ಮುಸಾಫಿರ್ – ಇ – ಲಂಡನ್
ಸರ್ ಸಯ್ಯದ್ ಅಹ್ಮದ್ರ ಬ್ರಿಟಿಷ್ ಒಲವಿನ ಹೊರತಾಗಿ ಭಾರತೀಯ ಮುಸ್ಲಿಂರನ್ನು ಆಧುನೀಕರಣದ ಕಡೆಗೆ ಒಯ್ಯುವ ಅವರ ನಿರಂತರ ಯತ್ನದ ಕಾರಣಕ್ಕೆ “ಆಧುನೀಕರಣದ ಪ್ರವರ್ತಕ” ಎಂದೂ ಅವರನ್ನು ಕರೆದಿದ್ದಾರೆ. ಶ್ರದ್ಧಾವಂತ ಮುಸ್ಲಿಂ ಆಗಿದ್ದರೂ ಧಾರ್ಮಿಕ ಸಾಂಪ್ರದಾಯಿಕತೆ ಸಿದ್ಧಾಂತಗಳ ವಿಮರ್ಶಕರು ವಿರೋಧಿಯೂ ಆಗಿದ್ದರು. ಯೂರೋಪಿನ ವಿಜ್ಞಾನವನ್ನು ಆಧರಿಸಿದ ತಮ್ಮದೇ ಧರ್ಮಶಾಸ್ತ್ರವನ್ನು ರೂಪಿಸಿದ್ದರು. 1870ರಲ್ಲಿ ಆರಂಭಿಸಿದ್ದ “ಮಹಮದೀಯ ಸಮಾಜ ಸುಧಾರಕ” ಎನ್ನುವ ನಿಯತಕಾಲಿಕ ಅವರ ತಿಳಿವು ನೋಟಗಳನ್ನು ತಿಳಿಸುತ್ತದೆ.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಯೋಗೀಂದ್ರ ಮರವಂತೆ ಬರಹ
ಹಸಿವು ಇಂಗಿಸುವ ಬಿಸ್ಕಿಟ್ ವಾಸನೆ….
ಆ ಸಭೆಯಲ್ಲಿ ಭಾಗವಹಿಸಿದ್ದ ಉಗ್ರಗಾಮಿಗಳ ನಾಯಕ 35 ವರ್ಷದವನಿರಬಹುದು. ಆತ ತನ್ನ ಹೆಂಡತಿ ಮತ್ತು ಮಗುವಿನ ಜೊತೆ ಬಂದಿದ್ದ. ಸಭಿಕರ ಮಧ್ಯದಿಂದ ಆತ ಉಗ್ರಗಾಮಿಗಳ ಪ್ರತಿನಿಧಿಯಾಗಿ ಕಾಶ್ಮೀರ ಸಮಸ್ಯೆ ಕುರಿತು ಮಾತನಾಡಿದ. ಕಾಶ್ಮೀರದಲ್ಲಿ ಎನ್ಕೌಂಟರಲ್ಲಿ ಸತ್ತ ಸುಮಾರು 60 ಸಾವಿರ ಯುವಕರ ಹೆಸರು, ವಯಸ್ಸು ಮುಂತಾದ ವಿವರಗಳುಳ್ಳ ಕಂಪ್ಯೂಟರ್ ಲಿಸ್ಟ್ ತಂದಿದ್ದ. ಅದರ ಜೊತೆಗಿದ್ದ ಇನ್ನೊಂದು ಲಿಸ್ಟಲ್ಲಿ ಅತ್ಯಾಚಾರಕ್ಕೊಳಗಾದ 65 ಸಾವಿರ ಕಾಶ್ಮೀರ ಯುವತಿಯರ ಹೆಸರು ಮುಂತಾದ ವಿವರಗಳಿರುವುದಾಗಿ ತಿಳಿಸಿದ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಮಸಲ್ ಮೆಮೊರಿ ಮತ್ತು ನಾವು….
