು ಸಲ ವಿಷಾದದಿಂದ ಕೂಡಿರುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 83ನೇ ಕಂತು ನಿಮ್ಮ ಓದಿಗೆ
ಎಮರ್ಜೆನ್ಸಿಯ ಸುತ್ತ… : ಎಚ್. ಗೋಪಾಲಕೃಷ್ಣ ಸರಣಿ
ಅವರನ್ನು ಸಾರ್ವಜನಿಕ ಸಮಾರಂಭಗಳಲ್ಲಿ ವೇದಿಕೆ ಮೇಲೆ ನೋಡಿದ್ದೆ, ಹಿಂದೆ ಅವರು ಅರ್ಥಮಂತ್ರಿ ಆಗಿದ್ದಾಗ ರಾಜಾಜಿನಗರದ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿನ ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ ನೋಡಿದ್ದೆ ಮತ್ತು ಅವರ ಭಾಷಣ ಕೇಳಿದ್ದೆ. ಮಂಗಳಾರತಿ ತಟ್ಟೆಗೆ ಪಕ್ಕದವರಿಂದ ನೋಟು ಕೇಳಿ ಪಡೆದು ಹಾಕಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತನೆಯ ಕಂತು ನಿಮ್ಮ ಓದಿಗೆ
ಕೂರಾಪುರಾಣ ೩ – ‘ನಮ್ಮದು’ ಎಂದುಕೊಂಡಕೂಡಲೇ ಆಪ್ತವಾಗಿಬಿಡುವ ಮಾಯೆ ಪ್ರೀತಿಯೇ?
ಈಗಲು ಮನೆಯಲ್ಲಿ ಅವನು ಅರ್ಧ ಕಚ್ಚಿದ ಚಪ್ಪಲಿ, ಇಲಿ ತಿಂದವರಂತಾದ ಕಟ್ಟಿಗೆಯ ಕುರ್ಚಿಯ ಕೈ, ಅರ್ಧ ಹರಿದು ಹೋದ ರಬ್ಬರಿನ ಡೋರ್ ಸ್ಟಾಪರ್, ನೆತ್ತಿಯ ಮೇಲೆ ತೂತಾಗಿರುವ ನನ್ನ ಕ್ಯಾಪ್, ತುದಿ ಹರಿದು ಹೋಗಿರುವ ಕಾರ್ಪೆಟ್ ಎಲ್ಲವು ಅವನ ತುಂಟತನಕ್ಕೆ ಸಾಕ್ಷಿ ಎಂಬಂತಿವೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ
ವಿಶ್ವನಾಥ ಎನ್. ನೇರಳಕಟ್ಟೆ ಹೊಸ ಸರಣಿ “ವಿಶ್ವ ಪರ್ಯಟನೆ” ಶುರು
ಮನುಷ್ಯರ ಉಳಿಕೆಗೆ ಅತ್ಯಗತ್ಯವಾದ ಪ್ರಕೃತಿಯ ಅಸ್ತಿತ್ವವನ್ನು ಉಳಿಸುವ ನೆಲೆಯಲ್ಲಿ ತಾಂಜಾನಿಯಾ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ತಾಂಜಾನಿಯಾದ ಒಟ್ಟು ವಿಸ್ತೀರ್ಣದಲ್ಲಿ ಸುಮಾರು 30 ಪ್ರತಿಶತ ಭಾಗವನ್ನು ಸಂರಕ್ಷಿತ ರಾಷ್ಟ್ರೀಯ ಉದ್ಯಾನವನಗಳು ಆವರಿಸಿವೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ ಹೊಸ ಸರಣಿ “ವಿಶ್ವ ಪರ್ಯಟನೆ”
ಸಾಕುಪ್ರಾಣಿಗಳೂ ಶಾಲೆಗೆ ಬರ್ತಾವೆ: ಅನುಸೂಯ ಯತೀಶ್ ಸರಣಿ
ಇವತ್ತು ಅವ್ವ ಕೂಲಿಗೆ ಹೋದಳು. ಇದನ್ನ ಬಿಟ್ಟು ಬಂದರೆ ನಾಯಿ ಹದ್ದು ತಿಂದು ಬಿಡುತ್ತವೆ. ಅದಕ್ಕೆ ಅವ್ವ ನನ್ನ ಶಾಲೆಗೆ ರಜಾ ಹಾಕಿ ಕೋಳಿ ನೋಡಿಕೋ. ನಾಡಿದ್ದು ಕೋಳಿ ಕುಯ್ದು ಹೊಲದ ಬಳಿ ಹಸಿರು ಚಪ್ಪರ ಹಾಕಿ ಹಬ್ಬ ಮಾಡೋಣ ಅಂದಳು. ನನಗೆ ಶಾಲೆ ತಪ್ಪಿಸಿಕೊಂಡರೆ ಪಾಠ ಗೊತ್ತಾಗಲ್ಲ ಅಂತ ರಜಾ ಹಾಕಲು ಮನಸ್ಸಾಗಲಿಲ್ಲ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಕವಿ-ಕಾವ್ಯದ ನಡುವಣ ಮೌನ….: ಎಸ್. ಜಯಶ್ರೀನಿವಾಸ ರಾವ್ ಸರಣಿ
ಇಂಗೆಬೋಗ್ ಬಾಖ್‌ಮಾನ್ ಅವರ ಸಾಹಿತ್ಯ ವೈಯಕ್ತಿಕ ಗಡಿಗಳು, ಸತ್ಯದ ಸ್ಥಾಪನೆ ಮತ್ತು ಭಾಷೆಯ ತತ್ವಶಾಸ್ತ್ರದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ಅವರ ಅನೇಕ ಗದ್ಯ ಕೃತಿಗಳು ಮಹಿಳೆಯರು ತಮ್ಮ ಬದುಕಿಗಾಗಿ ನಡೆಸುವ ಹೊರಾಟಗಳು ಹಾಗೂ ಯುದ್ಧಾನಂತರದ ಸಮಾಜದಲ್ಲಿ ತಮ್ಮ ಧ್ವನಿಯನ್ನು ಹುಡುಕುವ ಹೋರಾಟಗಳನ್ನು ಪ್ರತಿನಿಧಿಸುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಅಪ್ಪನೆಂಬ ಆಗಸ, ಮಗಳೆಂಬ ಚಂದಿರ: ರಾಮ್‌ಪ್ರಕಾಶ್ ರೈ ಸರಣಿ
ಕಥೆಯು ಅವನೆಣಿಸಿದಂತೆ ಸಾಗುವುದಿಲ್ಲ. ಅರ್ಥಾತ್, ಕಸದ ಬುಟ್ಟಿಯೆಂಬುದು ಒಂದು ರೂಪಕ. ಇಲ್ಲಿ ಲೂಟಿಯಾಗಿರುವುದು ಅಮಾಯಕ ಆತ್ಮದ ಬದುಕು. ಅದು ಸುಟ್ಟಿರುವುದು ಸುಂದರ ಕನಸುಗಳನ್ನು. ಮುಗಿದ ಕಥೆಗೆ ಇನ್ನೆಲ್ಲಿ ಶುರುವೆಂದೆನಿಸುವ ಸನ್ನಿವೇಶದಲ್ಲಿ, ಮಗಳಿಗಾದ ಘೋರ ಅನ್ಯಾಯದ ವಿರುದ್ಧ, ಅಪ್ಪ ಹೋರಾಡುವುದು ಯುಕ್ತಿಯಿಂದ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ








