ಸೌತ್ ಕೊರಿಯಾದ ʻಓಲ್ಡ್ಬಾಯ್’: ಚುರುಕು ನಿರೂಪಣೆಯ ಚೌಕಟ್ಟುಗಳು
ಕೋಣೆಯೊಳಗೆ ಅತ್ತಿಂದಿತ್ತ ಓಡಾಡಲು ಒಂದಿಷ್ಟು ಜಾಗ ಮತ್ತು ಹೊರಗಿನಿಂದ ಊಟ ಕೊಡಲು ಉಕ್ಕಿನ ಬಾಗಿಲಿನಲ್ಲಿ ಅಂಗೈ ಅಗಲದ ಕಿಂಡಿ. ಇಷ್ಟಲ್ಲದೆ ಉರುಳುವ ಗಂಟೆಗಳು ಸುಮ್ಮನೆ ಅವನನ್ನು ಸುತ್ತಿ ಚಿಂದಿ ಮಾಡುವುದನ್ನು ತಪ್ಪಿಸಿ, ಬೇರೆ ಕಡೆ ದೃಷ್ಟಿ ಹರಿಸುವಂತೆ ಮಾಡಲು ಸದಾ ಕಾಲ ಆನ್ ಆಗಿಯೇ ಇರುವ ಟೀವಿ. ಅದೇ ಅವನ ಸಂಗಾತಿ. ಉಳಿದಂತೆ ಆಗಾಗ ಹೊರಗೆಲ್ಲೋ ದೂರದಿಂದ ಅವನಿಗೆ ಆಗಾಗ ವಾಹನಗಳ ಓಡಾಟ ಇತ್ಯಾದಿಗಳ ಶಬ್ದ.
ಎ ಪ್ಯಾಸೇಜ್ ಟು ನಾವಿಗಲ್ಲಿ…
ನಮ್ಮ ಕೆಲ ಜನ ಎಷ್ಟೊಂದು ವಿಚಿತ್ರವಾಗಿರುತ್ತಾರೆ ಎನ್ನುವುದಕ್ಕೆ ಗೌಸ್ ಮತ್ತು ಖೈರುನ್ನೀಸಾಳ ನಿಶ್ಚಿತಾರ್ಥವೇ ಸಾಕ್ಷಿ. ತನ್ನ ಮಗಳನ್ನು ತಮ್ಮನಿಗೆ ಕೊಡಬೇಕೆಂದು ಗೌಸ್ ಅಕ್ಕ ನಿರ್ಧರಿಸಿದಳು. ಆತನೋ ಗಂಡನಾಗುವ ಸಾಧ್ಯತೆ ಇಲ್ಲದವನು. ಆತನ ನಡಿಗೆ, ಮಾತು ಮುಂತಾದವು ಹೆಂಗಸರ ಹಾಗೇ ಇದ್ದವು. ಅವನ ಸಹವಾಸವೂ ಹೆಣ್ಣುಮಕ್ಕಳ ಜೊತೆಗೇ ಇತ್ತು. ಕಂಡ ಕಂಡವರ ಮನೆಯಲ್ಲಿ ಕಲಬತ್ತಿನಲ್ಲಿ ಚಟ್ನಿ ಕುಟ್ಟೋದು ಮತ್ತು ಮಸಾಲೆ ಅರಿದು ಕೊಡೋದು ಎಂದರೆ ಆತನಿಗೆ…
ಯಾವುದು ಕನಸು? ಯಾವುದು ನನಸು?
