ತಿಗಣೆಗಳಿಂದ ತಪ್ಪಿಸಿಕೊಳ್ಳಲು ಮಾಡ್ತಿದ್ದ ಐಡಿಯಾ!: ಬಸವನಗೌಡ ಹೆಬ್ಬಳಗೆರೆ ಸರಣಿ
ತಿಗಣೆಗಳು ಬೆಳಿಗ್ಗೆ ಹೊತ್ತು ಎಲ್ಲಿಗೆ ಹೋಗ್ತಿದ್ವೋ ಗೊತ್ತಿಲ್ಲ ಆದರೆ ಮಲಗಿದ ನಂತರ ಅವುಗಳ ಉಪಟಳ ಜಾಸ್ತಿ ಆಗ್ತಾ ಇತ್ತು. ಎಷ್ಟೋ ಬಾರಿ ಅವು ನಮಗೆ ಕಚ್ಚಿ ಬೇಗ ಎಬ್ಬಿಸುವ ಮೂಲಕ ಅಲಾರಾಂ ನಂತೆ ಕೆಲಸ ಮಾಡಿದ್ದುಂಟು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ
ನೆರೆಮನೆಯ ದುಃಖ: ರಂಜಾನ್ ದರ್ಗಾ ಸರಣಿ
ಹೇಗ್ನಲ್ಲಿ ಸಿಕ್ಕ ಪಾಕಿಸ್ತಾನದ ಆ ಧೈರ್ಯ ತುಂಬಿದ ಮಹಿಳೆಯರ ಬಗ್ಗೆ ಪಕ್ಕದಲ್ಲಿ ಕುಳಿತಿದ್ದ ಈ ಮಹಿಳೆಗೆ ಹೇಳಿದೆ. ‘ಈಗ ನೀವು ಹೇಳುತ್ತಿರುವುದು ತದ್ವಿರುದ್ಧವಾಗಿದೆಯಲ್ಲಾ’ ಎಂದು ತಿಳಿಸಿದೆ. ಆಗ ಆ ಮಹಿಳೆ ಹೇಳಿದಳು: ‘ಅದೆಲ್ಲಾ ಆ ಕಾಲದ ಮಾತು. ಈಗ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಉಗ್ರರು ಪಾಕಿಸ್ತಾನವನ್ನು ಅಳಿವಿನ ಅಂಚಿಗೆ ತಂದಿಡುತ್ತಿದ್ದಾರೆ. ನಿಮ್ಮ ದೇಶ ಎಷ್ಟೋ ಪಾಲು ಮೇಲು. ನಿಮ್ಮ ಸಿನಿಮಾಗಳು, ನಿಮ್ಮ ಸಂಗೀತ, ನಿಮ್ಮ ವಸ್ತುಗಳು ನಮಗೆ ಬಹಳ ಪ್ರಿಯವಾಗಿವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಬೆಂಕಿಯ ನಾಲಗೆಯೊಳಗೆ ಬೆಂದ ಸತ್ಯಗಳು: ರಾಮ್ ಪ್ರಕಾಶ್ ರೈ ಕೆ ಸರಣಿ
ಈ ಕಥಾನಕದಲ್ಲಿ ಸರಣಿ ಅವಘಡಗಳು ನಡೆದರೂ ಕೊನೆವರೆಗೂ ಅದರ ಹಿಂದಿನ ಮರ್ಮವ ತಿಳಿಸದೆ ಮಳೆಗೆ ಕಾಯುವ ರೈತನಂತೆ ನೋಡುಗನ ಬಂಧಿಸಿಡುತ್ತದೆ. ತನ್ನ ತಪ್ಪಿಲ್ಲದೇ ತನ್ನ ಒಲವನ್ನು ಕಳೆದುಕೊಳ್ಳುವ ವಿಜಯ್, ಬದುಕನ್ನು ಪ್ರೀತಿಸುವುದೊಂದನ್ನು ಬಿಟ್ಟು ಇನ್ನೇನು ತಿಳಿಯದ ಭಟ್ಟರ ಜೀವನ ಒಲೆಯಲ್ಲಿ ನರ್ತಿಸುವ ಬೆಂಕಿಯ ಶಾಖಕ್ಕೆ ಸಿಲುಕಿ ನಲುಗುವುದು ಇವೆಲ್ಲವೂ ಭಾವ ಪ್ರಚೋದಕ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಶೇಷಾದ್ರಿಪುರದ ಇತಿಹಾಸ ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ
ಸಿಟಿ ಮಾರ್ಕೆಟ್ ಸುತ್ತಲಿನ ಪುಟ್ಟಪುಟ್ಟ ಗಲ್ಲಿಗಳ ಹೆಸರು ಓದುತ್ತಾ ಹೋದಂತೆ ಕಣ್ಣೆದುರು ಜ್ಞಾಪಕ ಚಿತ್ರಶಾಲೆ ತೆರೆದುಕೊಳ್ಳುತ್ತೆ. ಒಮ್ಮೆ ರೈಲ್ವೆ ಪ್ಲಾಟ್ ಫಾರ್ಮ್ ರಸ್ತೆಯಲ್ಲಿ ಹೋಗಬೇಕಾದರೆ ಅಲ್ಲಿನ ಮೂಲೆ ಮನೆಯ ಗೋಡೆ ಅಂಚಿನಲ್ಲಿ ಒಂದು ಕನ್ನಡ ಫಲಕ ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೈದನೆಯ ಕಂತು ನಿಮ್ಮ ಓದಿಗೆ
ಸಮೃದ್ಧ ಬಾಲ್ಯಕ್ಕೆ, ಕಳೆದ ಬದುಕಿಗೆ ಥ್ಯಾಂಕ್ಯು…: ಮಾರುತಿ ಗೋಪಿಕುಂಟೆ ಸರಣಿ
ಆತ ನಮ್ಮ ಶಾಲೆ ಬಿಟ್ಟ ಮೇಲೆ ನಿಗೂಢವಾಗಿ ಕಣ್ಮರೆಯಾದ. ನಮ್ಮ ಮನೆಯಲ್ಲಿ ಆಗ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಡತೆ ಇತ್ತು. ಆತ ಯಾವಾಗಲಾದರೂ ಖರ್ಚಿಗೆ ಬೇಕೆಂದರೆ ಒಂದಿಷ್ಟು ಚಿಲ್ಲರೆ ಪಡೆದುಕೊಳ್ಳುತ್ತಿದ್ದ. ನಮ್ಮದು ಕಿರಾಣಿ ಅಂಗಡಿ ಇದ್ದುದರಿಂದ ಅಪ್ಪನಿಗೆ ಗೊತ್ತಿಲ್ಲದೆ ಚಿಲ್ಲರೆ ಕಾಸನ್ನು ಎತ್ತಿಟ್ಟುಕೊಂಡು ಆತನಿಗೆ ಕೊಡುತ್ತಿದ್ದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ
ಶಹಬ್ಬಾಸ್ಗಿರಿ ಎಂಬ ಕಲಿಕಾ ಅಸ್ತ್ರ: ಅನುಸೂಯ ಯತೀಶ್ ಸರಣಿ
ಮೆಚ್ಚುಗೆಯ ಮಾಯಾದಂಡಕ್ಕೆ ಅತಿ ಹೆಚ್ಚಿನ ಮಹತ್ವ ಇರುತ್ತದೆ. ನಮಗೆ ತರಬೇತಿ ನೀಡುವಾಗಲು ಇದೆ ಅಂಶಗಳನ್ನು ಹೇಳಲಾಗುತ್ತದೆ. ಹೊಗಳಿಕೆಯಿಂದ ಲಾಭವೇ ಆಗುತ್ತದೆ. ಒಂದು ವೇಳೆ ಲಾಭವಾಗದಿದ್ದರೂ ಪರವಾಗಿಲ್ಲ ಈ ದಂಡವನ್ನ ಪದೇ ಪದೇ ಪ್ರಯೋಗಿಸಿ ಕಲಿಕೆಗೆ ಹುರಿದುಂಬಿಸಬೇಕು ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತದೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಸರಳತೆಯಲ್ಲಿ ಬೆಳಗುವ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