ಬರೇ ಜ್ಞಾನ, ವಿಪರೀತ ಮಾಹಿತಿಯಿಂದ ಏನೂ ಪ್ರಯೋಜನವಿಲ್ಲ. ಮನುಷ್ಯನ ನೋವನ್ನು ಗೌರವಿಸುವ, ಅರ್ಥಮಾಡಿಕೊಳ್ಳುವ ಭಾಗವಾಗಿ ಜ್ಞಾನ, ಪುಸ್ತಕಗಳು ಮೂಡಿ ಬರಬೇಕು. ಇಲ್ಲದಿದ್ದರೆ ಜ್ಞಾನ, ಮಾಹಿತಿಯೆಲ್ಲ ಮನುಷ್ಯನಿಂದ, ಬದುಕಿನಿಂದ ವಿಮುಖವಾಗುತ್ತದೆ, ಇದ್ದೂ ಇಲ್ಲದಂತೆ. ಏನೂ ಪ್ರಯೋಜನವಾಗುವುದಿಲ್ಲ. ಇಂತಹ ಜ್ಞಾನ, ಮಾಹಿತಿಯ ಆಧಾರದ ಮೇಲೆ ಬದುಕು, ನಾಗರಿಕತೆ ಯಾಂತ್ರಿಕವಾಗಿರುತ್ತದೆ, Muscle memoryಯನ್ನು ಪ್ರೋತ್ಸಾಹಿಸುತ್ತದೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿ
ಮಾರುತಿ ಗೋಪಿಕುಂಟೆ ಹೊಸ ಸರಣಿ “ಬಾಲ್ಯದೊಂದಿಗೆ ಪಿಸುಮಾತು” ಆರಂಭ
ಮನೆಯಲ್ಲಿ ಬಹಳ ತುಂಟನಾಗಿದ್ದ ನನ್ನ ಕಾಟಕ್ಕೆ ನಮ್ಮಜ್ಜಿ ಇವನ್ನ ‘ಇಸ್ಕೂಲಿಗೆ ‘ಸೇರುಸ್ಬೇಕು ಮನೇಗಿದ್ರೆ ಯಾವಾಗಲೂ ಜಗಳ ಮಾಡ್ತಿರ್ತಾನೆ” ಎಂದು ದೂರು ಹೇಳುತ್ತಿದ್ದಳು. ನಮ್ಮಪ್ಪ ”ಆರು” ವರ್ಷದವರೆಗೂ ಇಸ್ಕೂಲಿಗೆ ಸೇರುಸ್ಕಮಲ್ಲ ಸುಮ್ನೆ ಯಾಕ್ ಬಡ್ಕೋಮ್ತೀಯ” ಎಂದು ಆಗಾಗ ಅಜ್ಜಿಯನ್ನೆ ಗದರಿಸುತ್ತಿದ್ದ. ಇವನ ವಾರಗೆಯವರೆಲ್ಲಾ ಇಸ್ಕೂಲಿಗೆ ಹೋಗ್ತಾರೆ ಇವನ ಕಾಟ ನಮ್ಗೆ ತಡೆಯೋಕಾಗಲ್ಲ ಎಂದು ಮನೆಯವರೆಲ್ಲರೂ ಹೇಳಿದಾಗ ಅಪ್ಪನಿಗೆ ಇದೆ ಸರಿ ಅನ್ನಿಸಿ ಇಸ್ಕೂಲಿಗೆ ಸೇರ್ಸೆಬಿಡೋಣ ಎಂದು ಶಾಲೆಗೆ ಕರೆದುಕೊಂಡು ಹೋಗೆಬಿಟ್ರು.
ಮಾರುತಿ ಗೋಪಿಕುಂಟೆ ಬರೆಯುವ ಹೊಸ ಸರಣಿ
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ ಆರಂಭ
ಮುಂದೆ ಈ ಕುದುರೆ ಗಾಡಿ ಯಾ ಜಟಕಾ ಗಾಡಿ ಪ್ರಸಂಗ ಸಾವಿರಾರು ಸಲ ರಿಪೀಟ್ ಆದವು. ಆಗ ರಾಮಚಂದ್ರಪುರದ ಬಳಿ ಬರುತ್ತಿದ್ದಂತೆ ದೊಡ್ಡ ಇಳಿಜಾರು ಶುರು ಆಗಿ ಸುಮಾರು ನೂರಾ ಐವತ್ತು ಅಡಿ ಆಳಕ್ಕೆ ರಸ್ತೆ ಸರಿದು ನಂತರ ಏರು ಗತಿಯಲ್ಲಿ ಇದು ಮುನ್ನೂರು ಗಜ ದಾಟಿ ರಾಜಾಜಿನಗರ ಎಂಟ್ರೆನ್ಸ್ ತಲುಪುತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ ಹೊಸ ಸರಣಿ “ಹಳೆ ಬೆಂಗಳೂರ ಕಥೆಗಳು” ಇನ್ನು ಹದಿನೈದು ದಿನಗಳಿಗೊಮ್ಮೆ, ಶುಕ್ರವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.