ಸೋನ್ಯಾಳನ್ನು ಅವಳ ದಿಗ್ಭ್ರಾಂತಿ, ಅಸ್ಪಷ್ಟ ಭಯಗಳಲ್ಲಿ, ಅಪಶಕುನದ ಹೆದರಿಕೆಗಳಲ್ಲಿ ಹಾಗೇ ಬಿಟ್ಟು ಅವನು ಹೊರಟು ಹೋದ. ಅವನು ಇನ್ನೊಂದು ವಿಚಿತ್ರವಾದ, ಅನಿರೀಕ್ಷಿತವಾದ ಭೇಟಿ ನೀಡಿದ್ದ ಅನ್ನುವುದು ಆನಂತರ ತಿಳಿಯಿತು. ಹನ್ನೊಂದು ಗಂಟೆಯ ನಂತರ ತಿಳಿಯಿತು. ಮಳೆ ಇನ್ನೂ ನಿಂತಿರಲಿಲ್ಲ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ಮುಸುಕಿನ ಮರೆಯ ಪಾಡು
ನಾವು ಹುಟ್ಟಿ ಬೆಳೆದಿದ್ದ ಊರಲ್ಲಿ ಚಿಕ್ಕಪ್ಪ ಎಂಬುವವನೊಬ್ಬ ಇದ್ದ. ರಭಸವಾದ ಕುಡುಕ. ಎಣ್ಣೆ ಕೊಡಿಸಿದರೆ ಎಲ್ಲಾ ನ್ಯಾಯವನ್ನು ತಲೆಕೆಳಗೆ ಮಾಡುತ್ತಿದ್ದ. ಆ ಮನೆಯಲ್ಲಿ ನನ್ನ ತಮ್ಮನಿಗೂ ನನಗೂ ಭಾಗ ಬರಬೇಕಿತ್ತು. ನಾನದರತ್ತ ತಿರುಗಿಯೂ ನೋಡಿರಲಿಲ್ಲ. ತಮ್ಮ ಬೆಂಗಳೂರು ಸೇರಿ ಅಲ್ಲೇ ಸಂಸಾರ ಹೂಡಿ ಒಂದು ಪುಟ್ಟ ಮನೆಯನ್ನು ಮಾಡಿಕೊಂಡಿದ್ದ. ಅವನಿಗೂ ಅಂತಹ ಆಸಕ್ತಿ ಇರಲಿಲ್ಲ. ಆದರೆ ನನ್ನಕ್ಕ ಬಿಟ್ಟಿರಲಿಲ್ಲ. ನಾವು ಭಾಗ ಕೊಡುವುದಿಲ್ಲ ಎಂದು ಅವನ ಮಗ ಹಾಗೂ ಹೆಂಡತಿ ಎಗರಾಡುತ್ತಿದ್ದರು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂರನೆಯ ಕಂತು
ವಿಪರೀತ ನಡೆಯ ಅಜ್ಜ ಬಲಿಪರೂ, ಅವರ ವಿಪರೀತ ಪ್ರೀತಿಯೂ
ಅಜ್ಜ ಬಲಿಪರು ಸ್ವಲ್ಪ ವಿಕ್ಷಿಪ್ತ ಸ್ವಭಾವದವರೂ ಹೌದು. ನಾಲ್ಕಾರು ದಿನಗಳ ಕಾಲು ಉಪವಾಸ ಇರಬಲ್ಲರು, ನಾಲ್ಕಾರು ದಿನದ ಭೋಜನವನ್ನು ಒಮ್ಮೆಗೇ ಮಾಡಬಲ್ಲರು. ಬಡತನ, ತಿರುಗಾಟದ ಬದುಕು ಅವರದ್ದಾಗಿತ್ತು. ಹಾಗಾಗಿ ಜೀವನ ಕ್ರಮದಲ್ಲಿಯೂ ಈ ರೀತಿಯ ವ್ಯತ್ಯಾಸಗಳಿದ್ದವು. ಅದರಿಂದ ಅವರ ಆರೋಗ್ಯವೂ ಏರುಪೇರಾದುದುಂಟು. ಆದರೆ ಅವರಿಗೆ ಮೊಮ್ಮಗನ ಕಂಠ ಶಕ್ತಿಯ ಮೇಲೆ…
ಐಬಿಲ್ಲದ ಕೊಲೆಯ ಜಾಡು ಹಿಡಿದಾಗ ಕಂಡ ವಿಸ್ಮಯಗಳು
ಐಬಿಲ್ಲದ ಕೊಲೆ ಎಂದು ಶೀರ್ಷಿಕೆ ಕೊಟ್ಟು ಬರಹವನ್ನು ಮುಗಿಸಿದರೂ, ಅದು ನಿಜಕ್ಕೂ ಹಾಗಿರಲಿಲ್ಲ ಎಂಬುದು ನನಗೆ ಬಳಿಕ ತಿಳಿಯಿತು. ಮರಳುಗಾಡಿನಲ್ಲಿ ನಡೆದ ಕೊಲೆಯ ಪೂರ್ವಾಪರಗಳು ಎಷ್ಟೋಕಾಲದ ಬಳಿಕ ಅನಾವರಣಗೊಂಡಿದ್ದವು. ಅದು ಮೊಬೈಲು, ಕಂಪ್ಯೂಟರು ಇಲ್ಲದ ಕಾಲವಾದ್ದರಿಂದ ಪತ್ತೆದಾರಿಕೆಯು ನಿಧಾನವಾಗಿತ್ತು. ಕೊಲೆಯ ಹಿಂದಿರುವ ಕಾರಣವನ್ನು ಹುಡುಕಬೇಕಾದರೆ ಸಾಕ್ಷ್ಯಗಳು ಅಗತ್ಯವಾಗಿರುತ್ತವೆ.
