ಬಾಯಿಗೆ ಸಿಗದ ಗೆಣಸು ಮತ್ತು ಮೇಷ್ಟ್ರು ಎಸೆದ ನೋಟ್ಬುಕ್
ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
ನಮ್ಮ ಕಾಲೋನಿಯ ಮೊದಲ ಸಾವು…
ನಮ್ಮ ಎದುರು ರಸ್ತೆಯ ಎಚ್ ಎಂ ಟಿ ಕೆಲಸಗಾರ ಗೋಪಾಲರಾವ್ ಎನ್ನುವವರು ಕೊಂಚ ಮೈ ಬಿಸಿ, ಜರ ಬಂದಿದೆ ಎಂದು ವೈದ್ಯರಿಗೆ ತೋರಿಸಲು ಹೋದರು. ವೈದ್ಯರು ಚಿಕಿತ್ಸೆ ನೀಡಬೇಕಾದರೆ ಅಂದರೆ ಇಂಜೆಕ್ಷನ್ ಕೊಟ್ಟಾಗ ಅವರ ಜೀವ ಹೋಯಿತು. ವೈದ್ಯರ ನಿರ್ಲಕ್ಷ್ಯ ಎಂದು ಕಾರ್ಮಿಕರು ಕೋಪಾವೇಶಗೊಂಡರು. ಈ ಎಸ್ ಐ ಆಸ್ಪತ್ರೆ ಮುಂದೆ ಕಾರ್ಮಿಕ ಸಾಗರ ನೆರೆಯಿತು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂರನೇ ಕಂತು ನಿಮ್ಮ ಓದಿಗೆ
ಹ್ಯಾಂಗರ್ಸ್ ಆನ್…..
ಬರಹಗಾರನಾಗಿ ನಾನು Hanger on ಸ್ಥಾನದ ಪಾತ್ರವನ್ನೇ ತುಂಬಾ ಇಷ್ಟಪಡುತ್ತೇನೆ. ಯಾರೂ ನಿಮ್ಮನ್ನು ಗಮನಿಸುವುದಿಲ್ಲ, ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೆಚ್ಚು ಜನ ನಿಮ್ಮನ್ನು ನಿಷ್ಪ್ರಯೋಜಕ ವ್ಯಕ್ತಿ ಎಂದು ಪರಿಗಣಿಸಿ ನಿಮ್ಮ ತಂಟೆಗೇ ಬರುವುದಿಲ್ಲ. ನಿಮ್ಮ ಸ್ವಾತಂತ್ರ್ಯ, ನಿಮಗೆ ಸಿಗುವ ಸಮಯ ಎಲ್ಲವೂ ಹೆಚ್ಚಾಗುತ್ತದೆ. ಎಲ್ಲರನ್ನೂ ನೀವು ನಿರಾಳವಾಗಿ ಗಮನಿಸಬಹುದು. ನಿಮಗೇ ಗೊತ್ತಿಲ್ಲದಂತೆ ನಿಮ್ಮ ವ್ಯಕ್ತಿತ್ವಕ್ಕೆ ಒಂದಕ್ಕಿಂತ ಹೆಚ್ಚು ಆಯಾಮಗಳು ಸಿಗುತ್ತವೆ. ನನ್ನ ಕುಟುಂಬದ ಸದಸ್ಯರು ಇದನ್ನೆಲ್ಲ ಒಪ್ಪುವುದಿಲ್ಲ. ಇದನ್ನು ಒಂದು ತಂತ್ರವೆಂದು ಭಾವಿಸುತ್ತಾರೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹನ್ನೆರಡನೆಯ ಪ್ರಬಂಧ ನಿಮ್ಮ ಓದಿಗೆ
