ಮೆಜೆಸ್ಟಿಕ್ ಎಂಬ ಚಿತ್ರಮಂದಿರಗಳ ನಗರ: ಎಚ್. ಗೋಪಾಲಕೃಷ್ಣ ಸರಣಿ
ಜಯಶ್ರೀ ಚಿತ್ರಮಂದಿರ ಚಾಮರಾಜಪೇಟೆ ಒಂದನೇ ರಸ್ತೆಯ ಕೊನೆಯಲ್ಲಿ ಇತ್ತು. ಅದು ಕಳ್ಳೇಕಾಯಿ ಟಾಕೀಸ್ ಎಂದೇ ಪ್ರಖ್ಯಾತವಾಗಿತ್ತು. ಸುಮಾರಾಗಿ ಹಳೆಯ ಚಿತ್ರಗಳೇ ಅಲ್ಲಿ ಪ್ರದರ್ಶನವಾಗುತ್ತಿತ್ತು. ಆ ಟಾಕೀಸ್ಗೆ ಬರುತ್ತಿದ್ದವರು ಬಹುತೇಕ ಕಾರ್ಮಿಕ ವರ್ಗದವರು. ದೂರದೂರದ ಪ್ರದೇಶದವರು. ಅವರು ಹಾಗೆ ಬರುವಾಗ ಟೈಮ್ ಪಾಸ್ಗಾಗಿ ಕಳ್ಳೇಕಾಯಿ ತಂದು ತಿನ್ನುತ್ತಿದ್ದರಂತೆ. ಒಂದೊಂದು ಪ್ರದರ್ಶನವಾದಾಗಲೂ ರಾಶಿ ರಾಶಿ ಸಿಪ್ಪೆ ಬಿದ್ದಿರುತ್ತಿತ್ತಂತೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ
ವಿಭಿನ್ನ ಲೋಕಗಳಲ್ಲಿ ಸಂಚರಿಸುವ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
ಸೂಮೆತ್ಸ್ರ ಅಡಕಮಾತಿನ, ನಿಖರವಾದ ಕವನ ರಚಿಸುವ ವಿಧಾನವನ್ನು ಗಮನಿಸಿ, ತ್ರೀನ್ ಸೂಮೆತ್ಸ್ರು ಒಂದು ತರಹದ ಕರಾಳವಾದ ‘ಸೈಕೊಗ್ರಾಫಿಕ್’ (psychographic) ಬರವಣಿಗೆ ಶೈಲಿಯನ್ನು ಹೊಂದಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಅವರದ್ದು ಮಿತಭಾಷೆಯ ಕಾವ್ಯವಾದ್ದರಿಂದ ಅವರ ಕಾವ್ಯವನ್ನು ಸಾಂಕೇತಿಕ ಭಾಷೆಯಿಂದ ಸಾಮಾನ್ಯ ಭಾಷೆಗೆ ತಂದು ಓದಬೇಕಾಗುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಎಸ್ಟೋನಿಯಾ ದೇಶದ ಕವಿ ತ್ರೀನ್ ಸೂಮೆತ್ಸ್ (Triin Soomets) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ
ಮಳೆರಾಯ ಬಂದ ಮಲ್ಲೆಹೂವು ತಂದ: ಚಂದ್ರಮತಿ ಸೋಂದಾ ಸರಣಿ
ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಐದನೆಯ ಕಂತಿನಲ್ಲಿ ಆಗಿನ ಮಳೆ ದಿನಗಳ ಕುರಿತ ಬರಹ
ಆ ದಿನಗಳ ನೆನಪಿದೆಯಾ ನಿಮಗೆ?: ಸುಮಾವೀಣಾ ಸರಣಿ
