ಸಮರಕಂದ್‌ನ ಪಾರಂಪರಿಕ ಸ್ಥಳಗಳು ಮತ್ತು ಬಿಜಾಪುರದ ಗೋಲಗುಮ್ಮಟ
ಸಮರಕಂದ್ ನಗರದ ರೇಗಿಸ್ತಾನ್ ಚೌಕ್ ಅತ್ಯಂತ ಸುಂದರವಾದ ಇಸ್ಲಾಮೀ ಶೈಲಿಯ ವರ್ಣರಂಜಿತ ಇಮಾರತುಗಳಿಂದ ಕೂಡಿದ ಪ್ರದೇಶವಾಗಿದೆ. ತೈಮೂರ ಲಂಗನ ಗೋರಿ ಕೂಡ ಇಲ್ಲೇ ಇದೆ. ಅದು ಎತ್ತರದ ಪ್ರದೇಶದಲ್ಲಿರುವುದರಿಂದ ಬಹಳಷ್ಟು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಸುದೈವದಿಂದ ನಮ್ಮ ಗೈಡ್ ಗುಲ್‌ಚೆಹರಾ ಎಂಬ ಯುವತಿ ಸಮರಕಂದ್ ಇತಿಹಾಸವನ್ನು ಬಹಳ ಚನ್ನಾಗಿ ಬಲ್ಲವಳಾಗಿದ್ದಳು. ಆಕೆ ಸಮರಕಂದ್ ಇತಿಹಾಸದ ಮೇಲೆ ಸಂಶೋಧನೆ ಮಾಡಿದವಳಾಗಿದ್ದಳೆಂಬ ನೆನಪು. ಪ್ರತಿಯೊಂದು ಸ್ಥಳದ ಬಗ್ಗೆ ಆಕೆ ವಿವರಿಸುವ ರೀತಿ ನನಗಂತೂ ಬಹಳ ಉಪಯುಕ್ತವಾಯಿತು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 45ನೇ ಕಂತು ಇಲ್ಲಿದೆ.
ನಡೆ ಎಲ್ಲೆಂದರಲ್ಲಿಗೆ ನಡೆ
ಹಳ್ಳಿಗೆ ಹೋಗಿ ಹೀಗಾಯಿತು ಎಂದು ಹೇಳಿದರೆ ನನ್ನ ಕನಸು ನನ್ನ ದುಃಖ ಅವರಿಗೆ ಅರ್ಥವಾಗುತ್ತಿರಲಿಲ್ಲ. ಯಾರಿಗೂ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಹೇಳಿಕೊಂಡರೆ ನಗುತ್ತಿದ್ದರು. ಜುಜುಬಿ ಫೋಕ್‌ಲೋರ್ ಓದ್ಬುಟ್ಟು ಇಷ್ಟೆಲ್ಲಾ ಬಿಲ್ಡಪ್ ಕೊಡ್ತಿಯಲ್ಲಾ. ನಿನ್ನ ರೇಂಜ್ ಏನಿದೆಯೊ ಅದ್ನೇ ಮೆಯಿಂಟೇನ್ ಮಾಡು ಎಂದಿದ್ದರು ಗೆಳೆಯರು. ನಿಜವಿತ್ತು. ನಾನೇನು ಮಹಾ ತಿಳಿದವನಾಗಿರಲಿಲ್ಲ. ಅವೆಲ್ಲ ಈ ವ್ಯವಸ್ಥೆಯ ಬಲೆಯಿಂದ ತಪ್ಪಿಸಿಕೊಂಡು ಕಣ್ಮರೆಯಾಗಿ ಎಲ್ಲೊ ಹೋಗಿ ಅನಾಥನೇ ಆಗಿ ಬದುಕಲು ಹೂಡುತ್ತಿದ್ದ ವಿಕಟ ವಿನೋದ ದುರಂತ ನಾಟಕ. ಕೆ.ಆರ್.ಮಾರ್ಕೆಟಲ್ಲಿ ಹೋಗಿ ಮೂಟೆ ಹೊತ್ತು ಸಂಸಾರ ನಡೆಸಲು ಇಲ್ಲಿ ತನಕ ಹೋರಾಡಿ ಬರಬೇಕಿತ್ತೇ…
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 36ನೇ ಕಂತು
ರಾಜಕೀಯ ಸ್ಥಿತಿಗೊಂದು ಪ್ರತಿಕ್ರಿಯೆ ಇರಾನ್ ನ ʻಕಾಂದಹಾರ್ʼ
ಮೊಹಿಸಿನ್ ಮಕ್ಬಲ್‌ಬಫ್ ಆಫ್ಘಾನಿಸ್ತಾನದ ಬಗ್ಗೆ ತಯಾರಿಸಿದ ಇತರ ಚಿತ್ರಗಳಿಗಿಂತ ಆಫ್ಘಾನಿಸ್ತಾನದಲ್ಲಿಯೇ ಚಿತ್ರೀಕರಣಗೊಂಡು ವಿಶೇಷ ಹೆಗ್ಗಳಿಕೆಗೆ ಪಾತ್ರವಾದ ಚಿತ್ರ ʻಕಾಂದಹಾರ್ʼ. ನರಕದಲ್ಲಿರುವವರ ಬಗ್ಗೆ ಅಲ್ಲಿಯೇ ಹೋಗಿ ಚಿತ್ರೀಕರಣ ಮಾಡುತ್ತೇನೆ ಎನ್ನುವ ಎದೆಗಾರಿಕೆ ಮಕ್ಬಲ್‌ಬಫ್‌ನದು. ತಾನು ಅಲ್ಲಿರುವಷ್ಟು ಕಾಲ ಪ್ರತಿದಿನವೂ ಒಂದು ಪರೀಕ್ಷೆಯಾಗಿತ್ತು, ಜೀವವನ್ನು ಎಡಗೈಯಲ್ಲಿ ಹಿಡಿದಿರಬೇಕಾಗಿತ್ತು. ಅಲ್ಲಿನ ಜನರ ಅನುಮಾನ, ಆತಂಕಗಳನ್ನು ತೀರ ಪ್ರಯಾಸದಿಂದ ನಿವಾರಿಸಬೇಕಾಗಿತ್ತು. ಚಿತ್ರದಲ್ಲಿ ನಟಿಸಲು ಅಲ್ಲಿನವರನ್ನೇ ಅವಲಂಬಿಸಬೇಕಾದ ಪ್ರಸಂಗವಿತ್ತು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಇರಾನ್ ನ ʻಕಾಂದಹಾರ್ʼ ಸಿನಿಮಾದ ವಿಶ್ಲೇಷಣೆ
‘ದುಡಿಯುವ ವರ್ಗಕ್ಕೆ ಒಂದೇ ಲಯ ಇದೆ’
ಈ ಯುದ್ಧದ ಸಂದರ್ಭದಲ್ಲಿ ನಮ್ಮ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಅವರೆಲ್ಲ ಸೇರಿ ಮುಸ್ಲಿಮರನ್ನು ಹೀಯಾಳಿಸಿದರು. ನಾನು ಅಪಮಾನಿತನಾಗಿ ಎದ್ದು ‘ಬೆಳಿಗ್ಗೆ ಮಿಲಿಟರಿ ಸೇರುವೆ’ ಎಂದು ಹೇಳಿ ಹೊರಗೆ ಬಂದು ಸಿದ್ಧೇಶ್ವರ ಗುಡಿಗೆ ಹೋಗಿ, ಕಟ್ಟೆಯ ಮೇಲೆ ಮಲಗಿದೆ. ಚಳಿಯಿಂದಾಗಿ ರಾತ್ರಿಯಿಡಿ ಸರಿಯಾಗಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಸ್ಟೇಷನ್ ರೋಡ್‌ನಲ್ಲಿರುವ ಐಬಿ ಕಡೆಗೆ ಹೊರಟೆ. ಯುದ್ಧದ ಸಂದರ್ಭವಾಗಿದ್ದರಿಂದ 14 ವರ್ಷ ಮೀರಿದ ಬಾಲಕರನ್ನೂ ಅಲ್ಲಿ ಮಿಲಿಟರಿಗೆ ಸೇರಿಸಿಕೊಳ್ಳುತ್ತಿದ್ದರು. ನಾನು ಎಲ್ಲ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದರೆ ತೂಕ ಕಡಿಮೆ ಇತ್ತು. ಅಷ್ಟೊತ್ತಿಗೆ ನನ್ನ ಅಜ್ಜಿ ಮತ್ತು ತಾಯಿ ಬಂದು ಅಳುತ್ತ ನಿಂತಿದ್ದರು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 44ನೇ ಕಂತು ಇಲ್ಲಿದೆ.
ಅಸಂಗತವಾಗಿ ಸಂಗಾತಿ ಆಗಿದ್ದೆ
ನಿಜ; ತಾತನನ್ನು ಹೊರಗೆ ಮಲಗಿಸಿದ್ದರು. ಬಸಿದು ಹೋಗಿದ್ದ. ಮಾತು ಸರಿಯಾಗಿ ಹೊರಡುತ್ತಿರಲಿಲ್ಲ. ಹೋದ ಕೂಡಲೆ ವ್ಯಗ್ರ ನಾಯಿಗಳಂತೆ ನನ್ನ ಮೇಲೆ ಆ ಬಂಧು ಬಳಗ ಬೊಗಳಿತು. ಕೇರು ಮಾಡಲಿಲ್ಲ. ಅವನು ದರಿದ್ರ ನನ್ನಪ್ಪ ಹೆಣದಂತೆ ಅರೆ ಬೆತ್ತಲೆಯಾಗಿ ಬೀದಿಯ ಲೈಟು ಕಂಬಕ್ಕೆ ಒರಗಿಕೊಂಡು ಅಮಲಾಗಿ ಯಾರ ಮೇಲೊ ಬೈಯ್ಯುತ್ತಿದ್ದ. ನನ್ನ ಕಂಡ ಕೂಡಲೇ… ‘ವರದಕ್ಷಿಣೆಯಾ ಯೆಸ್ಟು ತಕಂದಿದ್ದಾನಂತೆ ಕೇಳೀ… ಆ ದುಡ್ಡು ನನುಗೆ ಸೇರಬೇಕೂ’ ಎಂದು ಕುಯ್‌ಗರೆಯುತ್ತಿದ್ದ. ಇವನು ಇಂಗೇ ಭಿಕ್ಷೆ ಬೇಡಿಕೊಂಡೇ ಸಾಯುತ್ತಾನೆ ಎನಿಸಿತು.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 35ನೇ ಕಂತು
ಸಮತಾವಾದಿ ಪ್ರಧಾನಿಯ ವಿಲಾಯತಿ ದಿನಗಳು
ನೆಹರೂರ ಆಗಿನ ಜೀವನದೃಷ್ಟಿ ದ್ವಂದ್ವಗಳಿಂದ ಕೂಡಿತ್ತು. ಓದು, ಸಹವಾಸ, ಉಪನ್ಯಾಸ, ಸಂಪರ್ಕಗಳು ತಾತ್ವಿಕ ಪ್ರಜ್ಞೆಯನ್ನು ಸುಪ್ತವಾಗಿ ಪ್ರಭಾವಿಸಿದಂತೆ ಕಾಣಿಸುತ್ತಿದ್ದರೂ ಹೆಚ್ಚಿನ ಸಮಯ “ಆ ಕ್ಷಣದ ಸುಖ ನೆಮ್ಮದಿಯ” ನವಿರಾದ ಜೀವನ ಹಿತಕರ ಅನುಭವ ಹುಡುಕಾಟದಲ್ಲಿ ಮುಳುಗಿತ್ತು. ಹತ್ತೊಂಭತ್ತನೆಯ ಶತಮಾನದ ಮುಕ್ತಾಯಕ್ಕಿಂತ ಮೊದಲು ಬರೆಯುತ್ತಿದ್ದ ಆಸ್ಕರ್ ವೈಲ್ಡ್, ವಾಟರ್ ಪೇಟರ್ ರಿಂದ ಜನಪ್ರಿಯವಾದ ನವಿರು ಬದುಕಿನ ಹಂಬಲ ಅವರನ್ನು ಸೋಂಕಿತ್ತು. ರಾಷ್ಟ್ರೀಯತೆ, ಸ್ವಾತಂತ್ಯ್ರ ಸಂಗ್ರಾಮದ ಒಲವು ಸೆಳೆತಗಳು ಆರಂಭವಾಗಿದ್ದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಿವಂಗತ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಕುರಿತ ಮರವಂತೆ ಬರಹ ಇಲ್ಲಿದೆ.
ಸೋವಿಯತ್ ದೇಶದಲ್ಲಿ ಮಿಂಚಿದ ನಮ್ಮ ಧ್ವಜ
ತಾಷ್ಕೆಂಟ್ ವಿಮಾನ ನಿಲ್ದಾಣದಿಂದ ಹೊರಗೆ ಬಂದ ಕೂಡಲೇ ನನಗೆ ಆಶ್ಚರ್ಯ ಕಾದಿತ್ತು. ಎಲ್ಲೆಂದರಲ್ಲಿ ಭಾರತದ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಬೀದಿಗಳು ನಮ್ಮ ಧ್ವಜದಿಂದ ಕೂಡಿದ ಪರಪರಿಗಳಿಂದ ಅಲಂಕೃತವಾಗಿದ್ದವು. ಎಲ್ಲೆಂದರಲ್ಲಿ ನಮ್ಮ ರವಿಶಂಕರ್ ಸಿತಾರ್ ಮತ್ತು ಬಿಸ್ಮಿಲ್ಲಾ ಖಾನ್ ಶಹನಾಯಿ ನಾದಮಾಧುರ್ಯಕ್ಕೆ ಕಿವಿಗಳು ತೆರೆದುಕೊಳ್ಳತೊಡಗಿದವು. ನಮ್ಮ ಗೈಡ್ ನಮ್ಮನ್ನು ಪಂಚತಾರಾ “ಹೋಟೆಲ್ ತಾಷ್ಕೆಂಟ್”ಗೆ ಒಯ್ದರು. ಅಲ್ಲಿಯೆ ರಿಷಪ್ಷನಿಸ್ಟ್ “ಇಂಜಿಷ್ಕಿ ದ್ರುಜಿಯೆ” (ಇಂಡಿಯನ್ ಫ್ರೆಂಡ್ಸ್) ಎಂದು ಖುಷಿಯಿಂದ ಬರಮಾಡಿಕೊಂಡರು. ಭಾರತದ ಬಗ್ಗೆ ಸೋವಿಯತ್ ದೇಶದವರಿಗೆ ಇದ್ದ ಅಭಿಮಾನ, ಪ್ರೀತಿ, ಗೌರವ ಕಂಡು ಆಶ್ಚರ್ಯಚಕಿತನಾದೆ.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 43ನೇ ಕಂತು ಇಲ್ಲಿದೆ.
ಬದಲಾವಣೆಯಲ್ಲಿ ಸ್ವಾತಂತ್ರ್ಯದ ಸಾಕಾರ
ಈ ಭೂಗೋಳದ ಬಹುತೇಕ ರಾಷ್ಟ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜಗಳ, ಕದನ, ವೈಮನಸ್ಸು, ಪ್ರತಿಭಟನೆ, ಆಗ್ರಹಗಳು ನಡೆಯುತ್ತಲೇ ಇರುವುದನ್ನು ಓದಿದಾಗ, ಕೇಳಿದಾಗ ಮನುಷ್ಯ ಮನಸ್ಸು ಅದೆಷ್ಟು ಅತಂತ್ರವೆನಿಸುತ್ತದೆ. ಆ ಮನಸ್ಸುಗಳು ಅದೆಷ್ಟು ಸುಲಭವಾಗಿ ಆಕ್ರಮಣಶೀಲತೆಯನ್ನು ಅಪ್ಪಿಕೊಳ್ಳುತ್ತವೆ ಎಂದು ಗೋಚರಿಸುತ್ತದೆ. ತಾನು ಮುಖ್ಯ, ತನ್ನದು ಮುಖ್ಯ, ತನ್ನದೇ ಮೇಲು, ತನ್ನದನ್ನು ವಾದಿಸುತ್ತಾ ಮುಂದಿರಿಸಬೇಕು, ಎನ್ನುವುದು ಬರೀ ಮನುಷ್ಯ ಸ್ವಭಾವವೇ ಹೌದು. ಒಮ್ಮೊಮ್ಮೆ ಅದು ಎಲ್ಲ ಪ್ರಾಣಿಗಳ ಸಾರ್ವತ್ರಿಕ ಸ್ವಭಾವ ಎನ್ನುವುದಾದರೂ ಪ್ರಾಣಿಪ್ರಪಂಚವನ್ನು ಗಮನಿಸಿದಾಗ ಈ ಬಗೆಯ ವೈಮನಸ್ಯಗಳು ಕಾಣುವುದಿಲ್ಲ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ನನ್ನ ತಾಯಿಬೇರೇ ನನ್ನ ಕಥೆ
ಕಣ್ಣೀರ ಕಣ್ಣರೆಪ್ಪೆಗಳು ತಡೆಯದಾದವು. ತುಳುಕಿದವು. ಹೇಳಿದೆ. ‘ನಾನಲ್ಲ ಕಥೆ ಬರೆದದ್ದು. ಕಥೆಯ ನನ್ನ ತಾಯಿ ಹೇಳಿ ಬರೆಸಿದಳು. ನನ್ನ ತಾಯಿ ಈಗ ನನ್ನ ನೆತ್ತರಲ್ಲಿ ಮಾತ್ರ ಬದುಕಿ ಉಳಿದಿದ್ದಾಳೆ. ಅವಳ ಆತ್ಮ ನನ್ನ ಎದೆಗೂಡ ದೇಗುಲದಲ್ಲಿ ನನ್ನ ಚೈತನ್ಯವಾಗಿದೆ… ಅವಳ ಮೌನ ನನ್ನ ಭಾಷೆಯಾಗಿದೆ. ಅವಳ ಕಿಚ್ಚು ನನ್ನ ಬರೆಹದ ಬೆಳಕಾಗಿದೆ… ನಾನು ನೆಪದ ಕಥೆಗಾರ ಅಷ್ಟೇ… ಅವಳೇ ನನ್ನ ಬರೆಹದ ಬೇರು ಕಾಂಡ ರೆಂಬೆ ಕೊಂಬೆ ಚಿಗುರು ಎಲ್ಲ… ಎಲ್ಲ ಅವಳೇ… ನನ್ನದೇನಿದ್ದರೂ ಅವಳ ಕಥೆಯ ನೆರಳು ಅಷ್ಟೇ’ ಎಂದೆ.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 34ನೇ ಕಂತು