ಯುದ್ಧಕಾಲದ ಸಿಗಾರುಪ್ರಿಯ ನಾಯಕ
1932ರಲ್ಲಿ ಚರ್ಚಿಲ್ ತನ್ನ ಪೂರ್ವಜರ ಇತಿಹಾಸ ಹುಡುಕಿ ಬರೆಯಲು ಯುರೋಪ್ ತಿರುಗಾಟದಲ್ಲಿದ್ದಾಗ ಜರ್ಮನಿಯಲ್ಲಿ ಹಿಟ್ಲರ್‌ನನ್ನು ಭೇಟಿಯಾಗಲು ಬಯಸಿದ್ದರು. ಹಿಟ್ಲರ್ ಭೇಟಿಗೆ ಪೂರ್ವದಲ್ಲಿ ತಾನು ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಬರೆದೂ ತಪುಪಿಸಿದ್ದರು. ಅವುಗಳಲ್ಲೊಂದು ಯಹೂದಿ ದ್ವೇಷದ ಕುರಿತಾದ “ಯಾವುದೇ ಮನುಷ್ಯ ತಾನು ಎಲ್ಲಿ ಹುಟ್ಟುವೆ ಎಂದು ಹೇಗೆ ನಿರ್ಧರಿಸಲು ಸಾಧ್ಯ?” ಎಂಬುದಾಗಿತ್ತು. ಇಂತಹ ಪ್ರಶ್ನೆಗಳೇ ಅಂದು ಇಬ್ಬರು ನಾಯಕರ ಭೇಟಿ ರದ್ದಾಗಲು ಕಾರಣ ಆಗಿರಬೇಕು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ
ನೆದರ್ಲ್ಯಾಂಡ್ಸ್ ಕಟ್ಟಿಕೊಟ್ಟ ಮರೆಯಲಾಗದ ನೆನಪುಗಳು…
ಉದ್ಘಾಟನಾ ಸಮಾರಂಭದಲ್ಲಿ ಭವ್ಯ ಸಭಾಂಗಣದ ಹೊರಗಡೆ ನೂರಾರು ಹಣತೆಗಳ ಗೋಪುರವನ್ನು ಕಲಾತ್ಮಕವಾಗಿ ನಿರ್ಮಿಸಿದ್ದರು. ಹಿರೊಶಿಮಾ ಮತ್ತು ನಾಗಸಾಕಿಯಲ್ಲಿ ಅಮೆರಿಕದ ಬಾಂಬುದಾಳಿಗೆ ಈಡಾದ ಲಕ್ಷಾಂತರ ನತದೃಷ್ಟರ ಸ್ಮರಣಾರ್ಥ ಆ ಹಣತೆಗಳನ್ನು ಬೆಳಗುವ ಅವಕಾಶವನ್ನು ಪ್ರತಿನಿಧಿಗಳಿಗೆ ಕಲ್ಪಿಸಲಾಗಿತ್ತು. ಅಮೆರಿಕದ ಹದಿಹರೆಯದ ಹುಡುಗಿಯೊಬ್ಬಳು ಬಹಳ ತಲ್ಲೀನತೆಯಿಂದ ದೀಪ ಬೆಳಗಿಸಲು ಪ್ರಯತ್ನಿಸುತ್ತಿದ್ದಳು. ಬಾಂಬು ದುರಂತಕ್ಕೆ ಸಂಬಂಧಿಸಿದ ವಿವಿಧ ಚಿತ್ರಗಳ ಪೋಸ್ಟರ್‌ಗಳನ್ನು ಅಲ್ಲಿಯೆ ಪ್ರದರ್ಶನಕ್ಕೆ ಇಡಲಾಗಿತ್ತು. ಆ ಭಯಂಕರ ಚಿತ್ರಗಳು ಅವಳನ್ನು ಘಾಸಿಗೊಳಿಸಿದ್ದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 60ನೇ ಕಂತು ನಿಮ್ಮ ಓದಿಗೆ.
ನಾನೇಕೆ ಪಾತ್ರವಾಗುವುದಿಲ್ಲ
ತಪ್ಪು ತಿಳಿಯಬೇಡಿ! ನನಗೆ ಪಾತ್ರಗಳನ್ನು ಸೃಷ್ಟಿಸುವುದಕ್ಕಿಂತ ಹೆಚ್ಚಾಗಿ ಅವುಗಳ ಜೊತೆಗೇ ಇದ್ದುಬಿಡುವುದು, ಅವುಗಳ ಜೊತೆ ಹೋಗಿಬಿಡುವುದೇ ಇಷ್ಟ. ನಾಲ್ಕು ಜನರ ಮಧ್ಯೆ, ಜನಸಂದಣಿಯ ನಡುವೆ ಇದ್ದೂ ಕೂಡ ನಾನು ಪಾತ್ರಗಳ ಜೊತೆ ಇದ್ದುಬಿಡಬಲ್ಲೆ. ಕುಟುಂಬದ ಸದಸ್ಯರು ಆಗಾಗ್ಗೆ ಆಕ್ಷೇಪಣೆ ತೆಗೆಯುವುದುಂಟು. ನೀವು ಮನೆಯಲ್ಲಿದ್ದರೂ, ನಮ್ಮೊಡನೆಯೇ ಇರುವಂತೆ ಕಂಡರೂ, ಇನ್ನೊಂದು ಲೋಕದಲ್ಲಿರುತ್ತೀರಿ. ಯಾರ ಮಾತನ್ನೋ ಕೇಳಿಸಿಕೊಳ್ಳುತ್ತಿರುತ್ತೀರಿ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹನ್ನೊಂದನೆಯ ಪ್ರಬಂಧ ನಿಮ್ಮ ಓದಿಗೆ
ಶಾಲಾ ಕಲಿಕೆಯ ಆರಂಭದ ದಿನಗಳು…..
ಎದುರು ಮನೆಯಾದ್ದರಿಂದ ಗೃಹ ಕೆಲಸಗಳನ್ನು ಮಾಡುವಾಗ ಬರುತ್ತಿದ್ದರು. ಪ್ರತಿದಿನವು ಪಕ್ಕದಲ್ಲೆ ಕೂರಿಸಿಕೊಂಡು ಅಕ್ಷರಾಭ್ಯಾಸ ಮಾಡಿಸಿದರು. ನಾನು ಹಠಕ್ಕೆ ಬಿದ್ದವನಂತೆ ಕಲಿತೆ. ಅದೊಂದು ತಪಸ್ಸು ಎನ್ನುವಂತೆ ಕಲಿತುಕೊಂಡೆ. ಅಲ್ಲಿಂದ ನನ್ನಲ್ಲಿ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿತು. ಓದುವುದನ್ನು ಬಹಳ ಬೇಗನೆ ಕಲಿತಿದ್ದೆ. ಅಷ್ಟರಲ್ಲಾಗಲೇ ಒಂದನೆ ತರಗತಿಯ ಪುಸ್ತಕದ ಆರು ಪಾಠಗಳು ಮುಗಿದು ಹೋಗಿದ್ದವು. ಏಳನೆಯ ಪಾಠವೆ ‘ಚರಕ’ ಗಾಂಧೀಜಿಯವರ ಆದರ್ಶದ ಪ್ರತಿಬಿಂಬದಂತಿದ್ದ ನಮ್ಮ ಉಡುಪುಗಳನ್ನು ನಾವೆ ತಯಾರಿಸಿಕೊಳ್ಳಬೇಕು ಎನ್ನುವ ಸೂಚಕವಾಗಿ ನೂಲು ನೇಯುತಿದ್ದ ಚರಕದ ಮುಂದೆ ಕುಳಿತಿದ್ದ ಚಿತ್ರ ನಮ್ಮನ್ನು ಆಕರ್ಷಿಸಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ
“ರಾಜಾಜಿನಗರ” ಹೆಸರಿನ ಚರಿತ್ರೆ ಗೊತ್ತಾ?
ಒಂದು ಭಾನುವಾರ ಬೆಳಿಗ್ಗೆ ಇಡೀ ರಾಜಾಜಿನಗರ ಬೆಚ್ಚಿ ಬೀಳುವ ಹಾಗೇ ದೊಡ್ಡ ಶಬ್ದ ಕೇಳಿಸಿತು. ಎಲ್ಲರೂ ಧಾವಂತದಿಂದ ಅವರವರ ಮನೆಗಳಿಂದ ಆಚೆ ಬಂದರು. ಏನು ಏನು ಅಂದುಕೊಂಡು ಅವರವರಲ್ಲೇ ಮಾತಾಡಿ ಕೊಂಡರು. ಸ್ವಲ್ಪ ಹೊತ್ತಿಗೆ ಮೊದಲು ವಿಮಾನ ಹೋಯಿತು, ಅದೇ ಸಿಡಿದು ಹೋಗಿರಬೇಕು ಎಂದು ತರ್ಕಿಸಿದರು. ಮನೆಗೆ ಬೀಗ ಜಡಿದು ಬಿದ್ದಿರುವ ವಿಮಾನದ ಅವಶೇಷ ನೋಡಲು ಸಾಲು ಸಾಲಾಗಿ ಇಡೀ ಸಂಸಾರ ಹೊರಟಿತು. ನಾನೂ ಈ ಗುಂಪಿನಲ್ಲಿದ್ದೆ. ಸುಮಾರು ದೂರ ಎರಡು ಮೂರು ಗಂಟೆ ನಡೆದೆವು ಅಂತ ಕಾಣುತ್ತೆ. ಎಲ್ಲೂ ವಿಮಾನದ ಅವಶೇಷ ಕಾಣಿಸಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎರಡನೇ ಕಂತು ನಿಮ್ಮ ಓದಿಗೆ
ಸರ್ಟಿಫಿಕೇಟ್ ದಾತರು
ಕೆಲವರಿಗೆ ಹೆಚ್ಚು ಹೆಚ್ಚು ಸರ್ಟಿಫಿಕೇಟ್‌ಗಳನ್ನು ನೀಡುವ ಆಸೆಯಿರುತ್ತದೆ. ಇಂಥವರು ತಮ್ಮ ಪ್ರಸಿದ್ಧಿಯನ್ನು ತಾವೇ ಹಬ್ಬಿಸುತ್ತಾರೆ. ಇಂಥವರು ನನಗೆ ಸ್ವಲ್ಪಕಾಲ ಗಂಟುಬಿದ್ದಿದ್ದರು. ನನ್ನಿಂದ ಸಾಕಷ್ಟು ಉಪಕೃತರೂ ಆಗಿದ್ದರು. ಉತ್ಸವ ಮೂರ್ತಿಯ ಸ್ವಭಾವದ ವ್ಯಕ್ತಿತ್ವ. ನಾನು ಎಲ್ಲಿಗೇ ಹೊರಡಲಿ, ಯಾವ ಕಾರ್ಯಕ್ಕೇ ಹೊರಡಲಿ, ಆಯ್ತು ಅಲ್ಲಿ ನನಗೆ ಇಂಥವರು ಪರಿಚಯ, ನನ್ನ ಬಗ್ಗೆ ಗೌರವವಿದೆ, ನನ್ನಿಂದ ಒಂದು ಸರ್ಟಿಫಿಕೇಟ್ ತಗೊಂಡು ಹೋಗು ಎನ್ನುತ್ತಿದ್ದರು. ಹೌದು ಅವರ ಇಂಗ್ಲಿಷ್ ತುಂಬಾ ಚೆನ್ನಾಗಿತ್ತು. ಸರ್ಟಿಫಿಕೇಟ್ ಬರೆದುಕೊಡುವ ಕಾಗದ ಕೂಡ ಚಿನ್ನದ ಬಣ್ಣದಿಂದ ಹೊಳೆಯುತ್ತಿತ್ತು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಹತ್ತನೆಯ ಪ್ರಬಂಧ ನಿಮ್ಮ ಓದಿಗೆ