ಕಾಳಪ್ಪಬ್ಲಾಕಿನಲ್ಲಿ ಟೆಸ್ಟ್ ಕ್ರಿಕೆಟಿಗರು!
ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಫಿ.
‘ಠೂ..’ ಬಿಟ್ಟ ಗೆಳೆಯರನ್ನು ಒಂದಾಗಿಸಿಬಿಡುತ್ತಿದ್ದ ಹಬ್ಬಗಳು
ನಾಗರಪಂಚಮಿಯಲ್ಲಿ ತವರು ಮನೆಗೆ ಬಂದ ಹೆಣ್ಣುಮಕ್ಕಳು ಜೋಕಾಲಿ ಆಡುವ ಜೋಷ್ ಬಗ್ಗೆ ಬರೆಯಲು ಶಬ್ದಗಳು ಸಾಲುತ್ತಿಲ್ಲ. ಒಂದು ಜೋಕಾಲಿಯಲ್ಲಿ ಇಬ್ಬರು ಮಹಿಳೆಯರು ಎದುರು ಬದುರಾಗಿ ಜೋಕಾಲಿ ಜೀಕುವಾಗ ಶಕ್ತಿಯ ಜೊತೆಗೇ ಅವರ ಸ್ವಾತಂತ್ರ್ಯದ ಸುಖ ಎದ್ದು ಕಾಣುತ್ತಿತ್ತು. ಹುತ್ತಕ್ಕೆ ಹಾಲೆರೆಯುವ ಮೂಢನಂಬಿಕೆ ಜೊತೆಗೇ ಅದನ್ನು ಮೀರಿ ನಮ್ಮ ಜನರ ಆಶಯಗಳ ಬಗ್ಗೆಯೂ ಚಿಂತಿಸುವ ಶಕ್ತಿಯನ್ನು…
ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ
ರಾಮಚಂದ್ರ ದೇವರೂ ‘ಮೂಗೇಲ’ ಕತೆಯಲ್ಲಿ ಮೂಗೇಲನ ಅಪ್ಪನಂಥವರು ಮನುಷ್ಯ ಸಂಬಂಧಗಳಿಗಿಂತ ಆರ್ಥಿಕ ಲಾಭಕ್ಕೆ ಪ್ರಾಮುಖ್ಯ ನೀಡುವುದನ್ನು ತೋರಿಸಲು ಮೂಗೇಲನ ಮೂಗನ್ನು ಅಸಂಗತವಾಗಿ ಹನುಮಂತನ ಬಾಲದಂತೆ ಬೆಳೆಸಿದ್ದಾರೆ. ಈ ಕತೆ ಮೇಲ್ನೋಟಕ್ಕೆ ಭಾರತೀಯ ಅಥವಾ ಕನ್ನಡದ ವಿಶಿಷ್ಟ ಸನ್ನಿವೇಶವನ್ನು ಸೂಚಿಸುವಂಥದ್ದಲ್ಲ. – ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ನವ್ಯೋತ್ತರದ ಮುಖ್ಯ ಕವಿ ರಾಮಚಂದ್ರದೇವ
ಅವರ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.










