Advertisement

ಸರಣಿ

ಸಮಾಧಾನದ ನಾಲ್ಕು ಮಾತು ಬಯಸುವ ರೋಗಿಗಳು

ಸಮಾಧಾನದ ನಾಲ್ಕು ಮಾತು ಬಯಸುವ ರೋಗಿಗಳು

ರೋಗಿ ಹೇಳುವುದನ್ನು ಗಮನವಿಟ್ಟು ಕೇಳಿದಾಗ ಅವರ ಕಾಯಿಲೆಯ ಜೊತೆಗೆ ಮನಸ್ಸಿನ ತೊಂದರೆಗಳು ಇದ್ದರೆ ಅದು ನಮಗೆ ಗೋಚರಿಸುತ್ತದೆ. ಹಾಗಾಗಿ ನಾನಂತೂ ಹೆಚ್ಚಿನ ಸಮಯ ನನ್ನಲ್ಲಿಗೆ ಬರುವ ವ್ಯಕ್ತಿಗಳ ರೋಗ ಲಕ್ಷಣದ ಜೊತೆಯಲ್ಲಿ ಅವರು ಹೇಳುವ ಇನ್ನಿತರ ವಿಷಯದ ಬಗ್ಗೆ ಕೂಡಾ ಕಿವಿ ಕೊಡುತ್ತೇನೆ. ಕೆಲವೊಮ್ಮೆ ಇದು ತೊಂದರೆಯೂ ಕೂಡಾ ಆಗಬಹುದು. ಯಾಕೆಂದರೆ
ಬೇರೆ ರೋಗಿಗಳು ಕಾಯುತ್ತಾ ಇದ್ದಾಗಲೂ ಹಲವರು ಅವರ ಕಷ್ಟ-ಸುಖಗಳನ್ನು ಹೇಳುತ್ತಾ ಹೋಗುತ್ತಿರುತ್ತಾರೆ. ನನ್ನ ಊಟದ ಸಮಯ ಆಗಿ, ಹೊಟ್ಟೆ ಹಸಿಯುತ್ತಾ ಇದ್ದರೂ ಅವರಿಗೆ ಪರಿವೆ ಇರುವುದಿಲ್ಲ. ಡಾ.ಕೆ.ಬಿ. ಸೂರ್ಯಕುಮಾರ್ ಬರಹ

read more
ಮಗುವಿನ ಹಣೆಬರಹ ಬರೆಯುವ ಸೆಟಿಗೆವ್ವ

ಮಗುವಿನ ಹಣೆಬರಹ ಬರೆಯುವ ಸೆಟಿಗೆವ್ವ

ಅಂತರ್ಜಾತಿ ಮತ್ತು ಅಂತರ ಧರ್ಮೀಯ ವಿವಾಹಗಳು ಈ ಸಮುದಾಯದಲ್ಲಿ ಬಹು ಹಿಂದಿನಿಂದಲೆ ನಡೆದಿವೆ.  ಈ ಪರಂಪರೆ ಈಗಲೂ ವಿರಳವಾಗಿ ಮುಂದುವರಿದೆ. ತಮಗಿಂತ ಮೇಲಿನ ಸಮುದಾಯಗಳಲ್ಲಿ ಮತ್ತು ಸಮನಾಂತರ ಎಂದು ಭಾವಿಸಿದ ಸಮುದಾಯಗಳಲ್ಲಿ ಮದುವೆ ನಡೆದಿರುವುದು ಹೆಚ್ಚು. ತಮಗಿಂತ ಕೆಳಗಿನವರು ಎಂದು ಭಾವಿಸಿದ ಸಮುದಾಯಗಳ ಜತೆ ಮದುವೆ ಸಂಬಂಧಗಳು ಕಡಿಮೆ. ಹುಟ್ಟಿನಿಂದ ಸಾವಿನವರೆಗೆ ನಡೆಸುವ ಆಚರಣೆಗಳು ವಿಭಿನ್ನವಾಗಿವೆ.  ಡಾ. ಅರುಣ್ ಜೋಳದ ಕೂಡ್ಲಿಗಿ ಬರೆಯುವ ‘ಗಂಟಿಚೋರರ ಕಥನಗಳು’ ಸರಣಿಯ ಹದಿನೈದನೇ ಕಂತು. 

read more
ರೇಷ್ಮೆಯ ಮಾಂತ್ರಿಕ ಚಿಟ್ಟೆಗಳ ಅಸುಖ

ರೇಷ್ಮೆಯ ಮಾಂತ್ರಿಕ ಚಿಟ್ಟೆಗಳ ಅಸುಖ

ನಾನೂ ನನ್ನ ತಾಯಿಯೂ ಅಪ್ಪನ ಆದೇಶಗಳಿಗೆ ಸದಾ ಸಿದ್ಧವಾಗಿರಲೇಬೇಕಿತ್ತು. ಆಗಿನ್ನೂ ಆತ ಪೇಟೆಯ ಎಂಡದ ದಾಸನಾಗಿರಲಿಲ್ಲಾ. ಖಡಕ್ ಆದ ಮನುಷ್ಯ. ಅತ್ಯುಗ್ರ ಸ್ವಾಭಿಮಾನಿ. ಆ ಕ್ಷಣವೇ ಅಲ್ಲೇ ಮರಣವಾದರೂ ಚಿಂತೆ ಇಲ್ಲಾ ಎಂದು ಅನ್ಯಾಯದ ವಿರುದ್ಧ ಪ್ರತಿಭಟಿಸಿ ಇಡೀ ಊರಿಗೆ ಊರನ್ನೇ ಎದುರು ಹಾಕಿಕೊಂಡು ದಂಗೆ ಏಳುತ್ತಿದ್ದ. ಅವನ ರೇಷಿಮೆಯ ಮನಸ್ಸೇ ತಿಳಿಯುತ್ತಿರಲಿಲ್ಲ. ಅತ್ತ ತಾತ ತನ್ನ ಹೋಟೆಲ್ ಕಾಯಕದಲ್ಲಿ ಮುಳುಗಿರುತ್ತಿದ್ದ. ಎಷ್ಟೋ ಬಡವರಿಗೆ ಸುಮ್ಮನೆ ಸಾಲದ ಲೆಕ್ಕದಲ್ಲಿ ಅನ್ನಹಾಕುತಿದ್ದ ಎಂದೂ ಸಾಲ ಕೇಳಿರಲಿಲ್ಲ ಯಾರನ್ನೂ ತಾತ.

read more
ಬಲಿಪರ ಏರುಪದ್ಯಗಳ ಅನನ್ಯತೆ

ಬಲಿಪರ ಏರುಪದ್ಯಗಳ ಅನನ್ಯತೆ

ಯಕ್ಷಗಾನ ಕಲೆಯ ಹೊಸ ಪಲ್ಲವ ಯಕ್ಷಗಾಯನ. ಕೇವಲ ಗಾಯನಮಾತ್ರವೇ ಇರುವ ಯಕ್ಷಗಾನದ ಹೊಸ ಸಾಧ್ಯತೆ. ಇದನ್ನು ಯಕ್ಷಗಾನ ಭಾಗವತಿಕೆಯ ಅನನ್ಯತೆಯನ್ನು ತೋರಿಸಲು ಯಕ್ಷಗಾಯನವೇ ಮೊದಲಾದ ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಬಹುದು. ಇದರಿಂದ ಭಾಗವತಿಕೆಯ ಶಕ್ತಿ ಮತ್ತು ಯಕ್ಷಗಾನದ ಹಾಡುಗಾರಿಕೆಯಲ್ಲಿನ ವಿಭಿನ್ನತೆಯನ್ನು ಚೆನ್ನಾಗಿ ತೋರಿಸಬಹುದೆಂಬುದು ಎನ್ನುವ ಅಭಿಮತ ಕಿರಿಯ ಬಲಿಪರದ್ದು. ಬಲಿಪಮಾರ್ಗ ಸರಣಿಯಲ್ಲಿ ಅವರ ಗಾಯನ ಶೈಲಿಯ ವಿಶ್ಲೇಷಣೆಯನ್ನು ಮಾಡಿದ್ದಾರೆ ಕೃಷ್ಣ ಪ್ರಕಾಶ್ ಉಳಿತ್ತಾಯ

read more
ಚರ್ಚೆಗಳಲ್ಲಿ ರಸಸಿದ್ಧಾಂತ ಪಠ್ಯಗಳ ಪ್ರಮಾಣ

ಚರ್ಚೆಗಳಲ್ಲಿ ರಸಸಿದ್ಧಾಂತ ಪಠ್ಯಗಳ ಪ್ರಮಾಣ

ಯಾವುದಕ್ಕೆ ಉತ್ತರ ಸಿಗುತ್ತಿಲ್ಲವೊ ಅದನ್ನು ಶಾಸ್ತ್ರ ಹೇಳುತ್ತದೆ ಅಂದ ಮೇಲೆ ಉತ್ತರ ಸಿಗದೇ ನಮಗೆ ಸಮಾಧಾನವಾಗುವ ಹಾಗೆ ಅಥವಾ ಮುಂದಿನ ಚರ್ಚೆ ತಾತ್ಕಾಲಿಕಯಾಗಿಯಾದರೂ ಕೊನೆಗೊಳ್ಳುವಂತೆ ರಸ ಸಿದ್ಧಾಂತವು ‘ಶಾಸ್ತ್ರ’ವಾಗುತ್ತದೆ. ಸಮಾಜದ ಎಲ್ಲ ಘಟಕಗಳಲ್ಲೂ ಮನುಷ್ಯ ವ್ಯವಹರಿಸುವಾಗ ಈ ‘ಶಾಸ್ತ್ರ’ಕ್ಕೆ  ಸಂವಾದಿಯಾಗುವ ಹಲವು ಪರಿಕರಗಳನ್ನು ಬಳಸಿ ಆ ಸಂದರ್ಭಕ್ಕೆ ಅಂತ್ಯ ಹಾಡುವುದು ಸಾಮಾನ್ಯವೇ.  ಇದೇ ಹಿನ್ನೆಲೆಯಲ್ಲಿ…

read more
ನಮ್ ಶಾಲೆಗೆ ಬನ್ನಿ ಸಾರ್… ಎನ್ನುವ ಪ್ರೀತಿಯ ಕರೆ

ನಮ್ ಶಾಲೆಗೆ ಬನ್ನಿ ಸಾರ್… ಎನ್ನುವ ಪ್ರೀತಿಯ ಕರೆ

ಸಮುದಾಯದತ್ತ ಶಾಲೆ ಕಾರ್ಯಕ್ರಮಕ್ಕೆ ಅಲ್ಲಿನ  ಶಾಲೆಗಳಿಗೆ ಅಲ್ಲಿನ ಅಧ್ಯಾಪಕರ ಜೊತೆಗೆ ನಡೆದುಕೊಂಡೇ ಹೋಗಿ ಬಂದಾಗ ಅಲ್ಲಿನ ನಿಜವಾದ ಪರಿಸ್ಥಿತಿಯ ಅರಿವಾಗುತ್ತಿತ್ತು. ಶಾಲೆವರೆಗೂ ಬಂದರೆ ಆ ಶಾಲೆಯ ಅಧ್ಯಾಪಕರು ಬಹಳ ಪ್ರೀತಿಯಿಂದ ‘ಸಾರ್ ನೀವು ಶಾಲೆವರೆಗೂ ಬರುತ್ತೀರಿ ಅನ್ನುವುದೇ ಸಂತೋಷ. ಯಾವ ಅಧಿಕಾರಿಯೂ ಇಲ್ಲಿವರೆಗೆ ಬಂದುದ್ದೇ ಇಲ್ಲ’ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಿದ್ದರು. ಗಣಿತ ಮೇಷ್ಟರ ಶಾಲಾ ಡೈರಿ ಸರಣಿಯಲ್ಲಿ ಅರವಿಂದ ಕುಡ್ಲ ಲೇಖನ 

read more
‘ಗಂಟಿಚೋರ್’ ಎಂಬ ಐಡೆಂಟಿಟಿ ಅಥವಾ ಗುರುತಿನ ಪ್ರಶ್ನೆ

‘ಗಂಟಿಚೋರ್’ ಎಂಬ ಐಡೆಂಟಿಟಿ ಅಥವಾ ಗುರುತಿನ ಪ್ರಶ್ನೆ

ಕರ್ನಾಟಕ ಸರಕಾರವು ೧೯೭೬ರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಮೆಂಡ್‌ಮೆಂಟನ್ನು ಪಾಸು ಮಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ‘ಗಂಟಿಚೋರ್’ ಹೆಸರು ಮಾತ್ರ ಸೇರಿ ಅದರ ಜತೆ ಇದ್ದ ಸಮಾನಾಂತರ ಪದಗಳನ್ನು ಕೈಬಿಡಲಾಯಿತು. ಈ ಪಟ್ಟಿಯು ಗಂಟಿಚೋರ್ ಸಮುದಾಯಕ್ಕೆ ಬಿಕ್ಕಟ್ಟನ್ನು ತಂದಿಟ್ಟಿತು. ಕಾರಣ ಒಂದೇ ಸಮಾನಾಂತರ ಪದಗಳಾದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗವಡ್ಡರ್, ಗಿರಣಿವಡ್ಡರ್, ಠಕಾರಿ, ಪಾತ್ರೂಟ್ ಹೊರಗುಳಿದವು.

read more
ಸ್ವಗತದಲ್ಲಿ  ಅರಳುವ ಅಫ್ಘಾನಿಸ್ತಾನದ ʻದ ಪೇಷನ್ಸ್‌ ಸ್ಟೋನ್‌ʼ

ಸ್ವಗತದಲ್ಲಿ ಅರಳುವ ಅಫ್ಘಾನಿಸ್ತಾನದ ʻದ ಪೇಷನ್ಸ್‌ ಸ್ಟೋನ್‌ʼ

 ಈ ಚಿತ್ರದಲ್ಲಿ ಯಾವ ಪಾತ್ರಗಳಿಗೂ ಹೆಸರಿಲ್ಲ. ವಿಶ್ವದ ಯಾವುದೇ ಭಾಗಕ್ಕೂ ಈ ಕಥನ ಅನ್ವಯಿಸಲು ಸಾಧ್ಯ. ಇಂಥದೊಂದು ನೋವು ತುಂಬಿದ ದೇಶದಲ್ಲಿ ಯಾವ ಬಗೆಯ ಆಯ್ಕೆಯ ಸ್ವಾತಂತ್ರ್ಯವಿಲ್ಲದೆ ಹೆಣ್ಣಾಗಿ ಹುಟ್ಟಿದ್ದಷ್ಟೆ ಅವಳ ಪಾಡು. ಅದರ ವೃತ್ತಾಂತಗಳನ್ನು ಅವಳ ಸ್ವಗತದ ಮೂಲಕ ತಿಳಿಸುತ್ತಾಳೆ.

read more
ನನ್ನ ನಿರುಮ್ಮಳ ಇರುಳು ನನ್ನದು…

ನನ್ನ ನಿರುಮ್ಮಳ ಇರುಳು ನನ್ನದು…

ಅಲ್ಲೊಂದು ಸಹಜ ಜಲ ಬಾವಿ ಇತ್ತು ಅನಾದಿಯಿಂದಲೂ. ಅದರ ಪವಿತ್ರ ಜಲದಿಂದಲೇ ಆ ಕಾಲದ ವೈದಿಕರು ಧರ್ಮ ಕಾರ್ಯ ಎಸಗುತ್ತಿದ್ದುದು… ಅದಕೆಂದೇ ಆ ಗೊಂಡಾರಣ್ಯ ಪ್ರಸಿದ್ಧವಾಗಿತ್ತು ಆ ಕಾಲಕ್ಕೆ. ಈಗದು ಒಂದು ಹೊಂಡವಾಗಿತ್ತು. ಬೇಸಿಗೆಯಲ್ಲಿ ದಾಹಕ್ಕಿಳಿದ ಪ್ರಾಣಿಗಳು ಆ ಸನಾತನ ಜಾರಿನ ಹೂಳಿನಲ್ಲಿ ಸಿಲುಕಿ ಎದ್ದು ಬರಲಾರದೆ ಅಲ್ಲೇ ಸಮಾಧಿ ಆಗಿದ್ದವು. ಬಾಯಾರಿ ಅಲ್ಲಿ ಸಿಲುಕಿದವರ ಪಾಡನ್ನು ಅರ್ಥಮಾಡಿಕೊಳ್ಳಿ! ಧರ್ಮ ಸೂಕ್ಷ್ಮವನ್ನು ನಾಳೆ ಅರ್ಥ ಮಾಡಿಕೊಳ್ಳಿ ಮಕ್ಕಳೇ; ಈಗಲೇ ಹೇಳಬಾರದು!

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