ಅದೆಷ್ಟು ದಿನ ಚಂಡಿ ಬಟ್ಟೆಯಲ್ಲಿಯೇ ತರಗತಿಗಳನ್ನ ಕೇಳಿದೆವು ನಾವು? ಚಳಿ ಹೆಚ್ಚಾಗಿ ಬಾಟನಿ ಲ್ಯಾಬ್ ಹತ್ತಿರ ಹಾಕುತ್ತಿದ್ದ ಅಗ್ಗಿಸ್ಟಿಕೆ ಬಿಸಿಗೆ ಹೋಗಿ ನಿಲ್ಲುತ್ತಿದ್ದ ದಿನಗಳು ನೆನಪಾಗುತ್ತವೆ. ಆ ಲ್ಯಾಬಿನ ಬಳಿ ಇರುತ್ತಿದ್ದ ಸಿರಿಬಾಯಿ ಅಂಕಲ್ ನಮ್ಮನ್ನು ನೋಡಿದ ಕೂಡಲೆ ಬನ್ನಿ ಬನ್ನಿ ಎಂದು ಕರೆದು ಇನ್ನಷ್ಟು ಇದ್ದಿಲನ್ನು ಹಾಕಿ ಕೆಂಡ ಮಾಡುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯಲ್ಲಿ ಸ್ನೇಹಿತರ ದಿನಕ್ಕೆ ಬರೆದ ಪತ್ರ ಇಲ್ಲಿದೆ
ಕಾಡುವ ಕಷ್ಟದ ಆ ದಿನಗಳು: ಮಾರುತಿ ಗೋಪಿಕುಂಟೆ ಸರಣಿ
ಅಂದು ಪೋಲೀಸರು ಹೋದ ಮೇಲೂ ಅಮ್ಮ ಅಳುತ್ತಲೆ ಇದ್ದಳು. ಬಡವರ ಪಾಲಿಗೆ ಕಣ್ಣೀರೇ ಅಲ್ಲವೆ ಸಾಂತ್ವನದ ಸೆಲೆಗಳು ಆಗಾಗಿ ಧಾರಾಕಾರವಾಗಿ ಹರಿಯುತ್ತಲೆ ಇತ್ತು. ಊರಿನಲ್ಲಿ ಯಾರ್ಯಾರೊ ಸಹಾಯವನ್ನು ಮಾಡಿದರು. ಅಮ್ಮನ ಒಳ್ಳೆಯ ಗುಣವೇ ಅದಕ್ಕೆ ಕಾರಣವಾಗಿತ್ತು. ಇದೆಲ್ಲ ನೋಡುತ್ತಿದ್ದಾಗ ದೇವರ ಮೇಲೆ ಕೋಪವು ಬರುತ್ತಿತ್ತು. ನನ್ನ ಓರಗೆಯವರೆಲ್ಲ ನಿಮ್ಮ ಮನೆಯ ಸಾಮಾನುಗಳನ್ನು ಪೋಲಿಸ್ನೋರು ತಗೊಂಡ್ಹೋದ್ರು ಅನ್ನುತ್ತಿದ್ದರು. ಆಗ ಇಡೀ ವ್ಯವಸ್ಥೆಯ ಮೇಲೆ ರೋಷವೇನೊ ಬರುತ್ತಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
ಥಿಯೇಟರ್ನಲ್ಲಿ ಕನ್ನಡ ಢಿಂಢಿಮ….: ಎಚ್.ಗೋಪಾಲಕೃಷ್ಣ ಸರಣಿ
ಅರವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಮೊದಲು ಐದು ಜಾವಾ ಮೋಟಾರ್ ಸೈಕಲ್ ಇತ್ತು. ನಂತರ ನಿಧಾನಕ್ಕೆ tvs ಅದರ ಅಣ್ಣ ತಮ್ಮ ಬಂದವು. ಲಾಂಬ್ರೆಟ್ಟಾ ಗಾಡಿ ವಿದೇಶದಲ್ಲಿ ಹೆಂಗಸರು ಓಡಿಸುವ ಗಾಡಿ ಅಂತ ಕೆಲವರು ಲೇವಡಿ ಮಾಡುತ್ತಿದ್ದರು. ಎನ್ ಫೀಲ್ಡ್ ಸುಮಾರು ಇದೇ ಸಮಯ ಪ್ರವೇಶ. ಎಂಬತ್ತರ ದಶಕದ ನಡುವಿನಲ್ಲಿ ಚೇತಕ್ ಗಾಡಿ ಹೆಸರು ಓಡುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿಮೂರನೆಯ ಕಂತು ನಿಮ್ಮ ಓದಿಗೆ
ಮನೆ ಮತ್ತು ಮನದ ಕವಿತೆಗಳು: ಎಸ್. ಜಯಶ್ರೀನಿವಾಸ ರಾವ್ ಸರಣಿ
ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ದಿತಿ ರೋನೆನ್ರ ಕವನಗಳಲ್ಲಿ ಅವರ ಎಲ್ಲಾ ಆಸ್ಥೆಗಳ, ನಂಬಿಕೆಗಳ, ಕಾಳಜಿಗಳ ಉದಾಹರಣೆಗಳನ್ನು ಕಾಣಬಹುದು. ಹಿಟ್ಲರ್ನ ಕಾಲದ ಜರ್ಮನಿ ಯಹೂದಿಗಳ ವಿರುದ್ಧ ನಡೆಸಿದ ಹತ್ಯಾಕಾಂಡದ ನೆನಪುಗಳು ಗಾಯಗಳು ಎಂದೂ ಮರೆಯಾಗಲ್ಲ. ಈ ಹತ್ಯಾಕಾಂಡದಿಂದ ಬದುಕುಳಿದವರ ಮಗಳಾಗಿ ದಿತಿ ರೋನೆನ್ ಅವರು ಇದರ ಬಗ್ಗೆ ಬಹು ಮಾರ್ಮಿಕವಾಗಿ ಬರೆಯುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ
ಕೊಡಗಿನ ಮೊಟ್ಟೆಯೂ… ಮದ್ದು ಪಾಯಸವೂ: ಸುಮಾವೀಣಾ ಸರಣಿಸ
ಕೊಡವರಲ್ಲಿ ಕಕ್ಕಡ ಪದಿನೆಟ್ಟು, ಆಟಿಪದಿನೆಟ್ಟು, ಅತ್ಯಂತ ಮಹತ್ವವನ್ನು ಪಡೆದುಕೊಂಡಿರುವ ಈ ಜಾನಪದೀಯ ಪರ್ವ ಕೃಷಿಕರ ಪಾಲಿಗೆ ಮಹಾಪರ್ವವೆಂದೇ ಹೇಳಬಹುದು. ಆದರೆ ಮದುವೆ ಮುಂತಾದ ಶುಭ ಕಾರ್ಯಗಳಿಗೆ ಈ ಮಾಸ ನಿಷಿದ್ಧ. ಜೊತೆಗೆ ಗ್ರಾಮೀಣ ಭಾಗದ ದೇವಾಲಯಗಳಲ್ಲೂ ನಿತ್ಯ ಪೂಜೆಯನ್ನು ಸ್ಥಗಿತಗೊಳಿಸುವುದು ವಾಡಿಕೆ. ಈ ವರ್ಷ ಆಗಸ್ಟ್ 3 ನೆ ತಾರೀಖು ಈ ಆಚರಣೆ ಇದೆ. ಸರಿ ಸುಮಾರು ಮುಂಗಾರಿನ ಭತ್ತದ ನಾಟಿ ಮಾಡಿ ಮುಗಿಯುವ ಕಾಲಕ್ಕೆ ಈ ಆಟಿ ಹದಿನೆಂಟರ ಆಚರಣೆ ಇರುತ್ತದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ
ಹಣಕ್ಕಾಗಿ ಕಡಿದುಹೋದ ಅನುಬಂಧ: ಮಾರುತಿ ಗೋಪಿಕುಂಟೆ ಸರಣಿ
ಮಾವನ ಎಲ್ಲಾ ಕೆಲಸಗಳಲ್ಲಿಯೂ ಅಪ್ಪ ಮುಂದಿರುತ್ತಿದ್ದ. ಕೊನೆಗೊಂದು ದಿನ ಮದುವೆಯ ಹೆಣ್ಣು ಗೊತ್ತಾಗಿ ಮದುವೆಯೂ ನಡೆದು ಹೋಯಿತು. ಮದುವೆಯಲ್ಲಿಯಂತೂ ಅಪ್ಪ ನಿರಂತರವಾಗಿ ಓಡಾಡಿದ್ದ. ತನ್ನ ಕೆಲಸಗಳನ್ನೆಲ್ಲ ಬದಿಗೊತ್ತಿ ಮುಂದೆ ನಿಂತು ಮದುವೆ ಮಾಡಿದ್ದ. ನಾವಿನ್ನೂ ಚಿಕ್ಕ ಹುಡುಗರಾದ್ದರಿಂದ ಮದುವೆಯಲ್ಲಿ ನಮ್ಮನ್ನು ಜೊತೆಗಿರಿಸಿಕೊಂಡೆ ಫೋಟೊ ತೆಗಿಸಿಕೊಂಡಿದ್ದ ನಮ್ಮಾವನಿಗೆ ನಮ್ಮ ಮೇಲೆ ಬಹಳ ಅಕ್ಕರೆ ಇದೆ ಎಂದುಕೊಂಡೆವು. ದೊಡ್ಡವರಾದ ಮೇಲೆಯೆ ನಮಗೂ ತಿಳಿದದ್ದು, ನಡತೆಗು ಮನಸ್ಸಿನ ಭಾವನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆಯೆಂದು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ









