ಅಡಕತ್ತರಿಯಲ್ಲಿ ನಿಂತು…: ಗುರುಪ್ರಸಾದ ಕುರ್ತಕೋಟಿ ಸರಣಿ
ಬಂದು ಆಗಲೇ ಮೂರು ದಿನಗಳಾಗಿತ್ತು. ನಾನು ತಾಳ್ಮೆ ಕಳೆದುಕೊಳ್ಳತೊಡಗಿದೆ. ಇನ್ನೂ ಎಲ್ಲಿ ಕೆಲಸಕ್ಕೆ ಹೋಗಬೇಕು ಅಂತ ನನ್ನ ದಾಸ್ ಬಾಸ್ ಯಾಕೆ ಹೇಳುತ್ತಿಲ್ಲ ಅಂತ ದಿಗಿಲು ಉಂಟಾಯಿತು. ಫೋನಾಯಿಸಿ ಕೇಳಿದೆ ಕೂಡ. ಇರಿ ಇವತ್ತು ಸಂಜೆ ನಿಮ್ಮ ಹೊಟೇಲ್ ಹತ್ತಿರ ಸಿಗುವೆ ಅಂದರು ದಾಸ್. ಸಂಜೆ ಸ್ವಲ್ಪ ತಡವಾಗಿಯೇ ಆದರೂ ಬಂದರು. ಚಳಿ ಈಗಾಗಲೇ ಶುರುವಾಗಿತ್ತು. ಹೀಗಾಗಿ ಅವರ ಕಾರ್ ಅನ್ನು ಶುರು ಇಟ್ಟುಕೊಂಡೆ ಅದರ ಒಳಗಡೆಯೇ ಮಾತಾಡಲು ಕೂತೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ
ಬಾಲ್ಯದ ಅಟ, ಆ ಮೊಂಡಾಟ ಇನ್ನೂ ಮರೆತಿಲ್ಲ!: ಬಸವನಗೌಡ ಹೆಬ್ಬಳಗೆರೆ ಸರಣಿ
ನಮ್ಮ ಮನೆಯಲ್ಲೋ ರಾಗಿ ಮುದ್ದೆ ಊಟ ಇರುತ್ತಿತ್ತು. ಅದು ಕಪ್ಪಾಗಿ ಇರುತ್ತಿದ್ದರಿಂದ ಉಣ್ಣೋಕೆ ಅಳುತ್ತಿದ್ದೆ. ಅಜ್ಜಿ ಮನೆಯಲ್ಲಿ ಜೋಳದ ಮುದ್ದೆ ಬೆಳ್ಳಗೆ ಇರುತ್ತಿದ್ದರಿಂದ ಅದನ್ನು ಉಣ್ಣುತ್ತಿದ್ದೆ. ಒಮ್ಮೆ ಅಮ್ಮನ ಒತ್ತಾಯಕ್ಕೆ ಊಟ ಮಾಡಿ, ಕಕ್ಕಸ್ಸು ಕಪ್ಪಾದಾಗ ಬಹಳ ಬೇಸರವಾಗಿ ಮತ್ತೆ ಅಮ್ಮ ಉಣಿಸೋಕೆ ಬಂದಾಗ ಬಾಯೇ ತೆರೆಯದೇ ಊಟ ಮಾಡೋಕೆ ಹಠ ಮಾಡಿದ್ದೆ. ಅನ್ನಕ್ಕೆ ತತ್ವಾರ ಇದ್ದ ಕಾಲವದು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂರನೆಯ ಕಂತು
ಬೆಂಗಳೂರು ಮತ್ತು ವಿಚಾರವಾದ: ಎಚ್. ಗೋಪಾಲಕೃಷ್ಣ ಸರಣಿ
ವಿಶ್ವವಿದ್ಯಾಲಯದ ಆಗಿನ ಉಪಕುಲಪತಿ ಆಗಿದ್ದ ಶ್ರೀ ಗೋಕಾಕ್ ಅವರು ಬಾಬಾ ಶಿಷ್ಯರಾಗಿದ್ದರು. ಅದೇರೀತಿ ರಾಜ್ಯಪಾಲರು, ಕೇಂದ್ರ ರಾಜ್ಯ ಸಚಿವರು, ಖ್ಯಾತ ವೈದ್ಯರು, ಉತ್ತಮ ವಿದ್ಯೆ ಪಡೆದು ಉನ್ನತ ಸ್ಥಾನದಲ್ಲಿರುವವರು ಬಾಬಾ ಅವರ ಶಿಷ್ಯಗಣದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಸುಮಾರು ಭಕ್ತರು ತಮ್ಮ ಮಕ್ಕಳಿಗೆ ಸಾಯಿಬಾಬಾ ಹೆಸರನ್ನು ವಿವಿಧ ರೀತಿಯಲ್ಲಿ ಇಟ್ಟಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಕಾಷ್ಟತಲ್ಪದೊಂದಿಗೆ ಗ್ರೂಪ್ ಸ್ಟಡಿ: ಸುಮಾವೀಣಾ ಸರಣಿ
ಗ್ರೂಪ್ ಸ್ಟಡಿಯಲ್ಲಿ ಮೆಹೆಂದಿ ಹೇಗೆ ಮಾಡುವುದು. ನೇಲ್ಸ್ ಹೇಗೆ ಶೇಪ್ ಮಾಡುವುದು, ನೇಲ್ ಪಾಲಿಶ್ ಹೇಗೆ ಹಚ್ಚಬೇಕು ಇತ್ಯಾದಿ ಚರ್ಚೆಗಳ ಸಂಗಡ ಮಾಸಿಕ ಮುಟ್ಟಿನ ವಿಚಾರಗಳೂ ಇರುತ್ತಿದ್ದವು. ಮಾಸಿಕ ಮುಟ್ಟಿನ ವಿಚಾರ ಈಗಿನ ಮಕ್ಕಳಿಗೆ ತಿಳಿದಿರುವಷ್ಟು ಆಗ ನಮಗೆ ತಿಳಿದಿರಲಿಲ್ಲ. ಹಾಗಾಗಿ ಆ ವಿಚಾರ ತಿಳಿಯುವ ಕುತೂಹಲ ಇರುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ
ನೆನಪುಗಳಲ್ಲಿ ನೆನಪಾಗಿ ಉಳಿದ ನನ್ನಜ್ಜ: ಮಾರುತಿ ಗೋಪಿಕುಂಟೆ ಸರಣಿ
ಒಂದಿಷ್ಟು ಓದು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ವಿಜ್ಞಾನವೆ ಹೇಳುವಂತೆ ಸಾಮಾನ್ಯವಾಗಿ ವಂಶವಾಹಿನಿಗಳು ಪ್ರತಿ ಮೂರನೆ ತಲೆಮಾರಿಗೆ ವರ್ಗಾವಣೆಯಾಗುತ್ತವೆ ಎಂದು ಶಾಲೆಗಳಲ್ಲಿ ಶಿಕ್ಷಕರು ಹೇಳುವಾಗೆಲ್ಲ ನಮ್ಮಲ್ಲಿ ನನ್ನಜ್ಜನ ರೂಪದ ಹೋಲಿಕೆ ಇರಬಹುದಾ ಎಂದು ಯೋಚಿಸಿದ್ದಿದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
ಜೈಲ್ನಿಂದ ಹೊರಬಂದ ಇಲಿ: ಕೆ. ಸತ್ಯನಾರಾಯಣ ಸರಣಿ
ದಿನ ಕಳೆದಂತೆ, ಜಯಮ್ಮನಿಗೆ ಇಲಿಯದೇ ಕಂಪನಿ, ಸಾಂಗತ್ಯ. ಒಂದೆರಡು ದಿನ ಆದಮೇಲೆ, ಅದರ ನುಣುಪಾದ ಮೈಯನ್ನು ಸವರಲು ನೋಡಿದರು. ಕೊಸರಿಕೊಂಡಿತು. ಆದರೂ ಒಳಗಡೆ ಇಷ್ಟವಾಯಿತೆಂದು ಕಾಣುತ್ತದೆ, ಮತ್ತೆ ಮತ್ತೆ ಹತ್ತಿರ ಬರುತ್ತಿತ್ತು. ಒಂದೆರಡು ಸಲ ತೊಡೆ, ಮಂಡಿಯ ಹತ್ತಿರ ಬಂತು. ಮತ್ತೆ ಸವರಿದರು.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ನಾಲ್ಕನೆಯ ಬರಹ ನಿಮ್ಮ ಓದಿಗೆ