ಹತ್ತನೆ ಶತಮಾನ: ಹಿಂದೂ ಸಂಸ್ಕೃತಿಯ ಮಹತ್ತರ ವಿಸ್ತಾರ
ಸಂಗಂ ಯುಗದಲ್ಲಿ ಅಶೋಕನ ಕಾಲಕ್ಕಿಂತಲೂ ಹೆಚ್ಚಿನ ಪ್ರಗತಿ ಕಲೆಯಲ್ಲುಂಟಾಯಿತು. ಪೂನಾದ ಸಮೀಪ ‘ಬಾಜʼ ಎಂಬಲ್ಲಿ ಕ್ರಿ.ಪೂ. ಇದೇ ಶತಮಾನದಲ್ಲಿ ಒಂದು ‘ವಿಹಾರ’ವನ್ನು ಕಡೆದಿರುವರು. ಈ ಕಲೆಯು ವಾಸ್ತವಿಕತೆಯಿಂದ ಕೂಡಿದೆ. ಮುಂಬಯಿಯ ಕಾರ್ಲೆ ಎಂಬಲ್ಲಿ ಕಲ್ಲಿನಿಂದಲೇ ಮಾಡಿದ ಚೈತ್ಯಾಲಯವು ಉತ್ಕೃಷ್ಟವಾಗಿದೆ. ಜುನಾರ್, ನಾಸಿಕ, ಅಜಂತ ಮುಂತಾದೆಡೆಗಳಲ್ಲಿಯೂ ಉತ್ತಮ ಚೈತ್ಯಾಲಯಗಳಿವೆ. ಕೆತ್ತನೆಯ ಕೆಲಸಗಳಿಂದ ಕೂಡಿದ ಬೃಹತ್ ಸ್ತೂಪದ ಹೆಬ್ಬಾಗಿಲು ಪ್ರಸಿದ್ಧವಾಗಿದೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಕೊನೆಯ ಬರಹ ಇಲ್ಲಿದೆ.
ನಮಗೇ ಯಾಕೆ ಹೀಗಾಗುತ್ತೆ?
ನಮಗೆ ಯಾಕೆ ಹೀಗಾಗುತ್ತೆ ಅನ್ನುವ ಪ್ರಶ್ನೆಯೇ ಒಂದು ತಾತ್ವಿಕ ಪ್ರಮೇಯವಾಗಿಯೂ, ಮನಸ್ಸು ಕೆಲಸ ಮಾಡುವ ರೀತಿಯ ತಿಳುವಳಿಕೆಯಾಗಿಯೂ ಸರಿಯಲ್ಲವೆಂದು ಕಾಣುತ್ತದೆ. ನಾವು ಜೀವನವನ್ನು, ಮನಷ್ಯರನ್ನು, ಬಂದ ಹಾಗೆ, ಅವರು ಇರುವ ಹಾಗೆ ಒಪ್ಪಿಕೊಳ್ಳುವ ನಮ್ರತೆಯನ್ನು ತೋರಿಸುವುದಿಲ್ಲ. ಎಲ್ಲ ಘಟನೆಗಳ ಮೇಲೂ ನಮ್ಮ ನಿಯಂತ್ರಣವಿರಬೇಕು, ಇರುತ್ತದೆ. ನಾವು ಇಷ್ಟಪಟ್ಟ ಹಾಗೆಯೇ ಜಗತ್ತು ನಡೆಯಬೇಕು.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಎಂಟನೆಯ ಪ್ರಬಂಧ ನಿಮ್ಮ ಓದಿಗೆ
ಕೊನೆಯ ಸಿಖ್ ದೊರೆಯ ಹತಾಶ ಚರಿತೆ
ತಾಯಿಯಿಂದ ದೂರವಾಗಿ ಕೆಲವು ವರ್ಷಗಳ ನಂತರ, ನೇಪಾಳದಲ್ಲಿ ಆಕೆ ತಲೆಮರೆಸಿಕೊಂಡಿರುವುದು ಗೊತ್ತಾಗಿತ್ತು. ದುಲೀಪ್ ಸಿಂಗ್ ಅಮ್ಮನಿಗೆ ಹಲವು ಪತ್ರಗಳನ್ನು ಬರೆದಿದ್ದ. ನಿರಂತರ ಕೋರಿಕೆಯ ನಂತರ ಕೊಲ್ಕತ್ತಾದಲ್ಲಿ ತಾಯಿ-ಮಗನ ಭೇಟಿಗೆ ವ್ಯವಸ್ಥೆ ಮಾಡಲಾಯಿತು. 13 ವರ್ಷಗಳ ನಂತರ ಕಾಣಸಿಕ್ಕ ಮಗ ನಯವಾಗಿ ಮುಖ ಕ್ಷೌರ ಮಾಡಿಕೊಂಡು “ಜಂಟಲ್ಲ್ಮ್ಯಾನ್” ಆಗಿದ್ದನ್ನು ನೋಡಿ, ಸಿಖ್ ಸಾಮ್ರಾಜ್ಯ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ದುಃಖ ಪಂಜಾಬಿ ಅಸ್ಮಿತೆಯನ್ನು ಅಳಿಸಿಕೊಂಡ ಮಗನಿಂದ ಆಯಿತು ಎಂದಿದ್ದಳಂತೆ ಜಿಂದಾ ಕೌರ್.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕೊನೆಯ ಸಿಖ್ ದೊರೆ ದುಲೀಪ್ ಸಿಂಗ್ ಜೀವನದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ
ನಾಲ್ಕಾಣೆಯಿಂದ ಒಂದು ಪ್ರಾಣ ಉಳಿಯಿತು!
ಆಕೆ ಅಗಸಿಯ ಕಡೆಗೆ ಹೋಗುತ್ತಿರುವುದರಿಂದ ಏನಾಗಿದೆ ಎಂದು ಕೇಳಿಯೆಬಿಟ್ಟೆ. ಅಡುಗೆಯಲ್ಲಿ ಉಪ್ಪಿಲ್ಲವೆಂದು ಗಂಡ ಹೊಡೆದಿರುವುದಾಗಿ ತಿಳಿಸಿದಳು. ‘ಆತ ಹಣ ಕೊಡದಿದ್ದರೆ ಉಪ್ಪು ಎಲ್ಲಿಂದ ತರಲಿ’ ಎಂದು ಕೇಳಿದಳು. ಈ ರೀತಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಬಾವಿಗೆ ಹಾರುವುದಾಗಿ ಹೊರಟೇಬಿಟ್ಟಳು. ಮತ್ತೆ ತಡೆದೆ. ಬಿಗಿ ಮುಷ್ಟಿಯಲ್ಲಿದ್ದ ನಾಲ್ಕಾಣೆಯನ್ನು ತೋರಿಸುತ್ತ ‘ಇದನ್ನು ಕೊಟ್ಟರೆ ವಾಪಸ್ ಹೋಗುವೆಯಾ’ ಎಂದು ಕೇಳಿದೆ. ಆಕೆ ಕೃತಜ್ಞತೆಯಿಂದ ತೆಗೆದುಕೊಂಡು ಮನೆಯ ದಾರಿ ಹಿಡಿದಳು. ಆ ನಾಲ್ಕಾಣೆಯನ್ನು ಖರ್ಚು ಮಾಡಿದೆನೆಂದು ಭಾವಿಸಿ ತಾಯಿ ಬಡಿದದ್ದು ನೋವೆನಿಸಲಿಲ್ಲ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 58ನೇ ಕಂತು ನಿಮ್ಮ ಓದಿಗೆ.









