ಪ್ರೇಮ ಮತ್ತು ವೇದನೆಯ ಸುತ್ತ ಸಾಗುವ ಆಸ್ಟ್ರಿಯಾದ ʻಅಮೋರ್ʼ ಚಿತ್ರ
ಆನ್ಳ ಆರೋಗ್ಯ ಹೆಚ್ಚು ಸೂಕ್ಷ್ಮವಾಗುವ ಹಂತ ಬೇಗನೇ ತಲುಪಿಬಿಡುತ್ತದೆ. ಚಿತ್ರದ ಬಹುಪಾಲು ಜಾರ್ಜ್ ಆನ್ಗೆ ಮಾಡುವ ಸೇವಾಕ್ರಿಯೆಗಳನ್ನು ವಿಸ್ತಾರವಾಗಿ ದಾಖಲಿಸುವುದನ್ನು ಮಾತ್ರ ಕಾಣುತ್ತೇವೆ. ತಿನಿಸುವುದು, ಕುಡಿಸುವುದು, ಹಾಸಿಗೆ, ಹೊದಿಕೆ ಸರಿಪಡಿಸುವುದು, ಡೈಪರ್ಗಳನ್ನು ಬದಲು ಮಾಡುವುದು, ಕಮೋಡ್ ಬಳಿಗೆ ಕರೆದೊಯ್ಯುವುದು ಮುಂತಾದವು. ಜಾರ್ಜ್ ಅವಳಿಗೆ ಆಹಾರ ತಿನ್ನಿಸುವ ಅಥವಾ ಕಮೋಡ್ ನಲ್ಲಿ ಕುಳಿತವಳನ್ನು ಎಬ್ಬಿಸಿ ತರುವುದೂ ಸೇರುತ್ತದೆ.
ಮರುಚಿಂತನೆಯ ಹೊರಪದರವೇ ಬದಲಾವಣೆ
ರಂಗಭೂಮಿಯಲ್ಲಿ ಪ್ರತಿಯೊಂದು ಅಂಗಗಳು ಒಂದೊಂದು ಮಜಲುಗಳಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಈ ಕ್ಷೇತ್ರದಲ್ಲಿ ಮರುಚಿಂತನೆಯ ಅಗತ್ಯವಿದೆ ಎನ್ನುವುದು ಒಪ್ಪತಕ್ಕ ಮಾತು. ಆದರೆ ಮರುಚಿಂತನೆಯ ಹೊಣೆಗಾರಿಕೆಯನ್ನು ಒಬ್ಬರು ಮತ್ತೊಬ್ಬರ ಹೆಗಲಿಗೆ ವರ್ಗಾಯಿಸುತ್ತ ಕೂರುವುದರಿಂದ ಪ್ರಯೋಜನವಿಲ್ಲ. ಮೂರು ದೃಷ್ಟಿಕೋನಗಳ ನಿಟ್ಟಿನಲ್ಲಿ ಮರುಚಿಂತನೆಯ ಅಗತ್ಯವಿದೆ. ರಂಗನಟ, ರಂಗತಂಡ ಮತ್ತು ರಂಗಕರ್ಮಿಗಳ ದೃಷ್ಟಿಕೋನಗಳನ್ನು ಇಲ್ಲಿ ಗಮನಿಸಬೇಕಾಗುತ್ತದೆ. -ಪ್ರಭಾಕರ ರಾವ್ ಬರಹ ಇಲ್ಲಿದೆ.
ಪ್ರಾಣಿಲೋಕದ ಪ್ರೀತಿಸುಧೆಯ ನೆನಪುಗಳು
ನನ್ನ ತಂದೆ ಹಾವು ಹೊಡೆಯುವುದನ್ನು ಕೂಡ ಸಹಿಸಿಕೊಳ್ಳುತ್ತಿರಲಿಲ್ಲ. ಆದರೆ ಕಂದೂರಿ ಒಂದು ಶ್ರದ್ಧೆಯಾಗಿದ್ದರಿಂದ ಮನೆತನದಲ್ಲಿ ತಲೆತಲಾಂತರದಿಂದ ಬಂದ, ಅವರದೇ ನಂಬಿಕೆಯಿಂದ ಕೂಡಿದ ಧಾರ್ಮಿಕ ಕರ್ತವ್ಯ ನಿರ್ವಹಣೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ನನ್ನ ದಲಿತ ಮಿತ್ರ ತುಕಾರಾಮ ನನಗಿಂತ ಆರುವರ್ಷ ದೊಡ್ಡವರಿದ್ದರು. ನಾನು ನಾಲ್ಕನೆಯ ಇಯತ್ತೆ ಓದುವಾಗ ಅವರು ಮ್ಯಾಟ್ರಿಕ್ ಇದ್ದರು. ನಮ್ಮ ಮನೆಯ ಹತ್ತಿರದ ಹರಿಜನ ಬೋರ್ಡಿಂಗ್ನಲ್ಲಿ ಇದ್ದು ಓದುತ್ತಿದ್ದರು.
ನವೋದಯ ದೀಪಕ್ಕೆ ಎಣ್ಣೆ ಹೊಯ್ದ ಕವಿ
ಸೇಡಿಯಾಪು ಕೃಷ್ಣಭಟ್ಟರಿಗೆ ಮಂಗಳೂರಿನಲ್ಲಿ ಪಂಡಿತ ಮುಳಿಯ ತಿಮ್ಮಪ್ಪಯ್ಯನವರ ಮಾರ್ಗದರ್ಶನ ಮತ್ತು ತರುಣ ಕವಿ ಕಡೆಂಗೊಂಡ್ಲು ಶಂಕರಭಟ್ಟರ ಗೆಳೆತನದ ಲಾಭವಾಯಿತು. ಅವರಿಬ್ಬರಿಂದ ಪ್ರೇರಣೆ ಪಡೆದು, ಮದ್ದಿನಂಗಡಿಯಲ್ಲಿ ಕುಳಿತೇ ಕನ್ನಡ – ಸಂಸ್ಕೃತ ಭಾಷೆಗಳನ್ನು ಖಾಸಗಿಯಾಗಿ ಅಧ್ಯಯನ ನಡೆಸಿ, ಮದರಾಸು ಸರ್ಕಾರ ನಡೆಸುತ್ತಿದ್ದ ‘ವಿದ್ವಾನ್’ ಪರೀಕ್ಷೆಯಲ್ಲಿ ಪಾಸಾದರು. ಆ ಪದವಿಯ ಬಲದಿಂದ 1929 ರಲ್ಲಿ ಸೈಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ಸೇರಿಕೊಂಡು ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಮಾಡಿದರು.
ತಿಪಟೂರು ಕೆಡಿಸಿ ಬಂದವರು…!
ಚಿಕ್ಕನಾಯಕನಹಳ್ಳಿಯ ಸಾರ್ವಜನಿಕ ಹಾಸ್ಟೆಲ್ ವಿಚಿತ್ರ ಅನುಭವ ಕೊಡತೊಡಗಿತು. ಇಲ್ಲಿ ಬೆಳಗ್ಗೆ ಆರಕ್ಕೆ ಕಡ್ಡಾಯವಾಗಿ ಏಳಬೇಕಿತ್ತು. ಎದ್ದು ಓದಿಕೊಳ್ಳುವುದು ಒತ್ತಟ್ಟಿಗಿರಲಿ ಪ್ರತಿಯೊಬ್ಬರೂ ಭಟ್ಟರು ನೇಮಿಸಿದ ಕೆಲಸಗಳನ್ನ ಮಾಡಬೇಕಿತ್ತು. ಕುಳ್ಳಗೆ ದಪ್ಪಗೆ ಮೀಸೆಬಿಟ್ಟಿದ್ದ ಹನುಮಂತನೆಂಬ ಭಟ್ಟನಿದ್ದ. ಹೇಳಿದ ಕೆಲಸ ಮಾಡದವರನ್ನ ಆತ ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದ. ಬೆಳಗಿನ ಊಟಕ್ಕೆ ಮುಂಚೆ ಯಾರ್ಯಾರು ಏನೇನು ತಪ್ಪು ಮಾಡಿದರೆಂದು ವಿಚಾರಣೆ ನಡೆಸಿ, ಮೂಲೆಯಲ್ಲಿ ಸದಾ ನಿಂತಿರುತ್ತಿದ್ದ ಉದ್ದನೆಯ ಸಿದ್ದರಾಮಣ್ಣನನ್ನು(ಕೋಲನ್ನ) ತೆಗೆದುಕೊಂಡು ದನಕ್ಕೆ ಬಡಿಯುವಂತೆ ಬಡಿಯುತ್ತಿದ್ದ.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಒಂಭತ್ತನೆಯ ಕಂತು.
ಕುಂಡೆಹಬ್ಬ ತಂದ ಮಂಡೆಬಿಸಿ
ಕೊಡಗಿನ ಬುಡಕಟ್ಟು ಜನರ ಒಂದು ವಿಶಿಷ್ಟವಾದ ಹಬ್ಬ ‘ಬೋಡ್ ನಮ್ಮೆ’ ಅಥವಾ ‘ಕುಂಡೆ’ ಹಬ್ಬ. ಈ ಹಬ್ಬದಲ್ಲಿ ಇವರು ವಿಚಿತ್ರ ವೇಷ ಭೂಷಣಗಳನ್ನು ಧರಿಸುತ್ತಾರೆ. ಕೆಲವರು ಮೈಯ್ಯನ್ನು ಸೊಪ್ಪಿನಿಂದ ಮುಚ್ಚಿ, ಇನ್ನು ಕೆಲವರು ನವೀನ ಪೋಷಾಕುಗಳ ಜೊತೆಗೆ, ಕಪ್ಪು ಕನ್ನಡಕ, ತಲೆಗೆ ಚಿತ್ರ ವಿಚಿತ್ರವಾದ ಟೋಪಿಗಳನ್ನು ಹಾಕಿಕೊಂಡು ವೇಷ ಕಟ್ಟುತ್ತಾರೆ. ಹಬ್ಬವೆಂದ ಮೇಲೆ ಕುಡಿತ ಕುಣಿತ, ತಿನಿಸುಗಳಿರಬೇಕಲ್ಲವೇ. ಆದರೆ ಈ ಹಬ್ಬಕ್ಕೆ ಸಂಬಂಧಿಸಿದ ಘಟನೆಯೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಅಷ್ಟೇನೂ ಒಳ್ಳೆಯ ಘಟನೆಯಲ್ಲ ಅದು. ಹಬ್ಬ ತಂದಿಟ್ಟ ದುರಂತವು ಅನಾವರಣಗೊಳಿಸಿದ ಸತ್ಯಗಳನ್ನು ಡಾ. ಕೆ.ಬಿ. ಸೂರ್ಯಕುಮಾರ್ ‘ನೆನಪುಗಳ ಮೆರವಣಿಗೆ’ ಅಂಕಣದಲ್ಲಿ ಪ್ರಸ್ತುತಪಡಿಸಿದ್ದಾರೆ.
‘ಭಕ್ತರಿಗೆ ಭಾಗ್ಯ ಕೊಡು. ಮಕ್ಕಳಿಗೆ ಬಡತನ ಕೊಡು’
ಒಬ್ಬ ವ್ಯಕ್ತಿ ಹೀಗೆ ದೇವನಾಗಲು ಹೇಗೆ ಸಾಧ್ಯ ಎಂದು ವಿಚಾರವಾದಿಗಳಿಗೆ ಅನಿಸದೆ ಇರದು. ಜನಸಮುದಾಯಗಳ ಬಗ್ಗೆ ಅತೀವ ಕಾಳಜಿಯುಳ್ಳ ಸಾಮಾಜಿಕ ಮನುಷ್ಯ ಜನಪದರ ಕಣ್ಣಲ್ಲಿ ದೇವರಾಗಿ ಕಾಣುತ್ತಾನೆ. ತಮ್ಮ ಮೇಲೆ ನಿಷ್ಕಾಮ ಪ್ರೀತಿಯ ಮಳೆಗೆರೆಯುವವನನ್ನು ಜನಸಾಮಾನ್ಯರು ಹೀಗೆ ದೇವರಾಗಿಸುತ್ತಾರೆ. ಅಮೋಘಸಿದ್ಧನಂಥ ಅಖಂಡ ಪ್ರೀತಿಯೇ ದೈವೀ ಗುಣ. ಅಂಥ ಗುಣವುಳ್ಳವರೇ ದೇವರು. ಅದ್ದರಿಂದ ಇಂಥ ಸಿದ್ಧರ ಕುರಿತ ಡೊಳ್ಳಿನ ಪದಗಳೆಲ್ಲ “ನಮ್ಮಯ ದೇವರು ಬಂದಾರ ಬನ್ನಿರೇ” ಎಂದೇ ಪ್ರಾರಂಭವಾಗುತ್ತವೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿ
ಅಪರಾಧ ಮತ್ತು ಶಿಕ್ಷೆ: ನಾನೆಲ್ಲಿರುವೆ….!
ರಾಸ್ಕೋಲ್ನಿಕೋವ್ ಬಲ ಮೊಳಕೈಯನ್ನು ಟೇಬಲ್ಲಿನ ಮೇಲೆ ಆರಾಮವಾಗಿರಿಸಿ, ಎಡ ಮೊಳಕೈಯನ್ನು ಊರಿ ಅಂಗೈಯಲ್ಲಿ ಮುಖ ಇರಿಸಿ ಸ್ವಿದ್ರಿಗೈಲೋವ್ನನ್ನು ದಿಟ್ಟಿಸಿದ. ಒಂದು ನಿಮಿಷದಷ್ಟು ಹೊತ್ತು ಅವನ ಮುಖ ನೋಡುತ್ತಲೇ ಇದ್ದ. ಯಾಕೋ ಅದು ವಿಚಿತ್ರವಾದ ಮುಖ, ಮುಖವಾಡದಂಥ ಮುಖ, ಕೆಂಪು ತುಟಿ, ಬಿಳಿಯ ಮುಖ, ನಸುಗೆಂಪು ಕೆನ್ನೆ, ದಟ್ಟವಾದ ಹೊಂಬಣ್ಣದ ಕೂದಲು, ಗಂಭೀರವಾದ ನೀಲಿ ಕಣ್ಣು, ಭಾರ ಅನಿಸುವ ನಿಶ್ಚಲ ದೃಷ್ಟಿ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ತಗಡಿನ ಸಂದಿಯಿಂದಲೇ ರಂಗೇರಿಸುತ್ತಿದ್ದ ವಸ್ತು ಪ್ರದರ್ಶನ
ನಮಗೂ ಒಂದು ದಿನ ಅದೃಷ್ಟ ಖುಲಾಯಿಸಿ ಬಿಟ್ಟಿತು. ಸೆಕ್ಯುರಿಟಿಯ ಮನಕರಗಿ ಓನರ್ ಇಲ್ಲದ ಸಮಯ ನೋಡಿ ನಮ್ಮನ್ನು ಒಳ ಬಿಟ್ಟಿದ್ದ. ಆ ಸೌಂಡು, ಜಗಮಗ, ರಾಟೆ, ಆಟಗಳು, ಸರ್ಕಸ್ನ ಪ್ರಾಣಿಗಳ ಸದ್ದು, ನಗರಿಗರು ಅಲ್ಲಲ್ಲೆ ನಿಂತು ತಿನ್ನುತ್ತಿದ್ದ ತಿನಿಸುಗಳು, ಇವೆಲ್ಲ ಅತ್ಯಾಕರ್ಷಕವಾಗಿದ್ದವು. ಅವನ್ನೆಲ್ಲ ಅನುಭವಿಸಲು ದುಡ್ಡಿಲ್ಲದ ನಾವು ನೋಡಿಯೇ ಹೆಚ್ಚು ಥ್ರಿಲ್ ಆಗುತ್ತಿದ್ದೆವು. ಈಗ ಅವೆಲ್ಲ ಕೈಗೆಟುಕುವಂತೆಯೇ ಇದ್ದರೂ, ಅವನ್ನೆಲ್ಲ ಆಡುವ ಧೈರ್ಯವನ್ನು, ಮನಸ್ಸನ್ನು ಕಳೆದುಕೊಂಡಿದ್ದೇವೆ. ‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನ.