“ತ್ರಾನ್ಸ್ತ್ರೋಮೆರ್-ರನ್ನು ಓದಲು ಅತ್ಯುತ್ತಮ ಸಮಯವೆಂದರೆ ರಾತ್ರಿ, ಮೌನವಿರಬೇಕು ಮತ್ತು ಒಂಟಿಯಾಗಿರಬೇಕು; ತ್ರಾನ್ಸ್ತ್ರೋಮೆರ್-ರನ್ನು ಓದುವುದೆಂದರೆ ನಂಬಲಸಾಧ್ಯವಾದುದಕ್ಕೆ ಶರಣಾಗುವುದು. ಹಾಸಿಗೆಯಿಂದ ಎದ್ದು ಮನೆ ಏನು ಹೇಳುತ್ತಿದೆ ಮತ್ತು ಹೊರಗೆ ಗಾಳಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಲಿಸುವುದು. ಅವರ ಪ್ರತಿಯೊಬ್ಬ ಓದುಗ ಅವರನ್ನು ತನ್ನ ಖಾಸಗಿ ರಹಸ್ಯವಾಗಿ ಓದುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಎಲ್ಲರಂಥವನಲ್ಲ ನನ್ನಪ್ಪ..: ಗುರುಪ್ರಸಾದ ಕುರ್ತಕೋಟಿ ಸರಣಿ
ಅಂತೂ ಇಂತೂ ಟಿಕೆಟ್ಗಳು ಆಗಿ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿ ಭಾರವಾದ ಮನಸ್ಸಿನಿಂದ ಭಾರತಕ್ಕೆ ಪಯಣ ಬೆಳೆಸಿದೆವು. ದೇವರು ನೀಡುವ ಈ ಅನಿರೀಕ್ಷಿತ ತಿರುವುಗಳಿಗೆ ಯಾರೂ ಏನೂ ಮಾಡದಂತಹ ಅಸಹಾಯಕ ಸ್ಥಿತಿ ನಮ್ಮದಾಗಿತ್ತು. ಬೆಂಗಳೂರಿಗೆ ನಾವೆಲ್ಲ ಬಂದು ಇಳಿದಾಗ, ನನ್ನ ಮಾವ ತೀರಿಕೊಂಡು ನಾಲ್ಕು ದಿನಗಳು ಆಗಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹದಿನಾರನೆಯ ಬರಹ
ಕೊಡೆ…. ಕೊಡೆ … ಎಲ್ನೋಡಿ ಕೊಡೆ: ಸುಮಾವೀಣಾ ಸರಣಿ
ಆಗಷ್ಟೆ ಒಗೆದು ಹಿಂಡಿದ ಬಟ್ಟೆ ಹಾಕಿದರೆ ನೀರಿನ ಅಂಶ ಹಬೆಯಾಗಿ ಸುರುಳಿ ಸುರುಳಿಯಾಗಿ ಹೋಗುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಕೆಲವೊಮ್ಮೆ ಶಾಖ ಹೆಚ್ಚಾಗಿ ಬಟ್ಟೆಯ ಒಂದು ಬದಿ ತುಕ್ಕುಹಿಡಿದ ಕೇಸರಿ ಬಣ್ಣಕ್ಕೆ ತಿರುಗುತ್ತಿದ್ದವು ….. ಮನೆಯಲ್ಲಿ ಹಿರಿಯರಿದ್ದರೆ ಅವರಿಗೆ ಬಟ್ಟೆಯನ್ನು ಜೋಪಾನವಾಗಿ ಒಣಗಿಸಿ ತೆಗೆದಿಡುವುದೆ ಹೆಚ್ಚಿನ ಕೆಲಸವಾಗಿರುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೈದನೆಯ ಕಂತು ನಿಮ್ಮ ಓದಿಗೆ









