ಸ್ವಗತದಲ್ಲಿ ಅರಳುವ ಅಫ್ಘಾನಿಸ್ತಾನದ ʻದ ಪೇಷನ್ಸ್ ಸ್ಟೋನ್ʼ
ಈ ಚಿತ್ರದಲ್ಲಿ ಯಾವ ಪಾತ್ರಗಳಿಗೂ ಹೆಸರಿಲ್ಲ. ವಿಶ್ವದ ಯಾವುದೇ ಭಾಗಕ್ಕೂ ಈ ಕಥನ ಅನ್ವಯಿಸಲು ಸಾಧ್ಯ. ಇಂಥದೊಂದು ನೋವು ತುಂಬಿದ ದೇಶದಲ್ಲಿ ಯಾವ ಬಗೆಯ ಆಯ್ಕೆಯ ಸ್ವಾತಂತ್ರ್ಯವಿಲ್ಲದೆ ಹೆಣ್ಣಾಗಿ ಹುಟ್ಟಿದ್ದಷ್ಟೆ ಅವಳ ಪಾಡು. ಅದರ ವೃತ್ತಾಂತಗಳನ್ನು ಅವಳ ಸ್ವಗತದ ಮೂಲಕ ತಿಳಿಸುತ್ತಾಳೆ.
ನನ್ನ ನಿರುಮ್ಮಳ ಇರುಳು ನನ್ನದು…
ಅಲ್ಲೊಂದು ಸಹಜ ಜಲ ಬಾವಿ ಇತ್ತು ಅನಾದಿಯಿಂದಲೂ. ಅದರ ಪವಿತ್ರ ಜಲದಿಂದಲೇ ಆ ಕಾಲದ ವೈದಿಕರು ಧರ್ಮ ಕಾರ್ಯ ಎಸಗುತ್ತಿದ್ದುದು… ಅದಕೆಂದೇ ಆ ಗೊಂಡಾರಣ್ಯ ಪ್ರಸಿದ್ಧವಾಗಿತ್ತು ಆ ಕಾಲಕ್ಕೆ. ಈಗದು ಒಂದು ಹೊಂಡವಾಗಿತ್ತು. ಬೇಸಿಗೆಯಲ್ಲಿ ದಾಹಕ್ಕಿಳಿದ ಪ್ರಾಣಿಗಳು ಆ ಸನಾತನ ಜಾರಿನ ಹೂಳಿನಲ್ಲಿ ಸಿಲುಕಿ ಎದ್ದು ಬರಲಾರದೆ ಅಲ್ಲೇ ಸಮಾಧಿ ಆಗಿದ್ದವು. ಬಾಯಾರಿ ಅಲ್ಲಿ ಸಿಲುಕಿದವರ ಪಾಡನ್ನು ಅರ್ಥಮಾಡಿಕೊಳ್ಳಿ! ಧರ್ಮ ಸೂಕ್ಷ್ಮವನ್ನು ನಾಳೆ ಅರ್ಥ ಮಾಡಿಕೊಳ್ಳಿ ಮಕ್ಕಳೇ; ಈಗಲೇ ಹೇಳಬಾರದು!
ಕಣ್ಣು ಕಾಣದ ಗಾವಿಲರು
ಅಂದು ಚೆಲುವಾಂಬ ಆಸ್ಪತ್ರೆಯ ಹೆರಿಗೆಯ ಕೋಣೆಯಲ್ಲಿ ಸಾಲು ಸಾಲು ಹೆರಿಗೆಗಳಾದವು. ಅಂದು ಇದ್ದದ್ದು ಮೂರು ಜನ ದಾದಿಯರು ಮತ್ತು ತರಬೇತಿ ವೈದ್ಯನಾಗಿ ನಾನು ಮಾತ್ರ. ಹಿರಿಯ ವೈದ್ಯರು ಅಗತ್ಯಬಿದ್ದರೆ ಮಾತ್ರ ಕರೆಸಿಕೊಳ್ಳುವ ಹಾಗೆ ಅಲ್ಲಿಯೇ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಇದ್ದರು. ಕೋಣೆಯಲ್ಲಿದ್ದ ಆರೂ ಹೆರಿಗೆಯ ಮಂಚಗಳ ಮೇಲೆ ವಿವಿಧ ರೀತಿಯ ಆಕ್ರಂದನಗಳು ನನಗಂತೂ ಹೊಸ ಅನುಭವ. ಆದರೆ, ತನ್ನ ಮಗುವಿನ ಮೊದಲ ಅಳುವನ್ನು ಕೇಳಿದಾಗ ಒಬ್ಬ ತಾಯಿಯರ ಮುಖಾರವಿಂದದಲ್ಲಿ ಮೂಡಿ ಬರುವ ಮಂದಹಾಸವನ್ನು ಮಾತ್ರ…
ಗಂಟಿಚೋರರ ಸಾಂಪ್ರದಾಯಿಕ ಶಿಕ್ಷಣ
ಈ ಬಗೆಯ ಸವಾಲು ಸೆಟ್ಲಮೆಂಟಿಗೆ ಬಂದ ಮೇಲೆ ಒಂದು ಹಂತದಲ್ಲಿ ಬದಲಾಯಿತು. ಕಾರಣ ಈ ಸೆಟ್ಲಮೆಂಟುಗಳಲ್ಲಿ ಕ್ರಿಮಿನಲ್ ಟ್ರೈಬ್ಸ್ ಎಂದು ಯಾವುದನ್ನು ಕರೆಯುತ್ತಿದ್ದರೋ ಆ ಸಮುದಾಯಗಳು ಒಟ್ಟಿಗೆ ಬಾಳುವುದಕ್ಕೆ ಆರಂಭಿಸಿದವು. ಅಂತೆಯೇ ಬ್ರಿಟಿಷರ ಕಣ್ಗಾವಲು, ಹಾರುವ ಹಕ್ಕಿಯನ್ನು ಪಂಜರದೊಳಿಟ್ಟಂತಹ ಸ್ಥಿತಿ -ಹೀಗೆ ಏನೆಲ್ಲವು ಸೆಟ್ಲಮೆಂಟಿನಲ್ಲಿದ್ದರೂ ಗ್ರಾಮೀಣ ಭಾಗದಲ್ಲಿದ್ದ ಅವಮಾನದ ಸ್ವರೂಪ ಇಲ್ಲದಾಯಿತು. ಸೆಟ್ಲಮೆಂಟಿನ ಪ್ರತ್ಯೇಕ ಶಾಲೆಗಳಲ್ಲಿ ಈ ಸಮುದಾಯವನ್ನು ಮೌಲ್ಯಮಾಪನ…
ಗೀತಾಂಜಲಿಯ ವಿಶ್ವಕವಿ, ಬಹುಸಂಸ್ಕೃತಿಯ ವಕ್ತಾರ
ಹದಿನೇಳು ವರ್ಷದ ರವೀಂದ್ರನಾಥ, ಮತ್ತೆ ಮತ್ತೆ ಓದಿಸಿ ಬಾಯಿಪಾಠ ಮಾಡಿಸುವ ಇಂಗ್ಲೆಂಡ್ ನ ಶಿಕ್ಷಣದಿಂದ ಭ್ರಮನಿರಸನ ಹೊಂದಿ ಪದವಿ ಸರ್ಟಿಫಿಕೇಟ್ ದೊರೆಯುವ ಮೊದಲೇ ಓದು ನಿಲ್ಲಿಸಿ ಭಾರತಕ್ಕೆ ಮರಳಿದ್ದರು. ೧೯೦೧ರಲ್ಲಿ ಕೊಲ್ಕತ್ತಾದ ಗೌಜು ಗದ್ದಲಗಳಿಂದ ದೂರ, ನದಿ ತೊರೆಗಳ ಜುಳುಜುಳು ಕೇಳಿಸುವ, ನಿಬಿಡ ಮರಗಿಡಗಳ ಹಸಿರು ತುಂಬಿರುವ ನೈಸರ್ಗಿಕ ಮಡಿಲಿನ ಹಳ್ಳಿಯಲ್ಲಿ ಶಾಂತಿನಿಕೇತನ ವಿದ್ಯಾಲಯ ಆರಂಭಿಸಿದರು.
ಯೋಗೀಂದ್ರ ಮರವಂತೆ ಬರೆಯುವ…
ನಾವೆಲ್ಲರೂ ಜೊತೆಯಾಗಿದ್ದೀವಿ ಎನ್ನುವ ಈ ಹೊತ್ತು
ಕಳೆದ ಭಾನುವಾರ ಬೆಳಗ್ಗೆ ವಾರದ ದಿನಸಿ ಕೊಳ್ಳಲು ಮನೆಯಿಂದ ಹೊರಟ ನಮ್ಮ ಸಂಸಾರ ಅರ್ಧಂಬರ್ಧ ಖಾಲಿಯಾಗಿದ್ದ ಸೂಪರ್ ಮಾರ್ಕೆಟ್ಟಿನಿಂದ ಹಿಂದಿರುಗುವಷ್ಟರಲ್ಲಿ ಅಂದರೆ ಸುಮಾರು ಒಂದೂವರೆ ಗಂಟೆಯಲ್ಲಿ ನಾವು ಹೊರಟಿದ್ದ ರಸ್ತೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡು ಮನೆ ಸೇರಿಕೊಳ್ಳಲು ನಾವು ಆ ಇಳಿ ಮಧ್ಯಾಹ್ನ ಕಷ್ಟಪಡಬೇಕಾಯಿತು. ಕೊನೆಗೆ ಗೂಡು ಸೇರಿದಾಗ ಜೀವದ ಮೇಲೆ ಗೌರವವುಂಟಾಗಿತ್ತು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ಒಡಲ ಕುಡಿಯ ಕಿತ್ತುಕೊಂಡವರಿಗೆ ಎಷ್ಟು ಸುಖವೋ
ನಾನಾಗ ಎಷ್ಟು ಪರಿಚಿತ ಆಗಿದ್ದೆ ಎಂದರೆ… ಯಾವತ್ತೂ ಅತ್ತು ಅತ್ತೂ; ಕಣ್ಣೀರ ಬರೆ ಇಳಿದು ಉಳಿದು ಉಳಿದು ಮಚ್ಚೆಯಂತೆ ಕೆನ್ನೆ ಮೇಲೆ ಬರೆಯ ಗುರುತು ಇರುತ್ತಿತ್ತು. ನಾವಾಗ ಮುಖ ತೊಳೆವುದೆಲ್ಲಿತ್ತು. ಕಣ್ಣೀರೇ ಅಂಟಿರುತ್ತಿದ್ದವು. ನನ್ನ ತಾಯ ಸಂಗಡವೇ ನನಗೆ ಸಿಗುತ್ತಿರಲಿಲ್ಲ. ಸದಾ ಯಾವತ್ತೂ ಕಸಮುಸುರೆಯ ಕೆಲಸದ ಜೀತದವಳಂತಿದ್ದಳು. ನನ್ನ್ ತಮ್ಮನ ಅವರು ದತ್ತು ತೆಗೆದುಕೊಂಡು ಹೋದ ನಂತರ ಮತ್ತೂ ಮೆತ್ತಗಾಗಿ ಬಿಟ್ಟಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೇಯ ಕಂತು.
ಮಕ್ಕಳಿಗೆ ಕಲಿಸುತ್ತಾ… ನಾವೂ ಕಲಿಯುತ್ತಾ…
ಶಾಲೆ ಪ್ರಾರಂಭವಾಗಿ ಸುಮಾರು ಮೂರು ತಿಂಗಳಿನಿಂದ ಅಧ್ಯಾಪಕರಿಲ್ಲದೇ ಕಾದಿದ್ದ ಅವರಿಗೆ ನಾನು ನಿರ್ಜನ ದಾರಿಯಲ್ಲಿ ದಾರಿ ಕೇಳಲು ಸಿಕ್ಕ ಏಕೈಕ ವ್ಯಕ್ತಿಯಂತೆ ಕಂಡಿರಬೇಕು. ಪಾಠಪುಸ್ತಕ, ನೋಟ್ಸ್ ಪುಸ್ತಕ, ಪೆನ್ನು, ಕಂಪಾಸ್ ಹಿಡಿದು ತಯಾರಾಗಿ ಕುಳಿತಿದ್ದರು. ಬಹಳ ಆಸಕ್ತಿಯಿಂದಲೇ ಪಾಠಕೇಳಿದರು. ನನಗೆ ಆ ವರೆಗೂ ದೊಡ್ಡ ತರಗತಿಗೆ ಪಾಠಮಾಡಿ ಅಭ್ಯಾಸ ಇತ್ತು. ಈ ತರಗತಿ ಮೊದಲಿಗೆ ಖಾಲಿ ಖಾಲಿ ಅನಿಸಿದರೂ ಮಕ್ಕಳ ಆಸಕ್ತಿಯ ಮುಂದೆ ಮಧ್ಯಾಹ್ನದವರೆಗೂ ಸಮಯ ಹೋದದ್ದೇ ತಿಳಿಯಲಿಲ್ಲ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಬರಹ
ಗಿರಣಿವಡ್ಡರ್ ಮತ್ತು ಬಾವಿ ತೋಡುವ ಗಂಟಿಚೋರರು
‘ಈಗೀಗ ಗಿರಣಿ ಕೆಲಸದ ಬಗ್ಗೆ ಬೇಸರ ಬರುತ್ತಿತ್ತು. ಶ್ವಾಸಕೋಶದಲ್ಲಿ ಹತ್ತಿ ಸೇರಿ ಕಾರ್ಮಿಕರ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ಈ ಗಿರಣಿ ಕೆಲಸ ಬಿಡುವ ಮನಸ್ಸಾಗುತ್ತಿತ್ತು. ಸೂಪರ್ವೈಸರ್ ಹೆಂಡತಿಗೆ ಹೊಡೆದಂತೆ ನಮಗೆ ಹೊಡೆಯುತ್ತಿದ್ದ. ಅಶ್ಲೀಲವಾಗಿ ಬೈಯುತ್ತಿದ್ದ. ಮಶೀನು ಹೊಲಸಾದರೆ ಬಡಿದು ಕೆಲಸದಿಂದ ಅರ್ಧಕ್ಕೆ ಕಳಿಸುತ್ತಿದ್ದ. ಊಟ ಮುಗಿಸಿಕೊಂಡು ಬರಲು ತಡವಾದರೆ ಹಸಿ ಬರಲಿನಿಂದ ಥಳಿಸುತ್ತಿದ್ದ. ಇಂಥಹ ಎಷ್ಟೋ ಅನ್ಯಾಯಗಳು ನೂಲಿನ ಗಿರಣಿಯಲ್ಲಿ ನಡೆಯುತ್ತಿದ್ದವು. ಒಂದು ಸಂಘಟನೆ ಕಟ್ಟಿ ಈ ಅನ್ಯಾಯ ತಡೆಗಟ್ಟಬೇಕೆಂದು ಅನ್ನಿಸುತ್ತಿತ್ತು.









