ಪ್ರೋಗ್ರೆಸ್: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ಕತೆ
“‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ.”
ನದೀಮ ಸನದಿ ಪುಸ್ತಕದ ಕುರಿತು ಆರ್ ವಿಜಯರಾಘವನ್ ಬರಹ
“ಇಂದಿನ ಎಲ್ಲ ಮೌಲ್ಯಗಳು ಪಲ್ಲಟವಾಗುತ್ತಿರುವ ಸಮಾಜೋ-ರಾಜಕೀಯ ಸನ್ನಿವೇಶಗಳಲ್ಲಿ ಗಾಂಧಿಯ ಆದರ್ಶಗಳಲ್ಲಿ ರೂಪುಗೊಳ್ಳಬೇಕಾದ ನಮ್ಮ ವ್ಯಕ್ತಿತ್ವಗಳು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ಒಳಗೊಂಡ ಕೆಟ್ಟ ಚಿತ್ರಗಳಾಗಿ ಎದುರು ಬಂದು ನಿಲ್ಲುತ್ತವೆ. ಗಾಂಧಿ ಸಿಕ್ಕಿದ್ದ ಕವಿತೆಯ ಶೀರ್ಷಿಕೆ ಗಾಂಧಿಯನ್ನು ಕುರಿತ ಅಗೌರವದಿಂದ ಮೂಡಿದ್ದಲ್ಲ. ಇಲ್ಲಿ ಕವಿಗೆ ಎದುರಾದ ಗಾಂಧಿ ಧೋತಿ ಪಂಚೆಯ ನಗುಮೊಗದ ಗಾಂಧಿಯಲ್ಲ.”
ಓಬಿರಾಯನ ಕಾಲದ ಕಥಾ ಸರಣಿಯಲ್ಲಿ ಶಿವರಾಮ ಕಾರಂತರು ಬರೆದ ಕತೆ…
“ರಾಧಾಕೃಷ್ಣನು ಬಂದ ಹದಿನೈದು ದಿವಸಗಳಲ್ಲಿ, ತನ್ನ ಗುಡಿಸಲಿನ ಸಲುವಾಗಿ ಸಾಮಗ್ರಿಗಳನ್ನು ದೊರಕಿಸಿಕೊಳ್ಳಲು ಊರಲ್ಲಿ ಅಲೆದಾಡಿದನು. ಒಬ್ಬಿಬ್ಬರ ಪರಿಚಯವೂ ಆಯಿತು. ಆಗ ಅವರಲ್ಲಿ ಹೋಗುವ ಎಂದು ಹೊರಟನು. ಆ ದಿನದ ಗ್ರಾಸಕ್ಕೆ ಬೇರೆ ದಾರಿ ಇದ್ದಿರಲಿಲ್ಲ. ಅದಕ್ಕಾಗಿ ಹೊರಟಿದ್ದ ಅವನು ಹಿಂದೀ ರಣಾಗ್ರದಲ್ಲಿ ಸಿಲುಕಿಕೊಂಡನು. ಕೊನೆಗೆ ಶ್ಯಾಮ, ನೀಲ ಎಂದು ಇಬ್ಬರು ಹಿರಿಯ ಹುಡುಗರನ್ನು ಕರೆದುಕೊಂಡು…”
ಅಮೃತಾ ಪ್ರೀತಮ್ ಕವಿತೆಗಳ ಕುರಿತು ರೇಣುಕಾ ನಿಡಗುಂದಿ ಮಾತುಗಳು…
“ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ….”
ಅಗಸ್ತ್ಯ: ಉಮಾರಾವ್ ಬರೆದ ಕತೆ
“ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು…”
ಅಜಯ್ ವರ್ಮಾ ಅನುವಾದಿಸಿದ ‘ವಿಮುಕ್ತೆ’ ಕೃತಿಗೆ ಬಿ.ಎನ್.ಸುಮಿತ್ರಾಬಾಯಿ ಬರೆದ ಮುನ್ನುಡಿ
“ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ….”
ಶಾಸ್ತ್ರಿ ಮನೆಯ ಅಜ್ಜಿ!: ಓಬಿರಾಯನಕಾಲದ ಕಥಾ ಸರಣಿಯಲ್ಲಿ ಕಟಪಾಡಿ ಶ್ರೀನಿವಾಸ ಶೆಣೈ ಬರೆದ ಕತೆ
“ಅನ್ಯಾಯ ಬುದ್ಧಿಯ ವಕೀಲರು ನ್ಯಾಯಬುದ್ಧಿಯ ರಾಜಸಭೆಗೆ ಬಂದರು. ಬರುವಾಗ ಮೂರು ಎತ್ತಿನ ಹೊರೆ ಕಾನೂನು ಪುಸ್ತಕಗಳನ್ನು ಸಂಗಡ ತಂದಿದ್ದರು. ನ್ಯಾಯ ಬುದ್ಧಿ ಅದನ್ನು ಕಂಡು ಅಂಜಿದ. ಅವನ ರಾಜ್ಯದಲ್ಲಿ ಕಾನೂನು ಕಾಯಿದೆಗಳು ಇರಲಿಲ್ಲ. ಸತ್ಯ ಅಹಿಂಸೆಗಳೇ ಅವರ ಕಾನೂನು. ಪ್ರಜೆಗಳು ಯಾವಾಗಲೂ ನ್ಯಾಯನೀತಿಗಳಿಗೆ ಅನುಸಾರವಾಗಿ ನಡೆಯುತ್ತಿದ್ದರು.”
ಛಿದ್ರಬದುಕಿನ ಚಂದದ ನಿರೂಪಣೆಗಳು: ಎಸ್.ಗಂಗಾಧರಯ್ಯ ಕಥಾಸಂಕಲನದ ಕುರಿತು ಎಚ್.ಆರ್.ರಮೇಶ ಬರೆದ ಲೇಖನ
“ಪ್ರಸ್ತುತದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ಕಥಾಸಂಕಲನ ಅನೇಕ ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಇವು ಶುದ್ಧ ಗ್ರಾಮೀಣ ಬದುಕಿನ ಸೊಗಡಿರುವ ಕತೆಗಳು. ಇಲ್ಲಿಯ ಕತೆಗಳಿಗೆ ಯಾವ ಇಸಮ್ಮುಗಳ ಸೋಂಕು ಇಲ್ಲದೆ, ಕೇವಲ ಕತೆಗಾರ ತಾನು ಕಂಡದ್ದನ್ನು, ಅನುಭವಿಸಿದ್ದನ್ನು, ಬದುಕಿಗೆ…”
ಜಲ ಪ್ರವಾಹ ಮತ್ತು ಮೀನು ಮಾರುವ ಅಮೀನ ಸಾಹೇಬರು..: ವೈ.ಎಸ್. ಹರಗಿ ಬರೆದ ಹೊಸ ಕತೆ
“ಗಲ್ಲಿ ಗಲ್ಲಿಗೆ ಹೋಗಿ “ಮೀನು!.. ಮೀನು ತಾಜಾ ಮೀನು..!!” ಎಂದು ಶಹರದಲ್ಲಿ ಮಾರಾಟಕ್ಕೆ ಹೋಗುತ್ತಿದ್ದ ಸಾಹೇಬರಿಗೆ ಪ್ರಾರಂಭಿಕವಾಗಿ ಸಮಸ್ಯೆಗಳುಂಟಾದವು.. ಯಾವ ಏರಿಯಾದಲ್ಲಿ ಮೀನು ತಿನ್ನುವವರು ನೆಲೆಸಿದ್ದಾರೆಂದು ಗೊತ್ತಾಗಲಾರದೇ ಬ್ರಾಹ್ಮಣರ ಓಣಿಯಲ್ಲಿ ಹೋಗಿ “ಮೀನು..!! ಮೀನು ತಾಜಾ ಮೀನು.!.”