ಬಸ್ಸಪ್ಪ ಮೇಷ್ಟ್ರ ಸೈಕಲ್ ಪಂಕ್ಚರ್ ಪ್ರಸಂಗ!: ಬಸವನಗೌಡ ಹೆಬ್ಬಳಗೆರೆ ಸರಣಿ
ಮೊದಲೆಲ್ಲಾ ಚಾಡಿ ಹೇಳಿದವರಿಗೆ ಹೊಡೆಯೋ ಬಸ್ಸಪ್ಪ ಮೇಷ್ಟ್ರು ಈ ಸಲ ಅವರಿಗೆ ಹೊಡೆಯಲಿಲ್ಲ. ಬದಲಿಗೆ ನನಗೇ ಜುಳುಪಿಯಿಂದ ಬಾರಿಸಲು ಶುರು ಮಾಡಿದರು! ನೋವಿನಿಂದ ಎಷ್ಟೇ ಅಬ್ಬರಿಸಿದರೂ ಅವರು ಹೊಡೆತ ಮಾತ್ರ ನಿಲ್ಲಿಸಲಿಲ್ಲ. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎರಡನೆಯ ಕಂತು ನಿಮ್ಮ ಓದಿಗೆ
ವಿಚಿತ್ರ ರಸ್ತೆಗಳಲ್ಲಿ ಚಲಿಸುವ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಶೀರ್ಷಿಕೆಯಲ್ಲಿ ‘happiness’ ಪದ ಇದ್ದಾಗ್ಯೂ, ಇದು ಸಂತೋಷದ ಕುರಿತಾದ ಕಾವ್ಯವಲ್ಲ. ದಣಿವು ಹೇಗೆ ಶೇಖರವಾಗುತ್ತದೆ, ಸಣ್ಣ ಸಣ್ಣ ಸನ್ನೆಗಳ ಕಡೆ ನಾವು ಹೇಗೆ ಗಮನ ಹರಿಸುತ್ತೇವೆ, ಸಂಘರ್ಷಗಳು ಹೇಗೆ ಹುಟ್ಟಿಕೊಳ್ಳುತ್ತವೆ ಅಥವಾ ಮುಂದು ಹೋಗಲು ನಾವು ಕಾರಣವನ್ನು ಎಲ್ಲಿಂದ ಕಂಡುಕೊಳ್ಳುತ್ತೇವೆ ಎಂಬಂಥ ಪ್ರಶ್ನೆಗಳನ್ನು ಇಲ್ಲಿರುವ ಕವನಗಳು ಕೇಳುತ್ತವೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ʻಬಾಳೆ ಪಣ್ಣದೊಂದು ರುಚಿ…ʼ: ಡಾ. ಚಂದ್ರಮತಿ ಸೋಂದಾ ಸರಣಿ
ಮಲೆನಾಡಿನ ಊರುಗಳಲ್ಲಿ ಬಾಳೆಹಣ್ಣನ್ನು ಅಕ್ಕಿಯೊಂದಿಗೆ ರುಬ್ಬಿ ರೊಟ್ಟಿ, ದೋಸೆ, ಸುಟ್ಟೇವು ಎನ್ನುವ ತಿಂಡಿಗಳನ್ನು ಮಾಡುತ್ತಾರೆ. ಬಾಳೆಹಣ್ಣಿನ ರೊಟ್ಟಿ, ದೋಸೆಗಳೆಂದರೆ ಹಿರಿಯರಿಂದ ಕಿರಿಯರವರೆಗೆ ಪ್ರಿಯವಾದ ತಿಂಡಿ. ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಎರಡು ಹೊಟ್ಟೆ. ಬಾಳೆಹಣ್ಣಿನ ಕಡುಬು ಹಲಸಿನಹಣ್ಣಿನ ಕಡುಬಿನಷ್ಟೆ ರುಚಿಯಾದ ಸಿಹಿತಿಂಡಿ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ









