ಮಳೆಯಲಿ…ಚಳಿಯಲಿ…ಕಾಫಿ ಜೊತೆಯಲಿ: ಸುಮಾವೀಣಾ ಸರಣಿ
ಮಲೆನಾಡಲ್ಲಿ ಇರುವವರೆಗೂ ನಮಗೆ ಇವುಗಳಲ್ಲಿ ಕಾಫಿ ಕುಡಿದು ಅಭ್ಯಾಸವಿರಲಿಲ್ಲ. ಮಗ್‌ಗಳಲ್ಲಿ ಕುಡಿದು ಅಭ್ಯಾಸ. ಸ್ಟ್ರಾಂಗ್ ಕಾಫಿಯನ್ನಲ್ಲ ಲೈಟ್ ಕಾಫಿಯನ್ನು. ಬೈಟು ಕಾಫಿ, ಬೈ ತ್ರಿ ಕಾಫಿ ಪದಗಳನ್ನು ಮಲೆನಾಡು ಬಿಟ್ಟಮೇಲೆ ನಾನು ಪರಿಚಯಿಸಿಕೊಂಡದ್ದು. ಮನುಷ್ಯನ ಆಲೋಚನಾ ರೀತಿಯನ್ನು, ಅನುಭವಿಸುವ ತಳಮಳವನ್ನು, ಮನಸ್ಥಿತಿಯನ್ನು ಅವರವರು ಕಾಫಿ ಕಪ್ ಹಿಡಿಯುವ ಬಗೆ, ಅದನ್ನು ಸೇವಿಸುವ ಬಗೆ ಇತ್ಯಾದಿಗಳಲ್ಲಿ ಅವರ ಅಧ್ಯಯನ ಮಾಡಬಹುದು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ
ʻಕೆರೆಯಂ ಕಟ್ಟಿಸು ಬಾವಿಯಂ ಸವೆಸುʼ: ಚಂದ್ರಮತಿ ಸೋಂದಾ ಸರಣಿ
ಗದ್ದೆಯ ಕೆಲಸ ಮಾಡಿ ದಣಿದ ಎತ್ತುಗಳು ಒಮ್ಮೆ ಕೆರೆಯಲ್ಲಿ ಈಜಾಡಿ ಬಂದರೆ ದಣಿವೆಲ್ಲ ಮಾಯ. ಮೇಯಲು ಬಿಟ್ಟ ದನಗಳು ಕೆರೆಯಲ್ಲಿ ನೀರು ಕುಡಿದೇ ಮನೆಕಡೆ ಮುಖಮಾಡುತ್ತಿದ್ದವು. ಇನ್ನು ಬೇಸಿಗೆ ಕಾಲದಲ್ಲಿ ಕೆರೆಯಲ್ಲಿ ಝಾಂಡಾ ಹೊಡೆದಿರುವ ಎಮ್ಮೆಗಳನ್ನು ಕೆರೆಯಿಂದ ಎಬ್ಬಿಸುವುದೇ ಕಷ್ಟದ ಕೆಲಸ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಎಂಟನೆಯ ಕಂತು
‘ಬೌದ್ಧಿಕ’ ಕವಿತೆಗಳ ಕವಿ: ಎಸ್. ಜಯಶ್ರೀನಿವಾಸ ರಾವ್ ಸರಣಿ
‘ಬೌದ್ಧಿಕ’ ಕವನಗಳಿಗೆ ವ್ಯತಿರಿಕ್ತವಾಗಿರುವ ಹಲವಾರು ‘ಮುಗ್ಧ’ ಕವನಗಳು ಟ್ಯಾಲ್ವೆಟ್‌ರ ಸಂಕಲನದಲ್ಲಿ ಇವೆ. ಈ ‘ಮುಗ್ಧ’ ಕವನಗಳು ಎಸ್ಟೋನಿಯನ್ ಜಾನಪದ ಕಾವ್ಯದಲ್ಲಿ ಅವರ ಆಳವಾದ ಮತ್ತು ಸಕ್ರಿಯ ಆಸಕ್ತಿಯಲ್ಲಿ ಹುಟ್ಟಿದ ಕಾವ್ಯ. ಎಸ್ಟೋನಿಯನ್ ಕಾವ್ಯದ ಬೆಳವಣಿಗೆಗೆ ಜಾನಪದ ಕಾವ್ಯದ ಪಾತ್ರ ಮಹತ್ವದ್ದಾಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಎಸ್ಟೋನಿಯಾ ದೇಶದ ಕವಿ ಯೂರಿ ಟ್ಯಾಲ್ವೆಟ್-ರ (Jüri Talvet) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಸಂಡೇ ಬಜಾರ್.. “ಮಂಡೆ” ಬಜಾರ್..: ಎಚ್. ಗೋಪಾಲಕೃಷ್ಣ ಸರಣಿ
ಮತ್ತೊಮ್ಮೆ ಆಗಲೇ ಅಪರೂಪ ಅನಿಸಿದ್ದ ಲೆಗ್ ಹಾರ್ಮೋನಿಯಂ ನೋಡಿದ್ದೆ. ಒಮ್ಮೆ ಅಲ್ಲೇ ಬುಲ್ ಬುಲ್ ತರಂಗ ಮಾರೋದನ್ನು ನೋಡಿ ಅದನ್ನ ಕೊಂಡು ತಂದೆ. ಅದನ್ನು ನುಡಿಸುವ ಬಗ್ಗೆ ಒಂದು ಕತ್ತೆ ಕಾಗದದಲ್ಲಿ ಪ್ರಿಂಟ್ ಮಾಡಿದ್ದ ಪುಸ್ತಕ ಬೇರೆ ಕೊಟ್ಟಿದ್ದ. ಅದನ್ನು ಸುಮಾರು ತಿಂಗಳು ನುಡಿಸಲು ಪ್ರಯತ್ನ ಪಟ್ಟೆ. ಹೇಗೆ ನುಡಿಸಿದರೂ ಒಂದೇ ಶಬ್ದ ಬರುತ್ತಿತ್ತು. ಸುಮಾರು ವರ್ಷ ಅಟ್ಟದ ಮೇಲೆ ಕೂತಿತ್ತು ಇದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ
ಕೊಡಗಿನ ಮೋಹಕ ಆಭರಣಗಳು: ಸುಮಾವೀಣಾ ಸರಣಿ
ದಕ್ಷಿಣ ಕಾಶ್ಮೀರವೆಂದು ಕರೆಸಿಕೊಂಡಿರುವ ಕೊಡಗು ಪ್ರಕೃತಿ ಸೊಬಗಿಗೆ ಇನ್ನೊಂದು ಹೆಸರು. ಪ್ರಕೃತಿ, ಸೌಂದರ್ಯ, ಶೌರ್ಯವನ್ನು ಸಂಕೇತಿಸುವ ಅಷ್ಟೇ ಮನೋಲ್ಲಾಸವನ್ನು ನೀಡುವ ಕೊಡವರ ಆಭರಣಗಳ ವಿನ್ಯಾಸವೂ ಅನನ್ಯವಾಗಿರುತ್ತದೆ. ಕೊಡವರು ವಿಶೇಷವಾಗಿ ಗುರುತಿಸಿಕೊಂಡಿರುವುದು ವಿಶೇಷ ವಿನ್ಯಾಸದ ಸೀರೆ ಉಡುಗೆ ಮತ್ತು ಅನುರೂಪದ ಆಭರಣಗಳ ತೊಡುಗೆಯಿಂದ. ಇವರ ಪತ್ತಾಕ್, ಜೋಮಾಲೆ, ಕೊಕ್ಕೆತಾತಿ, ಹವಳದ ಸರ, ಕೈಪಡಚ, ಕಾಲ್ಪಿಲ್ಲಿ, ಜೋಡಿ ಕಡಗ, ಒಂಟಿ ಕಡಗ, ಪೀಚೆಕತ್ತಿ ಇವುಗಳು ಪ್ರಕೃತಿಯಿಂದ ಸ್ಫೂರ್ತಿ ಪಡೆದವೆ ಆಗಿವೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹತ್ತನೆಯ ಕಂತು ನಿಮ್ಮ ಓದಿಗೆ
ಕಷ್ಟಕ್ಕಾಗದ ಸಂಬಂಧಗಳ ನೆನೆದು: ಮಾರುತಿ ಗೋಪಿಕುಂಟೆ ಸರಣಿ
ದೊಡ್ಡಮ್ಮನ ಮಗನನ್ನು ನಮ್ಮ ಊರಿನವರಿಗೆ ಹೇಳಿ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಕಳಿಸಲಾಯಿತು. ಅಲ್ಲಿ ಆತ ಬೇರೆ ಬೇರೆ ಕೆಲಸಗಳನ್ನು ಕಲಿತ ಚುರುಕಾದ. ಯಾವ ಅದೃಷ್ಟ ಆತನನ್ನು ಕೈ ಹಿಡಿಯಿತೊ ಮೂರ್ನಾಲ್ಕು ವರ್ಷಗಳಲ್ಲಿ ಆತ ಒಳ್ಳೆಯ ಹಣವಂತನಾದ. ಮದುವೆಯಾದ. ಅದಾದ ಮೇಲೆ ಒಂದಿಷ್ಟು ದಿನ ನಮ್ಮ ಕಷ್ಟಗಳಿಗೆ ಸ್ಪಂದಿಸಿದನಾದರೂ ಅದು ತೋರಿಕೆಯದಾಗಿತ್ತು. ಆಮೇಲೆ ಆತ ಅದನ್ನು ಮರೆತ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೇಳನೆಯ ಕಂತು
ಕವಿತೆಯ ಓದು ಚಲನಚಿತ್ರದಂತಿರಬೇಕು : ಎಸ್. ಜಯಶ್ರೀನಿವಾಸ ರಾವ್ ಸರಣಿ
ಓದುಗ/ಓದುಗಳು ಕವನ ಓದುವಾಗ ಒಂದು ಚಲನಚಿತ್ರ ನೋಡಿದಂತೆ ಅನಿಸಿದರೆ ಆ ಕವನ ಯಶಸ್ವಿಯಾದಂತೆ ಅಂತ ನಾನು ಯಾವಾಗಲೂ ಹೇಳುವೆ. ಇದಲ್ಲದೆ, ಚಲನಚಿತ್ರಗಳು ಮತ್ತು ಕವನಗಳು ಇನ್ನೊಂದು ರೀತಿಯಲ್ಲಿ ಕೂಡ ಸಮಾನತೆ ಹೊಂದಿವೆ ಎಂದು ನಾನು ನಂಬುತ್ತೇನೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಇಂಡ್ರೆ ವಲಾಂಟಿನಾಯ್ಟೆ-ಯವರ (Indrė Valantinaitė) ಕಾವ್ಯದ ಕುರಿತ ಬರಹ
ನೀ ನನಗಿದ್ದರೆ ನಾ ನಿನಗೆ: ಚಂದ್ರಮತಿ ಸೋಂದಾ ಸರಣಿ
ನಮ್ಮ ಬದುಕಿಗೆ ಹತ್ತಿರವಾದ ಹಕ್ಕಿಗಳಲ್ಲಿ ಕಾಗೆ, ಕೋಳಿಗಳೂ ಸೇರುತ್ತವೆ. ಕಾಗೆ ಬಣ್ಣ ಕಪ್ಪು ಅಂತ ಅದನ್ನು ಹಳಿಯುವುದಿದೆ. ಯಾರಾದರೂ ತಮ್ಮ ಮಕ್ಕಳನ್ನು ಹೊಗಳುತ್ತಿದ್ದರೆ ʻಕಾಗೆ ತನ್ನ ಮರಿ ಹೊನ್ನಮರಿ ಅಂದಿತ್ತಂತೆʼ ಎಂದು ಮೂಗುಮುರಿಯುವವರೂ ಇದ್ದಾರೆ. ಕೆಲವು ಬಾರಿ ಮಕ್ಕಳನ್ನು ನಂಬಿಸಲು ಕಾಗೆಯ ಬಳಕೆ ಇದೆ. ಮಗುವಿಗೆ ಕೊಡಬಾರದು ಎಂದಿರುವ ತಿನಿಸನ್ನು ಅದು ಬೇಕೇಬೇಕು ಎಂದು ಹಟಮಾಡಿದರೆ ʻಕಾಕಪಾಯಿ ಕಚ್ಗೊಂಡು ಹೋಯ್ತʼ ಅಂತ ಹೇಳುವುದಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ
ಕೊಡಗಿನ ಮೂವರು ಮಹನೀಯರು: ಸುಮಾವೀಣಾ ಸರಣಿ
ಪಂಜೆ ಮಂಗೇಶರಾಯರು “ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ” ಎಂದು ಭೂರಮೆಯನ್ನು ಅಪ್ರತಿಮ ಪ್ರಕೃತಿ ಸೌಂದರ್ಯದ ಹಿನ್ನೆಲೆಯಲ್ಲಿ ಹಾಡಿ ಮುಂದೆ “ಸವಿದು ಮೆದ್ದರೋ ಹುಲಿಯ ಹಾಲಿನ ಮೇವನು ಕವಣೆ ತಿರಿಕಲ್ಲಾಟ ಹಗ್ಗಕ್ಕೆ ಸೆಳೆದರೋ ಹೆಬ್ಬಾವನು?” ಎಂದು ಬರೆಯುತ್ತಾರೆ. ಇದು ಅಕ್ಷರಶಃ ಸತ್ಯ. ಅಂಥ ಕೆಚ್ಚೆದೆಯ ಅಪ್ರತಿಮ ವೀರರು ಈ ಮೂವರು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ









